ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ನಿರ್ದೇಶಕರಾದ ಅಬ್ದುಲ್ ಜಾವಿದ್ ಅಜೀಮ್ ರವರನ್ನು
ಭೇಟಿ ಮಾಡಿ ಚರ್ಚಿಸಿದರು.
ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ ಕೆಲಸ ನಡೆಯುತ್ತಿದ್ದು ಹಲವಾರು ಜಾಗಗಳಲ್ಲಿ ಸರ್ವಿಸ್ ರೋಡ್ ಇಲ್ಲದೆ ಜನರು ಸಮಸ್ಯೆ ಅನುಭವಿಸಿದ್ದು ಹಾಗೂ ಮಳೆಗಾಲದಲ್ಲಿ ಫ್ಲೈ ಓವರ್ ನಿಂದ ನೀರು ಕೆಳಗೆ ಪ್ರಯಾಣಿಸುವ ಜನರ ಮೇಲೆ ಬೀಳುತ್ತಿರುವುದು, ಆದಷ್ಟು ಬೇಗ ಉಡುಪಿಯ ಸಂತೆಕಟ್ಟೆ ರಸ್ತೆ , ಪಂಪುವೆಲ್ ಅಂಡರ್ ಪಾಸ್ ಬಳಿಯ ರಾಜಕಾಲುವೆ ಸಮಸ್ಯೆ, ತೊಕ್ಕೊಟ್ಟು ಫ್ಲೈ ಓವರ್ ಸೇರಿದಂತೆ ಹತ್ತು ಹಲವು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯ ಸಮಸ್ಯೆಗಳ ಬಗ್ಗೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನೆ ನಿರ್ದೇಶಕರಾದ ಅಬ್ದುಲ್ ಜಾವಿದ್ ಅಜೀಮ್ ರವರನ್ನು
ಭೇಟಿ ಮಾಡಿ ಚರ್ಚಿಸಿದರು. ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕಂಡುಕೊಳ್ಳುವುದಾಗಿ ಭರವಸೆ ನೀಡಿದರು. ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ತನ್ವೀರ್ ಮತ್ತಿತರರು ಉಪಸಿತರಿದ್ದರು
©2021 Tulunada Surya | Developed by CuriousLabs