Author: Tulunada Surya

ಯಕ್ಷಗಾನ ಮೇಳಗಳಿಂದ ಜನರಿಗೆ ಕಲಾ ಸಂಸ್ಕಾರ: ಡಾ|ಜೋಶಿ ಸೂಡ: ‘ಯಕ್ಷಗಾನ ಕಲೆಯನ್ನು ಬೆಳೆಸುವ ನಿಟ್ಟಿನಲ್ಲಿ ಸಂರಕ್ಷಣೆ, ಸಂವರ್ಧನೆ ಮತ್ತು ವಿಸ್ತರಣೆ ಮಾಡಿ ಮುಂದಿನ ಜನಾಂಗಕ್ಕೆ ನೀಡುವ ಹೊಣೆಗಾರಿಕೆ ನಮ್ಮ ಮೇಲಿದೆ. ಯಕ್ಷಗಾನದ ಗುಣಮಟ್ಟ ಮತ್ತು ಸೌಂದರ್ಯವನ್ನು ವರ್ಧಿಸುವ ಕೆಲಸವನ್ನು ತಿರುಗಾಟಕ್ಕೆ ಹೊರಟ ಸೂಡ ಮೇಳ ನಡೆಸುತ್ತಿದ್ದು, ಕಲಾವಿದರಿಗೆ ಉತ್ತಮ ವೇದಿಕೆ ಒದಗಿಸಿ,ಜನರಿಗೆ ಕಲಾಸಂಸ್ಕಾರ ನೀಡುವ ಪ್ರಯತ್ನ ಮಾಡಿದೆ’ ಎಂದು ಪ್ರಸಿದ್ಧ ಯಕ್ಷಗಾನ ಅರ್ಥಧಾರಿ ಮತ್ತು ಬಹುಶ್ರುತ ವಿದ್ವಾಂಸ ಡಾ|ಎಂ.ಪ್ರಭಾಕರ ಜೋಶಿ ಹೇಳಿದರು. ಸೂಡ ಮಯೂರವಾಹನ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯ ದಶಮ ಸಂಭ್ರಮ, ಸಪ್ತಾಹ ಮತ್ತು 10ನೇ ವರ್ಷದ ತಿರುಗಾಟ ಶುಭಾರಂಭ ಸಂದರ್ಭ ಸೂಡ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ಬೆಳ್ಳಿಹಬ್ಬದ ಪ್ರಯುಕ್ತ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಠಾರದಲ್ಲಿ ನಡೆದ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಸೂಡ ಶ್ರೀಸುಬ್ರಹ್ಮಣ್ಯ ದೇವಸ್ಥಾನದ ಆನುವಂಶಿಕ ಆಡಳಿತ ಮೊಕ್ತಸರ ಶಿರ್ವ ಕೋಡು ಜಯಶೀಲ ಹೆಗ್ಡೆ ಮೇಳದ ಸಂಚಾಲಕ ಮತ್ತು ಭಾಗವತ ಸೂಡ…

Read More

ಪಣಜಿ:ಗೋವಾದ ಅರ್ಪೋರಾ ಪ್ರದೇಶದಲ್ಲಿರುವ ಬಿರ್ಚ್ ಬೈ ರೆಮೆಯೊ ಲೇನ್ ಕ್ಲಬ್‌ನಲ್ಲಿ ಭಾನುವಾರ ನಸುಕಿನ ವೇಳೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ 23 ಮಂದಿ ಸಜೀವ ದಹನಗೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಸುಟ್ಟಿಗಾಯಗಳು ಮತ್ತು ತೀವ್ರವಾದ ಹೊಗೆ ಆಕರ್ಷಣೆಯಿಂದ ಸಾವಿನ ಪ್ರಕರಣಗಳು ಸಂಭವಿಸಿದ್ದು, ಘಟನೆಯನ್ನು ಸ್ಥಳದಲ್ಲೇ ಪರಿಶೀಲಿಸಿದ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರು ಮೃತರ ಸಂಖ್ಯೆಯನ್ನು ದೃಢಪಡಿಸಿದ್ದಾರೆ. ಸಿಎಂ ಸಾವಂತ್ ಅವರು ದುರಂತದ ಕಾರಣ ಪತ್ತೆಹಚ್ಚಲು ಕಟ್ಟುನಿಟ್ಟಿನ ತನಿಖೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, “ಈ ಘಟನೆಗೆ ಕಾರಣರಾದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು” ಎಂದು ಭರವಸೆ ನೀಡಿದ್ದಾರೆ. ಪೊಲೀಸರು ಈಗಾಗಲೇ ಎಲ್ಲ ಮೃತದೇಹಗಳನ್ನು ಪತ್ತೆಹಚ್ಚಿ, ಅಗ್ನಿ ಅವಘಡದ ಮೂಲ ಕಾರಣದ ಕುರಿತು ತನಿಖೆ ಮುಂದುವರಿಸಿದ್ದಾರೆ. ದುರಂತದ ತೀವ್ರತೆಯ ಹಿನ್ನೆಲೆ, ರಾಜ್ಯದ ವಿವಿಧ ಮನರಂಜನಾ ಕೇಂದ್ರಗಳು ಹಾಗೂ ಕ್ಲಬ್‌ಗಳಲ್ಲಿ ಸುರಕ್ಷತಾ ಪರಿಶೀಲನೆ ನಡೆಸುವ ಅಗತ್ಯತೆಯನ್ನು ತುರ್ತುವಾಗಿ ಅಧಿಕಾರಿಗಳು ಒತ್ತಿ ಹೇಳಿದ್ದಾರೆ. ಘಟನೆಯನ್ನು “ತೀರಾ ಕಳವಳಕಾರಿ” ಎಂದು ಪ್ರತಿಪಾದಿಸಿದ ಬಿಜೆಪಿ ಶಾಸಕ ಮೈಕೆಲ್ ಲೋಬೊ ಅವರು,“ಗೋವಾದ…

Read More

ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ದತ್ತ ಜಯಂತಿ ಬ್ಯಾನರ್ ತೆರವು ವಿಷಯ ಉದ್ವಿಗ್ನತೆಯಾಗಿ ಮಾರ್ಪಟ್ಟು, ಅಂತಿಮವಾಗಿ ಕಾಂಗ್ರೆಸ್ಸಿನ ಕಾರ್ಯಕರ್ತ ಗಣೇಶ್ ಗೌಡ (40) ಅವರ ಕೊಲೆಗೆ ದಾರಿ ಮಾಡಿಕೊಟ್ಟಿದೆ. ಘಟನೆ ಹೀಗೆ—ಗಣೇಶ್ ಗೌಡ ಅವರು ಕಾರಿನಲ್ಲಿ ಕಲ್ಮರಡಿ ಮಠದ ರಸ್ತೆಯ ಮೂಲಕ ತೆರಳುತ್ತಿದ್ದ ವೇಳೆ, ಬೈಕ್ ನಲ್ಲಿ ಹಿಂಬಾಲಿಸುತ್ತ ಬಂದ ಸಂಜಯ್ ಮತ್ತು ಮಿಥುನ್ ಸೇರಿ ಹಂತಕರ ತಂಡ ವಾಹನವನ್ನು ಅಡ್ಡಗಟ್ಟಿ ಮಚ್ಚಿನಿಂದ ಅಮಾನವೀಯ ಹಲ್ಲೆ ನಡೆಸಿದೆ. ಘಟನೆಯಲ್ಲಿ ಗಣೇಶ್ ಗೌಡ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.ಈ ದಾಳಿಯಲ್ಲಿ ಆರೋಪಿಯಾಗಿರುವ ಸಂಜಯ್ ತಲೆಗೆ ಗಂಭೀರವಾಗಿ ಗಾಯಗೊಂಡಿದ್ದು, ಚಿಕ್ಕಮಗಳೂರಿನ ಮಲ್ಲೇಗೌಡ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಎಚ್ಚರಿಕೆ ಕ್ರಮಗಳು ಹೆಚ್ಚಿಸಿದರುಘಟನೆ ಬಳಿಕ ಸಖರಾಯಪಟ್ಟಣದಲ್ಲಿ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಗಿದೆ. ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಈಗಾಗಲೇ ಐವರು ಪೊಲೀಸರ ವಶದಲ್ಲಿದ್ದಾರೆ. ಗಣೇಶ್ ಗೌಡ ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರಿಂದ ಗ್ರಾಮದಲ್ಲಿ ಉದ್ವಿಗ್ನತೆಯ ವಾತಾವರಣ ಮೂಡಿದೆ. ಶವಗಾರಕ್ಕೆ ಭೇಟಿ ನೀಡಿದ ಶಾಸಕ ಆನಂದ್ ಚಾಟಿಮಲ್ಲೇಗೌಡ…

Read More

ಉಡುಪಿ: ಹಾವಂಜೆ ಗ್ರಾಮದ ತ್ರಿವರ್ಣ ವಿಶ್ವವೇದಿಕೆ (ರಿ.), ಕೀಳಂಜೆ ಇದರ 12ನೇ ವಾರ್ಷಿಕೋತ್ಸವ ಸಮಾರಂಭ ಡಿ. 3ರಂದು ಕೀಳಂಜೆ ಶ್ರೀ ನಂದಿಕೇಶ್ವರ ದೈವಸ್ಥಾನದ ವಠಾರದಲ್ಲಿ ನಡೆಯಿತು. ಇದೆ ಸಂದರ್ಭದಲ್ಲಿ ನಂದಿಕೇಶ್ವರ ದೈವಸ್ಥಾನದ ವಿವಿಧ ಕಾಮಗಾರಿಗಳ ಉದ್ಘಾಟನಾ ಸಮಾರಂಭ ಹಾಗೂ ದಾನಿಗಳಿಗೆ ಸಮ್ಮಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಚಾಣಾಕ್ಯ ಮೇಲೋಡಿಸ್ ಹೆಬ್ರಿ ಇವರಿಂದ ಸಂಗೀತಾ ರಸಮಂಜರಿ, ಸುಪ್ರಸಿದ್ಧ ನಾಟಕ ತಂಡವಾದ ವಿಜಯಕುಮಾರ್ ಕೊಡಿಯಾಲ್ ಬೈಲ್ ನಿರ್ದೇಶನದಲ್ಲಿ ಶಶಿರಾಜ್ ರಾವ್ ಕಾವೂರು ಅವರ ಛತ್ರಪತಿ ಶಿವಾಜಿ ನಾಟಕ ಪ್ರದರ್ಶನ ನಡೆಯಿತು ಎಂದು ತ್ರಿವರ್ಣ ವಿಶ್ವವೇದಿಕೆ (ರಿ.),ಇದರ ಸ್ಥಾಪಕ ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ ತಿಳಿಸಿದ್ದಾರೆ

Read More

ಜಾರ್ಖಂಡ್/ಬಿಹಾರ್: ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಅವರು ನವೆಂಬರ್ 27ರಿಂದ ಆರಂಭಿಸಿದ ಐದು ದಿನಗಳ ತೀರ್ಥಯಾತ್ರೆಯ ಅಂಗವಾಗಿ ರಾಂಚಿಯಿಂದ ಜೈನರ ಶಾಶ್ವತ ಸಿದ್ದ ಕ್ಷೇತ್ರವಾದ ಸಮ್ಮೇದ ಶಿಖರ್ಜಿಗೆ ಆಗಮಿಸಿ ನವೆಂಬರ್ 28ರ ಬೆಳಿಗ್ಗೆ 27 ಕಿಮೀ ಪರ್ವತ ಪರಿಕ್ರಮೆಯ 20 ಕೂಟಗಳಲ್ಲಿ ತೀರ್ಥಂಕರರ ಚರಣದರ್ಶನಮಾಡಿದರು. ಅಪರಾಹ್ನ ನಡೆದ ಬೀಸ್ ಪಂಥಿ ಕೋಠಿಯ ಸಿದ್ಧ ಚಕ್ರ ವಿಧಾನದಲ್ಲಿ ಸ್ವಾಮೀಜಿ ಉಪಸ್ಥಿತರಿದ್ದು, ನಡೆದ ಧಾರ್ಮಿಕ ಸಭೆಯಲ್ಲಿ ಆಚಾರ್ಯ ಗಿರಿ ನಾರಸಾಗರ್ ಹಾಗೂ ಸಂಘದ ಮುನಿಗಳು ಭಾಗವಹಿಸಿದರು. ಮೂಡುಬಿದಿರೆ ಸ್ವಾಮೀಜಿಯವರನ್ನು ಅಧ್ಯಕ್ಷ ಅಜಯ್ ಬಾಬು (ಅರಾ) ಪಾದಪೂಜೆ ಮಾಡಿ ಗೌರವಿಸಿದರು. ಗುಣಯತನ ತೀರ್ಥಕ್ಷೇತ್ರದಲ್ಲಿ, 108 ಮುನಿ ಸಮತಾ ಸಾಗರ್ ಮತ್ತು ಉಡುಪಿ ಜಿಲ್ಲೆಯ ಬಸರೂರ್ ಮೂಲದ ಆಚಾರ್ಯ 108 ಶಂಭವ ಸಾಗರ್ ಮುಂತಾದ ಮಹಾಸನ್ಯಾಸಿಗಳು ಸಭೆಯಲ್ಲಿ ಸೇರಿಕೊಂಡರು. ಶಿಖರ್ಜಿ ಅದಿನಾಥ ಸ್ವಾಮಿ ಪಂಚಕಲ್ಯಾಣ ಸಮಾರಂಭದ ಎರಡನೇ ದಿನದ ಕಾರ್ಯಕ್ರಮದಲ್ಲಿ ಆಚಾರ್ಯ ತನ್ಮಯ ಸಾಗರ್ ಮುನಿ ಮಹಾರಾಜ್ ಮೂಡುಬಿದಿರೆ ಸ್ವಾಮೀಜಿಯನ್ನು ಗೌರವಿಸಿ…

Read More

ಮಂಗಳೂರು:ಬೆಂಗರೆಯ ಐತಿಹಾಸಿಕ ವೀರಭಾರತಿ ವ್ಯಾಯಾಮ ಶಾಲೆ, 1926ರಲ್ಲಿ ಸ್ಥಾಪಿತವಾಗಿ ಶತಮಾನೋತ್ಸವದ ದಾರಿಯಲ್ಲಿ ಕಾಲಿರಿಸಿರುವ ಹಿನ್ನೆಲೆಯಲ್ಲಿ, ವ್ಯಾಯಾಮ ಶಾಲೆಯ ಜೀರ್ಣೋದ್ಧಾರ ಹಾಗೂ ಶ್ರೀ ರಾಮಚಂದ್ರ–ಆಂಜನೇಯ ದೇವರ ಪ್ರತ್ಯೇಕ ಗರ್ಭಗುಡಿ ನಿರ್ಮಾಣ ಕಾರ್ಯಗಳಿಗೆ ಸಂಚಿಕೆ ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಡಿಸೆಂಬರ್ 5 ರಂದು ಬೆಳಿಗ್ಗೆ 8.55ಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ.ವೇದಮೂರ್ತಿ ಶ್ರೀ ಶಿವಪ್ರಸಾದ್ ತಂತ್ರಿಗಳ ಮಾರ್ಗದರ್ಶನದಲ್ಲಿ ನಾಡೋಜ ಡಾ. ಜಿ. ಶಂಕರ್ ಅವರ ದಿವ್ಯ ಹಸ್ತದಿಂದ ಶಿಲಾನ್ಯಾಸ ನೆರವೇರಲಿದೆ ಎಂದು ಜೀರ್ಣೋದ್ಧಾರ ಶತಮಾನೋತ್ಸವ ಸಮಿತಿಯ ಗೌರವಾಧ್ಯಕ್ಷ ಮೋಹನ್ ಬೆಂಗ್ರೆ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಶಿಲಾನ್ಯಾಸ ಸಮಾರಂಭ – ಅತಿಥಿವರ್ಯರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಜಿತ್ ಜಿ. ಸುವರ್ಣ, ಅಧ್ಯಕ್ಷರು, ಮೊಗವೀರ ವ್ಯವಸ್ಥಾಪಕ ಶಿಕ್ಷಣ ಮಂಡಳಿ, ಮುಂಬೈ ವಹಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಭಾಗವಹಿಸುವವರು:• ಶ್ರೀ ವೇದವ್ಯಾಸ ಕಾಮತ್, ಶಾಸಕರು, ಮಂಗಳೂರು ದಕ್ಷಿಣ• ಶ್ರೀ ಐವನ್ ಡಿ’ಸೋಜಾ, ಸದಸ್ಯರು, ರಾಜ್ಯ ವಿಧಾನ ಪರಿಷತ್• ಶ್ರೀ ಶಶಿಕುಮಾರ್ ಬೆಂಗ್ರೆ (ಬಾಲು), ಮಾಜಿ ಅಧ್ಯಕ್ಷರು, ಜೀರ್ಣೋದ್ಧಾರ ಸಮಿತಿ• ಶ್ರೀ ಮಹಾವಿಷ್ಣು ಶೇಷಶಯನ ಭಜನಾ…

Read More

ಬಹು ಮಾಧ್ಯಮಗಳ ನಡುವೆ ಯಕ್ಷಗಾನ ಅಸ್ತಿತ್ವ ಉಳಿಸಿಕೊಂಡಿದೆ: ರವಿರಾಜ ಹೆಗ್ಡೆ ಮಂಗಳೂರು: ‘ಯಕ್ಷಗಾನ ಕರಾವಳಿಯ ಶ್ರೀಮಂತ ಕಲೆ. ಹಿಂದಿನಿಂದಲೂ ಕಲಾವಿದರು, ಸಂಘಟಕರು ಹಾಗೂ ಕಲಾ ಸಂಸ್ಥೆಗಳ ಪರಿಶ್ರಮದಿಂದ ಅದು ಬೆಳೆದು ಬಂದಿದೆ. ಇಂದಿನ ಬಹು ಮಾಧ್ಯಮಗಳ ನಡುವೆ ತಾಂತ್ರಿಕ ಜಗತ್ತಿನ ಸವಾಲುಗಳನ್ನು ಎದುರಿಸಿಯೂ ಯಕ್ಷಗಾನ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿದೆ. ಈ ದಿಸೆಯಲ್ಲಿ ಯಕ್ಷಾಂಗಣ ಸಂಸ್ಥೆ ಕಳೆದ ಹನ್ನೆರಡು ವರ್ಷಗಳಿಂದ ಯಕ್ಷಗಾನ ತಾಳಮದ್ದಳೆ ಪ್ರಕಾರಕ್ಕೆ ದೊಡ್ಡ ಮಟ್ಟದ ಕೊಡುಗೆ ನೀಡುತ್ತಾ ಬಂದಿದೆ’ ಎಂದು ದ.ಕ.ಜಿಲ್ಲಾ ಹಾಲುತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ರವಿರಾಜ ಹೆಗ್ಡೆ ಹೇಳಿದ್ದಾರೆ. ಯಕ್ಷಾಂಗಣ ಮಂಗಳೂರು, ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆಯು ಮಂಗಳೂರು ವಿ.ವಿ.ಡಾ|ದಯಾನಂದ ಪೈ, ಶ್ರೀ ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷ ಭಾರತಿ (ರಿ.) ಪುತ್ತೂರು ಇವರ ಸಹಯೋಗದೊಂದಿಗೆ ನ. 23 ರಿಂದ 29 ರವರೆಗೆ ಮಂಗಳೂರು ವಿವಿ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಜರಗಿದ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮದ…

Read More

ಮಂಗಳೂರು, ನವೆಂಬರ್ 29, 2025: “ಎಂಸಿಎಫ್ ಹೆಸರು ಉಳಿಸಿ” ಅಭಿಯಾನದ ಪ್ರಾರಂಭಿಕ ಸಭೆ ಶುಕ್ರವಾರ ಮಂಗಳೂರಿನ ವುಡ್ಲ್ಯಾಂಡ್ಸ್ ಹೋಟೆಲ್‌ನಲ್ಲಿ ಭರ್ಜರಿಯಾಗಿ ನೆರವೇರಿತು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ ಎಂಸಿಎಫ್‌ನ ಮಾಜಿ ಉದ್ಯೋಗಿಗಳು ತಮ್ಮ ಒಗ್ಗಟ್ಟು ಮತ್ತು ಬದ್ಧತೆಯನ್ನು ಸ್ಪಷ್ಟವಾಗಿ ತೋರಿಸಿದರು. ಸಭೆಯ ಆರಂಭವನ್ನು ಹಿರಿಯರು ವೈ.ಎಂ. ದೇವದಾಸ್ ಮತ್ತು ಶೀನ ಪೂಜಾರಿ ದೀಪ ಪ್ರಜ್ವಲನದಿಂದ ನೆರವೇರಿಸಿದರು. ಜಯರಾಮ ಶೆಟ್ಟಿ ಸ್ವಾಗತ ಭಾಷಣ ಮಾಡಿ ಸಭೆಯ ಕಾರ್ಯಾರಂಭ ಮಾಡಿದರು. ಅಭಿಯಾನದ ಹಿನ್ನೆಲೆ, ಅಗತ್ಯತೆ ಮತ್ತು “ಎಂಸಿಎಫ್” ಹೆಸರಿನೊಂದಿಗೆ ಬೆರೆತಿರುವ ಭಾವನಾತ್ಮಕ ಬಾಂಧವ್ಯ ಕುರಿತು ಶಿವರಾಂ ಶೆಟ್ಟಿ ಹೃದಯಸ್ಪರ್ಶಿ ಮಾತುಗಳನ್ನು ಹಂಚಿಕೊಂಡರು. ಉದ್ಯಮದ ಹೆಸರಿನ ಬದಲಾವಣೆ ತಂದಿರುವ ಅಸಮಾಧಾನ, ಮಾನಸಿಕ ನೋವು ಮತ್ತು ಸಾರ್ವಜನಿಕ ವಲಯದಲ್ಲಿ ಹೋರಾಟದ ಧ್ವನಿಯನ್ನು ಪ್ರಬಲವಾಗಿ ಎತ್ತಿಹಿಡಿಯುವ ಅಗತ್ಯತೆಯನ್ನು ಅವರು ಒತ್ತಿ ಹೇಳಿದರು. ಅನಂತರ ನಡೆದ ಮುಕ್ತ ಚರ್ಚೆಯಲ್ಲಿ ಮಾಜಿ ಸಿಬ್ಬಂದಿ ವಿಷ್ಣು ಶಬರಾಯ, ಕೃಷ್ಣಮೂರ್ತಿ ರೈ, ರಾಮಕೃಷ್ಣ ಭಟ್, ರವೀಂದ್ರ ವಿ., ವೈ.ಎಂ. ದೇವದಾಸ್, ಜನಾರ್ಧನ ಗಟ್ಟಿ, ನವಚಂದ್ರ ರಾವ್,…

Read More

ಕಾಪು ಸಮೀಪದ ಕೋತಲ್‌ಕಟ್ಟೆ ಬಳಿ ಭಾನುವಾರ ಮಧ್ಯಾಹ್ನ ನಡೆದ ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ದುರ್ಮರಣಕ್ಕಿಳಿದ ಘಟನೆ ಸ್ಥಳೀಯರಲ್ಲಿ ಬೆಚ್ಚಿಬೀಳುವಂತಾಗಿದೆ. ಅಲಂಕಾರಿಕ ಸಾಮಗ್ರಿ ಸಾಗಿಸುತ್ತಿದ್ದ ಗೂಡ್ಸ್ ಟೆಂಪೋ ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯ ಮಧ್ಯದ ಡಿವೈಡರ್‌ಗೆ ಡಿಕ್ಕಿ ಹೊಡೆದು, ಬಳಿಕ ಸರ್ವಿಸ್ ರಸ್ತೆಗೆ ಪಲ್ಟಿಯಾಗಿ ಬಿದ್ದಿದೆ ಎಂದು ತಿಳಿದುಬಂದಿದೆ. ಟೆಂಪೋದಲ್ಲಿ ಆ ಸಂದರ್ಭದಲ್ಲಿ ಒಟ್ಟು 10 ಮಂದಿ ಕೆಲಸಗಾರರು ಇದ್ದರು ಎಂದು ಮೂಲಗಳು ತಿಳಿಸಿವೆ. ಅಪಘಾತದಲ್ಲಿ ಹಲವು ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅವರಲ್ಲಿ ನಾಲ್ವರು ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಸಾಗಿಸುವ ಸಂದರ್ಭದಲ್ಲಿ ಪ್ರಾಣ ಕಳೆದುಕೊಂಡಿರುವುದು ದುರಂತವಾಗಿದೆ. ಅಪಘಾತದ ಮಾಹಿತಿ ತಿಳಿಯುತ್ತಿದ್ದಂತೆಯೇ ಕಾಪು ಪೊಲೀಸ್‌ ಠಾಣೆಯ ವೃತ್ತ ನಿರೀಕ್ಷಕರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತು ಇನ್ನಷ್ಟು ಮಾಹಿತಿ ನಿರೀಕ್ಷಿಸಲಾಗಿದೆ.

Read More

ಮಂಗಳೂರು: ತೀಯಾ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಪ್ರತ್ಯೇಕ ನಿಗಮ ರಚನೆ ಅಗತ್ಯವಾಗಿದೆ ಎಂದು ಭಾರತೀಯ ತೀಯಾ ಸಮಾಜ ಕೇಂದ್ರ ಸಮಿತಿ ಅಧ್ಯಕ್ಷ ಸದಾಶಿವ ಉಳ್ಳಾಲ್ ಹೇಳಿದ್ದಾರೆ. ಮಂಗಳೂರು ವಿಶ್ವವಿದ್ಯಾಲಯಕ್ಕೆ ಡಿಸೆಂಬರ್ 3ರಂದು ಆಗಮಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತೀಯಾ ಸಮಾಜದ ವಿವಿಧ ಬೇಡಿಕೆಗಳ ಮನವಿಯನ್ನು ಸಲ್ಲಿಸಲಾಗುವುದಾದ್ದಾಗಿ ಅವರು ತಿಳಿಸಿದರು. ಕುದ್ರೋಳಿ ಭಗವತಿ ಕ್ಷೇತ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವರ್ಕಳದ ಶಿವಗಿರಿ ಮಠ ಹಾಗೂ ಮಂಗಳೂರು ವಿವಿಯ ಶ್ರೀ ನಾರಾಯಣ ಗುರು ಅಧ್ಯಯನ ಪೀಠದ ಸಂಯುಕ್ತ ಆಶ್ರಯದಲ್ಲಿ ಮಹಾತ್ಮಾ ಗಾಂಧೀಜಿ – ನಾರಾಯಣ ಗುರು ವರ್ಕಳ ಸಂವಾದದ ಶತಮಾನೋತ್ಸವ ಹಾಗೂ ಶ್ರೀ ನಾರಾಯಣ ಗುರು ಮಹಾನಿರ್ವಾಣ ಶತಮಾನೋತ್ಸವ ಕಾರ್ಯಕ್ರಮವನ್ನು ಡಿಸೆಂಬರ್ 3ರಂದು ಕೊಣಾಜೆಯ ಮಂಗಳೂರು ವಿವಿಯಲ್ಲಿ ಉದ್ಘಾಟಿಸಲಾಗುತ್ತಿದೆ ಎಂದು ತಿಳಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಹೋತ್ಸವಕ್ಕೆ ಚಾಲನೆ ನೀಡಲಿದ್ದು, ಇದೇ ವೇಳೆ ತೀಯಾ ಸಮುದಾಯದ ಬೇಡಿಕೆಯ ಮನವಿಯನ್ನು ಅವರ ಕೈಗೆ ಒಪ್ಪಿಸಲಾಗುವುದು. ಈ ಕುರಿತು ಕುದ್ರೋಳಿ, ಉಳ್ಳಾಲ, ಸಸಿಹಿಟ್ಟು ಮತ್ತು…

Read More