ಮಂಗಳೂರು : ನಿಜವಾದ ಚರಿತ್ರೆಯಲ್ಲಿ ಶಿವಾಜಿ ಧೀರ ಆಪತ್ಬಾಂದವ ಆದರೆ ಶಾಲಾ ಪುಟಗಳಲ್ಲಿ ಚರಿತ್ರೆಯನ್ನು ತಿರುಚಲಾಗಿದೆ ಎಂಬುದು ಬೇಸರದ ಸಂಗತಿ,ಬ್ರಿಟಿಷರ ಚರಿತ್ರೆ ಹಾಗೂ ಭಾರತೀಯರ ಚರಿತ್ರೆಯ ಪುಸ್ತಕಗಳಿಗೆ ಅಜಗಜಾಂತರ ವ್ಯತ್ಯಾಸವಿದೆ ಪಾಠದಲ್ಲಿ ಶಿವಾಜಿ ಮಹಾರಾಜರು ದಕ್ಷಿಣದ ವರೆಗೆ ಸಾಮ್ರಾಜ್ಯ ವಿಸ್ತರಿಸಲು ಕರಾವಳಿ ಭಾಗಕ್ಕೆ ಆಕ್ರಮಣ ಮಾಡಿದ್ದಾರೆಂದು ಆದರೆ ಆ ಕಾಲದಲ್ಲಿ ಕರಾವಳಿ ಬಾಗ ಅಷ್ಟೊಂದು ಮಟ್ಟದಲ್ಲಿ ಇರಲಿಲ್ಲ ಅದೆಲ್ಲ ಸುಳ್ಳು ಎಂದರು. ಶಿವಾಜಿ ಎಲ್ಲ ಜಾತಿ ಧರ್ಮದ ಜನರನ್ನು ಸಮಾನವಾಗಿ ಕಂಡವರು. ಅವರಿಗೆ ಅವರೇ ಸಾಟಿ. ಶಿವಾಜಿ ಒಬ್ಬ ದರೋಡೆಕೋರ ಅನ್ಯಧರ್ಮದ ದ್ವೇಷಿ ಎಂದೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಬರೆಯುತ್ತಾರೆ. ಇದು ಖಂಡಿತಾ ಸರಿಯಲ್ಲ. ಶಿವಾಜಿಯ ಬಗ್ಗೆ ಅವರ ಸಾಮ್ರಾಜ್ಯ ಮತ್ತು ಆಡಳಿತದ ಬಗ್ಗೆ ಪಟ್ಟಾಭಿಷೇಕದ ಬಗ್ಗೆ ನಾಟಕದಲ್ಲಿ ವಾಸ್ತವವನ್ನು ತೆರೆದಿಡುವ ಪ್ರಯತ್ನ ಮಾಡಲಾಗಿದೆ. ಎಲ್ಲರೂ ನಾಟಕ ನೋಡಿ” -ಶಶಿರಾಜ್ ರಾವ್ ಕಾವೂರು ಹೇಳಿದ್ದಾರೆ.
“ಶಿವಾಜಿ ಹಿಂದೂ ಧರ್ಮದ ರಕ್ಷಕ ಆದರೆ ಅನ್ಯಧರ್ಮದ ದ್ವೇಷಿಯಲ್ಲ. ಇತಿಹಾಸವನ್ನು ತಿರುಚಿದವರು ಮಾತ್ರ ಅಪಚಾರ ಮಾಡುತ್ತಿದ್ದಾರೆ ಶಿವಾಜಿಯನ್ನು ಅರಿತವರು ಅವರಂತಹ ಒಬ್ಬ ಒಳ್ಳೆಯ ಸಾಮ್ರಾಟನನ್ನು ಕೊಂಡಾಡುತ್ತಾರೆ. ಶಿವಾಜಿಯ ಸಂಪೂರ್ಣ ಕಥೆ ತಿಳಿದುಕೊಂಡರೆ ಅವರೆಂತಹ ಅನ್ಯಧರ್ಮ ಸಹಿಷ್ಣು ಎನ್ನುವುದು ತಿಳಿಯುತ್ತದೆ. ಶಿವಾಜಿಯ ಬಗ್ಗೆ ತಿಳಿಯದವರು ನಮ್ಮ ಮುಂದಿನ ಚಾರಿತ್ರಿಕ ನಾಟಕ “ಶಿವಾಜಿ”ಯನ್ನು ನೋಡಬೇಕು. ಅವರ ಶಿವಾಜಿ ಬಗೆಗಿನ ಅಭಿಪ್ರಾಯ ಬದಲಾಗುತ್ತದೆ“ ಎಂದು ಹಿರಿಯ ರಂಗಕರ್ಮ, ನಿರ್ದೇಶಕ ವಿಜಯ್ ಕುಮಾರ್ ಕೊಡಿಯಾಲ್ ಬೈಲ್ ಪತ್ರಿಕಾಗೋಷ್ಟಿಯಲ್ಲಿ ಹೇಳಿದರು.
”ಶಿವಾಜಿ ನಾಟಕ ಮಾರ್ಚ್ 6 ರಂದು ಗುರುವಾರ ಕಟೀಲು ಕ್ಷೇತ್ರದಲ್ಲಿ ಪ್ರಥಮ ಪ್ರದರ್ಶನಗೊಳ್ಳಲಿದೆ. ಮಾಚ್೯ 13 ರಂದು ಪುರಭವನದಲ್ಲಿ ಪ್ರದರ್ಶನ ಕಾಣಲಿದೆ. ನಾಟಕದ ಟೈಟಲ್ ಹಾಡು ಕನ್ನಡ ಭಾಷೆಯಲ್ಲಿದ್ದರೆ ತುಳುವಿನಲ್ಲಿ ಸಂಭಾಷಣೆ ಇರಲಿದೆ. ಹಿಂದಿ ಭಾಷೆಯನ್ನು ಕೂಡ ಬಳಕೆ ಮಾಡುವ ಮೂಲಕ ಭಾಷಾ ಸಾಮರಸ್ಯಕ್ಕೆ ಒತ್ತು ನೀಡಲಾಗಿದೆ. ಕಥೆ ರಚನೆಕಾರ ಶಶಿರಾಜ್ ರಾವ್ ಕಾವೂರು ತುಂಬಾ ಕಷ್ಟಪಟ್ಟು ಕಥೆ ರಚಿಸಿದ್ದಾರೆ. ಒಟ್ಟು 3 ಹಾಡುಗಳಿದ್ದು ಖ್ಯಾತ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಸಂಗೀತ ನಿರ್ದೇಶನ ಮಾಡಿದ್ದಾರೆ. ಟೈಟಲ್ ಸಾಂಗ್ ಹೆಸರಾಂತ ಗಾಯಕ ಕೈಲಾಶ್ ಖೇರ್ ಹಾಡಬೇಕಿತ್ತು ಆದರೆ ಅವರು 25 ಲಕ್ಷ ರೂ. ಡಿಮ್ಯಾಂಡ್ ಮಾಡಿದ್ದರಿಂದ ಕೈಬಿಡಬೇಕಾಯಿತು. ಬೇರೆ ಪ್ರಸಿದ್ಧ ಗಾಯಕರಿಂದ ಹಾಡಿಸಲು ಪ್ರಯತ್ನ ಮುಂದುವರಿದಿದೆ“ ಎಂದರು.
”ಪ್ರೀತೇಶ್ ಬಳ್ಳಾಲ್ ಬಾಗ್ ಇತ್ತೀಚಿನ 70 ಶೋಗಳಲ್ಲಿ ಶಿವದೂತೆ ಗುಳಿಗೆ ನಾಟಕದಲ್ಲಿ ಗುಳಿಗನ ಪಾತ್ರಕ್ಕೆ ಬಣ್ಣ ಹಚ್ಚಿದ್ದು ಶಿವಾಜಿ ಪಾತ್ರದಲ್ಲೂ ಅವರೇ ಇರಲಿದ್ದಾರೆ. ಪ್ರಮೋದ್ ಮರವಂತೆ, ಶಶಿರಾಜ್ ಕಾವೂರು ಸಾಹಿತ್ಯ ಬರೆದಿದ್ದಾರೆ. ಶಿವಾಜಿ ಪಾತ್ರಕ್ಕೆ ನಟ ಪೃಥ್ವಿ ಅಂಬರ್ ಕಂಠದಾನ ಮಾಡಿದ್ದರೆ ಗುರು ದಾದಾಜಿ ಪಾತ್ರಕ್ಕೆ ನವೀನ್ ಡಿ ಪಡೀಲ್ ಧ್ವನಿ ನೀಡಿದ್ದಾರೆ. ಪಟ್ಲ ಸತೀಶ್ ಶೆಟ್ಟಿ, ಡಾ ದೇವದಾಸ್ ಕಾಪಿಕಾಡ್ ಹಾಡಿದ್ದು ಹಾಡುಗಳು ಸೊಗಸಾಗಿ ಮೂಡಿಬಂದಿದೆ“ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಮಣಿಕಾಂತ್ ಕದ್ರಿ, ಶಶಿರಾಜ್ ಕಾವೂರು, ಎ ಕೆ ವಿಜಯ್, ಪ್ರೀತೇಶ್ ಬಳ್ಳಾಲ್ ಭಾಗ್ ಉಪಸ್ಥಿತರಿದ್ದರು.
ಕಲಾವಿದರು: ರಮೇಶ್ ಕಲ್ಲಡ್ಕ
ಪ್ರೀತೇಶ್ ಬಳ್ಳಾಲ್ ಭಾಗ್ (ಛತ್ರಪತಿ ಶಿವಾಜಿ ಮಹಾರಾಜರ ಪಾತ್ರ)
ರೂಪಶ್ರೀ ವರ್ಕಾಡಿ
ರಜಿತ್ ಕದ್ರಿ
ನಿತೇಶ್ ಪೂಜಾರಿ ಏಳಿಂಜ , ಜಯರಾಮ ಆಚಾರ್
ವಿಶಾಲ್ರಾಜ್ ಕೋಕಿಲಾ ಯಾದವ ಮಣ್ಣಗುಡ್ಡ
ಸುದರ್ಶನ್ ಬಳ್ಳಾಲ್ಬಾಗ್
ಚಂದ್ರಶೇಖರ್ ಸಿದ್ದಕಟ್ಟೆ ವೀರವಸಂತ್
ರಕ್ಷಿತ್ ಜೋಗಿ
ಸಚಿನ್ ಉಪ್ಪಳ
ಪ್ರಶಾಂತ್ ಮರೋಳಿ
ಪ್ರೀತಮ್ ಎಂ. ಎಸ್.
ರವಿಚಂದ್ರ ಸೋಮೇಶ್ವರ
ಕಮಲಾಕ್ಷ ಪೂಜಾರಿ ಮಾಣಿ
ಕಿಶೋರ್ ಕುಂಪಲ
ಹಿನ್ನೆಲೆಗಾಯನ –
ಯಕ್ಷಧ್ರುವ ಪಟ್ಲ ಸತೀಶ್ ಶೆಟ್ಟಿ
ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್,
ಮಣಿಕಾಂತ್ ಕದ್ರಿ
ರವೀಂದ್ರ ಪ್ರಭು
, ಮೈಮ್ ರಾಮದಾಸ್
ಸಂಗೀತ
ಮಣಿಕಾಂತ್ ಕದ್ರಿ
ಹಿನ್ನೆಲೆ ಸಂಗೀತ
ಎಂ. ಬಿ. ಗುರುರಾಜ್
ಬೊಲ್ಲು
ಪೂರ್ಣೇಶ್ ಬೆಳ್ತಂಗಡಿ
ವರ್ಣಾಲಂಕಾರ
ತಸ್ಮಯ್ ಕೊಡಿಯಾಲ್ ಬೈಲ್
ಕೇಶಾಲಂಕಾರ
ಪುರಂದರ ನಾಗನವಳಚಿಲ್
ವಸ್ತವಿನ್ಯಾಸ
ಮಂಜುನಾಥ್ ಶೆಟ್ಟಿಗಾರ್ ಮುಂಬೈ
ರಂಗವಿನ್ಯಾಸ
ಎ. ಕೆ. ವಿಜಯ್ (ಕೋಕಿಲಾ) ಮತ್ತು ವಿಶಿಷ್ಟ ಕೊಡಿಯಾಲ್ ಬೈಲ್
ಸಹಕಾರ
ಸುನೀ ಮಾಳ ಮತ್ತು ಸನ್ನಿ ಅಂಗಮಾಲಿ
ಚಂದ್ರಶೇಖರ್ ಶಿರ್ವ ಮಟ್ಟಾರ್
ಅಪ್ಪು, ವಿಪಿನ್ ಆರ್ಟ್ಸ್
ತಂಡನಿರ್ವಹಣೆ
ಚಂದ್ರಕುಮಾರ್ ಕೊಡಿಯಾಲ್ ಬೈಲ್,
ರಾಜೇಶ್ ಕುಡ್ಲ
ಸಂಪೂರ್ಣ ಸಹಕಾರ
ಗೀತಾ ಸಾಹಿತ್ಯ
ಪ್ರಮೋದ್ ಮರವಂತೆ
ಶಶಿರಾಜ್ ರಾವ್ ಕಾವೂರು
ಗುರುರಾಜ್ ಎಂ. ಬಿ., ಸಾಯಿರಾಂ ಸ್ಟುಡಿಯೋಸ್
ಕಂಠದಾನ ಕಲಾವಿದರು
ಪ್ರಥ್ವಿ ಅಂಬರ್
ನವೀನ್ ಡಿ. ಪಡೀಲ್
ಗೋಪಿನಾಥ್ ಭಟ್
ಯುವಶೆಟ್ಟಿ ತೋಡಾರ್
ಚೇತನ್ ರೈ ಮಾಣಿ
ಚಂದ್ರಹಾಸ್ ಉಳ್ಳಾಲ್
ನಾಗರಾಜ ವರ್ಕಾಡಿ
ಸುನೀಲ್ ಪರಮಜಲು
ಪ್ರಾರ್ಥನಾ
ಚಿದಾನಂದ ಆದ್ಯಪಾಡಿ
ಸದಾಶಿವ ಅಮೀನ್
ಡಾ. ಪ್ರಿಯಾ ಹರೀಶ್
ನವೀನ್ ಶೆಟ್ಟಿ ಅಳಕೆ
ಮಾಸ್ಟರ್ ಹವೀಶ್ ಆರ್. ಕುಡ್ಲ
ಡಿಸೈನ್
ದೇವಿ ಶೆಟ್ಟಿ
ಮುಂಬಯಿ ಸಂಚಾಲಕ
ಪ್ರಕಾಶ್ ಶೆಟ್ಟಿ ಸುರತ್ಕಲ್
ವಾಹನ ಸಾರಥಿ ಲೋಕೇಶ್, ಕಮಲಾಕ್ಷ ಪೂಜಾರಿ ಮಾಣಿ