ಉಡುಪಿ ಮೇ 2 ಯುವಕನ ಮೇಲೆ ಲೈಂಗಿಕ ದೌರ್ಜನ್ಯ ಹೆಸರಿರುವ ಆರೋಪದಡಿ ವಾಸ್ತು ತಜ್ಞ ನನ್ನು ಪೊಲೀಸರು ಬಂಧಿಸಿದ್ದಾರೆ ಬ್ರಹ್ಮಾವರ ಸಮೀಪ ಚಾಂತರು ನಿವಾಸಿ ಅನಂತ್ ನಾಯ್ಕ ಬಂದಿತ ಆರೋಪಿ ಈತ ಬ್ರಹ್ಮಾವರ ಬಸ್ ನಿಲ್ದಾಣ ಸಮೀಪದ ಲಾಡ್ಜ್ ಒಂದರ ರೂಮ್ನಲ್ಲಿ ವಾಸ್ತುತಜ್ಞ ಜಲತಜ್ಞ ಯೋಗ ಪಂಡಿತ ಎಂಬುದಾಗಿ ಬೋರ್ಡ್ ಹಾಕಿ ವ್ಯವಹಾರ ನಡೆಸುತ್ತಿದ್ದ. 18ರ ಯುವಕ ತನ್ನ ತಂದೆಯೊಂದಿಗೆ ಈತನ ಬಲಿ ವಾಸ್ತು ಕೇಳಲು ಲಾಡ್ಜ್ ನಲ್ಲಿರುವ ರೂಮಿಗೆ ರಾತ್ರಿ 9:00 ಸುಮಾರಿಗೆ ಹೋಗಿದ್ದರು ಈ ಸಂದರ್ಭ ತಂದೆಯನ್ನು ಹೊರಗೆ ಕಳಿಸಿದ ಅನಂತ ನಾಯ್ಕ ಯುವಕನಿಗೆ ಲೈಂಗಿಕ ಕಿರುಕುಳ ನೀಡಿದಾನೆಂದು ದೂರಲಾಗಿದೆ ಅದರಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಆಸ್ವಾಭಾವಿಕ ಲೈಂಗಿಕ ಕಿರುಕುಳ ಪ್ರಕರಣ ದಾಖಲಾಗಿದೆ ಆರೋಪಿ ಅನಂತ ನಾಯ್ಕ ಗುರುವಾರ ಬೆಳಿಗ್ಗೆ ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಆರೋಪಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಈ ಪ್ರಕರಣ ಕುರಿತು ತುಳುನಾಡ ರಕ್ಷಣಾ ವೇದಿಕೆ ಅದ್ಯಕ್ಷ ಸತೀಶ್ ಪೂಜಾರಿ ಕಿಳಂಜೆ, ಮತ್ತು ಗೌರವ ಅದ್ಯಕ್ಷ ಸುರೇಂದ್ರ ಪೂಜಾರಿ ಹಾವಂಜೆ ಸಮಗ್ರ ತನಿಖೆ ನಡೆಸಿ ಸತ್ಯಾಂಶವನ್ನು ಹೊರಗಡೆ ತರುವಂತೆ ಆಗ್ರಹಿಸಿದ್ದಾರೆ.
©2021 Tulunada Surya | Developed by CuriousLabs