Saturday, May 25, 2024
spot_img
More

  Latest Posts

  ಬೆಂಗಳೂರು: ತಂದೆ ಜತೆಗೆ ಕಾರ್ ವಾಶ್‌ ಮಾಡುವಾಗ ಎಕ್ಸಿಲೇಟರ್‌ ತುಳಿದ ಬಾಲಕ; ಆಟವಾಡುತ್ತಿದ್ದ 5 ವರ್ಷದ ಮಗು ಸಾವು

  ಬೆಂಗಳೂರು ; ತಂದೆ ಜತೆ ಸೇರಿ ಕಾರು ವಾಶ್‌ ಮಾಡುತ್ತಿರುವಾಗ ತಪ್ಪಿ ಎಕ್ಸಿಲೇಟರ್‌ ತುಳಿದ ಪರಿಣಾಮ ಕಾರು ಅಡ್ಡ ದಿಡ್ಡಿ ಚಲಿಸಿ ಮುಂದುಗಡೆ ಆಟಾಡುತ್ತಿದ್ದ 5 ವರ್ಷದ ಮಗುವಿನ ಮೇಲೆ ಹರಿದು ದಾರುಣ ಸಾವನಪ್ಪಿದ ಘಟನೆ ಹಳೆಯ ಏರ್ ಪೋರ್ಟ್ ಹತ್ತಿರದ ಭೀಮಾನಗರದ ಮುರಗೇಶ್ ಪಾಳ್ಯದಲ್ಲಿ ಈ ದುರಂತ ಸಂಭವಿಸಿದೆ.

  ಬೆಂಗಳೂರಿನ ಆರವ್ (5) ಮೃತ ದುರ್ದೈವಿ ಎಂದು ತಿಳಿದುಬಂದಿದೆ.

  ನಿನ್ನೆ ಶನಿವಾರ ಬೆಳಗ್ಗೆ 10.30ರ ಸುಮಾರಿಗೆ ಈ ದುರಂತ ನಡೆದಿದೆ. 15 ವರ್ಷದ ಬಾಲಕನೊರ್ವ ತಂದೆಯ ಜತೆ ಕಾರ್ ವಾಶ್ ಮಾಡುತ್ತಿದ್ದ. ಇದೇ ವೇಳೆ ಕಾರಿನ ಡ್ರೈವಿಂಗ್‌ ಸೀಟ್‌ನಲ್ಲಿ ಕುಳಿತ ಬಾಲಕ ಏಕಾಏಕಿ ಎಕ್ಸಿಲೇಟರ್ ಒತ್ತಿದ್ದಾನೆ. ಪರಿಣಾಮ ಕಾರು ರಭಸವಾಗಿ ಚಲಿಸಿದೆ. ಅಲ್ಲೇ ಕಾರ್ ಬಳಿ ಆಟವಾಡುತ್ತಿದ್ದ 5 ವರ್ಷದ ಆರವ್ ಮೇಲೆ ಗುದ್ದಿದೆ.

  ಕಾರು ಗುದ್ದಿದ ರಭಸಕ್ಕೆ ಆರವ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಆರವ್ ಸಹೋದರ ಧನರಾಜ್ ಹಾಗೂ ತಾಯಿ ಲಲಿತಾಗೂ ಗಂಭೀರ ಗಾಯವಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಸದ್ಯ ಮೃತದೇಹವು ಮಣಿಪಾಲ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. 5 ವರ್ಷದ ಮಗು ಆರವ್ ಮನೆ ಮುಂದೆ ಆಟ ಆಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮಣಿಪಾಲ್ ಆಸ್ಪತ್ರೆಗೆ ಮೃತ ದೇಹ ತರಲಾಗಿದ್ದು, ಆಸ್ಪತ್ರೆಯ ಆವರಣದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಮೃತ ಆರವ್ ಸಹೋದರ ಧನರಾಜ್ ಹಾಗೂ ತಾಯಿ ಲಲಿತಾಗೂ ಗಂಭೀರ ಗಾಯಗಳಾಗಿದೆ. ಇಬ್ಬರನ್ನೂ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss