Saturday, October 5, 2024
spot_img
More

    Latest Posts

    ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು – ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಭೇಟಿ

    ಆಯುರ್ವೇದ ವೈದ್ಯರು ಕೊರೋನಾ ಸಂದರ್ಭದಲ್ಲಿ ನಮ್ಮ ಜೀವ ಪಣಕ್ಕಿಟ್ಟು ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡಿ ಅವರಿಗೆ ಹೊಸ ಜೀವನ ಕಲ್ಪಿಸದ್ದಲ್ಲದೆ ಗ್ರಾಮೀಣ ಭಾಗದ ಜನರ ಜೀವನಾಡಿಯಾಗಿ ಸೇವೆ ಸಲ್ಲಿಸಿರುತ್ತಾರೆ. ಆಯುರ್ವೇದ ವೈದ್ಯರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಗಳನ್ನು ಬಳಕೆ ಮಾಡಬಾರದು ಎನ್ನುವ ರಾಜ್ಯ ಸರ್ಕಾರದ ಕಾನೂನು ಆಯುರ್ವೇದ ವೈದ್ಯರ ವೃತ್ತಿ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಎಂದು ಆಯುರ್ವೇದ ವೈದ್ಯರು ತುಳುನಾಡ ರಕ್ಷಣಾ ವೇದಿಕೆ‌ಯ ಸಹಕಾರ ಕೇಳಿರುತ್ತಾರೆ. ಈ ಹಿನ್ನೆಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕ ವತಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಪ್ರತಿಭಟನೆ ಸಭೆ ಮತ್ತು ಹಕ್ಕೊತ್ತಾಯ ಸಭೆಗಳನ್ನು ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳು ಆರೋಗ್ಯ ಸಚಿವರಿಗೆ ಈ ಹಿಂದೆ ಮನವಿ ಸಲ್ಲಿಸಲಾಗಿತ್ತು. ಈಗಾಗಲೇ ನಮ್ಮ ದೇಶದ ಹಲವು ರಾಜ್ಯಗಳಲ್ಲಿ ಅಲ್ಲಿನ ರಾಜ್ಯ ಸರ್ಕಾರಗಳು ಆಯುರ್ವೇದ ವೈದ್ಯರುಗಳಿಗೆ (B.A.M.S) ಅವಶ್ಯಕ ಅಲೋಪತಿ ಔಷಧಗಳನ್ನು ನೀಡಲು ಅನುಮತಿ ನೀಡಿರುತ್ತದೆ.

    ಆಯುರ್ವೇದ ವೈದ್ಯರು (B.A.M.S) ಪದವಿಯನ್ನು ಸತತ ಐದುವರೇ ವರ್ಷ ಕಲಿತು, ಸರ್ಕಾರ ಮಾನ್ಯತೆಯುಳ್ಳ ರಾಜೀವ್‌ಗಾಂಧಿ ಯುನಿರ್ವಸಿಟಿ ಹಾಗೂ KAUP Boardನಲ್ಲಿ ಪದವಿಯನ್ನು
    ಪಡೆದಿರುತ್ತಾರೆ. (B.A.M.S) ಕೋರ್ಸ್‌ನಲ್ಲಿ ಆಯುರ್ವೇದದ ಜೊತೆಗೆ ಮಾಡರ್ನ್ ಮೆಡಿಕಲ್ ಸೈನ್ಸ್‌ನ್ನು ಕಲಿಸಿರುತ್ತಾರೆ. (6 ತಿಂಗಳು ಕಡ್ಡಾಯ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ ಇಂಟರ್ನ್ ಶಿಪ್ ಮತ್ತು 6 ತಿಂಗಳು ಆಯುರ್ವೇದ ಚಿಕಿತ್ಸೆ ಪದ್ಧತಿಯಲ್ಲಿ ಇಂಟರ್ನ್ ಶಿಪ್ ಮಾಡಿರುತ್ತಾರೆ.
    ಕಾನೂನಿನಲ್ಲಿ ಇರುವ ಅವಕಾಶಗಳನ್ನು ಬಳಸಿಕೊಂಡು ರಾಜ್ಯದ ಆಯುಷ್ ವೈದ್ಯರಿಗೆ ಪ್ರಾಥಮಿಕ ಹಂತದ ಚಿಕಿತ್ಸೆಯಲ್ಲಿ ನಮ್ಮ ಮೂಲ ಪದ್ಧತಿಯೊಂದಿಗೆ ಅವಶ್ಯಕ ಅಲೋಪತಿ ಔಷಧಿಯನ್ನು ಬಳಕೆ ಮಾಡಲು ಈಗಾಗಲೇ ಮಹಾರಾಷ್ಟ್ರ ಸೇರಿದಂತೆ ಇತರ ಹಲವು ರಾಜ್ಯಗಳಲ್ಲಿ ಜಾರಿಯಲ್ಲಿರುವ ಕಾನೂನಿನಂತೆ ತಿದ್ದುಪಡಿಯನ್ನು ಡ್ರಗ್ಸ್ ಆಂಡ್ ಕಾಸ್ಕೆಟಿಕ್ ಆಕ್ಟ್ (Drugs & cosmatics act 1940 Rule 2EE (iii) ರನ್ವಯ ನಮ್ಮ ರಾಜ್ಯದಲ್ಲಿಯೂ ಕೂಡ ತಿದ್ದುಪಡಿ ಮಾಡಿ ಜಾರಿಗೆ ತರಬೇಕು ಹಾಗೂ ಕರ್ನಾಟಕ ರಾಜ್ಯ ಆಯುರ್ವೇದ ಯುನಾನಿ ಬೋರ್ಡ್ ಮತ್ತು ಹೋಮಿಯೋಪತಿ ಬೋರ್ಡ್‌ಗಳ ಕಾಯ್ದೆಯಲ್ಲಿ ತಿದ್ದುಪಡಿ ತಂದು ಜಾರಿಗೆ ತರಬೇಕೆಂದು ದಿನಾಂಕ 09-02-2024ರಂದು ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅದ್ಯಕ್ಷರಾದ ಯೋಗಿಶ್ ಶೆಟ್ಟಿ ಜಪ್ಪುರವರು ಆರೋಗ್ಯ ಸಚಿವ ಶ್ರೀ ದಿನೇಶ್ ಗುಂಡುರಾವ್ ಮನವಿ ಸಲ್ಲಿಸಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದರು. ಮನವಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸಿದ ಸಚಿವರು ಪರಿಶೀಲಿಸುವುದಾಗಿ ಭರವಸೆ ನೀಡಿದರು. ದಿನಾಂಕ 10-02-2024 ರಂದು ಉಡುಪಿ ಜಿಲ್ಲೆಯ ಕುಂದಾಪುರದಲ್ಲಿ ತುಳುನಾಡ ರಕ್ಷಣಾ ವೇದಿಕೆ ವೈದ್ಯರ ಘಟಕವತಿಯಿಂದ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ರವರನ್ನು ಹೂ ಮಾಲೆ ಹಾಕಿ ಗೌರವ ಸ್ಮರಣಿಕೆ ನೀಡಿ ಸ್ವಾಗತಿಸಲಾಯಿತು.

    ಈ ಸಂದರ್ಭದಲ್ಲಿ ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ, ಉಡುಪಿ ಜಿಲ್ಲಾ ವೀಕ್ಷಕರಾದ ಫ್ರಾಂಕಿ ಡಿಸೋಜ ಹಾಗೂ ಉಡುಪಿ ಜಿಲ್ಲಾ ವೈದ್ಯರ ಘಟಕದ ಮುಖಂಡರು ಗಳಾದ

    Dr Sridhar Suvarna
    Dr Rajesh Shetty,
    Dr Prajith Nambiar
    Dr Suresh Kumar Shetty
    Dr. Sandeep Sanil
    Dr Sandeep Shetty
    Dr Shreyas
    Dr Chandrashakar Shetty
    Dr Praveen Shetty
    Dr Sudeep
    Dr Mahesh
    Dr Praveen Shetty
    Dr Sripad Hegde
    Dr Sony
    Dr Venkatesh Shetty
    Dr paurav shetty

    spot_img
    spot_img

    Latest Posts

    spot_imgspot_img
    spot_imgspot_img
    spot_img

    Don't Miss