Monday, April 15, 2024
spot_img
More

  Latest Posts

  ಬೆಳ್ತಂಗಡಿ : ಬಿ.ಎಸ್.ಪಿ. ಯ ಅಭ್ಯರ್ಥಿ ಕಾಂತಪ್ಪ ಅಲಂಗಾರ್ ಎಪ್ರಿಲ್ 3 ರಂದು ನಾಮಪತ್ರ ಸಲ್ಲಿಕೆ

  ಬೆಳ್ತಂಗಡಿ : ಬಿ.ಎಸ್. ಪಿ ವತಿಯಿಂದ ದ.ಕ ಲೋಕಸಭಾ ಕ್ಷೇತ್ರಕ್ಕೆ ಕಾಂತಪ್ಪ ಅಲಂಗಾರ್ ರವರು ಎ.3ರಂದು ಬಿ.ಎಸ್.ಪಿ ಯ ಅಭ್ಯರ್ಥಿಯಾಗಿ ನಾಮ ಪತ್ರವನ್ನು ಸಲ್ಲಿಸಲಿದ್ದರೆಂದು ಮಾ.30ರಂದು ಬೆಳ್ತಂಗಡಿ ಸಂತೆಕಟ್ಟೆ ಸುವರ್ಣ ಆರ್ಕೇಡ್ ನಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದರು. ಬಹುಜನ ಸಮಾಜ ಪಾರ್ಟಿ (ಬಿ.ಎಸ್.ಪಿ)ಯ ರಾಜ್ಯ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್‌ರವರನ್ನು ರಾಷ್ಟ್ರೀಯ ಹಾಗೂ ರಾಜ್ಯ ಘಟಕ ಬಿ.ಎಸ್.ಪಿಯಿಂದ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ. ಈ ಹಿನ್ನಲೆಯಲ್ಲಿ ಬಿ.ಎಸ್.ಪಿ. ವತಿಯಿಂದ ದ.ಕ. ಲೋಕಸಭಾ ಕ್ಷೇತ್ರಕ್ಕೆ ದಿನಾಂಕ 03.04.2024ರಂದು ಕಾಂತಪ್ಪ ಅಲಂಗಾರ್‌ರವರು ಬಿ.ಎಸ್.ಪಿ.ಯ ಅಭ್ಯರ್ಥಿಯಾಗಿ ನಾಮ ಪತ್ರವನ್ನು ಸಲ್ಲಿಸಲಿದ್ದಾರೆ.

  ಬಿಜೆಪಿ ಹಾಗೂ ಕಾಂಗ್ರೆಸಿನ ದುರಾಡಳಿತ:
  ಬಿಜೆಪಿಯ ದುರಾಡಳಿತ : ಬಿಜೆಪಿಯ ಆಳ್ವಿಕೆಯಲ್ಲಿ ದೇಶದ ಬಹುಜನರು ಆತಂಕದಲ್ಲಿದ್ದು ಬಿಜೆಪಿಯ ಸರಕಾರ ರಚಿಸಿದಾಗಲೆಲ್ಲ “ನಾವು ಸಂವಿಧಾನವನ್ನು ಬದಲಾಯಿಸುತ್ತೇವೆ” ಎಂದು ಹೇಳುತ್ತಲೇ ಇದ್ದಾರೆ. 2000 ಇಸವಿಯಲ್ಲೂ ಸಹ ಸಂವಿಧಾನವನ್ನು ಬದಲಾಯಿಸುತ್ತೇವೆ ಎಂದು ಹೇಳಿದ ಬಿಜೆಪಿ ಪಕ್ಷದ ವಿರುದ್ಧ ಬಿ.ಎಸ್.ಪಿಯು ದೇಶವ್ಯಾಪ್ತಿ ಹೋರಾಟ ಮಾಡಿದ ಮೇಲೆ ಇಂತಹ ಹೇಳಿಕೆ ನಿಂತು ಹೋಗಿತ್ತು. ಆದರೆ 10 ವರ್ಷಗಳ ನಂತರ ಸಂವಿಧಾನದ ಮೂಲಕ ಸಂಸದರಾಗಿ ಆಯ್ಕೆಯಾದವರೇ ಸಂವಿಧಾನ ಬದಲಾಯಿಸುವ ಪ್ರಸ್ತಾಪ ಮಾಡುತ್ತಿರುವುದು ಘೋರ ತಪ್ಪು ಎಂದು ಅರಿವಾಗಿ ಅಂತಹ ಕೆಲವು ಬಿಜೆಪಿ ನಾಯಕರಿಗೆ ಈ ಸಲ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಟಿಕೆಟ್ ನೀಡದೆ ಇರುವುದು ಕಂಡು ಬಂದಿದೆ. ಬಿಜೆಪಿ ನಾಯಕರ ಸಂವಿಧಾನ ವಿರೋಧಿ, ಕೋಮುವಾದಿ ಮತ್ತು ಜಾತಿವಾದಿ ರಾಜಕಾರಣದ ವಿರುದ್ಧ ಬಿ.ಎಸ್.ಪಿ.ಯು ಹೋರಾಡುತ್ತಲೇ ಬಂದಿದೆ. ಕೇಂದ್ರದಲ್ಲಿ ಬಿ.ಜೆ.ಪಿ ಸರಕಾರ ಮೀಸಲಾತಿ ತೆಗೆಯುವ ಕೆಲಸ ಮಾಡುತ್ತಿದ್ದು ಬಹುಮುಖ್ಯವಾಗಿ ಪ.ಜಾತಿ, ಪ.ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ನೌಕರರ ಸಂಖ್ಯೆ ಕಡಿಮೆ ಮಾಡುತ್ತಿದ್ದಾರೆ. 2014ರಲ್ಲಿ ಕೇಂದ್ರ ಸರಕಾರಿ ಹುದ್ದೆಗಳಲ್ಲಿ 2.38ಲಕ್ಷ ಇದ್ದ ಎಸ್.ಸಿ.ಗಳು ಈಗ ಈಗ 1.45 ಲಕ್ಷಕ್ಕೆ ಇಳಿದಿದ್ದಾರೆ, 1.15ಲಕ್ಷ ಇದ್ದ ಎಸ್.ಟಿ.ಗಳು ಈಗ 85,400 ಮತ್ತು 2.06ಲಕ್ಷ ಇದ್ದ ಓಬಿಸಿಗಳು, 1.84 ಲಕ್ಷಕ್ಕೆ ಇಳಿದಿದ್ದಾರೆ. ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಿ ಮೀಸಲಾತಿ ರದ್ದುಗೊಳಿಸಲಾಗುತ್ತಿದೆ.

  ಪ್ರತಿ ವರ್ಷ 2ಕೋಟಿ ಉದ್ಯೋಗಗಳನ್ನು ಸೃಷ್ಟಿಸುವ ಭರವಸೆಯನ್ನು 2014ರಲ್ಲಿ ಬಿಜೆಪಿ ನೀಡಲಾಗಿತ್ತು. ಆದರೆ ಇಲ್ಲಿಯ ತನಕ 20 ಕೋಟಿ ಉದ್ಯೋಗಗಳು ಸಿಗಬೇಕಾಗಿತ್ತು. ಆದರೆ ಹಾಲಿ ಇದ್ದ ಲಕ್ಷಾಂತರ ಕಂಪನಿಗಳನ್ನು ಮುಚ್ಚಿ 4.5ಕೋಟಿ ಉದ್ಯೋಗಗಳನ್ನು ಕಡಿತಗೊಳಿಸಿ ಕಾರ್ಮಿಕರನ್ನು ಬೀದಿಪಾಲು ಮಾಡಲಾಗಿದೆ. 2014ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ಹಾಕುತ್ತೇವೆ ಎಂದು ಬಿಜೆಪಿಯು ಆಶ್ವಾಸನೆ ನೀಡಿ ಇಲ್ಲಿಯ ತನಕ ಯಾರ ಖಾತೆಗೂ ಒಂದು ಪೈಸೆಯು ಬಂದಿಲ್ಲ. ಅಕ್ರಮ ಹಣ ಹೊರತರಬೇಕೆಂದು ರೂ. 500/- ರೂ.1000/- ನೋಟುಗಳನ್ನು ಬಂದ್ ಮಾಡಿದರು. ಆದರೆ ಯಾವುದೇ ಕಳ್ಳ ಹಣ ಹೊರಬರದೆ ಬಡವರು ಮಾತ್ರ ತನ್ನ ಕೂಲಿ ಕೂಡಿಟ್ಟ ಹಣವನ್ನು ಕಳೆದುಕೊಂಡು ನಿರ್ಗತಿಕರಾದರು. ಬ್ಯಾಂಕ್‌ಗಳ ಮುಂದೆ ಸಾಲುಗಟ್ಟಿ ನಿಂತು ಹಲವಾರು ಸತ್ತಿದ್ದಾರೆ.

  ಕೇಂದ್ರ ಸರಕಾರ ಜಾರಿ ಮಾಡಿದ್ದ ಮೂರು ಕೃಷಿ ವಿರೋಧಿ ಕಾಯಿದೆಗಳ ವಿರುದ್ಧ ಒಂದು ವರ್ಷ ಕಾಲ ಪ್ರತಿಭಟನೆ ನಡೆಸಿದ ನೂರಾರು ರೈತರು ಪ್ರಾಣ ಬಿಟ್ಟಿದ್ದಾರೆ. ಚಹಾ, ಕಾಫಿ ಒಳಗೊಂಡು ಎಲ್ಲಾ ಅಗತ್ಯವಸ್ತುಗಳ ಮೇಲೆ ಜಿ.ಎಸ್.ಟಿ. ಹಾಕಿ ಬೆಲೆಗಳನ್ನು ಏರಿಸಿದರು. ಇದರಿಂದ ಸಣ್ಣ ಪುಟ್ಟ ವ್ಯಾಪಾರಿಗಳು ಪ್ರಾಣ ಕಳೆದುಕೊಂಡರು. ಬಿಜೆಪಿಗರ ದುರಾಡಳಿತವನ್ನು ಖಂಡಿಸಿದವರ ವಿರುದ್ಧ ಆದಾಯ ತೆರಿಗೆ ಇಲಾಖೆ ಮತ್ತು ಜಾರಿ ನಿರ್ದೇಶನಾಲಯಗಳು ದಾಳಿ ಮಾಡಿದವು. ಕೋಮುವಾದಿ ಅಧಿಕಾರಿಗಳಿಗೆ ಬಡ್ತಿ ನೀಡಲಾಯಿತು. ನಿಷ್ಠಾವಂತರನ್ನು ಸಸ್ಪೆಂಡ್, ಕಡ್ಡಾಯ ನಿವೃತ್ತಿ ಅಥವಾ ಜೈಲಿಗೆ ಅಟ್ಟಲಾಯಿತು. ಬಿಜೆಪಿ ನೀತಿಗಳ ವಿರುದ್ಧ ಧ್ವನಿ ಎತ್ತಿದ ಹೋರಾಟಗಾರರು, ಬರಹಗಾರರು, ಪತ್ರಕರ್ತರನ್ನು ಜೈಲಿಗೆ ಕಳುಹಿಸಲಾಯಿತು. ಇವಿಷ್ಟು ಬಿಜೆಪಿ ಮಾಡಿದ ಮಾನವ ವಿರೋಧಿ ಹಾಗೂ ಸಂವಿಧಾನ ವಿರೋದಿ ಕೆಲಸವಾಗಿದೆ.

  ರಾಜ್ಯದಲ್ಲಿ ನೆರೆ ಬಂದಾಗ ಜನರು ಸಂಕಷ್ಟದಲ್ಲಿದ್ದ ಸಂದರ್ಭದಲ್ಲಿಯೂ ಪ್ರಧಾನಿ ಸೇರಿದಂತೆ ಯಾವ ನಾಯಕರೂ ಬರಲಿಲ್ಲ. ಈಗ ಚುನಾವಣೆಯ ಸಮಯದಲ್ಲಿ ಬರುತ್ತಿದ್ದಾರೆ. ಬಿಜೆಪಿಯು ಜನರನ್ನು ಮರುಳು ಮಾಡುವ ನಾಟಕ ಮಾಡುತ್ತಿದೆ.

  ಕಾಂಗ್ರೆಸ್ ದುರಾಡಳಿತ : ಇದನ್ನೆಲ್ಲ ಕಂಡು ಕಾಂಗ್ರೆಸ್ ನಾಯಕರು ದೇಶವು ಸರ್ವಧಿಕಾರಿಗಳ ಕೈಗಳಿಗೆ ಹೋಗುತ್ತಿದೆ. ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸಿ ಎಂದು ಭಾಷಣ ಬಿಗಿಯುತ್ತಿದ್ದಾರೆ. ಆದರೆ ಕಾಂಗ್ರೆಸ್ ಆಡಳಿತ ಅವಧಿಯಲ್ಲಿಯೇ ಸಂವಿಧಾನಕ್ಕೆ ಅತೀ ಹೆಚ್ಚಿನ ತಿದ್ದುಪಡಿಗಳನ್ನು ಕಾಂಗ್ರೆಸ್ ಸರಕಾರ ತಂದಿದೆ. ಇದು ಇವರುಗಳ ಸಂವಿಧಾನ ಪ್ರೇಮವು ಎಷ್ಟು ಪ್ರಾಮಾಣಿಕತೆ ಎಂಬುದು ಇದರಲ್ಲೇ ಅರ್ಥವಾಗುತ್ತದೆ.
  ಖಾಸಗೀಕರಣಕ್ಕೆ ಮೊದಲಿಗೆ ಚಾಲನೆ ನೀಡಿದವರು ಇದೇ ಕಾಂಗ್ರೆಸ್, ಇಂದಿಗೂ ಬ್ಯಾಕ್‌ ಲ್ಯಾಗ್ ಹುದ್ದೆಗಳನ್ನು ಭರ್ತಿ ಮಾಡದೇ ಕ್ರಮೇಣ ರದ್ದು ಮಾಡುತ್ತಿದೆ. ಇತರೆ ಹಿಂದುಳಿದ ವರ್ಗಗಳಿಗೆ (ಓಬಿಸಿ) ಮೀಸಲಾತಿ ನೀಡಲು ಶಿಫಾರಸ್ಸು ಮಾಡಿದ ಎರಡು ಆಯೋಗಗಳ ವರದಿಯನ್ನು ತಿಪ್ಪಗೆಸೆದ ಅಪಕೀರ್ತಿಯು ಕಾಂಗ್ರೆಸ್‌ಗೆ ಸಲ್ಲಬೇಕಾಗಿದೆ.

  ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದರೆ ಸಂವಿಧಾನವನ್ನು ರಕ್ಷಿಸುತ್ತೇವೆ ಎಂದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಎಸ್.ಸಿ./ಎಸ್.ಟಿ/ಮುಸ್ಲಿಂ ಓಟುಗಳನ್ನು ಪಡೆದು ಕರ್ನಾಟಕದಲ್ಲಿ ಸರಕಾರ ರಚಿಸಿದ ಕಾಂಗ್ರೆಸ್ ಮಾಡಿದ್ದೇನು? ಎಸ್.ಸಿ. /ಎಸ್.ಟಿ ಮೇಲೆ ರಾಜ್ಯದಲ್ಲಿ ದೌರ್ಜನ್ಯಗಳು ಹೆಚ್ಚುತ್ತಿದ್ದು ಶಿಕ್ಷೆಯ ಪ್ರಮಾಣ ಕೇವಲ 4% ಮಾತ್ರ ಇದೆ. ಕಾಂಗ್ರೆಸ್ ಸರಕಾರಕ್ಕೆ ದಲಿತರ ಮೇಲೆ ಎಷ್ಟು ಕಾಳಜಿ ಇದೆ ಎಂದು ಇದು ತೋರಿಸುತ್ತದೆ.
  ಎಸ್.ಸಿ/ಎಸ್.ಟಿಗಳ ಅಭಿವೃದ್ಧಿಗಾಗಿ ಎಸ್‌ ಎಸ್ಸಿ/ಎಸ್‌ಟಿಪಿ ಯೋಜನೆ ಅಡಿಯಲ್ಲಿ 2023-24ರಲ್ಲಿ ಬಜೆಟ್‌ನಲ್ಲಿ ನೀಡಿದ್ದ ರೂ. 39,000/- ಕೋಟಿ ರೂಪಾಯಿಗಳಲ್ಲಿ ರೂ. 11,000/- ಕೋಟಿ ರೂಪಾಯಿಗಳನ್ನು 5 ಗ್ಯಾರಂಟಿ ಖರ್ಚುಗಳಿಗೆ ವರ್ಗಾಯಿಸಲಾಗಿದೆ. ಇಲ್ಲಿಯ ತನಕ ಸುಮಾರು ಒಂದು ಲಕ್ಷ ಕೋಟಿ ಹಣವನ್ನು ವರ್ಗಾಯಿಸಿ ದುರ್ಬಳಕೆ ಮಾಡಲಾಗಿದೆ. ಪ.ಜಾತಿ/ಪ.ಪಂಗಡಗಳ ಅಭಿವೃದ್ಧಿಯ ಮೀಸಲು ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿಕೊಂಡು ಕಾಂಗ್ರೆಸ್ ಪ.ಜಾತಿ/ಪ.ಪಂಗಡಗಳಿಗೆ ಮೋಸ ಮಾಡುತ್ತಿದೆ.

  ಕಳೆದ 10 ತಿಂಗಳಲ್ಲಿ ಕರ್ನಾಟಕದಲ್ಲಿ 649 ರೈತರು ಸಾಲ ಬಾಧೆ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ . ಕಾಂಗ್ರೆಸ್ ಸರಕಾರವು ತಾವು ರೈತರ ಪರ, ಬಡವರ ಪರ ಸರ್ಕಾರವೆಂದು ನಾಟಕ ಮಾಡುತ್ತಿದೆ.

  ರಾಜ್ಯದಲ್ಲಿ 25ಲಕ್ಷ ಎಕರೆ ತುಂಡು ಭೂಮಿಯಲ್ಲಿ ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕುಪತ್ರ ನೀಡಿ ಸಕ್ರಮಗೊಳಿಸುವ ಆಶ್ವಾಸನೆ ನೀಡಲಾಗಿತ್ತು ಆದರೆ ಕಳೆದ 40 ವರ್ಷಗಳಲ್ಲಿ ಇದರ ಲಾಭವನ್ನು ಭೂಮಾಲಿಕರು ಹಾಗೂ ಭೂಮಾಫಿಯದವರು ಪಡೆದುಕೊಂಡು, ನಿಜವಾದ ಫಲಾನುಭವಿಗಳಿಗೆ ವಂಚನೆ ಮಾಡಲಾಗಿದೆ. ರಾಜ್ಯದಲ್ಲಿ 10 ಲಕ್ಷ ಮನೆಗಳಿಗೆ 94ಸಿ ಮತ್ತು 94ಸಿಸಿ ಅನ್ವಯ ಹಕ್ಕು ಪತ್ರ ನೀಡಲಿಲ್ಲ. ಎಸ್.ಸಿ./ಎಸ್.ಟಿ/ಓಬಿಸಿ ಹಾಸ್ಟೆಲ್‌ಗಳಿಗೆ ಸ್ವಂತ ಕಟ್ಟಗಳಿಲ್ಲ.
  ಸಂವಿಧಾನ ರಕ್ಷಣೆ ಮಾಡುವುದಾಗಿ ಇತ್ತೀಚೆಗೆ ಜಾಥಾ ಸಮಾವೇಶಗಳನ್ನು ನಡೆಸಿ ಎಸ್ಸಿ/ಎಸ್ಟಿಗಳಿಗೆ ಮೀಸಲಾದ ಹಣವನ್ನು ಖಾಲಿ ಮಾಡುತ್ತಿರುವ ಇದೇ ಕಾಂಗ್ರೆಸ್ ಸರಕಾರ ಸಂವಿಧಾನವು ಕೇವಲ ಎಸ್.ಸಿ/ಎಸ್.ಟಿ.ಗೆ ಸಂಬಂಧಪಟ್ಟದು ಎಂದು ತಪ್ಪು ಸಂದೇಶ ಕಾಂಗ್ರೆಸ್ ನೀಡುತ್ತಿದೆ.

  ಸಂವಿಧಾನ ಜಾರಿ ಎಂದರೆ ಕೇವಲ ಗ್ಯಾರಂಟಿಗಳನ್ನು ನೀಡುವುದಲ್ಲ. ಇಂತಹ ಗ್ಯಾರಂಟಿಗಳು ಕಾಂಗ್ರೆಸ್ ಸರಕಾರದ ತಾತ್ಕಾಲಿಕ ಪರಿಹಾರಗಳಷ್ಟೆ ಈ ದೇಶದ ಸಂಪತ್ತಿನಲ್ಲಿ ಪ.ಜಾತಿ/ಪ. ಪಂಗಡಗಳಿಗೆ ದೊರೆಯಬೇಕಾದ ನ್ಯಾಯಯುತವಾದ ಪಾಲಿನಲ್ಲಿ ಕೇವಲ ಶೇ. 2ರಷ್ಟು ಮಾತ್ರ ಈ ಗ್ಯಾರಂಟಿಗಳಿಗೆ ಖರ್ಚಾಗುತ್ತಿದೆ. ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಿಗಬೇಕಾದರೆ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳು ಯಥಾವತ್ತಾಗಿ ಜಾರಿಯಾಗಬೇಕಾಗಿದೆ.

  ಸಂವಿಧಾನ ಜಾರಿ ಎಂದರೆ ಕೇವಲ ಗ್ಯಾರಂಟಿಗಳನ್ನು ನೀಡುವುದಲ್ಲ. ಇಂತಹ ಗ್ಯಾರಂಟಿಗಳು ಕಾಂಗ್ರೆಸ್ ಸರಕಾರದ ತಾತ್ಕಾಲಿಕ ಪರಿಹಾರಗಳಷ್ಟೆ ಈ ದೇಶದ ಸಂಪತ್ತಿನಲ್ಲಿ ಪ.ಜಾತಿ/ಪ. ಪಂಗಡಗಳಿಗೆ ದೊರೆಯಬೇಕಾದ ನ್ಯಾಯಯುತವಾದ ಪಾಲಿನಲ್ಲಿ ಕೇವಲ ಶೇ. 2ರಷ್ಟು ಮಾತ್ರ ಈ ಗ್ಯಾರಂಟಿಗಳಿಗೆ ಖರ್ಚಾಗುತ್ತಿದೆ. ಈ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಮತ್ತು ಸಮಾನತೆ ಸಿಗಬೇಕಾದರೆ ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳು ಯಥಾವತ್ತಾಗಿ ಜಾರಿಯಾಗಬೇಕಾಗಿದೆ. ಈ ಹಿನ್ನೆಲೆಯಲ್ಲಿ ಬಹುಜನ ಸಮಾಜ ಪಾರ್ಟಿಯ ಅಭ್ಯರ್ಥಿಯಾಗಿ ಕಾಂತಪ್ಪ ಅಲಂಗಾರ್‌ರವರು ದ.ಕ. ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ . ಈ ಪ್ರಯುಕ್ತ ತುಳುನಾಡಿನ ಮತದಾರರಲ್ಲಿ ನಿಮ್ಮ ಅಮೂಲ್ಯ ಮತವನ್ನು ಬಿ.ಎಸ್.ಪಿ.ಯ ಆನೆ ಚಿಹ್ನೆಗೆ ನೀಡಿ ಬೆಂಬಲಿಸಬೇಕಾಗಿ ತುಳುನಾಡಿನ ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಮೇಲೆ ನಂಬಿಕೆ ಇರುವ ನಾಗರಿಕ ಮತದಾರರಲ್ಲಿ ಈ ಮೂಲಕ ಮನವಿ ಮಾಡುತ್ತಿದ್ದೇವೆ.

  ಪತ್ರಿಕಾಗೋಷ್ಠಿಯಲ್ಲಿ ಬಿ.ಎಸ್. ಪಿ ಜಿಲ್ಲಾ ಘಟಕದ ಜಿಲ್ಲಾ ಉಪಾಧ್ಯಕ್ಷ ಶಿವಪ್ಪ ಗಾರ್ಡಡಿ, ಬಿ.ಎಸ್.ಪಿ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ತಾಲೂಕು ಅಧ್ಯಕ್ಷ ಪಿ.ಎಸ್ ಶ್ರೀನಿವಾಸ್ ಉಪಸ್ಥಿತರಿದ್ದರು. ತಾಲೂಕು ಅಧ್ಯಕ್ಷ ಪಿ.ಎಸ್ ಶ್ರೀನಿವಾಸ್ ಸ್ವಾಗತಿಸಿ, ಜಿಲ್ಲಾಧ್ಯಕ್ಷ ಗೋಪಾಲ್ ಮುತ್ತೂರು ಧನ್ಯವಾದವಿತ್ತರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss