Tuesday, September 17, 2024
spot_img
More

    Latest Posts

    ಚಂಡಮಾರುತ ಎಫೆಕ್ಟ್ : ಕರಾವಳಿಯಲ್ಲಿ ಧಾರಾಕಾರ ಮಳೆ, ಮೇ.14 ರಿಂದ ಮೇ.16 ರವರೆಗೆ ರೆಡ್ ಅಲರ್ಟ್

    ಮಂಗಳೂರು : ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮ ಉಂಟಾಗಿರುವ ತೌಕ್ತೇ ಚಂಡಮಾರುತದಿಂದ ಕರಾವಳಿಯಲ್ಲಿ ಇಂದು ಮುಂಜಾನೆಯಿಂದಲೇ ಧಾರಾಕಾರ ಮಳೆಯಾಗುತ್ತಿದೆ

    .ದಿನವಿಡೀ ಮಳೆ ಸುರಿಯುವ ಎಲ್ಲ ಲಕ್ಷಣ ಗೋಚರಿಸುತ್ತಿದೆ. ಕರಾವಳಿಯಲ್ಲಿ ಮೇ.14 ರಿಂದ ಮೇ.16 ರವರೆಗೆ ರೆಡ್ ಅಲರ್ಟ್ ,17 -18 ರಂದು ಅರೆಂಜ್ ಅಲರ್ಟ್ ಘೋಷಿಸಲಾಗಿದೆ.
    ಕರಾವಳಿ ಭಾಗದ ಕೆಲವೆಡೆ ನಿನ್ನೆ ರಾತ್ರಿಯೇ ಮಳೆ ಪ್ರಾರಂಭವಾಗಿದ್ದು , ಇದು ಇಂದು ಕೂಡಾ ಮುಂದುವರೆದಿದೆ. ಮಳೆಯ ಜೊತೆ ಗಾಳಿ ಕೂಡ ಇದ್ದು, ಸಮುದ್ರದಲ್ಲಿ ಅಲೆಗಳ ಅಬ್ಬರ ಹೆಚ್ಚಿದೆ. ಚಂಡಮಾರುತದ ಪರಿಣಾಮ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ. ಮುನ್ನೆಚ್ಚರಿಕಾ ಉದ್ದೇಶದಿಂದ ಜಿಲ್ಲೆಗೆ ಎನ್.ಡಿ.ಆರ್.ಎಫ್ ತಂಡ ಆಗಮಿಸಿದೆ.

    ಹವಾಮಾನ ಇಲಾಖೆ ಮುನ್ಸೂಚನೆಯಂತೆ ರಾಜ್ಯ ಕರಾವಳಿ ಭಾಗದಲ್ಲಿ ಇನ್ನೂ ಎರಡು ದಿನಗಳ ಕಾಲ ಉತ್ತಮ ಮಳೆಯಾಗುವ ಸಾಧ್ಯತೆ ಇದೆ. ಪ್ರಾಕೃತಿಕ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳ ತುರ್ತಸೇವೆಗೆ ಕಂಟ್ರೋಲ್ ರೂಂ ನಂಬರ್ 1077 ಹಾಗೂ 9483908000 ಗೆ ಸಂಪರ್ಕಿಸಬಹುದು ಎಂದು ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿ ತಿಳಿಸಿದ್ದಾರೆ

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss