ತುಳುನಾಡಿನ ಮಣ್ಣಿನ ದಿಗ್ಗಜರಾದ ಎಂ. ಎನ್. ರಾಜೇಂದ್ರ ಕುಮಾರ್, ರೋಹನ್ ಮೊಂತೆರೊ, ಹಾಗೂ ಕನ್ಯಾನ ಸದಾಶಿವ ಶೆಟ್ಟಿ ಯವರಿಗೆ ಮಂಗಳೂರು ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ – ಯೋಗೀಶ್ ಶೆಟ್ಟಿ ಜಪ್ಪು ಶುಭಹಾರೈಕೆ


ಸಹಕಾರಿ, ಧಾರ್ಮಿಕ, ಉದ್ಯಮ ಸೇರಿದಂತೆ ಹತ್ತು ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಉನ್ನತ ಕೊಡುಗೆ ನೀಡಿ ಜನರ ಪ್ರೀತಿಗೆ ಪಾತ್ರರಾದ ತುಳುನಾಡಿನ ಮಣ್ಣಿನ ದಿಗ್ಗಜರಾದ ಎಸ್.ಸಿ. ಡಿ.ಸಿ.ಸಿ. ಬ್ಯಾಂಕ್ ಅಧ್ಯಕ್ಷ . ಎಂ. ಎನ್. ರಾಜೇಂದ್ರ ಕುಮಾರ್, ರೋಹನ್ ಕಾರ್ಪೋರೇಶನ್ ಮಾಲಕ ರೋಹನ್ ಮೊಂತೆರೊ, ಹಾಗೂ ಹೇರಂಭ ಇಂಡಸ್ಟ್ರೀಸ್ ಮುಂಬೈ ಮಾಲಕ ಕನ್ಯಾನ ಸದಾಶಿವ ಶೆಟ್ಟಿ ಯವರಿಗೆ ದಿನಾಂಕ 29-03-2025 ರಂದು ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಸಭಾಂಗಣದಲ್ಲಿ ಮಂಗಳೂರು ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಗಿದೆ. ಈ ಶುಭ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಪದವಿ ಪುರಸ್ಕೃತರಿಗೆ ಶುಭ ಹಾರೈಸಿದರು

