Sunday, September 15, 2024
spot_img
More

    Latest Posts

    ಮಂಗಳೂರು: 16 ಪೊಲೀಸರಿಗೆ ಹುದ್ದೆಯಲ್ಲಿ ಮುಂಭಡ್ತಿ

    ಮಂಗಳೂರು: ಹಲವು ವರ್ಷಗಳಿಂದ ಮುಂಭಡ್ತಿಗೆ ಕಾಯುತ್ತಿದ್ದ ಮಂಗಳೂರು ನಗರ ಪೊಲೀಸ್‌ ಕಮಿಷನರೇಟ್‌ ವ್ಯಾಪ್ತಿಯ 16 ಪೊಲೀಸ್‌ ಸಹಾಯಕ ಉಪನೀರೀಕ್ಷಕರಿಗೆ ಪೊಲೀಸ್‌ ಉಪನಿರೀಕ್ಷಕರಾಗಿ ಮುಂಭಡ್ತಿ ನೀಡಿ ಪೊಲೀಸ್‌ ಆಯುಕ್ತ ಅನುಪಮ್‌ ಅಗರ್ವಾಲ್‌ ಆದೇಶ ಹೊರಡಿಸಿಸದ್ದಾರೆ.

    ಪಿಎಸ್‌ ಐಗಳಾಗಿ ಭಡ್ತಿ ಪಡೆದಿರುವವರನ್ನು ವಿವಿಧ ಠಾಣೆಗಳಿಗೆ ನಿಯೋಜಿಸಲಾಗಿದೆ. ಪಿಎಸ್‌ ಐ ಭಡ್ತಿಯಾಗಿರುವ ಕಂಕನಾಡಿ ನಗರ ಪೊಲೀಸ್ ಠಾಣೆಯ ನವೀನ ಮೂಡುಬಿದಿರೆಗೆ, ಕಂಕನಾಡಿ ನಗರ ಠಾಣೆಯ ಜನಾರ್ದನ ನಾಯ್ಕ ಸುರತ್ಕಲ್ ಪೊಲೀಸ್ ಠಾಣೆಗೆ, ಸಿಎಸ್‌ಪಿಯ ಆನಂದ ಬಿ. ಉತ್ತರ ಸಂಚಾರ ಠಾಣೆಗೆ, ಗ್ರಾಮಾಂತರ ಠಾಣೆಯ ವಿನೋದ್ ಕೊಣಾಜೆ ಠಾಣೆಗೆ, ಪಣಂಬೂರು ಠಾಣೆಯ ಈಶ್ವರ ಸ್ವಾಮಿ ಕದ್ರಿ ಸಂಚಾರ ಠಾಣೆಗೆ, ಕದ್ರಿ ಠಾಣೆಯ ಶಾಂತಪ್ಪ ಜಿ. ಕಂಕನಾಡಿ ನಗರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಕೃಷ್ಣಪ್ಪ ಮೂಡುಬಿದಿರೆ ಠಾಣೆಗೆ, ಉತ್ತರ ಠಾಣೆಯ ಶಿವಪ್ಪ ಗೌಡ ಅದೇ ಠಾಣೆಗೆ, ಉರ್ವ ಠಾಣೆಯ ಉಲ್ಲಾಸ್ ಪಾಂಡುರಂಗ ಬರ್ಕೆ ಠಾಣೆಗೆ, ಉತ್ತರ ಠಾಣೆಯ ಓಂ ದಾಸ್ ಸೆನ್ ಠಾಣೆಗೆ, ಐಎಸ್‌ಡಿಯ ರವಳೇಂದ್ರ ಗ್ರಾಮಾಂತರ ಠಾಣೆಗೆ, ಸಂಚಾರ ಪಶ್ಚಿಮ ಠಾಣೆಯ ಶಶಿಧರ ಶೆಟ್ಟಿಸುರತ್ಕಲ್ ಠಾಣೆಗೆ, ಉಳ್ಳಾಲ ಠಾಣೆಯ ಪ್ರಾಣೇಶ್ ಕುಮಾರ್ ಬಿ. ಅದೇ ಠಾಣೆಗೆ, ಸೆನ್ ಠಾಣೆಯ ಮೋಹನ್ ಅದೇ ಠಾಣೆಗೆ, ಸಿಸಿಬಿಯ ಹರೀಶ್ ಪದವಿನಂಗಡಿ ಸಿಎಸ್‌ಬಿಗೆ, ದಕ್ಷಿಣ ಠಾಣೆಯ ಪುರಂದರ ಬಿ.ಪಿ. ಸಿಸಿಆರ್‌ಬಿಗೆ ಪಿಎಸ್‌ಐ ಹುದ್ದೆಗೆ ನೇಮಕ ಮಾಡಿ ವರ್ಗಾಯಿಸಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss