- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ದಿನಾಂಕ 10-08-2025 ರಂದು ಉಡುಪಿ ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ಅಧ್ಯಕ್ಷತೆಯಲ್ಲಿ ಉಡುಪಿ ಜಿಲ್ಲಾ ಘಟಕ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ನೇತೃತ್ವದಲ್ಲಿ ಆಟಿಡ್ ಒಂಜಿ ದಿನ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 9.30ಕ್ಕೆ ಪ್ರಾರಂಭದಲ್ಲಿಶರತ್ ರಾಜ್ ಆರೂರು ನಿರ್ದೆಶನದ ತುಳುನಾಡ ವೈಭವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಮಲಬಾರ್ ಗೋಲ್ಡ್ ನ ಆಫೀಜ್ ಮತ್ತು ವಿಜಯ್ ಮಯಡಿರವರು ಚಾಲನೆ ನೀಡಿದರು. ಬಳಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಡುಪಿ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಶ್ರೀ ರಘುಪತಿ ಭಟ್ ಮತ್ತು ಕಾಂಗ್ರೆಸ್ ಮುಖಂಡಉದಯ ಕುಮಾರ್ ಶೆಟ್ಟಿ ಮುನಿಯಾಲು ದೀಪ ಬೆಳಗಿಸಿ ಉದ್ಘಾಟಿಸಿ ವೇದಮೂರ್ತಿ ಬನ್ನಂಜೆ ಕೇಶವ ಶಾಂತಿ ತುಳುನಾಡ ಸಂಸ್ಕೃತಿಯ ಬತ್ತದ ಕಳಸೆಯಿಂದ ತೆಂಗಿನ ಕೊಂಬು ಬಿಡಿಸಿ ವಿನೂತನ ರೀತಿಯಲ್ಲಿ ಆಶೀರ್ವಚನ ಮತ್ತು ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ: ಉಡುಪಿ ನಗರಾಭಿವೃದ್ಧಿ ಅಧ್ಯಕ್ಷ ದಿನಕರ್ ಹೇರೂರು , ಮಾಹೆ ಮಣಿಪಾಲಎಸ್ಟೇಟ್ ಆಫೀಸರ್ ಬಾಲಕೃಷ್ಣ ಪ್ರಭು…
ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ವಂಚನೆ ಮಾಡಿದ ಆರೋಪ ಎದುರಿಸುತ್ತಿರುವ ಶ್ರೀಕೃಷ್ಣ ಜೆ. ರಾವ್ ವಿರುದ್ಧ ದೂರು ನೀಡಿದ್ದ ಮಹಿಳೆಯೊಬ್ಬರು ಇದೀಗ ಪೊಲೀಸ್ ರಕ್ಷಣೆ ಕೋರಿದ್ದಾರೆ. ತನ್ನ ಮತ್ತು ಮಗುವಿನ ಜೀವಕ್ಕೆ ಅಪಾಯವಿದೆ ಎಂದು ಆರೋಪಿಸಿ ಅವರು ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಸಿಂಗ್ ಅವರಿಗೆ ಮನವಿ ಸಲ್ಲಿಸಿದ್ದಾರೆ. ಮಹಿಳೆ ಮತ್ತು ಶ್ರೀಕೃಷ್ಣ 9ನೇ ತರಗತಿಯಿಂದ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವುದಾಗಿ ನಂಬಿಸಿ ಆತ ಆಕೆಯನ್ನು ಗರ್ಭಿಣಿ ಮಾಡಿದ್ದ ಎನ್ನಲಾಗಿದೆ. ಆರಂಭದಲ್ಲಿ ಶ್ರೀಕೃಷ್ಣನ ಮನೆಯವರು ಮದುವೆ ಮಾಡಿಸುವುದಾಗಿ ಹೇಳಿ ನಂತರ ನಿರಾಕರಿಸಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದರಿಂದಾಗಿ, ಜೂನ್ 24, 2025ರಂದು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಶ್ರೀಕೃಷ್ಣ ವಿರುದ್ಧ ದೂರು ದಾಖಲಿಸಿದ್ದರು. ಆಗ ಶ್ರೀಕೃಷ್ಣನ ತಂದೆ ಜಗನ್ನಿವಾಸ ಅವರು, ಬೇಗ ಮದುವೆ ಮಾಡಿಸುವುದಾಗಿ ಭರವಸೆ ನೀಡಿದ್ದರು. ಮಗುವಿನ ಜನನದ ವೇಳೆ ತಂದೆಯ ಹೆಸರಿನ ಜಾಗದಲ್ಲಿ ಶ್ರೀಕೃಷ್ಣನ ಹೆಸರನ್ನು ನಮೂದಿಸುವಂತೆ ಮುಚ್ಚಳಿಕೆ ಬರೆದುಕೊಟ್ಟಿದ್ದರು. ಆದರೆ, ನಂತರ ಅವರು ತಮ್ಮ ಮಾತಿಗೆ ತಪ್ಪಿ, “ನನ್ನ ಮಗ ಈಗ…
ಮಂಗಳೂರು, ಆ.11: ಮಂಗಳೂರಿನ ಮಹಾನಗರಪಾಲಿಕೆ ಈಜುಕೊಳದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ವಿಶ್ವದಾಖಲೆ ಸಾಧಿಸಿದ ಈಜುಪಟು ಕೆ. ಚಂದ್ರಶೇಖರ ರೈ (52) ದುರ್ಘಟನೆಯಾಗಿ ಮೃತಪಟ್ಟಿರುವ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ಬಂಟ್ವಾಳ ತಾಲೂಕಿನ ಸೂರಿಕುಮೇರು ಗ್ರಾಮದ ಮೂಲದವರಾಗಿರುವ ಚಂದ್ರಶೇಖರ ರೈ, ನಗರದ ಕುದ್ರೋಳಿ ಯಲ್ಲಿ ವಾಸವಾಗಿದ್ದರು . ಈಜಿನಲ್ಲಿ ಹಲವು ಕೌಶಲ್ಯಗಳನ್ನು ಪ್ರದರ್ಶಿಸಿ ‘ವಲ್ರ್ಡ್ ವೈಡ್ ಬುಕ್ ಆಫ್ ರೆಕಾರ್ಡ್’ ನಲ್ಲಿ ದಾಖಲೆ ದಾಖಲಿಸಿಕೊಂಡಿದ್ದರು. ಉಸಿರು ಹಿಡಿದು ಸೋಮರ್‌ಸಾಲ್ಟ್ ಮತ್ತು ವಿವಿಧ ಆಸನಗಳನ್ನು ನೀರಿನಲ್ಲಿ ತೋರಿಸಿ ವಿಶಿಷ್ಟತೆ ಮೆರೆದಿದ್ದರು. ಚಂದ್ರಶೇಖರ್ ಅವರು ಮೊದಲು ಉಡುಪಿಯ ಈಜುಕೊಳದಲ್ಲಿ ಗುತ್ತಿಗೆ ಆಧಾರಿತ ಜೀವರಕ್ಷಕರಾಗಿ ಸೇವೆ ಸಲ್ಲಿಸಿದ್ದರು. ಬಳಿಕ ಮಂಗಳೂರಿನ ಮಹಾನಗರಪಾಲಿಕೆ ಈಜುಕೊಳ ನಿರ್ವಹಣೆಯನ್ನು ಭದ್ರವಾಗಿ ಹೊತ್ತು, ಈಜು ತರಬೇತುದಾರರಾಗಿ ನಿಪುಣತೆ ತೋರಿಸಿದ್ದರು. ಭಾನುವಾರ ಬೆಳಗ್ಗೆ “ಸ್ವತಃ ಅಭ್ಯಾಸ ಮಾಡುತ್ತಿದ್ದೇನೆ” ಎಂದು ಹೇಳಿ ತಮ್ಮ ಮೊಬೈಲ್ ಫೋನ್ ಅನ್ನು ಕಾವಲುಗಾರನಿಗೆ ಒಪ್ಪಿಸಿದ ಅವರು ಡೈವ್ ಮಾಡಿದ ನಂತರ ಮೇಲಕ್ಕೆ ಬಾರದೆ ಹೋದರು. ತಕ್ಷಣ ಜಲದಿಂದ ಹೊರತೆಗೆದು ಆಸ್ಪತ್ರೆಗೆ…
ಮಂಗಳೂರು ನಗರ ದಕ್ಷಿಣ ಕ್ಷೇತ್ರದ 21ನೇ ಪದವು ಪಶ್ಚಿಮ ವಾರ್ಡಿನ ಶಕ್ತಿನಗರದ ನಾಲ್ಯಪದವಿನಲ್ಲಿ ಶಾಸಕರಾದ ಶ್ರೀ ಡಿ.ವೇದವ್ಯಾಸ ಕಾಮತ್ ಅವರ ಸಂಪೂರ್ಣ ಸಹಕಾರದಿಂದ ನಿರ್ಮಾಣಗೊಂಡ ಆಟೋ ರಿಕ್ಷಾ ಸ್ಟ್ಯಾಂಡ್ ಉದ್ಘಾಟನಾ ಕಾರ್ಯಕ್ರಮವು ನಡೆಯಿತು. ದಿನನಿತ್ಯ ದುಡಿಯುವ ಆಟೋ ಚಾಲಕರದ್ದು ಶ್ರಮಿಕ ವರ್ಗವಾಗಿದ್ದು ಅವರುಗಳು ಪ್ರಯಾಣಿಕರ ಜೊತೆಗೆ ತಮ್ಮ ಆಟೋಗಳ ಬಗ್ಗೆಯೂ ವಿಶೇಷ ಕಾಳಜಿ ಹೊಂದಿರುತ್ತಾರೆ. ತಾವು ಬಿಸಿಲಲ್ಲಿದ್ದರೂ ತಮ್ಮ ಆಟೋಗಳು ನೆರಳಲ್ಲಿ ಇರಬೇಕು ಎಂದು ಬಯಸುವ ಅವರಿಗೆ ಈ ನೂತನ ರಿಕ್ಷಾ ಪಾರ್ಕ್ ಉಪಯೋಗವಾಗಲಿದೆ. ಸಾರ್ವಜನಿಕರಿಗೆ ಅತ್ಯುತ್ತಮ ಸೇವೆ ಒದಗಿಸುತ್ತಾ ಬಂದಿರುವ ರಿಕ್ಷಾ ಚಾಲಕ ಬಂಧುಗಳು ಸೇವೆ ಹೀಗೆಯೇ ಮುಂದುವರೆಯಲಿ ಎಂದು ಹಾರೈಸಿದರು. ಈ ಸಂದರ್ಭದಲ್ಲಿ ಬಿಜೆಪಿ ಪ್ರಮುಖರಾದ ರಮೇಶ್ ಕಂಡೆಟ್ಟು, ವನಿತಾ ಪ್ರಸಾದ್, ಶಕೀಲಾ ಕಾವ, ಎಚ್.ಕೆ. ಪುರುಷೋತ್ತಮ್, ಮಹೇಶ್ ಜೋಗಿ, ಕಿರಣ್ ರೈ, ಅಶ್ವಿತ್ ಕೊಟ್ಟಾರಿ, ರವಿಚಂದ್ರ, ಪ್ರಸಾದ್, ಮೋಹನ್, ಲತಾ ಕಾಮತ್, ಹಿತೇಶ್, ಸೇರಿದಂತೆ ರಿಕ್ಷಾ ಚಾಲಕರು ಉಪಸ್ಥಿತರಿದ್ದರು.
ಮಂಗಳೂರು, 10ಆಗಸ್ಟ್ 2025 –ಕೆನರಾ ಹೈ ಸ್ಕೂಲ್ ಅಸೋಸಿಯೇಷನ್, ಮಂಗಳೂರು, ಕೆನರಾ ಸಾಂಸ್ಕೃತಿಕ ಅಕಾಡೆಮಿಯ ಪ್ರಾಯೋಜಕತ್ವದಲ್ಲಿ, ಗೋಕುಲಾಷ್ಟಮಿ-2025 ಪ್ರಯುಕ್ತ ಮುದ್ದು ಕೃಷ್ಣ ವೇಷ ಸ್ಪರ್ಧೆವನ್ನು ಭವ್ಯವಾಗಿ ಆಯೋಜಿಸಲಾಯಿತು. ಭಾರತೀಯ ಪರಂಪರೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ವಿದ್ಯಾರ್ಥಿ ಹಾಗೂ ಯುವ ಸಮುದಾಯದಲ್ಲಿ ಬೆಳೆಸುವ ಉದ್ದೇಶದಿಂದ ಈ ವಿಶೇಷ ಕಾರ್ಯಕ್ರಮವನ್ನು ನಡೆಸಲಾಯಿತು. ಟಿವಿ ರಮಣ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆದ ಈ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಕೆನರಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಿ. ವಾಸುದೇವ ಕಾಮತ್ ಉದ್ಘಾಟಿಸಿದರು. ಉಪಾಧ್ಯಕ್ಷ ಕೆ. ಸುರೇಶ್ ಕಾಮತ್, ಸದಸ್ಯರಾದ ಡಿ. ವಿಕ್ರಂ ಪೈ, ಸಿ.ಎ. ಗಿರಿಧರ ಕಾಮತ್, ಕೆನರಾ ಪ್ರೌಢಶಾಲೆ ಮೈನ್ ಇದರ ಸಂಚಾಲಕರಾದ ಅಶ್ವಿನಿ ಕಾಮತ್, ಸಾರ್ವಜನಿಕ ಸಂಪರ್ಕ ಅಧಿಕಾರಿ ಶ್ರೀಮತಿ ಉಜ್ವಲ್ ಮಲ್ಯ, ಕಾರ್ಯಕ್ರಮ ಸಂಯೋಜಕರಾದ ಶ್ರೀಮತಿ ಮಮತಾ ಪೈ ಹಾಗೂ ಶ್ರೀಮತಿ ಸುಶ್ಮಿತಾ ಅವರು ಉಪಸ್ಥಿತರಿದ್ದರು. ಸ್ಪರ್ಧೆಯನ್ನು ಕಂದ ಕೃಷ್ಣ (6 ತಿಂಗಳು – 1 ವರ್ಷ), ಮುದ್ದು ಕೃಷ್ಣ (1…
ಯಕ್ಷಗಾನ ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು: ಡಾ.ಎಂ.ಪ್ರಭಾಕರ ಜೋಶಿ ಮುಂಬಯಿ: ‘ ಯಕ್ಷಗಾನವಿಂದು ಕೇವಲ ಕರಾವಳಿಯ ಕಲೆಯಾಗಿ ಉಳಿದಿಲ್ಲ. ತನ್ನ ವಿಶಿಷ್ಟವಾದ ಪ್ರಭಾವ ಮತ್ತು ಪ್ರಯೋಗಶೀಲತೆಯಿಂದ ನಾಡು – ಹೊರನಾಡುಗಳಲ್ಲಿ ಮೆರೆದು ಸೀಮೋಲ್ಲಂಘನೆ ಮಾಡಿರುವ ಯಕ್ಷಗಾನ ಪ್ರಸ್ತುತ ಜಾಗತಿಕ ಮಟ್ಟದಲ್ಲಿ ಪರಿಪೂರ್ಣ ರಂಗಕಲೆಯಾಗಿ ಗಮನ ಸೆಳೆದಿದೆ. ಅದು ಜಗತ್ತಿನ ಶ್ರೇಷ್ಠ ರಂಗಕಲೆಗಳಲ್ಲೊಂದು. ಅದರ ಮೌಖಿಕ ವಿಭಾಗವಾದ ತಾಳಮದ್ದಳೆಯನ್ನು ಮುಂಬಯಿಯಲ್ಲಿ ಜನಪ್ರಿಯಗೊಳಿಸಿರುವ ಅಜೆಕಾರು ಬಾಲಕೃಷ್ಣ ಶೆಟ್ಟರ ಕಾರ್ಯ ಶ್ಲಾಘನೀಯ’ ಎಂದು ಹಿರಿಯ ಯಕ್ಷಗಾನ ಅರ್ಥಧಾರಿ, ಬಹುಶ್ರುತ ವಿದ್ವಾಂಸ ಡಾ.ಎಂ.ಪ್ರಭಾಕರ ಜೋಶಿ ಹೇಳಿದ್ದಾರೆ.ಮುಂಬಯಿ ವಿದ್ಯಾವಿಹಾರ್ ಶ್ರೀ ಅಂಬಿಕಾ ಆದಿನಾಥೇಶ್ವರ ಮಹಾಗಣಪತಿ ಮಂದಿರದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ 24 ನೇ ವರ್ಷದ ಯಕ್ಷಗಾನ ತಾಳಮದ್ದಳೆ ಸರಣಿಯ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.ಯಕ್ಷಗಾನಕ್ಕೆ ದೀರ್ಘ ಪರಂಪರೆ:ಮುಂಬಯಿಯ ಹಿರಿಯ ಅರ್ಥಧಾರಿ ಕೆ.ಕೆ.ಶೆಟ್ಟಿ ಅವರು ಶ್ರೀದೇವಿ ಸನ್ನಿಧಿಯಲ್ಲಿ ದೀಪ ಬೆಳಗಿ 2024 – 25 ನೇ ಸಾಲಿನ ಸರಣಿ ತಾಳಮದ್ದಳೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಿದರು. ‘ಮುಂಬಯಿಯಲ್ಲಿ ಯಕ್ಷಗಾನಕ್ಕೆ ದೀರ್ಘ ಪರಂಪರೆಯಿದೆ.…
ಚಿಕ್ಕಮಗಳೂರು: ಕಲುಷಿತ ಆಹಾರ ಸೇವನೆಯಿಂದ 25 ವಿದ್ಯಾರ್ಥಿಗಳು ಅಸ್ವಸ್ಥಗೊಂಡ ಘಟನೆ ಚಿಕ್ಕಮಗಳೂರು ನಗರದ ಪೊಲೀಸ್ ಬಡಾವಣೆಯಲ್ಲಿರುವ ಆಲ್ದೂರು ಅಂಬೇಡ್ಕರ್ ವಸತಿ ಶಾಲೆಯಲ್ಲಿ ನಡೆದಿದೆ. ಶನಿವಾರ ರಾತ್ರಿ ಊಟ ಮಾಡಿದ ಬಳಿಕ ಮಕ್ಕಳಲ್ಲಿ ವಾಂತಿ ಹಾಗೂ ಹೊಟ್ಟೆನೋವು ಕಾಣಿಸಿಕೊಂಡಿದೆ. ಘಟನೆಯ ವಿವರ: ಶನಿವಾರ ರಾತ್ರಿ ಊಟದ ಬಳಿಕ ಮಕ್ಕಳಿಗೆ ಆರೋಗ್ಯದಲ್ಲಿ ಏರುಪೇರಾಗಿದೆ. 25 ಮಕ್ಕಳು ಅಸ್ವಸ್ಥಗೊಂಡಿದ್ದು, ನಾಲ್ವರು ಮಕ್ಕಳ ಸ್ಥಿತಿ ಗಂಭೀರವಾಗಿದೆ. ಅಸ್ವಸ್ಥಗೊಂಡ ಎಲ್ಲ ಮಕ್ಕಳನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ ವಿದ್ಯಾರ್ಥಿಗಳ ಆರೋಪ: ವಸತಿ ಶಾಲೆಯ ಮಕ್ಕಳು ಊಟದಲ್ಲಿ ಹುಳಗಳು ಕಂಡುಬಂದಿದ್ದವು ಎಂದು ಆರೋಪಿಸಿದ್ದಾರೆ. ಊಟದಲ್ಲಿನ ಕಲುಷಿತ ಅಂಶದಿಂದಲೇ ಈ ಪರಿಸ್ಥಿತಿ ಉಂಟಾಗಿದೆ ಎಂದು ವಿದ್ಯಾರ್ಥಿಗಳು ತಿಳಿಸಿದ್ದಾರೆ. ಈ ಘಟನೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಆಡಳಿತ ಮಂಡಳಿ ಹೇಳಿಕೆ: ಈ ಘಟನೆ ಕುರಿತು ಶಾಲಾ ಆಡಳಿತ ಮಂಡಳಿ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಘಟನೆ ಬಗ್ಗೆ ಸಂಪೂರ್ಣ ತನಿಖೆ ನಡೆಸುವಂತೆ ಜಿಲ್ಲಾಡಳಿತಕ್ಕೆ…
ಮಂಗಳೂರು : ತುಳು ಭಾಷೆ, ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ 1999ರಲ್ಲಿ ಪ್ರಾರಂಭವಾದ ತುಳುನಾಡಿನ ಮೊದಲ ಸುದ್ದಿ ವಾಹಿನಿ ‘ನಮ್ಮಕುಡ್ಲ’ ಈಗ 25 ವರ್ಷಗಳನ್ನು ಪೂರೈಸಿದೆ. ಈ ಸಾರ್ಥಕ ಪಯಣದ ನೆನಪಿಗಾಗಿ ‘ನಮ್ಮಕುಡ್ಲ ಬೊಳ್ಳಿ ಪರ್ಬ 2025’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆಗಸ್ಟ್ 12 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಈ ಕಾರ್ಯಕ್ರಮವು ದಿನವಿಡೀ ನಡೆಯಲಿದೆ ಎಂದು ವಾಹಿನಿಯ ನಿರ್ದೇಶಕ ಲೀಲಾಕ್ಷ ಕರ್ಕೇರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ನಮ್ಮಕುಡ್ಲ ವಾಹಿನಿಯ ಯಶೋಗಾಥೆಬಿ.ಪಿ. ಕರ್ಕೇರ ಮತ್ತು ಲಕ್ಷ್ಮೀ ಕರ್ಕೇರ ಅವರ ಆಶಯದಂತೆ ಕರ್ಕೇರಾ ಸಹೋದರರ ನೇತೃತ್ವದಲ್ಲಿ ಆರಂಭವಾದ ‘ನಮ್ಮಕುಡ್ಲ’ ತುಳುನಾಡಿನ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಜಗತ್ತಿಗೆ ಪರಿಚಯಿಸಿದೆ. ಆರಂಭದಲ್ಲಿ CCE ಇಂಡಿಯಾ ಚಾನೆಲ್‌ನಲ್ಲಿ ತುಳು ವಾರ್ತೆಗಳನ್ನು ಪ್ರಸಾರ ಮಾಡಲಾಗುತ್ತಿತ್ತು. ನಂತರ ‘ನಮ್ಮಕುಡ್ಲ ಲೈವ್’ ಚಾನೆಲ್, 24 ಗಂಟೆಗಳ ನಿರಂತರ ಸುದ್ದಿ ವಾಹಿನಿ ‘ನಮ್ಮಕುಡ್ಲ 24×7’ ಆಗಿ ಪರಿವರ್ತನೆಗೊಂಡಿತು. ವಾಹಿನಿಯು ಹಲವು ಜನಪ್ರಿಯ ಕಾರ್ಯಕ್ರಮಗಳನ್ನು ನೀಡಿದೆ. ಅವುಗಳಲ್ಲಿ ಪ್ರಮುಖವಾದವುಗಳು: ‘ನಮ್ಮ ಆರೋಗ್ಯ’…
ತುಳು ಸಂಗೀತ ಲೋಕದಲ್ಲಿ ಸತ್ವಯುತ ಸಾಹಿತ್ಯದ ಕೊರತೆಯನ್ನು ನೀಗಿಸಲು ಪಣತೊಟ್ಟ ಐಲೆಸಾ- ದಿ ವಾಯ್ಸ್ ಆಫ್ ಓಷನ್ (ರಿ) ಸಂಸ್ಥೆಗೆ ಇದೇ ಆಗಸ್ಟ್ ಹದಿನೈದಕ್ಕೆ ಐದು ವರ್ಷ ತುಂಬುತ್ತದೆ . ಕರೋನ ದುರಿತ ಕಾಲದಲ್ಲಿ ಹುಟ್ಟಿದ ಐಲೇಸಾ ಸಂಸ್ಥೆ ಸಂಗೀತ-ಸಾಹಿತ್ಯ- ಸಹಾಯ ಈ ಮೂರು ಮುಖ್ಯ ಧ್ಯೇಯಗಳನ್ನು ಇಟ್ಟುಕೊಂಡು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದೆ. ತುಳು ಭಾವಗೀತೆಗಳಲ್ಲಿ ಅರ್ಥಪೂರ್ಣ ಸಾಹಿತ್ಯ ತುಂಬಿಕೊಂಡು, ಹೊಸಪ್ರತಿಭೆಗಳ ಧ್ವನಿಯಲ್ಲಿ ವಿ ಮನೋಹರ್ , ಪ್ರಮೋದ್ ಸಪ್ರೆ, ನಾಗಭೂಷಣ್ ಉಡುಪ, ಪ್ರೇಮಲತಾ ದಿವಾಕರ್ ಒಡಗೂಡಿದ ಖ್ಯಾತ ಸಂಗೀತ ನಿರ್ದೇಶಕರಲ್ಲಿ ಹಾಡುಗಳನ್ನು ಸಂಯೋಜಿಸಿ ಬಿಡುಗಡೆ ಮಾಡುತ್ತಿದೆ . ತುಳು ಸಂಗೀತ ಲೋಕಕ್ಕೆ ನೂರಾ ಒಂದು ಅತ್ಯುತ್ತಮ ಹಾಡುಗಳನ್ನು ಕೊಡಬೇಕು ಎನ್ನುವುದು ಐಲೇಸಾದ ಅಭಿಲಾಷೆ . ಈಗಾಗಲೇ ಹದಿನೆಂಟು ಹಾಡುಗಳನ್ನು ಬಿಡುಗಡೆ ಮಾಡಿ ಸುಮಾರು ಮೂವತ್ತೈದು ಹಾಡುಗಳನ್ನು ತನ್ನ ಜೋಳಿಗೆಯಲ್ಲಿಟ್ಟುಕೊಂಡು ತನ್ನ ಪ್ರಯತ್ನದ ಅರ್ಧ ದಾರಿಯನ್ನು ಸಂಸ್ಥೆ ಈಗಾಗಲೇ ಕ್ರಮಿಸಿದೆ ನಾಡಿನ ಖ್ಯಾತ ಹಿನ್ನಲೆ ಗಾಯಕ ಡಾ. ರಮೇಶ್ಚಂದ್ರ…
ದಿನಾಂಕ 09/08/25 ರ ಬೆಳಿಗ್ಗೆ 6 ಗಂಟೆಗೆ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಮಹಿಳಾ ನಾಯಕಿಯಾದ ಕಂದಾವರ ಗ್ರಾ ಪಂ ಮಾಜಿ ಅಧ್ಯಕ್ಷರಾದ ವಿಜಯ ಗೋಪಾಲ ಸುವರ್ಣ ರವರ ನೇತೃತ್ವದಲ್ಲಿ ಮುರ ನಗರದ ಅರಸು ವೃತ್ತದಲ್ಲಿ ,ಹದಗೆಟ್ಟ ರಸ್ತೆಯಾ ಹೊಂಡಗಳಿಗೆ ಮಣ್ಣು ತುಂಬಿಸುವ ಮೂಲಕ ಶ್ರಮದಾನ ಮಾಡಿದರು. ಮುರ ನಗರದ ಆಟೋ ಚಾಲಕ ಮಾಲಕರು ಮತ್ತು ಮುರ ನಗರದ ನಾಗರಿಕರು ಸಾಥ್ ನೀಡಿದರು .ಈ ಸಂದರ್ಭದಲ್ಲಿ ಬಜ್ಪೆ ನಾಗರಿಕರ ಹಿತರಕ್ಷಣಾ ವೇದಿಕೆಯ ಗೌರ್ವಾನಿತ ಸದಸ್ಯರಾದ ನಿಸಾರ್ ಕರಾವಳಿ ,SDPI ಕೊಳಂಬೆ ಭಾಗದ ಅಧ್ಯಕ್ಷರಾದ ಹಮೀದ್ ಕೊಳಂಬೆ,ಕಂದಾವರ ಗ್ರಾ ಪಂ ಮಾಜಿ ಸದಸ್ಯರಾದ ಶರ್ಮಿಳಾ,ಅಶ್ರಫ್ ,ಹಾಲಿ ರುಕಯ್ಯ್ ಕಿಶೋರ್ ಸಂತು ಹಫೀಜ್ ಕೊಳಂಬೆ ಚೆರಿಯೋಣಕ್ ಅಝರ್ ಚೆಯ್ಯ್ ಮತ್ತು ,ಸ್ಥಳೀಯ ನಾಗರಿಕರು ಶ್ರಮದಾನ ಮಾಡಿ ಊರಿನ ಜನರ ಪ್ರಶಂಸೆಗೆ ಪಾತ್ರರಾದರು
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
