Sunday, September 15, 2024
spot_img
More

    Latest Posts

    ನೆಲ ಮಾಲಿಗೆಗೆ ನುಗ್ಗಿದ ಮಳೆ ನೀರು ಮೂವರು ಐಎಎಸ್ ಆಕಾಂಕ್ಷಿಗಳ ಸಾವು ಕೋಚಿಂಗ್ ಕ್ಲಾಸ್ ವಿರುದ್ಧ ಕೇಸು ಮಾಲಿಕ ಸಂಯೋಜಕ ಅರೆಸ್ಟ್

    ನವದೆಹಲಿ ಜುಲೈ 28: ದೆಹಲಿಯ ಹಳೆ ರಾಜಿಂದರ್ ನಗರದಲ್ಲಿರುವ ರಾವ್ ಐಎಎಸ್ ಸ್ಟಡಿ ಸರ್ಕಲ್ ನ ನೆಲಮಾಳಿಗೆಗೆ ಮಳೆ ನೀರು ನುಗ್ಗಿ ಮೂವರು ವಿದ್ಯಾರ್ಥಿಗಳು ದಾರುಣವಾಗಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಖಡಕ್ ಕ್ರಮ ಕೈಗೊಂಡಿದ್ದಾರೆ. ರಾಜೇಂದರ್ ನಗರ ಠಾಣೆ ಪೊಲೀಸರು ಕೋಚಿಂಗ್ ಕೇಂದ್ರದ ವಿರುದ್ಧ ಪ್ರಕರಣ ದಾಖಲಿಸಿದ್ದು ಮಾಲೀಕ ಹಾಗೂ ಸಂಯೋಜಕರನ್ನು ಬಂಧಿಸಿದ್ದಾರೆ.
    ನೀರು ತುಂಬಿದ ನೆಲಮಾಳಿಗೆಯಲ್ಲಿ ಮುಳುಗಿ ಮೃತಪಟ್ಟ ವಿದ್ಯಾರ್ಥಿಗಳನ್ನು ಶ್ರೇಯಾ ಯಾದವ್ (ಅಂಬೇಡ್ಕರ್ ನಗರ ಉತ್ತರ ಪ್ರದೇಶ )ತಾನ್ಯಾ ಸೋನಿ ಯಾದವ್ (ತೆಲಂಗಾಣ) ಮತ್ತು ನವೀನ್ ಡೆಲ್ವಿನ್ (ಎರ್ನಾಕುಲಂ ಕೇರಳ )ಎಂದು ಗುರುತಿಸಲಾಗಿದೆ.

    ಕೋಚಿಂಗ್ ಸೆಂಟರ್ ನ ವಿರುದ್ಧ ಸೆಕ್ಷನ್ 105 , 106 (1) 152,290,35ರ ಅಡಿಯಲ್ಲಿ ರಾಜಿಂದರ್ ನಗರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ ಕೋಚಿಂಗ್ ಕೇಂದ್ರದ ಮಾಲೀಕರು ಸಂಯೋಜಕರು ಸೇರಿದಂತೆ ಇಬ್ಬರನ್ನು ಬಂಧಿಸಲಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ದೆಹಲಿ ಕೇಂದ್ರ ಡಿಸಿಪಿ ಎಂ.ಹರ್ಷವರ್ಧನ್ ಮಾಹಿತಿ ನೀಡಿದ್ದರು

    “ನೆಲಮಾಳಿಗೆಯಲ್ಲಿ ನೀರು ತುಂಬುತ್ತಿರುವ ಬಗ್ಗೆ ಮಾಹಿತಿ ಪಡೆದ ನಂತರ ರಾತ್ರಿಯಿಂದಲೇ ರಕ್ಷಣಾ ಕಾರ್ಯಚರಣೆ ನಡೆಸಲಾಯಿತು.
    ದೆಹಲಿ ಪೊಲೀಸ್, ದೆಹಲಿ ಅಗ್ನಿಶಾಮಕ ಸಿಬ್ಬಂದಿ ಮತ್ತು ಎನ್ ಡಿ ಆರ್ ಎಫ್ ತಂಡಗಳು ಕಾರ್ಯಾಚರಣೆ ಯಲ್ಲಿ ಭಾಗಿಯಾಗಿದ್ದವು.
    ಈ ಸಂದರ್ಭ ದಲ್ಲಿ ಮೂರು ವಿದ್ಯಾರ್ಥಿಗಳ ಮೃತದೇಹಗಳನ್ನು ಪತ್ತೆ ಹಚ್ಚಿದ್ದು ಕುಟುಂಬದವರಿಗೆ ಮಾಹಿತಿ ನೀಡಲಾಯಿತು” ಎಂದು ಡಿಸಿಪಿ ತಿಳಿಸಿದರು

    ನೆಲಮಾಳಿಗೆಯು ನೀರಿನಿಂದ ತುಂಬಿಕೊಂಡಿತ್ತು ಮಳೆ ಮತ್ತು ಚರಂಡಿ ನೀರು ದಿಡೀರ್ ತುಂಬಿದ್ದರಿಂದ ಮೂರು ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದರು

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss