Thursday, October 10, 2024
spot_img
More

    Latest Posts

    ಮಂಗಳೂರು: ವಿಮಾನ ನಿಲ್ದಾಣದಲ್ಲಿ 107 ಗ್ರಾಂ ಅಕ್ರಮ ಚಿನ್ನ ವಶ..!

    ಮಂಗಳೂರು :  ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ 107 ಗ್ರಾಂ ಚಿನ್ನವನ್ನು ಕಸ್ಟಮ್ಸ್‌​ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ದುಬೈನಿಂದ ಮಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಆಗಮಿಸಿದ ಪ್ರಯಾಣಿಕನನ್ನು ತಪಾಸಣೆ ನಡೆಸಿದಾಗ ಅಕ್ರಮ ಚಿನ್ನ ಬೆಳಕಿಗೆ ಬಂದಿದೆ.

    ದುಬೈನಿಂದ ಬಂದಿಳಿದ ಪ್ರಯಾಣಿಕನನ್ನು ನಿಲ್ದಾಣದ ಕಸ್ಟಮ್ಸ್ ಅಧಿಕಾರಿಗಳು ಸಂಶಯದ ಮೇರೆಗೆ ತಡೆದು ವಿಚಾರಣೆ ಮಾಡಿದ್ದಾರೆ. ಪ್ರಯಾಣಿಕನ ಬಳಿಯಿದ್ದ ಡಬಲ್ ಲೇಯರ್ ಬಿಸ್ಕತ್ ಮತ್ತು ಚಾಕೊಲೆಟ್ ಹೊಂದಿರುವ ಎರಡು ರಟ್ಟಿನ ಪೆಟ್ಟಿಗೆಗಳ ಪದರಗಳಲ್ಲಿ ಚಿನ್ನ ಮುಚ್ಚಿಡಲಾಗಿದ್ದ ಚಿನ್ನ ಪತ್ತೆಯಾಗಿದೆ. ಪರಿಶೀಲನೆ ನಡೆಸಿದಾಗ ಒಟ್ಟು 107 ಗ್ರಾಂ ಚಿನ್ನ ಪತ್ತೆಯಾಗಿದೆ. ಮಾರುಕಟ್ಟೆಯಲ್ಲಿ  ಈ 107 ಗ್ರಾಂ ಚಿನ್ನದ ಮೌಲ್ಯ ರೂ. 6,47,350 ಎಂದು ಅಂದಾಜಿಸಲಾಗಿದೆ.

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss