- ಜನತಾ ದಳ (ಜಾತ್ಯತೀತ) ಪಕ್ಷದ ವತಿಯಿಂದ “ಜನತಾ ಸಮಾವೇಶ ಹಾಗೂ ಬೆಳ್ಳಿ ಹಬ್ಬ” ಕಾರ್ಯಕ್ರಮ ಅದ್ದೂರಿಯಾಗಿ, ಅಭೂತಪೂರ್ವ ಜನಸಾಗರದ ನಡುವೆ ಯಶಸ್ವಿ
- ಬೆಂಗಳೂರು ಜಿಬಿಎ ಚುನಾವಣೆ: ಜೆಡಿಎಸ್ಗೆ ಬೆಂಬಲ ನೀಡಿ – ಕುಮಾರಸ್ವಾಮಿ ಮನವಿ
- ಕರಂಬಾರಿನಲ್ಲಿ ನಾಗರಿಕ ಸೇವಾ ಸಮಿತಿ ಭವ್ಯವಾಗಿ ನೆರವೆರಿದ 12ನೇ ವಾರ್ಷಿಕೋತ್ಸವ
- ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಪಾತ ಪ್ರಕರಣ: ಶಿಕ್ಷಕ ಬಂಧನ
- ಹೆಬ್ರಿ: ರಸ್ತೆ ದಾಟುವ ವೇಳೆ ಮಿನಿ ಗೂಡ್ಸ್ ಡಿಕ್ಕಿ – ವಿದ್ಯಾರ್ಥಿನಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಸ್ಥಳೀಯರಿಂದ ಪ್ರತಿಭಟನೆ
- ಮಂಗಳೂರು: ಪ್ರೀತಿಯಲ್ಲಿ ಮನಸ್ತಾಪ – 22ರ ಯುವಕ ಆತ್ಮಹತ್ಯೆ, ಯುವತಿಯ ವಿರುದ್ಧ ಆರೋಪ
- ಉಡುಪಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಗ್ರ ಸಾಧನೆಗೆ ತುರವೇ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅಭಿನಂದನೆ
- ಮಂಗಳೂರು :ಏಪ್ರಿಲ್ 12ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಮಹತ್ವದ ಅಧಿವೇಶನ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ
Author: Tulunada Surya
ಮಂಗಳೂರು ; ಫರಂಗಿಪೇಟೆಯ ನಿವಾಸಿ ಯುವಕ 19 ವರ್ಷ ಪ್ರಾಯದ ದಿಗಂತ್ ಫೆಬ್ರವರಿ 25 ರಿಂದ ನಾಪತ್ತೆಯಾಗಿದ್ದನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶ್ವ ಹಿಂದೂ ಪರಿಷತ್ ನಾಯಕರು ದಿಗಂತ್ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವಾನ ಹೇಳಿದ್ದು ಹಲವು ರೀತಿಯ ಪ್ರತಿಭಟನೆ ಕೂಡ ನಡೆಸಿದ್ದರು. ಇದೀಗ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಫರಂಗಿಪೇಟೆಯ ಕಿದೆಬೆಟ್ಟು ವಿದ್ಯಾರ್ಥಿ ದಿಗಂತ್ ಸುಮಾರು 10 ದಿನದ ಬಳಿಕ ಮಾ.8ರ ಶನಿವಾರ ಉಡುಪಿಯಲ್ಲಿ ಪತ್ತೆಯಾಗಿದ್ದಾನೆ ಎಂದು ಮಾಹಿತಿ ದೊರೆತಿದೆ. ಪೊಲಿಸರು ಆತನನ್ನು ಕರೆತರುತ್ತಿದ್ದಾರೆ ಎನ್ನಲಾಗಿದೆ. ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, 40ಕ್ಕೂ ಅಧಿಕ ಪೋಲೀಸರ ತಂಡ ಹುಡುಕಾಟ ನಡೆಸಿದ್ದರು. ಡಿಎಆರ್ ತಂಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮೆರಾಗಳನ್ನು ಬಳಿಸಿ ಹುಡುಕಾಟ ನಡೆಸಿದ್ದರು ಇಂದು ಕೂಡ ಅನೇಕ ಕಡೆಗಳಲ್ಲಿ ಕ್ಯೂಬಿಂಗ್ ಕಾರ್ಯಚರಣೆ ಕೂಡ ನಡೆಸಿತ್ತು ಒಟ್ಟಿನಲ್ಲಿ ನಾಪತ್ತೆಯಾದ ಯುವಕ ಸಿಕ್ಕಿರುವುದು ಪೋಲಿಸ್ ಇಲಾಖೆಯ ಅವಿರತ ಶ್ರಮಕ್ಕೆ…
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕ ವತಿಯಿಂದ ಮಹಿಳಾ ದಿನಾಚರಣೆ ಸುನಂದ ಕೋಟ್ಯಾನ್ ಕಟಪಾಡಿರವರ ಅಧ್ಯಕ್ಷತೆಯಲ್ಲಿ ನಡೆಯಿತು ದಿನಾಂಕ 08-03-2025 ರಂದು ಉಡುಪಿ ಜಿಲ್ಲಾ ಮಹಿಳಾ ಘಟಕ ವತಿಯಿಂದ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ವಿಶ್ವ ಮಹಿಳಾ ದಿನಾಚರಣೆ ನಡೆಯಿತು. ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಮಹಿಳಾ ಘಟಕದ ಪ್ರಮುಖರಾದ ಜ್ಯೋತಿ ಬನ್ನಂಜೆ, ಸುಲೋಚನಾ, ಶ್ಯಾಮಲಾ, ಅಶ್ವಿನಿ , ದನವಂತಿ ಮತ್ತಿತರರು ಉಪಸ್ಥಿತರಿದ್ದರು.
ಮಂಗಳೂರು:- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಮಾರ್ಚ್ 8 ರಂದು ಜಿಲ್ಲೆಗೆ ಆಗಮಿಸಲಿದ್ದಾರೆ.ಮಾರ್ಚ್ 8 ರಂದು ಮಧ್ಯಾಹ್ನ 2 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣ ಆಗಮನ, 2:25 ಗಂಟೆಗೆ ಸಕ್ರ್ಯೂಟ್ ಹೌಸ್ ಆಗಮನ, 2:30 ಗಂಟೆಗೆ ಸಕ್ರ್ಯೂಟ್ ಹೌಸ್‍ನಲ್ಲಿ ಪತ್ರಿಕಾಗೋಷ್ಠಿ, ಸಂಜೆ 4 ಗಂಟೆಗೆ ನಾವೂರು ಗ್ರಾಮದ ಕೂಡಿಬೈಲು ಮೂಡೂರು ಪಡೂರು ಜೋಡುಕರೆ ಕಂಬಳ ಸಮಿತಿ, ಬಂಟ್ವಾಳ ವತಿಯಿಂದ 14ನೇ ವರ್ಷದ ಹೊನಲು ಬೆಳಕಿನ ಮೂಡೂರು ಪಡೂರು ಜೋಡುಕರೆ ಬಯಲು ಕಂಬಳದ ಕಾರ್ಯಕ್ರಮದಲ್ಲಿ ಭಾಗಿ, ಸಂಜೆ 6 ಗಂಟೆಗೆ ಮಂಗಳೂರು ವಿಮಾನ ನಿಲ್ದಾಣದಿಂದ ಸಚಿವರು ಬೆಂಗಳೂರಿಗೆ ತೆರಳಲಿದ್ದಾರೆ.
ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. 2022 ಹಾಗೂ 2023 ಮತ್ತು 2024 ಈ ಮೂರು ವರ್ಷಗಳ ಸಾಲಿನ ಪ್ರಶಸ್ತಿಯನ್ನು 9 ಮಂದಿ ಸಾಧಕರಿಗೆ ಘೋಷಿಸಲಾಗಿದೆ.2022ನೇ ಸಾಲಿನ ಸಂಶೋಧನೆ ಹಾಗೂ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಡಾ. ರಘಪತಿ ಕೆಮ್ತೂರು ( 71). ಇದೇ ಸಾಲಿನ ತುಳು ನಾಟಕ ಸಿನಿಮಾ ಕ್ಷೇತ್ರದ ಪ್ರಶಸ್ತಿಗೆ ಶ್ರೀಮತಿ ರತ್ನಮಾಲ ಪುರಂದರ ಬೆಂಗಳೂರು (65) , ಜಾನಪದ ಕ್ಷೇತ್ರದ ಪ್ರಶಸ್ತಿಗೆ ಶ್ರೀ ಪ್ರಭಾಕರ ಶೇರಿಗಾರ ಉಡುಪಿ (70 ) ಆಯ್ಕೆಯಾಗಿದ್ದಾರೆ.2023ನೇ ಸಾಲಿನ ತುಳು ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಸಿಮಂತೂರು ಚಂದ್ರಹಾಸ ಸುವರ್ಣ ಮುಂಬಯಿ (70) ಆಯ್ಕೆಯಾಗಿದ್ದಾರೆ. ಇದೇ ಸಾಲಿನ ನಾಟಕ ಕ್ಷೇತ್ರದ ಪ್ರಶಸ್ತಿಗೆ ನೆಕ್ಕಿದ ಪುಣಿ ಗೋಪಾಲಕೃಷ್ಣ ಬೆಂಗಳೂರು (77) ಆಯ್ಕೆಯಾಗಿದ್ದಾರೆ. ಜಾನಪದ ಕ್ಷೇತ್ರದ ಪ್ರಶಸ್ತಿಗೆ ಲಕ್ಷ್ಮಣ ಕಾಂತ ಕಣಂತೂರು (65) ಆಯ್ಕೆಯಾಗಿದ್ದಾರೆ.2024ನೇ ಸಾಲಿನ ಸಾಹಿತ್ಯ ಕ್ಷೇತ್ರದ ಪ್ರಶಸ್ತಿಗೆ ಶ್ರೀ ಯಶವಂತ ಬೋಳೂರು(70) ಆಯ್ಕೆಯಾಗಿದ್ದಾರೆ. ಇದೇ ಸಾಲಿನ ನಾಟಕ, ಸಿನಿಮಾ ಕ್ಷೇತ್ರದ ಪ್ರಶಸ್ತಿಗೆ ಶ್ರೀಮತಿ…
ಮಂಗಳೂರು : ಕುದ್ರೋಳಿ ಶ್ರೀ ಭಗವತಿ ಕ್ಷೇತ್ರದ ನಡಾವಳಿ ಉತ್ಸವವು ಏಪ್ರಿಲ್ 9 ರಿಂದ 11 ರವರೆಗೆ ಶೃದ್ಧಾ ಭಕ್ತಿಯಿಂದ ನಡೆಯಲಿದೆ. ಏಪ್ರಿಲ್ 05-04-2025ನೇ ಶನಿವಾರ ಮಜಿ, ತುಂಬೆಯಲ್ಲಿ ಜರಗಲಿರುವ ಗೊನೆ ಮುಹೂರ್ತದಿಂದ ಮೊದಲ್ಗೊಂಡು ಮೀನ ಮಾಸ ದಿನ 26 ಸಲುವ ತಾ. 09-04-2025 ನೇ ಬುಧವಾರದಿಂದ ಮೀನ ಮಾಸ ದಿನ 28 ಸಲುವ ತಾ. 11-04-2025ನೇ ಶುಕ್ರವಾರ ಪರ್ಯಂತ ಶ್ರೀ ಕ್ಷೇತ್ರದಲ್ಲಿ ನಡಾವಳಿ ಉತ್ಸವವು ವಿವಿಧ ಧಾರ್ಮಿಕ, ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ಮತ್ತು ಶ್ರೀ ಭಗವನ್ನಾಮ ಸಂಕೀರ್ತನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಬಹಳ ವಿಜೃಂಭಣೆಯಿಂದ ನಡೆಯಲಿದೆ. ಬೆಳಗ್ಗೆ ಭಂಡಾರ ಆರೋಹಣವಾಗಿ ಭಂಡಾರ ಮಂದಿರದಿಂದ ಶ್ರೀ ಮಾತೆಯರ ಪವಿತ್ರ ಭಂಡಾರ ಉತ್ಸವ ಕ್ಷೇತ್ರಗಳಿಗೆ ಹೋರಾಡಲಿದ್ದು . ಮಧ್ಯಾಹ್ನ ಶ್ರೀ ಚೀರುಂಭ ಭಗವತೀ ಮಾತೆಯ ಸನ್ನಿಧಿಯಲ್ಲಿ ವಿಶೇಷ ಮಹಾಪೂಜೆ ನೆರವೇರಲಿದೆ. ರಾತ್ರಿ ಶ್ರೀ ಚೀರುಂಭ ಭಗವತೀ ಕ್ಷೇತ್ರದಲ್ಲಿ ಬಲಿ ಉತ್ಸವ, ಮೂರ್ತಿ ದರ್ಶನ ನಡೆಲಿದ್ದು . ಕ್ಷೇತ್ರದ ಆಚಾರಪಟ್ಟವರು, ಗುರಿಕಾರರು, ಆಡಳಿತ ಸಮಿತಿ ಪ್ರಮುಖರು…
ಉಳ್ಳಾಲ : ದೇವಸ್ಥಾನಗಳಂತೆ ಮಠಗಳೂ ಹೆಚ್ಚಾಗಿ ನಿರ್ಮಾಣವಾಗಬೇಕಿವೆ. ಆ ಮೂಲಕ ದುಷ್ಟ ಶಕ್ತಿಗಳು ದೂರವಾಗಿ ದೇವತಾ ಶಕ್ತಿಗಳು ಮಠಗಳಲ್ಲೂ ನೆಲೆಗೊಳ್ಳುವಂತಾಗಬೇಕು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ ಹೇಳಿದ್ದಾರೆ.ಅವರು ಉಳ್ಳಾಲ ತಾ. ಮಾಡೂರು, ಕೊಂಡಾಣ ಮರಿಯಾಣಪಾಲು ಶಿವಗಿರಿಯಲ್ಲಿ ನವ ನಿರ್ಮಾಣಗೊಳ್ಳಲಿರುವ ಈ ಮಠವು ಸನಾತನ ಸಂಸ್ಕೃತಿ ಉಳಿಸಬೇಕು. ಪೂಜ್ಯ ಸ್ವಾಮೀಜಿ ಮಾಡಿರುವ ಮಠದ ನವ ನಿರ್ಮಾಣ ಸಂಕಲ್ಪಕ್ಕೆ ಶಕ್ತಿ ತುಂಬಿಸುವ ಕಾರ್ಯ ನಾವೆಲ್ಲರೂ ಜತೆಗೂಡಿ ನಡೆಸೋಣ ಎಂದರು. ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡುತ್ತಾ ಕಟೀಲು ಕ್ಷೇತ್ರದ ವರಪ್ರಸಾದದಲ್ಲಿ ನಿರ್ಮಾಣಗೊಂಡ ಮಠ, ಮಂದಿರಗಳು ಜಗತ್ ಪ್ರಸಿದ್ಧವಾಗಿವೆ. ಈ ಪ್ರದೇಶದಲ್ಲಿ ಮಠ ನಿರ್ಮಾಣದ ಕನಸನ್ನು ಸ್ವಾಮೀಜಿಗಳು ಕಂಡಿದ್ದು, ನವ ನಿರ್ಮಾಣಗೊಂಡ ಮಠ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುವ ಶಿವಗಿರಿಯಾಗಿ ಬಳಗಲಿ ಎಂದರು. ಶ್ರೀ ಶಿವ ದುರ್ಗಾಂಭ ಮಠದ ಪರಮ ಪೂಜ್ಯ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀ ಶಿವ…
ಮಂಗಳೂರು : ನಿಜವಾದ ಚರಿತ್ರೆಯಲ್ಲಿ ಶಿವಾಜಿ ಧೀರ ಆಪತ್ಬಾಂದವ ಆದರೆ ಶಾಲಾ ಪುಟಗಳಲ್ಲಿ ಚರಿತ್ರೆಯನ್ನು ತಿರುಚಲಾಗಿದೆ ಎಂಬುದು ಬೇಸರದ ಸಂಗತಿ,ಬ್ರಿಟಿಷರ ಚರಿತ್ರೆ ಹಾಗೂ ಭಾರತೀಯರ ಚರಿತ್ರೆಯ ಪುಸ್ತಕಗಳಿಗೆ ಅಜಗಜಾಂತರ ವ್ಯತ್ಯಾಸವಿದೆ ಪಾಠದಲ್ಲಿ ಶಿವಾಜಿ ಮಹಾರಾಜರು ದಕ್ಷಿಣದ ವರೆಗೆ ಸಾಮ್ರಾಜ್ಯ ವಿಸ್ತರಿಸಲು ಕರಾವಳಿ ಭಾಗಕ್ಕೆ ಆಕ್ರಮಣ ಮಾಡಿದ್ದಾರೆಂದು ಆದರೆ ಆ ಕಾಲದಲ್ಲಿ ಕರಾವಳಿ ಬಾಗ ಅಷ್ಟೊಂದು ಮಟ್ಟದಲ್ಲಿ ಇರಲಿಲ್ಲ ಅದೆಲ್ಲ ಸುಳ್ಳು ಎಂದರು. ಶಿವಾಜಿ ಎಲ್ಲ ಜಾತಿ ಧರ್ಮದ ಜನರನ್ನು ಸಮಾನವಾಗಿ ಕಂಡವರು. ಅವರಿಗೆ ಅವರೇ ಸಾಟಿ. ಶಿವಾಜಿ ಒಬ್ಬ ದರೋಡೆಕೋರ ಅನ್ಯಧರ್ಮದ ದ್ವೇಷಿ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ. ಇದು ಖಂಡಿತಾ ಸರಿಯಲ್ಲ. ಶಿವಾಜಿಯ ಬಗ್ಗೆ ಅವರ ಸಾಮ್ರಾಜ್ಯ ಮತ್ತು ಆಡಳಿತದ ಬಗ್ಗೆ ಪಟ್ಟಾಭಿಷೇಕದ ಬಗ್ಗೆ ನಾಟಕದಲ್ಲಿ ವಾಸ್ತವವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಎಲ್ಲರೂ ನಾಟಕ ನೋಡಿ” -ಶಶಿರಾಜ್ ರಾವ್ ಕಾವೂರು ಹೇಳಿದ್ದಾರೆ. “ಶಿವಾಜಿ ಹಿಂದೂ ಧರ್ಮದ ರಕ್ಷಕ ಆದರೆ ಅನ್ಯಧರ್ಮದ ದ್ವೇಷಿಯಲ್ಲ. ಇತಿಹಾಸವನ್ನು ತಿರುಚಿದವರು ಮಾತ್ರ ಅಪಚಾರ ಮಾಡುತ್ತಿದ್ದಾರೆ ಶಿವಾಜಿಯನ್ನು…
ಜಾಗತಿಕ ಬಂಟರ ಸಂಘಗಳ ಒಕ್ಕೂಟದ ವಿಶೇಷ ಮಹಾ ನಿರ್ದೇಶಕರು ಮತ್ತು ಬಂಟರ ಸಂಘ ಮುಂಬೈಯ ಅಧ್ಯಕ್ಷರಾದ ಶ್ರೀ ಪ್ರವೀಣ್ ಭೋಜ ಶೆಟ್ಟಿಯವರ ಮಾತೃಶ್ರೀ, ಎಲ್ಲೂರು ಮಲ್ಲಬೆಟ್ಟು ಪರಾಡಿ ದಿವಂಗತ ಭೋಜ ಶೆಟ್ಟಿಯವರ ಧರ್ಮಪತ್ನಿ ನಳಿನ ಭೋಜ ಶೆಟ್ಟಿಯವರು ಸ್ವರ್ಗಸ್ತರಾಗಿದ್ದಾರೆ ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.ಮೃತರ ಅಂತ್ಯಕ್ರಿಯೆಯು ಇಂದು 05-03-2025 ಮಧ್ಯಾಹ್ನ 2 ಗಂಟೆಗೆ ಅವರ ನಿವಾಸವಾದ “701, 8 ನೇ ಮಹಡಿ, ವೆಂಕಟಗಿರಿ ರೆಸಿಡೆನ್ಸಿ, ಬಪ್ಪನಾಡು ರಾಷ್ಟೀಯ ಹೆದ್ದಾರಿಯ ಎದುರು, ಮೂಲ್ಕಿ, ಮಂಗಳೂರು” ಇಲ್ಲಿ ನೆರವೇರಲಿದೆ. ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಸದಸ್ಯರು ಪಾಲ್ಗೊಳ್ಳಬೇಕೆಂದು ಜಾಗತಿಕ ಬಂಟರ ಸಂಘಗಳ ಒಕ್ಕೂಟ(ರಿ.) ದ ಅಧ್ಯಕ್ಷರಾದ ಶ್ರೀ ಐಕಳ ಹರೀಶ್ ಶೆಟ್ಟಿ ರವರು ವಿನಂತಿಸಿದರು
ಮಂಗಳೂರು ಡಾ. ಮಾಲತಿ ಶೆಟ್ಟಿ ಮಾಣೂರ್ ಸಾರಥ್ಯದ ಸಾಹಿತ್ಯಪರ ಅಮೃತ ಪ್ರಕಾಶ ಪತ್ರಿಕೆ ವತಿಯಿಂದ ನಡೆಯುವ ೪೨ನೇ ಯ ಸರಣಿ ಕೃತಿ ಕೊಡಗಿನ ಚಿತ್ರ ಶಿಲ್ಪ ಕಲಾವಿದ ಮತ್ತು ಲೇಖಕ ದುಬಾಯಿಯ ಬಗ್ಗೆ ಪ್ರಕಟಿತ ಲೇಖನಗಳ ಸಂಕಲನ “ಕಡಲಾಚೆಯ ರಮ್ಯ ನೋಟ ದುಬಾಯಿ” ಕೃತಿ ಮಂಗಳೂರು ಪತ್ರಿಕಾ ಭವನದಲ್ಲಿ ೨೦೨೫ನೇ ಮಾರ್ಚ್ ೪ನೇ ತಾರೀಕು ಮಂಗಳವಾರ ೧೧.೦೦ ಗಂಟೆಗೆ ನಡೆದ ಬಿಡುಗಡೆ ಸಮಾರಂಭದಲ್ಲಿ ಬಿಡುಗಡೆಯಾಯಿತು. ಪ್ರಾರಂಭದಲ್ಲಿ ಅಮೃತ ಪ್ರಕಾಶ ಪತ್ರಿಕೆಯ ಸಂಪಾದಕಿ ಡಾ. ಮಾಲತಿ ಶೆಟ್ಟಿ ಮಾಣೂರು ಸರ್ವರನ್ನು ಸ್ವಾಗತಿಸಿ, ಪ್ರಸ್ತಾವಿಕ ಭಾಷಣದಲ್ಲಿ ಕೃತಿಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡಿದರು. ಯು.ಎ.ಇ. ಬಂಟ್ಸ್ ಅಧ್ಯಕ್ಷರಾದ ಶ್ರೀ ವಕ್ವಾಡಿ ಪ್ರವೀಣ್ ಶೆಟ್ಟಿಯವರು ಲೋಕಾರ್ಪಣೆ ಮಾಡಿದರು. ದುಬಾಯಿಯಲ್ಲಿ ಕನ್ನಡ ಪುಸ್ತಕವನ್ನು ತನ್ನದೇ ಆದ ಶೈಲಿಯಲ್ಲಿ ರಚಿಸಿ ದುಬಾಯಿಯಲ್ಲಿರುವ ವಾಸ್ತು ಶಿಲ್ಪಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹಾಗೂ ಅತ್ಯಂತ ಸುಂದರವಾದ ವರ್ಣ ಚಿತ್ರದೊಂದಿಗೆ ಓದುಗರಿಗೆ ಮುಟ್ಟಿಸುವಲ್ಲಿ ಕೃತಿ ಯಶಸ್ವಿಯಾಗಿದೆ. ಎಂದು ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಚಿತ್ರ…
ಮಂಗಳೂರು : ನಾಟಕ ರಂಗದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸುವ ಪ್ರಯತ್ನದಲ್ಲಿ, ಮಂಗಳೂರಿನ ಸಾಯಿಶಕ್ತಿ ಕಲಾಬಳಗ ಈಗಾಗಲೇ ಸಾಕಷ್ಟು ಹೆಸರನ್ನು ಹುಟ್ಟುಹಾಕಿದೆ. ಈ ತಂಡ ಇದೀಗ ಒಂದೇ ದಿನ ಮೂರು ರಾಜ್ಯಗಳಲ್ಲಿ ನಾಟಕ ಪ್ರದರ್ಶಿಸುವ ಮೂಲಕ ಹೊಸ ದಾಖಲೆ ಬರೆಯಲು ಮುಂದಾಗಿದೆ. ಇದು ನಾಟಕ ಕ್ಷೇತ್ರದಲ್ಲಿ ಅಪೂರ್ವ ಪ್ರಯತ್ನವಾಗಿದ್ದು , ನಾಟಕದ ಪ್ರಭಾವವನ್ನು ವಿಸ್ತರಿಸುವ ಮಹತ್ವಾಕಾಂಕ್ಷಿ ಯೋಜನೆ ಎಂದು ಪರಿಗಣಿಸಲಾಗಿದೆ. ಈ ವಿಶಿಷ್ಟ ಪ್ರಯತ್ನದ ಅಂಗವಾಗಿ, ತಂಡದ ಕಲಾವಿದರು ಕರ್ನಾಟಕ, ಕೇರಳ , ಮತ್ತು ಮುಂಬೈ ಮಹಾನಗರಿಯಲ್ಲಿ ಒಂದೇ ದಿನ ನಾಟಕ ಪ್ರದರ್ಶನ ನಡೆಸಲಿದ್ದಾರೆ. ತಂಡವು ಈ ಯೋಜನೆಯನ್ನು ಯಶಸ್ವಿಯಾಗಿ ನಿರ್ವಹಿಸಲು ಸಾಕಷ್ಟು ಸಿದ್ಧತೆಗಳನ್ನು ನಡೆಸುತ್ತಿದ್ದು, ತಂತ್ರಜ್ಞಾನ ಮತ್ತು ಕ್ರಿಯಾತ್ಮಕತೆಯ ಸಹಾಯದಿಂದ ಈ ಮಹತ್ವಾಕಾಂಕ್ಷಿ ಪ್ರಯತ್ನವನ್ನು ತಲುಪಲು ಮುಂದಾಗಿದೆ. ಸಾಯಿಶಕ್ತಿ ಕಲಾಬಳಗ ಕಳೆದ ಕೆಲವು ವರ್ಷಗಳಿಂದ ನಾಟಕ ರಂಗದಲ್ಲಿ ಕ್ರಿಯಾಶೀಲವಾಗಿದ್ದು, ಪೌರಾಣಿಕ ನಾಟಕಗಳನ್ನು ಪ್ರೇಕ್ಷಕರಿಗೆ ಪರಿಚಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಈ ತಂಡವು ಸಾಮಾಜಿಕ, ಸಾಂಸ್ಕೃತಿಕ ಹಾಗೂ ಇತಿಹಾಸಾತ್ಮಕ ಕಥಾಹಂದರವನ್ನು ಒಳಗೊಂಡ ನಾಟಕಗಳನ್ನು…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
