ಬ್ರಹ್ಮಾವರ
ಆರೂರು ಗ್ರಾಮದ ಸರಕಾರಿ ಶಾಲೆ, ಬೆಳ್ಮಾರ್ ಇಲ್ಲಿನ ಅಂಗನವಾಡಿ ಮತ್ತುಶಾಲಾ ಮಕ್ಕಳಿಗೆ ದಾನಿಗಳಾದ ರಜತ್ ಭಟ್ ಬೆಳ್ಮಾರ್ ಇವರು ಉಚಿತ ನೋಟ್ ಪುಸ್ತಕ, ಬೈಂಡ್ ಶೀಟ್, ಪೆನ್ನು ,ಪೆನ್ಸಿಲ್, ರಬ್ಬರ್ ,ಸ್ಕೇಲ್, ಲೇಬಲ್ ಬಣ್ಣದ ಪೆನ್ಸಿಲ್, ಸ್ಲೇಟ್ ಮುಂತಾದ ಲೇಖನ ಸಾಮಗ್ರಿಗಳನ್ನು ನೀಡಿದರು ಹಾಗೂ ದಾನಿಗಳಾದ ಫ್ರಾಂಕಿ ಡಿಸೋಜಾ ಕೊಳಲಗಿರಿ ಸಮಾಜಸೇವಕರು, ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕರಾದ, ಇವರು ನಿರಂತರ ಹತ್ತು ವರ್ಷದಿಂದ ಅಂಗನವಾಡಿ ಮತ್ತು ಶಾಲಾ ಮಕ್ಕಳಿಗೆ ಉಚಿತ ಶಾಲಾ ಬ್ಯಾಗ್ ಮತ್ತು ಕೊಡೆ ನೀಡುತ್ತಿರುವ ಇವರು ಈ ಬಾರಿಯೂ ಇವುಗಳನ್ನು ನೀಡಿದರು,ಹಾಗು ಎಸ್ ಡಿ ಎಂ ಸಿ ಯವರಾದ ರಾಘವೇಂದ್ರ ರಾವ್ ಮತ್ತು ರೋಹಿಣಿ ರಾವ್ ಇವರು ಶಾಲಾ ಮಕ್ಕಳಿಗೆ ಉಚಿತ ಐಡಿ ಕಾರ್ಡ್ ಗಳನ್ನು ನೀಡಿದರು ಈ ಕಾರ್ಯಕ್ರಮದಲ್ಲಿ ಬ್ರಹ್ಮಾವರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶಬಾನ ಅಂಜುಮ್, ಇಸಿಓ ಪ್ರಕಾಶ್ ಬಿಬಿ ಸರ್ ಸಿಆರ್ ಪಿ ಶಾಂತ ಮೇಡಂ
ಶಿಕ್ಷಕ ವೃಂದದವರು , ಆರೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾದ ವನಿತ, ಎಸ್ ಡಿ ಎಂ ಸಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆಯರು, ಮುಖ್ಯ ಅಡುಗೆಯವರು ಪೋಷಕರು, ಗ್ರಾಮಸ್ಥರು ಮಕ್ಕಳು ಉಪಸ್ಥಿತರಿದ್ದರು.
©2021 Tulunada Surya | Developed by CuriousLabs