25 ವರ್ಷದ ಹಿಂದೆ ನಾವು ಎಸ್ಟೇಟ್ ಅಲ್ಲಿ ಕ್ರಿಕೆಟ್ ಆಡುತ್ತಿದ್ದಾಗ ನಿಮ್ಮ ಏರಿಯಕ್ಕೆ ಪೊಲೀಸ್ ಬಂದಿದ್ದಾರೆ ಅಂತ ಬೇರೆ ಏರಿಯದವರು ಹೇಳಿದರು. ಆಗ ಪೊಲೀಸ್ ಬಂದರು ಅಂತ ಹೇಳಿದರೆ ಭಯ ಇರುವ ಸಮಯ..ಎಲ್ಲರೂ ಭಯದಿಂದ ಏನಾಗಿರಬಹುದು ಯೋಚಿಸುವಾಗ ತಿಳಿಯಿತು ಇದು ನಮ್ಮ ಏರಿಯಾದ ಉಮೇಶಣ್ಣ ಪೊಲೀಸ್ ಇಲಾಖೆ ಯಲ್ಲಿ ಉದ್ಯೋಗ ಪಡೆದಿದ್ದಾರೆ ಎಂದು. ಏರಿಯಾದಲ್ಲಿ ಒಬ್ಬರು ಪೊಲೀಸ್ ಇಲಾಖೆಯಲ್ಲಿ ಕೆಲಸ ಪಡೆದದರು ಎಂಬ ಖುಷಿ ಬೇರೆ.
ನಂತರ ತನ್ನ ಕರ್ತವ್ಯದ ಸಮಯದಲ್ಲಿ ಪ್ರತಿಸಲ ಊರಿಗೆ ಸಂಬಂಧಪಟ್ಟಂತಹ ಕೆಲಸಕ್ಕೆ ಅನೇಕ ಸಲಹೆಗಳನ್ನು ನೀಡುತ್ತಿದ್ದರು. ಏರಿಯಾದಲ್ಲಿ ಯಾವುದೇ ಸಣ್ಣಪುಟ್ಟ ಅಹಿತಕರ ಘಟನೆ ನಡೆದಾಗ ಅದರ ಬಗ್ಗೆ ಗಮನ ಕೊಟ್ಟು ತನ್ನ ಕರ್ತವ್ಯವನ್ನು ಉತ್ತಮ ರೀತಿಯಲ್ಲಿ ನಿರ್ವಹಿಸುತ್ತಿದ್ದರು. ತಾನು ಇಲಾಖೆಯಲ್ಲಿ ಇದ್ದೇನೆ ಎಂಬುದನ್ನು ಇಲ್ಲಿ ತನಕ ಯಾವುದೇ ಅಹಂಕಾರದಿಂದ ಇವರು ದರ್ಪ ತೋರಿಸಿದ ದಿನವೇ ಇಲ್ಲ. ಆದರೆ ಇವರ ಶಿಸ್ತು, ಮಾತಾಡುವ ರೀತಿ, ಸಮಸ್ಯೆಗಳ ಬಗ್ಗೆ ಕೊಡುವ ಸಲಹೆ ಸ್ವತಹ ನಮಗೆ ಪೊಲೀಸ್ ಇಲಾಖೆಯಲ್ಲಿ ಸೇರಿ ಇವರ ಬೆಳೆಸಿದ ಕರ್ತವ್ಯ ನಿಷ್ಠೆಯನ್ನು ತೋರಿಸುತ್ತಿತ್ತು. ಪ್ರತಿ ಸಲ ಊರಿನಲ್ಲಿ ನಡೆಯುವ ದೈವದೇವರ ಕೆಲಸದಲ್ಲಿ ಕೂಡ ತನ್ನ ಪ್ರಾಮಾಣಿಕ ಸೇವೆಯನ್ನು ನೀಡುತ್ತಿದ್ದಾರೆ.
ಯಾವುದೇ ಅಧಿಕಾರಿಯ ಜೊತೆಗೆ ಮಾತನಾಡುವಾಗ ಉಮೇಶ್ ಅಣ್ಣನ ಮನೆಯ ಹತ್ತಿರ ನಮ್ಮ ಮನೆ ಅಂತ ಹೇಳಿದಾಗ ಎಲ್ಲಾ ಅಧಿಕಾರಿಗಳು ಹೇಳುತ್ತಿದ್ದ ಒಂದೇ ಮಾತು “ಅವನು ಒಳ್ಳೆ ಹುಡುಗ, ಪ್ರಾಮಾಣಿಕವಾಗಿ ತನ್ನ ಕೆಲಸ ಮಾಡುತ್ತಾನೆ”ಅಂತ. ಅದನ್ನು ಕೇಳಿದಾಗ ನಮಗೂ ತುಂಬಾ ಹೆಮ್ಮೆ ಅನಿಸುತ್ತಿತ್ತು. ಕರ್ತವ್ಯದಲ್ಲಿ ತನ್ನ ನಿಷ್ಠೆಯನ್ನು ತೋರಿಸಿ ಉತ್ತಮ ರೀತಿಯಲ್ಲಿ ತನ್ನ ಇಲಾಖೆಯಲ್ಲಿ ಹೆಸರು ಗಳಿಸುವುದು ಅಷ್ಟು ಸುಲಭದ ಮಾತಲ್ಲ. ಆದರೆ ಅದನ್ನು ಉತ್ತಮ ರೀತಿಯಲ್ಲಿ ನಿರ್ವಹಿಸಿ ನಮ್ಮ ಏರಿಯಕ್ಕೆ ಹೆಮ್ಮೆ ತಂದಿದ್ದೀರಿ.
ತನ್ನ ಪ್ರಾಮಾಣಿಕ ಉತ್ತಮ ಸೇವೆಯಿಂದ ಮುಖ್ಯಮಂತ್ರಿ ಪದಕ ಪಡೆದ ಉಮೇಶ್ ಕೊಟ್ಟಾರಿ ಅವರಿಗೆ ನಿಮ್ಮ ಸೇವೆ ಪೊಲೀಸ್ ಇಲಾಖೆ ಮತ್ತು ಊರಿಗೆ ಸದಾ ಇದೇ ರೀತಿ ಇರಲಿ ಎಂದು ನಮ್ಮ ಊರಿನ ರಕ್ತೇಶ್ವರಿ ದೈವದಲ್ಲಿ ಪ್ರಾರ್ಥಿಸುತ್ತೇನೆ ಎಂದು ಜನಪ್ರಿಯ ಸಾಮಾಜಿಕ ಕಾರ್ಯಕರ್ತ ದೀಪು ಶೆಟ್ಟಿಗಾರ್ ಅಭಿನಂದನೆ ಸಲ್ಲಿಸಿದ್ದಾರೆ

