Monday, April 15, 2024
spot_img
More

  Latest Posts

  ಇಸ್ಮಾಯಿಲ್ ಶಾಪಿ ಬಬ್ಬು ಕಟ್ಟೆ ಯವರಿಗೆ ರಾಷ್ಟ್ರೀಯ ಸಮಾಜ ಸೇವ ರತ್ನ ಪ್ರಶಸ್ತಿ

  ಚಿರಾಯು ಅಸೋಸಿಯೇಶನ್ ರಿ. ಕರ್ನಾಟಕ ಹಾಗೂ ಜನಸೇವಾ ಫೌಂಡೇಶನ್ ರಿ. ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ವಿದ್ಯಾವರ್ಧಕ ಸಂಘ ದಾರವಾಡದಲ್ಲಿ ಆದಿತ್ಯವಾರ ನಡೆಯಿತು.
  ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಇಸ್ಮಾಯಿಲ್ ಶಾಫಿ ಬಬ್ಬುಕ್ಟೆಯವರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
  ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆಯವರು ಕನ್ನಡ ನಾಡು ನುಡಿ ನೆಲ,ಜಲದ ರಕ್ಷಣೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಸಮಾಜ ಸೇವಾ ಕ್ಷೇತ್ರದಲ್ಲಿ ಕ್ರಿಯಾತ್ಮಕ ಕಾರ್ಯ ತತ್ಪರತೆ ಹಾಗೂ ನಿಶ್ವಾರ್ಥ ಸೇವೆ ಸಲ್ಲಿಸಿದ್ದಾರೆ.
  ಹುಟ್ಟು ಹೋರಾಟಗಾರ, ಛಲವಾದಿ, ಅಪ್ರತಿಮ ಸಮಾಜಸೇವಕ, ಸದಾ ಚಟುವಟಿಕೆಯಲ್ಲಿರುವ ಚಲನಶೀಲ ಶಕ್ತಿಯ ರೂಪವಾಗಿದ್ದಾರೆ,
  ಇವರು ಕೊರೋನಾ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಾಗ್ರಿ, ಬಡವರಿಗೆ ಸಹಾಯ ಮಾಡಿ ಸಮಾಜದ ಬಡ ಜನರ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡಿದ್ದಾರೆ,
  ಕಾರ್ಯಕ್ರಮವನ್ನು
  ದಾರವಾಡ ಪೋಲೀಸ್ ಠಾಣೆಯ ಎ.ಎಸ್.ಐ ಉದ್ಘಾಟಿಸಿದರು.
  ಜನಸೇವಾ ಪೌಂಡೇಶನ್ ಅಧ್ಯಕ್ಷ ಡಾ.ಎಫ್.ಕೆ ನಿಗದಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
  ಹುಬ್ಬಳ್ಳಿ ದಿವ್ಯ ಜ್ಞಾನ ಗುರುಕುಲ ಮತ್ತು ಜ್ಯೋತಿಷ್ಯ ಕೇಂದ್ರದ ಅಧ್ಯಕ್ಷ ವೇದಮೂರ್ತಿ ಬಸವಲಿಂಗಯ್ಯ ಶಾಸ್ತ್ರಿಗಳು ಸೂರಗಿಮಠ, ಶ್ರೀ ಕಾಡಯ್ಯಾ ಶಿವಮೂರ್ತಿಹೀರೇಮಠ, ಡಾ. ರಮೇಶ್ ಕುಮಾರ್ ಶಾಸ್ತ್ರಿ, ಡಾ. ಸತೀಶ ಮಲ್ಲಯ್ಯಾ ಸ್ವಾಮಿ ಶಾಸ್ತ್ರಿಗಳು, ಡಾ. ಸಂತೋಷ ಶಾಸ್ತ್ರಿ ಗಳು ಹೀರೇಮಠ, ಎಸ್.ಡಿ. ನಾಗರಾಜ್ ಸಿದ್ದನಕಟ್ಟೆ, ನಾಗಪ್ಪ ಬಂಡೀವಡ್ಡರ, ಶ್ರೀಮತಿ ಬೇಬಿ ರಾಣಿ ಆರ್, ದೇವಕಿ ಯೋಗಾನಂದ, ಚಿರಾಯು ಅಸೋಸಿಯೇಶನ್ ಕರ್ನಾಟಕ ಅಧ್ಯಕ್ಷರಾದ ಡಾ. ಮಂಜುನಾಥ ಎನ್. ಶಿವಕ್ಕನವರ ಮೊದಲಾದವರು ಉಪಸ್ಥಿತರಿದ್ದರು.

  spot_img
  spot_img

  Latest Posts

  spot_imgspot_img
  spot_imgspot_img
  spot_img

  Don't Miss