ಬೆಂಗಳೂರು : ಬೈಕ್ ನಲ್ಲಿ ಸ್ಟಂಟ್ ಮಾಡುತ್ತಾ ರೀಲ್ಸ್ ಮಾಡ್ತಿದ್ದ ಕ್ರೇಜಿ ಬೈಕರ್ ಪೊಲೀಸ್ರ ಅತಿಥಿಯಾಗಿದ್ದಾನೆ. ವಿಶೇಷ ವೇಷಭೂಷಣ ಧರಿಸಿ ಬೈಕ್ ನಲ್ಲಿ ಸ್ಟಂಟ್ ಮಾಡೋದ್ರ ಜೊತೆಗೆ ಕಲರ್ ಪುಲ್ ಆಗಿ ಬೈಕ್ ಆಲ್ಟರ್ ಮಾಡಿ ರೈಡ್ ಮಾಡ್ತಿದ್ದ. ಕೆಂಪೇಗೌಡ ಏರ್ಪೋರ್ಟ್ ರಸ್ತೆಯಲ್ಲಿ ಸಿಗ್ನಲ್ ಜಂಪ್ ಮಾಡಿ ಕಾರೊಂದು ಬೈಕ್ ಗೆ ಡಿಕ್ಕಿಗೆ ಹೊಡೆದಿತ್ತು. ಬಳಿಕ ಕಾರನ್ನ ಹಿಂಬಾಲಿಸಿದ ರೈಡರ್ ಕಾರಿನ ಕನ್ನಡಿ ಒಡೆದು ಹಾಕಿದ್ದ. ಕನ್ನಡಿ ಹೊಡೆದು ಓನ್ ವೇನಲ್ಲಿ ಬೈಕ್ ತಿರುಗಿಸಿ ಎಸ್ಕೇಪ್ ಆಗಿದ್ದ. ಲೈಕ್ ಕಮಾಂಟ್ ಗಾಗಿ ತನ್ನ ಎಲ್ಲ ಸ್ಟಂಟ್ ಗಳನ್ನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತಿದ್ದ. ವಿಡಿಯೋ ಗಮನಿಸಿ ಸಾರ್ವಜನಿಕರಿಂದ ಪೊಲೀಸರಿಗೆ ಸಾಕಷ್ಟು ದೂರುಗಳು ಬಂದಿದ್ವು. ವಿಡಿಯೋ ಪರಿಶೀಲನೆ ನಡೆಸಿ ಬೈಕ್ ಮತ್ತು ಸವಾರನನ್ನ ಯಲಹಂಕ ಸಂಚಾರ ಪೊಲೀಸ್ರು ಪತ್ತೆ ಮಾಡಿದ್ದಾರೆ. ಕ್ರೇಜಿ ಬೈಕ್ ಸವಾರನ ಬೈಕ್ ಜಪ್ತಿ ಮಾಡಿದ್ದು ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
©2021 Tulunada Surya | Developed by CuriousLabs