Saturday, May 25, 2024
spot_img
More

  Latest Posts

  ತುಳುನಾಡ ರಕ್ಷಣಾ ವೇದಿಕೆ ಉಳ್ಳಾಲ ತಾಲೂಕು ನೂತನ ಅಧ್ಯಕ್ಷರಾಗಿ ಮದರಂಗಿ ಪತ್ರಿಕೆಯ ಸಂಪಾದಕ ಅಬೂಬಕ್ಕರ್ ಕೈರಂಗಳ ಆಯ್ಕೆ

  ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಕಚೇರಿಯಲ್ಲಿ
  10-05-2024 ಶುಕ್ರವಾರ ನಡೆದಿದೆ. ಸಭೆಯಲ್ಲಿ ಉಳ್ಳಾಲ ತಾಲೂಕು ನೂತನ ಅಧ್ಯಕ್ಷರಾಗಿ ಡಿ ಐ ಅಬೂಬಕರ್ ಕೈರಂಗಳ ಆಯ್ಕೆಯಾಗಿರುತ್ತಾರೆ. ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷರು ಮತ್ತು ಸ್ಥಾಪಕರಾದ ಯೋಗಿಶ್ ಶೆಟ್ಟಿ ಜಪ್ಪು ರವರು ಉಳ್ಳಾಲ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾದ ಡಿ ಐ ಅಬೂಬಕರ್ ಅವರನ್ನು ಸಂಘಟನೆಯ ಶಾಲ್ ಹಾಕಿ ಗೌರವಿಸಿರುತ್ತಾರೆ.
  30 ವರ್ಷಗಳಿಂದ ಪತ್ರಿಕಾ ರಂಗದಲ್ಲಿ ಸಂಪಾದಕರಾಗಿ ಪ್ರಕಾಶಕರಾಗಿ ಅದ್ವಿತೀಯ ಸೇವೆ ಸಲ್ಲಿಸಿದ ಡಿ.ಐ. ಅಬೂಬಕರ್ ಕೈರಂಗಳ 2006ರಿಂದ 15 ವರ್ಷಗಳ ಕಾಲ 60 ಪುಸ್ತಕಗಳನ್ನು ಓದುಗರ ಮಡಿಲಿಗೆ ಅರ್ಪಿಸಿದ್ದಾರೆ. ಮದರಂಗಿ ಪತ್ರಿಕೆಯ ಮೂಲಕ ಸಾಮಾಜಿಕ ಶೈಕ್ಷಣಿಕ ರಾಜಕೀಯ ಧಾರ್ಮಿಕ ಅನನ್ಯ ಸೇವೆ ಸಲ್ಲಿಸಿದ ಡಿ.ಐ. ಅಬೂಬಕರ್ ಕೈರಂಗಳ ಅವರು ಗುರುಕುಲ ಕಲಾ ಪ್ರತಿಷ್ಠಾನ ರಾಜ್ಯ ಸಮಿತಿಯ ವತಿಯಿಂದ “ಗುರುಕಲ ಜ್ಞಾನ ಸಿಂಧು” ಪ್ರಶಸ್ತಿಯನ್ನು ಪಡೆದಿರುತ್ತಾರೆ. ಜನವರಿಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ 25ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಾಹಿತ್ಯ ಕೃಷಿಗಾಗಿ ಧರ್ಮದರ್ಶಿ ಡಾ. ವೀರೇಂದ್ರ ಹೆಗ್ಡೆಯವರಿಂದ ಸನ್ಮಾನಿತರಾಗಿದ್ದಾರೆ. ತುಳುನಾಡ ರಕ್ಷಣಾ ವೇದಿಕೆಯ ಉಳ್ಳಾಲ ತಾಲೂಕು ಅಧ್ಯಕ್ಷರಾಗಿ ಆಯ್ಕೆಯಾಗಿರುವ ಡಿ ಐ ಅಬೂಬಕರ್ ಕೈರಂಗಳರವರು ಮಾತನಾಡುತ್ತಾ ಸಮಾಜದ, ನೊಂದವರ ಧ್ವನಿಯಾಗಿ ಕೆಲಸ ಮಾಡುವುದಾಗಿ ಮತ್ತು ಅಭಿವೃದ್ಧಿ ಮತ್ತು ಐಕ್ಯತೆಗಾಗಿ ಶ್ರಮಿಸುವುದಾಗಿ ತಿಳಿಸಿದ್ದಾರೆ.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss