Sunday, September 8, 2024
spot_img
More

    Latest Posts

    ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಇಂದಿನ ಟ್ವಿಟರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ!!

    ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರಿಸಲು ಇಂದಿನ ಟ್ವಿಟರ್ ಅಭಿಯಾನಕ್ಕೆ ಉತ್ತಮ ಸ್ಪಂದನೆ !!


    ಮಂಗಳೂರು : ಪಂಚ ದ್ರಾವಿಡ ಭಾಷೆಗಳಲ್ಲಿ ತುಳು ಭಾಷೆ ಒಂದಾಗಿದ್ದರೂ ಕೂಡ ತುಳುನಾಡಿನ ರಾಜಕಾರಣಿಗಳ ಹಿತಾಸಕ್ತಿಯ ಕೊರತೆಯಿಂದಾಗಿಯೋ,ಸರಕಾರದ ನಿರ್ಲಕ್ಷ್ಯ ದಿಂದಾಗಿಯೋ,ತುಳು ಭಾಷೆಗೆ ಅಧಿಕೃತ ಸ್ಥಾನಮಾನ ಹಾಗೂ 8 ನೇ ಪರಿಚ್ಛೇದಕ್ಕೆ ಸೇರದೇ ಉಳಿದಿದೆ ಇದರ ಪರಿಣಾಮವಾಗಿ “Tweet Tulunad” ಅಭಿಯಾನವು ಇಂದು ಬೆಳಗ್ಗೆ 6 ರಿಂದ ಆರಂಭಗೊಂಡು ರಾತ್ರಿ 12ರ ತನಕ ಟ್ವೀಟ್ ಮಾಡಬಹುದಾಗಿದೆ.

    ಇಂದು ಮುಂಜಾನೆ ಆರಂಭಗೊಂಡ ಅಭಿಯಾನಕ್ಕೆ ಉತ್ತಮ ಸ್ಪಂದನೆ ದೊರೆತಿದ್ದು ದ.ಕ,ಉಡುಪಿ,ಕಾಸರಗೋಡು,ಕೊಡಗು ಮುಂತಾದ ಜಿಲ್ಲೆಯ ತುಳುವರು ದೇಶ ವಿದೇಶಗಳಿಂದ ಟ್ವೀಟ್ ಮಾಡಿ ಸರಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.

    TuluOfficialinKA_KL

    ಎಂಬ ಹ್ಯಾಷ್ ಟ್ಯಾಗ್ ಬಳಸಿ ಅಭಿಯಾನವನ್ನು ನಡೆಸುತ್ತಾ ಈಗಾಗಲೇ ಲಕ್ಷಾಂತರ ಟ್ವೀಟ್ ಗಳು, ತುಳುವರ ಬೇಡಿಕೆಯ ಕೂಗು ಸರಕಾರಕ್ಕೆ ಮುಟ್ಟಿದೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss