Sunday, September 15, 2024
spot_img
More

    Latest Posts

    ಕೊನೆಗೂ ನದಿಯಿಂದ ಲಾರಿ ಹೊರಕ್ಕೆ!! ಈಶ್ವರ್ ಮಲ್ಪೆ ನೇತೃತ್ವದ ತಂಡದಿಂದ ಯಶಸ್ವಿ 7 ಗಂಟೆಗಳ ಕಾರ್ಯಾಚರಣೆ

    ಕಾಳಿ ನದಿಯ ಹಳೆಯ ಸೇತುವೆ ಕುಸಿದ ಪರಿಣಾಮ ನದಿ ಸೇರಿದ್ದ ತಮಿಳು ನಾಡಿನ ಮೂಲದ ಲಾರಿಯನ್ನು ಸತತ ಏಳು ತಾಸುಗಳ ಕಾರ್ಯಾಚರಣೆಯಲ್ಲಿ ಮೇಲಕ್ಕೆತ್ತಲಾಯಿತು. ಕಾಳಿ ನದಿಯ ಅಳ್ವೇವಾಡ ದಂಡೆಗೆ ಗುರುವಾರ ಸಂಜೆ 7-15 ರ ಸುಮಾರಿಗೆ ಎಳೆದು ತರಲಾಯಿತು. ಗುರುವಾರ ಬೆಳಿಗ್ಗೆಯಿಂದ ನಿರಂತರ ಕಾರ್ಯಾಚರಣೆ ನಡೆಸಿದ್ದ ಐ.ಆರ್. ಬಿ. ಕಂಪನಿ ಸಿಬ್ಬಂದಿ ಹಾಗೂ ಜಿಲ್ಲಾಡಳಿತ ಜಂಟಿ ಕಾರ್ಯಾಚರಣೆ ನಡೆಸಿದ್ದವು. ಎಸ್ ಡಿ ಆರ್ ಎಫ್, ಕರಾವಳಿ ಕಾವಲು ಪಡೆ ಲಾರಿ ಎತ್ತುವಲ್ಲಿ ಶ್ರಮಿಸಿದವು.

    ನಿರಂತರ ಎಂಟು ಗಂಟೆಗಳ ಕಾರ್ಯಾಚರಣೆ ಮಾಡಿ ಕಾಳಿ ನದಿ ದಡಕ್ಕೆ ಲಾರಿ ಎಳೆದು ತರಲಾಯಿತು. ದಡಕ್ಕೆ ಬಂದ ಲಾರಿಯನ್ನು ಕೆಲ ನಿಮಿಷದಲ್ಲಿ ಕ್ರೇನ್ ಮೂಲಕ ಮೇಲಕ್ಕೆತ್ತುವ ಕಾರ್ಯವನ್ನು ಯಶಸ್ವಿಯಾಗಿ ಮಾಡಲಾಯಿತು. ಇದಕ್ಕೂ ಮುನ್ನ ಮೂರು ರೋಪ್ ಗಳನ್ನು ಲಾರಿಗೆ ಈಶ್ವರ ಮಲ್ಪೆ ಹಾಗೂ ಅವರ ತಂಡ ಸ್ಕೂಬಾ ಡೈವ್ ಮಾಡಿ ಕಟ್ಟಿ ಬಂದಿತ್ತು‌. ಮೂರು ಟೋಯಿಂಗ್ ವಾಹನಗಳ ಮೂಲಕ ನಿಧಾನಕ್ಕೆ ಲಾರಿಯನ್ನು ದಡದತ್ತ ಎಳೆಯಲಾಯಿತು.ಲಾರಿಗೆ ನದಿಯ ಕಲ್ಲು ಅಡ್ಡ ಬಂದ ಕಾರಣ‌ ಕಾರ್ಯಾಚರಣೆ ತಡವಾಯಿತು. ಕಾರ್ಯಾಚರಣೆ ಸ್ಥಳಕ್ಕೆ ಮಧ್ಯಾಹ್ನ ಎರಡು ಗಂಟೆಗೆ ಆಗಮಿಸಿದ್ದ ಸಚಿವ ಮಂಕಾಳು ವೈದ್ಯ ಭೇಟಿ ನೀಡಿ, ಕಾರ್ಯಾಚರಣೆ ಮಾಡುವವರಿಗೆ ಧೈರ್ಯ ತುಂಬಿದರು. ಲಾರಿ ಮಾಲಕ ಸೇಂಥಿಲ್ ಗೆ ಸಾಂತ್ವನ ಹೇಳಿದರು. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಹಾಗೂ ಎಸ್ಪಿ ನಾರಾಯಣ ಅವರು ಸಹ ಕಾರ್ಯಾಚರಣೆ ತಂಡಕ್ಕೆ ಮಾರ್ಗದರ್ಶನ ಮಾಡಿದ್ದರು‌

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss