- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಮಂಗಳೂರು : ಕರ್ನಾಟಕ ಸ್ಟೇಟ್ ಟೈಲರ್ಸ್ ಅಸೋಸಿಯೇಷನ್ ವತಿಯಿಂದ ಆಟಿಡೊಂಜಿ ದಿನ ಕಾರ್ಯಕ್ರಮ ಇಂದು ಮಂಗಳಾದೇವಿ ಬಳಿಯ “ಕಾಂತಿ ಚರ್ಚ್ ಹಾಲ್ ನಲ್ಲಿ ಇಂದು ನಡೆಯಿತು.ಈ ಕಾರ್ಯಕ್ರಮದ ಉದ್ಘಾಟನೆ ಯನ್ನು ಪಾಂಡೇಶ್ವರ ಉಪ ಪೋಲಿಸ್ ನೀರಿಕ್ಷಕರಾದ ಮಾರುತಿ.ಪಿ ಯವರು ನೆರವೇರಿಸಿದರು. ಬಳಿಕ ಮಾತನಾಡಿದ ಡಾ.ಅರುಣ್ ಉಳ್ಳಾಲ್ ರವರು ತುಳುನಾಡ ಸಂಸ್ಕೃತಿ, ಸಂಸ್ಕಾರವನ್ನು ಹೊತ್ತು ಆಟಿ ತಿಂಗಳು ಮತ್ತೆ ಬಂದಿದೆ.ಆಟಿ ತಿಂಗಳು ಎಂದರೆ ಸುಮಾರು ಜುಲೈ ತಿಂಗಳಿನಲ್ಲಿ ಬರುವ ಕರ್ಕಾಟಕ ಸಂಕ್ರಮಣದ ಮರುದಿನದಂದು ಶುರುವಾಗಿ ಮುಂದಿನ ಸಿಂಹ ಸಂಕ್ರಮಣದ ವರೆಗೆ. ತುಳು ನಾಡಿನ ಜನರಿಗೆ ಪ್ರತಿಯೊಂದು ತಿಂಗಳು ವಿಶಿಷ್ಟವೇ ವಿಶೇಷವೇ. ಆಟಿ ತಿಂಗಳು ಕೂಡ ಒಂದು ರೀತಿಯಲ್ಲಿ ಪವಿತ್ರವೇ. ಯಾಕೆಂದರೆ ಹಬ್ಬಗಳು ಆರಂಭವಾಗುವುದು ಆಟಿ ತಿಂಗಳ ಆಟಿ ಅಮಾವಾಸ್ಯೆಯಿಂದಲೇ.ಆರ್ಟಿ ತಿಂಗಳಲ್ಲಿ ಕಷ್ಟದ ತಿಂಗಳಾದರೂ ಅದು ಇಷ್ಟದ ತಿಂಗಳು. ಹಿಂದಿನ ಕಾಲದಲ್ಲಿ ಆಟಿ ಅಂದರೆ ಒಂದೇ ಸವನೆ ಮಳೆ ಸುರಿಯುತ್ತಿತ್ತು .ಹಾಗಾಗಿ ಆಟಿ ತಿಂಗಳು ಹೇಗಿರುತ್ತದೋ ಎಂಬ ಭಯ ಜನರನ್ನು ಮೊದಲೇ ಕಾಡುತ್ತಿತ್ತು.ಸುರಿಯುವ ಮಳೆ…
ರಾಷ್ಟ್ರಮಟ್ಟದ ಮಾಸ್ಟರ್ಸ್ ಪುರುಷರು ಮತ್ತು ಮಹಿಳೆಯರು ಕ್ಲಾಸಿಕ್ ಪವರ್‌ಲಿಫ್ಟಿಂಗ್ ಚಾಂಪಿಯನ್‌ಶಿಪ್-2025 02 ರಿಂದ 07 ರವರೆಗೆ ಕೋಝಿಕ್ಕೋಡ್‌ನ ಕೇರಳ ವಿ.ಕೆ. ಕೃಷ್ಣ ಮೆನನ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ಪರ್ಧೆಯಲ್ಲಿ 66 ಕೆಜಿ ವಿಭಾಗದ ಮಾಸ್ಟರ್ 1 ವಿಭಾಗದಲ್ಲಿ ಒಟ್ಟು 480 ಕೆಜಿ ಭಾರವನ್ನು ಎತ್ತಿ 1ಚಿನ್ನ 2 ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ. ಹಾಗೂ ರಾಷ್ಟ್ರಮಟ್ಟದ ಡೆಡ್ ಲಿಫ್ಟ್ ಸ್ಪರ್ಧೆಯಲ್ಲಿ 222.5 ಬಾರವನ್ನು ಎತ್ತಿ 5ನೇ ರಾಷ್ಟ್ರೀಯ ನೂತನ ದಾಖಲೆ ಸ್ಥಾಪಿಸುತ್ತಾರೆ. ಹಾಗೂ ತನ್ನ ದಾಖಲೆ ತಾನೇ 4ನೇ ಬಾರಿಗೆ ಮುರಿದ ಹೆಗ್ಗಳಿಕೆ ಡಾ.ಸತೀಶ್ ಖಾರ್ವಿ ಅಂತರಾಷ್ಟ್ರೀಯ ಪವರ್ ಲಿಫ್ಟಿರ್ ಕ್ರೀಡಾಪಟು ಇವರು ನ್ಯೂ ಹರ್ಕ್ಯುಲೇಸ್ ಜಿಮ್ ನ ಹಾಗೂ ಕುಂದಾಪುರ ಘಟಕದ ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷರಾಗಿರುತ್ತಾರೆ. 2019 ನೇ ವರ್ಷದಲ್ಲಿ 210 ಕೆಜಿ, ಬಾರವನ್ನೆತ್ತಿ ದಾಖಲೆ, 2021 ನೇ ವರ್ಷದಲ್ಲಿ 217.5 ಕೆ.ಜಿ ಭಾರವನೆತ್ತಿ ದಾಖಲೆ, 2022 ನೇ ವರ್ಷದಲ್ಲಿ 220 ಕೆ.ಜಿ ಭಾರವನೆತ್ತಿ ದಾಖಲೆ, 2023 ನೇ ವರ್ಷದಲ್ಲಿ…
ಬೆಂಗಳೂರು, ಆಗಸ್ಟ್ 3, 2025 — ಒಕಿನಾವನ್ ಶೋಟೋಕಾನ್ ಕರಾಟೆ ಚಾಂಪಿಯನ್‌ಶಿಪ್ 2025 ಅನ್ನು ಆಗಸ್ಟ್ 3ರಂದು ಯಲಚೆನಹಳ್ಳಿ ಟ್ರಾನ್ಸೆಂಡ್ ಗ್ರೂಪ್ ಆಫ್ ಇನ್‌ಸ್ಟಿಟ್ಯೂಷನ್ಸ್‌ನಲ್ಲಿ ಅಂತರ್ ಶಾಲಾ ಸ್ಪರ್ಧೆಯು ಆಯೋಜಿಸಲಾಯಿತು. ಈ ಸ್ಪರ್ಧೆಯಲ್ಲಿ, ಮಿತ್ತಬಾಗಿಲು ಗ್ರಾಮದ, ಆಚಾರಿಬೆಟ್ಟು ಮನೆಯ “ಶ್ರೀಯುತ ಟಿಲ್ಲರ್ ಡಿಕಯ್ಯ ಗೌಡ”ರ ಮೊಮ್ಮಕ್ಕಲಾದ, ಬೆಂಗಳೂರು ನಗರದಲ್ಲಿ ವಾಸವಾಗಿರುವ ‘ವಿನಯಚಂದ್ರ’ ರವರ ಅವಳಿ ಮಕ್ಕಳಾದ “ಎ. ವಿಭಾಷ್ ವಿನಯಚಂದ್ರ” ಮತ್ತು “ಎ. ವಿಭಾ ವಿನಯಚಂದ್ರ” ಅವರು ಪ್ರಭಾವಶಾಲಿ ಪ್ರದರ್ಶನ ನೀಡಿದ್ದು, ತಲಾ ಎರಡು ಪದಕ ಮತ್ತು ಟ್ರೋಪಿಗಳನ್ನು ಗೆಲ್ಲುವ ಮೂಲಕ ಟೂರ್ನಮೆಂಟ್ ಟ್ರೋಫಿಯನ್ನು ಪಡೆದಿದ್ದಾರೆ. ಇವರಿಗೆ ರಾಜೇಂದ್ರ ಬಾಬು ಮತ್ತು ಗೀತಾ ಎಂಬ ತರಬೇತಿದಾರರ ಮಾರ್ಗದರ್ಶನ ಲಭಿಸಿದೆ. ವಿಭಾಷ್ ಮತ್ತು ವಿಭಾ ಇಬ್ಬರೂ ಜೆ.ಪಿ.ನಗರದ ಸನ್ ಜುಪಿಟರ್ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ 3ನೇ ತರಗತಿಯಲ್ಲಿ ವಿದ್ಯಾಭ್ಯಾಸ ನಡೆಸುತ್ತಿದ್ದಾರೆ. ಇವರ ಕರಾಟೆ ಸಾಧನೆಯು ಶಾಲೆಯು ಹಾಗೂ ತರಬೇತಿ ಸಂಸ್ಥೆಯಿಂದ ಪ್ರಶಂಸೆಗೆ ಪಾತ್ರವಾಗಿದೆ. ಇವರ ತಂದೆ “ಶ್ರೀಯುತ. ವಿನಯಚಂದ್ರ” ಕರ್ನಾಟಕ ಹೈಕೋರ್ಟ್‌ನಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದು,…
ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವಾಗ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ ಆರು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಅಂದರ್ ಬಾಹರ್ ಸ್ಥಳ ದಲ್ಲಿ ಆಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಸಾರಾಂಶ : ಬ್ರಹ್ಮಾವರ ಪೊಲಿಸ್ ಠಾಣಾ ಸರಹದ್ದಿನ ವಾರಂಬಳ್ಳಿ ಗ್ರಾಮದ ಓಝೋನ್ ಲಾಡ್ಜನ 2 ನೇ ಮಹಡಿಯ ರೂಮ್ ಒಂದರಲ್ಲಿನ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟದ ಅಡ್ಡೆಗೆ ಬ್ರಹ್ಮಾವರ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯವರು ಧಾಳಿ ನಡೆಸಿ 1)ಗೋಪಾಲ ನಾಯ್ಕ, ಕುಳ್ಳಂಜೆ ಗ್ರಾಮ, ಕುಂದಾಪುರ, 2) ರಮೇಶ್, ಕಾವೂರು ಗ್ರಾಮ, ಮಂಗಳೂರು, 3) ಅಭಿಲಾಷ, ಕಾವೂರು ಗ್ರಾಮ, ಮಂಗಳೂರು 4) ವಿಕ್ರಮ್, ಕಾವೂರು ಗ್ರಾಮ, ಮಂಗಳೂರು, 5) ರತ್ನಾಕರ ಶೆಟ್ಟಿ, ಕೊರ್ಗಿ ಗ್ರಾಮ, ಕುಂದಾಪುರ, 6) ಮೊಹಮ್ಮದ್ ಹುಸೇನ್, ಮಣಿಪಾಲ, ಉಡುಪಿ ಎಂಬುವವರನ್ನು ವಶಕ್ಕೆ ಪಡೆದಿದ್ದು, ಆಟಕ್ಕೆ ಬಳಸಿದ ನಗದು ರೂ. 2,38,000/-, ಆರೋಪಿತರ…
ಇಂದು ದಿನಾಂಕ 02-08-2025 ರಂದು ಸಂಜೆ 4.00 ಗಂಟೆಗೆ ಆರ್.ಟಿ.ಒ ಚೆಕ್ ಪೋಸ್ಟ್ ತಲಪಾಡಿ ಸಮೀಪದಲ್ಲಿ ಗ್ರೇ ಲೇನ್ ಕಿಚನ್ & ರೆಸ್ಟೋರೆಂಟ್ ಅದ್ದೂರಿಯಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಳ್ಳಲಿದೆ. ಆಡಳಿತ ಮಂಡಳಿಯು ಸರ್ವರೂ ಆಗಮಿಸಿ ಶುಭ ಹಾರೈಸುವಂತೆ ಸ್ವಾಗತ ಕೋರಿದ್ದಾರೆ.
ಮಂಗಳೂರು ; ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ವಿದ್ಯಾರ್ಥಿ ಪರಿಷತ್ತು ಮತ್ತು NSS ಘಟಕವು, ಮಂಗಳೂರು ನಗರ ಪೊಲೀಸ್ ಇಲಾಖೆ, CEN ಪೊಲೀಸ್ ಸ್ಟೇಷನ್ ಮತ್ತು ಕೆ.ಎಸ್. ಹೆಗ್ಡೆ, ಮೆಡಿಕಲ್ ಅಕಾಡೆಮಿ ನಿಟ್ಟೆ, ಸಹಯೋಗದೊಂದಿಗೆ “ಡ್ರಗ್ ಫ್ರೀ ಕ್ಯಾಂಪಸ್’ ಎಂಬ ಮಹತ್ವಪೂರ್ಣ ಕಾರ್ಯಕ್ರಮವು ಯಶಸ್ವಿಯಾಗಿ ಎರಡನೇ ವರ್ಷ ನಡೆಯಲಿದ್ದು, ಆಗಸ್ಟ್ 04- 2025ರಂದು ಬೆಳಿಗ್ಗೆ 11:30ಕ್ಕೆ ಕಾರ್ಯಕ್ರಮವನ್ನು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್, ಉರ್ವಾ ಸ್ಕೋರ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಡಾ. ರಾಘವೇಂದ್ರ ಹೊಳ್ಳರವರು ತಿಳಿಸಿದ್ದಾರೆ. ಮೊದಲ ವರ್ಷದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮತ್ತು ಹೆತ್ತವರಿಂದ ಉತ್ತಮ ಸ್ಪಂದನೆ ಲಭಿಸಿರುತ್ತದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಡ್ರಗ್ ಪರೀಕ್ಷೆಗೆ ಒಳಗಾಗುತ್ತಾರೆ ಈ ಮೂಲಕ ಕಾಲೇಜು ಆವರಣವನ್ನು ನಶಾಮುಕ್ತನಾಗಿಸುವ ಗುರಿ ಯೊಂದಿಗೆ ಒಂದು ನಿಸ್ವಾರ್ಥ ಸೇವೆಯನ್ನು ಮಾಡಲಾಗುತ್ತಿದೆ ಎಂದರು. ಈ ಕಾರ್ಯಕ್ರಮವನ್ನು ಪತ್ರಕರ್ತರಾದ ಶ್ರೀ ಹರೀಶ್ ರೈ ಉದ್ಘಾಟಿಸಲಿದ್ದು. ಮುಖ್ಯ ಅತಿಥಿಯಾಗಿ ಶ್ರೀ ರವೀಶ್ ಎಸ್ ನಾಯಕ್, ಸಹಾಯಕ ಪೊಲೀಸ್ ಆಯುಕ್ತರು (ಸೈಬರ್ ಎಕನಾಮಿಕ್…
ಬೆಂಗಳೂರು: ನಗರದಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್ನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ, ಹೆಡೆಮುರಿ ಕಟ್ಟಿದ್ದಾರೆ. ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.ಗುರುವಾರ ತಡರಾತ್ರಿ ಕಗ್ಗಲೀಪುರ ರಸ್ತೆಯ ಬಳಿಯಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಳಿಮಾವು ಠಾಣೆ ಪೊಲೀಸರು ತೆರಳಿದ್ದರು. ಈ ವೇಳೆ ಮಾರಕಾಸ್ತ್ರಗಳನ್ನು ಬಳಸಿ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಮುಂದಾದಾಗ, ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಹಾಗೂ ಪಿಎಸ್ಐ ಅರವಿಂದ್ ಕುಮಾರ್ ಆರೋಪಿಗಳ ಕಾಲಿಗೆ ಗುಂಡು ಹಾರಿಸುವ ಮೂಲಕ ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಗುರುಮೂರ್ತಿಯ ಎರಡು ಕಾಲುಗಳು ಹಾಗೂ ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ವಿವರ : ಬೆಂಗಳೂರಿನ ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ನಿಶ್ಚಿತ್ ಮತ್ತು ಆತನ ಪೋಷಕರು ವಾಸವಾಗಿದ್ದರು. ನಗರದ ಪ್ರತಿಷ್ಠಿತ ಕಾಲೇಜ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ನಿಶ್ಚಿತ್…
ಮಂಗಳೂರು : ದ.ಕ. ಜಿಲ್ಲಾ ಪುಟ್ಬಾಲ್ ಸಂಸ್ಥೆ ಕಳೆದ 26 ವರ್ಷಗಳಿಂದ ನಡೆಸುತ್ತಾ ಬಂದಿರುವ ಅಂತರ್ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು, ಪದವಿ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗಳಿಗಾಗಿ ನಡೆಸುತ್ತಾ ಬರುತ್ತಿದ್ದು, 27ನೇ ವರ್ಷದ ಪಂದ್ಯಾವಳಿ ಆಗೋಸ್ಟ್ 4ನೇ ತಾರೀಖು ಸೋಮವಾರ ಪ್ರಾರಂಭವಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಡಿ.ಎಂ ಅಸ್ಲಾಂ ರವರು ತಿಳಿಸಿದ್ದಾರೆ. ಮಂಗಳೂರು ನೆಹರೂ ಮೈದಾನಕ್ಕೆ ಹೊಸ ಟರ್ಪ್ ಅಳವಡಿಸಿದ ನಂತರ ಈ ಪಂದ್ಯಾವಳಿಯನ್ನು ಆ ಮೈದಾನದಲ್ಲಿ ನಡೆಸಬೇಕೆಂದು ಬಯಕೆ ನಮ್ಮದಾಗಿತ್ತು. ಆದರೆ ಭಾರೀ ಮಳೆಯ ಕಾರಣ ಈ ಮೈದಾನದ ಕೆಲಸ ವಿಳಂಬವಾದ ಕಾರಣ ಈಗ ಈ ಪಂದ್ಯಾವಳಿ ಎರಡು ತಾಣಗಳಲ್ಲಿ ನಡೆಯಲಿದೆ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಡಶಾಲೆಯ ಬಾಲಕರ ಹಾಗೂ ಬಾಲಕಿಯರ ಪಂದ್ಯವಾಳಿಗಳು ನಗರದ ಮಂಗಳಾ ಸ್ಟೇಡಿಯಂ ಪಕ್ಕದಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ನಡೆದರೆ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪಂದ್ಯಾಟ ನಗರದ ಹೊರಭಾಗದ ಮಂಜನಾಡಿ ಗ್ರಾಮದ ಕಿನ್ಯಾ…
ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಕೇವಲ ಕರ್ನಾಟಕದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯು ಪ್ರಸ್ತುತ ಆಡಳಿತ ಮಂಡಳಿ ವಹಿಸಿಕೊಂಡ ನಂತರ ಇಡೀ ಕರ್ನಾಟಕ ರಾಜ್ಯದ್ಯಂತ ವಿಸ್ತರಿಸಿದೆ. ಎಮ್.ಸಿ.ಸಿ. ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತರ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಲಭ್ಯವಿರುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ಎಮ್.ಸಿ.ಸಿ. ಬ್ಯಾಂಕಿನಲ್ಲಿ ದೊರೆಯುತ್ತಿವೆ. ಬ್ಯಾಂಕ್ ಕರ್ನಾಟಕ ರಾಜ್ಯದಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯದ್ಯಾಂತ ಕಾರ್ಯವ್ಯಾಪ್ತಿ ಹೊಂದಿರುವ ಎಮ್.ಸಿ.ಸಿ. ಬ್ಯಾಂಕ್, ಮಂಗಳೂರಿನಲ್ಲಿ ನವೀಕೃತಗೊಂಡ ಸುಸಜ್ಜಿತ ಆಡಳಿತ ಕಛೇರಿಯೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 19 ಶಾಖೆಗಳನ್ನು ಹೊಂದಿದೆ. ಸಹಕಾರ ರತ್ನ ಶ್ರೀ ಅನಿಲ್…
ಉಡುಪಿ ಜಿಲ್ಲೆಯ ನಗರ ಸಭೆಯಿಂದ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವ ಸ್ಥಳ ಅಕ್ರಮ ಸಕ್ರಮ ಮಂಜೂರಾತಿ ಗೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ , 94 ಸಿ.ಮತ್ತು 94 ಸಿಸಿ, ನಿಯಮದಾಡಿ ಅರ್ಜಿ ಮರು ಸಲ್ಲಿಕೆಗೆ ಅವಕಾಶ ನೀಡಬೇಕು , ಗ್ರಾಮ ಪಂಚಾಯಿತಿ ವ್ಯಾಪ್ತಿಯ 9&11 ಎ ಏಕ ನಿವೇಶನ 25 ಸೆಂಟ್ಸಿನ ಒಳಗಡೆ ಇರುವಂತಹ ಜಾಗಗಳಿಗೆ ಹಿಂದೆ ಇದ್ದ ನಿಯಮಾವಳಿ ಪ್ರಕಾರ ಅನುಮೋದನೆ ನೀಡಬೇಕು , 11.ಬಿ ನಿಯಮಾವಳಿ ಯಿಂದ ಕೂಡ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಹಿಂದಿನ ರೀತಿಯಲ್ಲಿ ಕ್ರಮ ಜರುಗಿಸಬೇಕು ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ಏಕ ನಿವೇಶನದ ಸಾವಿರಾರು ಅರ್ಜಿ ಬಾಕಿ ಇರುವುದರಿಂದ ಉಡುಪಿ ಯ ಜನರಿಗೆ ತುಂಬಾ ಸಮಸ್ಯೆ ಉಂಟಾಗಿರುತ್ತದೆ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರಿಗೆ ತುಳುನಾಡ ರಕ್ಷಣಾ ವೇದಿಕೆ ಮನವಿ ನೀಡಿ ಒತ್ತಾಯಿಸಿದೆ. ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಮಹಿಳಾ ಜಿಲ್ಲಾಧ್ಯಕ್ಷೆ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
