ಉಳ್ಳಾಲ : ದೇವಸ್ಥಾನಗಳಂತೆ ಮಠಗಳೂ ಹೆಚ್ಚಾಗಿ ನಿರ್ಮಾಣವಾಗಬೇಕಿವೆ. ಆ ಮೂಲಕ ದುಷ್ಟ ಶಕ್ತಿಗಳು ದೂರವಾಗಿ ದೇವತಾ ಶಕ್ತಿಗಳು ಮಠಗಳಲ್ಲೂ ನೆಲೆಗೊಳ್ಳುವಂತಾಗಬೇಕು ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಳದ ಅನುವಂಶಿಕ ಅರ್ಚಕ ಶ್ರೀ ಲಕ್ಷ್ಮೀ ನಾರಾಯಣ ಅಸ್ರಣ್ಣ ಹೇಳಿದ್ದಾರೆ.
ಅವರು ಉಳ್ಳಾಲ ತಾ. ಮಾಡೂರು, ಕೊಂಡಾಣ ಮರಿಯಾಣಪಾಲು ಶಿವಗಿರಿಯಲ್ಲಿ ನವ ನಿರ್ಮಾಣಗೊಳ್ಳಲಿರುವ ಈ ಮಠವು ಸನಾತನ ಸಂಸ್ಕೃತಿ ಉಳಿಸಬೇಕು. ಪೂಜ್ಯ ಸ್ವಾಮೀಜಿ ಮಾಡಿರುವ ಮಠದ ನವ ನಿರ್ಮಾಣ ಸಂಕಲ್ಪಕ್ಕೆ ಶಕ್ತಿ ತುಂಬಿಸುವ ಕಾರ್ಯ ನಾವೆಲ್ಲರೂ ಜತೆಗೂಡಿ ನಡೆಸೋಣ ಎಂದರು.

ಅಧ್ಯಕ್ಷತೆ ವಹಿಸಿದ್ದ ಮಾಜಿ ಸಂಸದ ನಳಿನ್ ಕುಮಾರ್ ಕಟೀಲು ಮಾತನಾಡುತ್ತಾ ಕಟೀಲು ಕ್ಷೇತ್ರದ ವರಪ್ರಸಾದದಲ್ಲಿ ನಿರ್ಮಾಣಗೊಂಡ ಮಠ, ಮಂದಿರಗಳು ಜಗತ್ ಪ್ರಸಿದ್ಧವಾಗಿವೆ. ಈ ಪ್ರದೇಶದಲ್ಲಿ ಮಠ ನಿರ್ಮಾಣದ ಕನಸನ್ನು ಸ್ವಾಮೀಜಿಗಳು ಕಂಡಿದ್ದು, ನವ ನಿರ್ಮಾಣಗೊಂಡ ಮಠ ಶಿಕ್ಷಣ, ಆರೋಗ್ಯಕ್ಕೆ ಆದ್ಯತೆ ನೀಡುವ ಶಿವಗಿರಿಯಾಗಿ ಬಳಗಲಿ ಎಂದರು. ಶ್ರೀ ಶಿವ ದುರ್ಗಾಂಭ ಮಠದ ಪರಮ ಪೂಜ್ಯ ಶ್ರೀ ಶಿವಯೋಗಿ ದುರ್ಗಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು.

ಶ್ರೀ ಶಿವ ದುರ್ಗಾಂಭ ಮಠದ ಆಡಳಿತ ಮೊಕ್ತೇಸರರಾದ ಶ್ರೀ ಚಂದ್ರಶೇಖರ್ ಉಚ್ಚಿಲ್, ಯಶವಂತ್ ಆಳ್ವ, ಕೂಡ್ಲು ಸದಾಶಿವ ದೇವಳ ಅರ್ಚಕ ನಾಗೇಂದ್ರ ಭಟ್, ವಿಟ್ಲ ಸೀಮೆಯ ಹೊಸಬೀಡು ಅರಮನೆ ಜನಾರ್ಧನ ಬಳ್ಳಾಲ್, ಚಲನಚಿತ್ರ ನಟರಾದ ಯಶ್ ಶೆಟ್ಟಿ, ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ, ತುಳುನಾಡ ರಕ್ಷಣಾ ವೇದಿಕೆ ಅಧ್ಯಕ್ಷ ಯೋಗೀಶ್ ಶೆಟ್ಟಿ ಜೆಪ್ಪು, ಪೊಲೀಸ್ ವೃತ್ತ ನಿರೀಕ್ಷಕ ಪ್ರಮೋದ್, ಕೋಟೆಕಾರು ವ್ಯವಸಾಯ ಸೇವಾ ಸಹಕಾರಿ ಸಂಘದ ನಿರ್ದೇಶಕ ಉದಯ ಕುಮಾರ್ ಶೆಟ್ಟಿ, ವಕೀಲರಾದ ಉಮೇಶ್ ಶೆಟ್ಟಿ, ಮಾಡೂರು ಶಿರ್ಡಿ ಸಾಯಿಬಾಬಾ ಮಂದಿರ ಆಡಳಿತ ಮೊಕ್ತೇಸರ ಕೆ.ಪಿ. ಸುರೇಶ್, ಬೆಂಗಳೂರಿನ ಉದ್ಯಮಿ ದಯಾನಂದ, ಮುಂಬೈ ಉದ್ಯಮಿ ಜಿತೇಶ್ ಶೆಟ್ಟಿ, ಕೋಟೆಕಾರು ಪ.ಪಂ ಸದಸ್ಯ ನವೀನ್ ಕೊಂಡಾಣ ಮತ್ತಿರರಿದ್ದರು.

ಮಠದ ನವ ನಿರ್ಮಾಣ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ರೈ ಬೋಳಿಯಾರು ಸ್ವಾಗತಿಸಿ, ಶ್ರೇಣಿ ವೇಣಿಗೋಪಾಲ ಭಟ್ ನಿರೂಪಿಸಿ ಆನಂದ ಶೆಟ್ಟಿ ವಂದಿಸಿದರು,
