Sunday, September 15, 2024
spot_img
More

    Latest Posts

    ಬ್ರಹ್ಮಾವರ ಉಪ್ಪುರು ಗ್ರಾಮದ ಸರಕಾರಿ ಜಾಗದಲ್ಲಿ ಮಂಗಳವಾರದ ವಾರದ ಸಂತೆ ಏಲಂ ಬಗ್ಗೆ ತುಳುನಾಡ ರಕ್ಷಣಾ ವೇದಿಕೆ ಆಕ್ಷೇಪ

    ಬ್ರಹ್ಮಾವರ ಉಪ್ಪುರು ಗ್ರಾಮದ ಸರಕಾರಿ ಜಾಗದಲ್ಲಿ ಮಂಗಳವಾರದ ವಾರದ ಸಂತೆ ಏಲಂ ಬಗ್ಗೆ ತುಳುನಾಡ ರಕ್ಷಣಾ ವೇದಿಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
    ಉಪ್ಪುರು ಗ್ರಾಮದ ಕೊಳಲಗಿರಿ ಜಂಕ್ಷನ್ ನಲ್ಲಿ ಪ್ರತಿ ಮಂಗಳವಾರ ವಾರದ ಸಂತೆ ನಡೆಯುತ್ತಿದ್ದು ಇದರ ಸರಕಾರಿ ಜಾಗದ ಸರ್ವೆ ನಂಬರ್ 255/1ಎ ಆಗಿದ್ದು ಸರಕಾರದ ಗಮನಕ್ಕೆ ವಿಷಯ ತಂದು
    ಈ ಬಗ್ಗೆ ಮನವಿ ಸಲ್ಲಿಸಿ ಸರಕಾರ ಜಾಗದಲ್ಲಿ ಸಂತೆಯ ಬಗ್ಗೆ ಕಾದಿರಿಸಿದ ಜಾಗ ಎಂದು ನಮೂದಿಸಲು ತಿಳಿಸಲಾಗಿತ್ತು . ಇನ್ನು ಸಹ ಇಂತಹ ಕಾರ್ಯ ನಡೆದಿಲ್ಲ ಆದರೂ ಸಹ
    2017418ನೇ ಸಾಲಿನಿಂದ ವಾರದ ಸಂತೆ ನಡೆಯುತ್ತಿದ್ದು ಇದು ಸಂತೋಷದ ಸಂಗತಿ ಈಗ ಗ್ರಾಮ ಪಂಚಾಯಿತಿ ನಿರ್ಣಯ ಏಲಂ ಎಂದು ಪ್ರಕಟವಾಗಿರುತ್ತದೆ. ಸಭೆ ನಿರ್ಣಯ ನಂಬರ್ 116/2024-25 ದಿನಾಂಕ 12-08-2024
    ರಂತೆ ತಾವುಗಳು ಈ ಬಗ್ಗೆ ಏಲಂ ಕರೆ ದಿರುತ್ತೀರಿ
    ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ಈ ಬಗ್ಗೆ ಆಕ್ಷೇಪ ಎತ್ತಿದ್ದು ಏಲಂ ಮಾಡುವುದಾದರೆ. ನಿಯಮ
    ಆರ್ ಟಿ ಸಿ ಯಲ್ಲಿ ಸಂತೆಯ ಬಗ್ಗೆ ಕಾಯ್ದರಿಸಿದ ಜಾಗ ಎಂದು ನಮೂದಿಸಿರಿ ಸಂತೆ ಜಾಗದಲ್ಲಿ ಶೌಚಾಲಯದ ವ್ಯವಸ್ಥೆ ಮಾಡಿ ಸೂಕ್ತ ಸಂತೆ ಬಗ್ಗೆ ಚಾವಾಣಿ ನಿರ್ಮಾಣ ಮಾಡಿ ಈ ಕೆಲಸಗಳನ್ನು ಪೂರ್ಣಗೊಳಿಸಿದ ಬಳಿಕ ಏಲಂ ಹಾಕಿ ಇಲ್ಲವಾದಲ್ಲಿ ಈಗ ಪ್ರತಿ ವಾರ ಸಂತೆ ಹೇಗೆ ನಡೆಯುತ್ತದೆ ಅದೇ ರೀತಿ ನಡೆಯಲಿ ಎಂದು ಉಪ್ಪುರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದೆ. ಮನವಿಯನ್ನು ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸತೀಶ್ ಪೂಜಾರಿಯವರು ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳವ ಭರವಸೆ ನೀಡಿದರು
    .

    ನಿಯೋಗದಲ್ಲಿ ಉಡುಪಿ ಜಿಲ್ಲಾ ವೀಕ್ಷಕ ಫ್ರ್ಯಾಂಕೀ ಡಿಸೋಜಾ ಕೊಳಲಗಿರಿ, ಬ್ರಹ್ಮವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ, ಬ್ರಹ್ಮಾವರ ತಾಲೂಕು ಗೌರವ ಅಧ್ಯಕ್ಷ ಸುರೇಂದ್ರ ಪೂಜಾರಿ, ಕಾರ್ಮಿಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ, ಕಾರ್ಮಿಕ ಯುವ ಅಧ್ಯಕ್ಷ ರೋಷನ್ ಬಂಗೇರ ಮತ್ತಿತರರು ಉಪಸ್ಥಿತರಿದ್ದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss