ಕಾರ್ಕಳ: ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ಮಗನನ್ನು ಹುಡುಕಿಕೊಂಡು ಹೋಗಿದ್ದ ವ್ಯಕ್ತಿಗೆ ಕುಡಿದ ಮತ್ತಿನಲ್ಲಿ ಆತನ ಅಳಿಯನೇ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಬಜಗೋಳಿ ಲಕ್ಷ್ಮೀ ವೈನ್ ಶಾಪ್ ನಲ್ಲಿ ನಡೆದಿದೆ.
ಮಾಳ ಗ್ರಾಮದ ಮಂಜಲ್ತಾರ್ ನಿವಾಸಿ ಕುಟ್ಟಿ ಎಂಬವರು ಮಂಗಳವಾರ ಬೆಳಗ್ಗೆ ಬಜಗೋಳಿ ಲಕ್ಷ್ಮೀ ವೈನ್ ಶಾಪ್ ನಲ್ಲಿ ಕೆಲಸ ಮಾಡುತ್ತಿದ್ದ ತನ್ನ ಮಗ ಸಂದೀಪ್ ಎಂಬವರನ್ನು ಮಾತನಾಡಿಸಲು ಬಂದಿದ್ದರು.
ಇದೇ ಸಂದರ್ಭದಲ್ಲಿ ಕುಟ್ಟಿ ಎಂಬವರ ಅಳಿಯ ಆನಂದ ಎಂಬವರು ಮಧ್ಯ ಸೇವನೆ ಮಾಡಲು ಬಂದಿದ್ದರು ಇವರಿಬ್ಬರ ನಡುವೆ ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ವೈನ್ ಶಾಪ್ ನಲ್ಲಿ ಜಗಳವಾಗಿ ಕುಡಿದ ಮತ್ತಿನಲ್ಲಿ ಆನಂದ ತನ್ನ ಮಾವ ಕುಟ್ಟಿಗೆ ಕುರ್ಚಿಯಿಂದ ಹಲ್ಲೆ ನಡೆಸಿದ್ದು ಕುಟ್ಟಿಯವರ ತಲೆಗೆ ಗಾಯಗಳಾಗಿದ್ದು ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
