ಮಂಗಳೂರು: ಬಿಡುಗಡೆಗೆ ಸಿದ್ದವಾಗಿರುವ ಬಹು ನಿರೀಕ್ಷೆಯ ತುಳು ಚಿತ್ರ ಧರ್ಮ ದೈವದ ಪೋಸ್ಟರನ್ನು ಆಳ್ವಾಸ್ ವಿದ್ಯಾಸಂಸ್ಥೆಯ ಅಧ್ಯಕ್ಷರಾದ ಡಾ |ಮೋಹನ್ ಆಳ್ವ ಅವರು ಬಿಡುಗಡೆಗೊಳಿಸಿದರು.
ಪೋಸ್ಟರ್ ಬಿಡುಗಡೆಗೊಳಿಸಿ ಮಾತನಾಡಿದ ಡಾ |ಮೋಹನ್ ಆಳ್ವರು ಚಿತ್ರತಂಡಕ್ಕೆ ಶುಭಹಾರೈಸಿದರು. ಈ ಮೊದಲು ಧರ್ಮ ದೈವ ಕಿರುಚಿತ್ರ ಆಗಿದ್ದ ಸಂದರ್ಭದಲ್ಲಿ ಅದನ್ನು ನಾನು ಬಿಡುಗಡೆಗೊಳಿಸಿದ್ದೆ ಅದು ಯಶಸ್ವಿಯಾಗಿತ್ತು ಇದೀಗ ಅದೇ ಹೆಸರಿನಲ್ಲಿ ಈ ಚಿತ್ರ ಬೆಳ್ಳಿಪರದೆ ಮೇಲೆ ಬರುತ್ತಿದೆ ಇದು ಯಶಸ್ವಿಯಾಗಲಿ, ಟೀಸರ್ ಮತ್ತು ಹಾಡುಗಳು ಈಗಾಗಲೇ ಎಲ್ಲರ ಗಮನಸೆಳೆದಿದೆ ಚಿತ್ರ ನಿರೀಕ್ಷೆ ಮೂಡಿಸಿದೆ ಎಂದರು. ಈ ಸಂದರ್ಭದಲ್ಲಿ ನಿರ್ಮಾಪಕರಾದ ಬಿಳಿಯಾರು ರಾಕೇಶ್ ಭೋಜರಾಜ ಶೆಟ್ಟಿ, ನಟರಾದ ರಮೇಶ್ ರೈ ಕುಕ್ಕುವಳ್ಳಿ ಚಿತ್ರ ತಂಡದ ಭರತ್ ಶೆಟ್ಟಿ, ಕೌಶಿಕ್ ರೈ ಕುಂಜಾಡಿ, ಸುಧೀರ್ ಕುಮಾರ್ ಕಲ್ಲಡ್ಕ, ಧನುಷ್ ಉಪಸ್ಥಿತರಿದ್ದರು. ಚಿತ್ರವನ್ನು ನಿತಿನ್ ರೈ ಕುಕ್ಕುವಳ್ಳಿ ನಿರ್ದೇಶನ ಮಾಡಿದ್ದು, ರಮೇಶ್ ರೈ ಕುಕ್ಕುವಳ್ಳಿ, ದೀಪಕ್ ರೈ ಪಾಣಾಜೆ, ಚೇತನ್ ರೈ ಮಾಣಿ, ರೂಪಾ ವರ್ಕಡಿ, ಪುಷ್ಪರಾಜ್ ಬೊಲ್ಲರ್, ದಯಾನಂದ ರೈ, ರಂಜನ್ ಬೋಳೂರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.
©2021 Tulunada Surya | Developed by CuriousLabs