Monday, April 15, 2024
spot_img
More

  Latest Posts

  ಮಂಗಳೂರು: ಅನಧಿಕೃತ ಬ್ಯಾನರ್ ಕಟೌಟ್ ಹಾಕಿದ್ರೆ ಕ್ರಿಮಿನಲ್ ಕೇಸ್ ದಾಖಲು

  .

  ಮಂಗಳೂರು ಮಹಾನಗರಪಾಲಿಕೆಯ ವಿವಿಧ ಪ್ರದೇಶದ ರಸ್ತೆ ಬದಿಗಳಲ್ಲಿ ಕೆಲವೊಂದು ಜಾಹೀರಾತು ಸಂಸ್ಥೆಯವರು ಹಾಗೂ ಖಾಸಗಿ ವ್ಯಕ್ತಿಗಳು ವಾಣಿಜ್ಯ ಉದ್ದೇಶಗಳಿಗಾಗಿ ಹಾಗೂ ಹಾಗೂ ರಾಜಕೀಯ ಮತ್ತು ಧಾರ್ಮಿಕ ಮತ್ತು ಕೆಲವೊಂದು ಖಾಸಗಿ ಸಮಾರಂಭಗಳ ನಿಮಿತ್ತ ಆನಧಿಕೃತ ಬ್ಯಾನರ್ ಕಟೌಟ್, ಬಂಟಿಂಗ್ಸ್, ಮತ್ತು ಪ್ಲೆಕ್ಸ್ ಇತ್ಯಾದಿಗಳನ್ನು ವ್ಯಾಪಕವಾಗಿ ಅಳವಡಿಸುತ್ತಿರುವುದು ಕಂಡುಬಂದಿದೆ.

  ಪಾದಚಾರಿಗಳಿಗೆ ಮತ್ತು ವಾಹನ ಸವಾರರಿಗೆ ಇದರಿಂದ ತೀವ್ರ ತೊಂದರೆಯಾಗುತ್ತಿದ್ದು, ಅಪಘಾತ ಪ್ರಕರಣಗಳು ಹೆಚ್ಚಾಗುವ ಸಾಧ್ಯತೆಗಳಿರುವುದಲ್ಲದೆ ಸಾರ್ವಜನಿಕ ಸ್ಥಳಗಳನ್ನು ವಿರೂಪಗೊಳಿಸಿದಂತಾಗುತ್ತಿದೆ. ಅಲ್ಲದೇ, ವಿದ್ಯುತ್ ಅವಘಡಗಳು ಉಂಟಾಗಿ ಪ್ರಾಣಹಾನಿ ಸಂಭವಿಸುವ ಸಾಧ್ಯತೆ ಇದೆ. ಕೆಲವೊಂದು ವಿವಾದಾತ್ಮಕ ಮತ್ತು ದ್ವೇಷ ಸಂದೇಶ ಸಾರುವ ಫ್ಲೆಕ್ಸ್‍ಗಳು ಅಳವಡಿಸುತ್ತಿರುವುದರಿಂದ ಶಾಂತಿ ಸುವ್ಯವಸ್ಥೆಗೆ ದಕ್ಕೆಯಾಗಿ ಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆಗಳ ಬಗ್ಗೆ ಪೊಲೀಸ್ ಇಲಾಖೆಯಿಂದ ಆಕ್ಷೇಪ ವ್ಯಕ್ತವಾಗುತ್ತಿದೆ.

  ಆದ್ದರಿಂದ ಎಲ್ಲಾ ರೀತಿಯ ಅನಧಿಕೃತ ಬ್ಯಾನರ್, ಕಟೌಟ್, ಬಂಟಿಂಗ್ ಮತ್ತು ಪ್ಲೆಕ್ಸ್ ಇತ್ಯಾದಿಗಳನ್ನು ಅಳವಡಿಸುತ್ತಿರುವುದನ್ನು ಈ ಕೂಡಲೇ ಸ್ಥಗಿತಗೊಳಿಸಬೇಕು. ಮಹಾನಗರಪಾಲಿಕೆ ಆಧೀನದಲ್ಲಿ ಸರ್ಕಾರಿ ಮತ್ತು ಖಾಸಗಿ ಸ್ಥಳಗಳಲ್ಲಿ ಒಟ್ಟು 1084 ಅಧಿಕೃತ ಜಾಹೀರಾತು ಫಲಕಗಳಿದ್ದು, ಈ ಜಾಹೀರಾತು ಫಲಕಗಳನ್ನು ಬಳಕೆ ಮಾಡಿ ಜಾಹೀರಾತುಗಳನ್ನು ಪ್ರಕಟಿಸುವಂತೆ ಸಾರ್ವಜನಿಕರಿಗೆ ಕೋರಲಾಗಿದೆ. ಅನಧಿಕೃತ ಪ್ಲೆಕ್ಸ್, ಬ್ಯಾನರ್ ಇತ್ಯಾದಿಗಳನ್ನು ಅಳವಡಿಸಿರುವುದು ಕಂಡುಬಂದಲ್ಲಿ ಸಾರ್ವಜನಿಕ ತೆರೆದ ಸ್ಥಳಗಳ ವಿರೂಪಗೊಳಿಸುವಿಕೆ ಕಾಯ್ದೆ, 1981 (The Karnataka Open Places (Prevention of Disfigurement) Act, 1981)ಪ್ರಕಾರ ಹಾಗೂ ಅನಧಿಕೃತ ಫಲಕಗಳ ಮೂಲಕ ಯಾವುದಾದರೂ ಶಾರ್ಟ್ ಸರ್ಕ್ಯೂಟ್ ಅಥವಾ ವಿದ್ಯುತ್ ಅವಘಡಗಳಾಗಿ ಪ್ರಾಣಹಾನಿ ಸಂಭವಿಸಿದಲ್ಲಿ ಸಂಬಂಧಪಟ್ಟ ಸಂಸ್ಥೆ ಅಥವಾ ವ್ಯಕ್ತಿ ಅಥವಾ ಪ್ರಕಟಣೆಗೆ ಕಾರಣರಾದವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಮಹಾನಗರಪಾಲಿಕೆ ಆಯುಕ್ತರು ಎಚ್ಚರಿಸಿದ್ದಾರೆ

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss