Author: Tulunada Surya

ಉಡುಪಿ:ದಿನಾಂಕ 01-06-2025 ರಂದು ಉಡುಪಿ ಅಕ್ಷಯ ಟವರ್ ನಲ್ಲಿ ಹಿರಿಯ ಸಾಹಿತಿ ನಾಟಕಕಾರ ಚಲನಚಿತ್ರ ನಿರ್ದೇಶಕ ನಿರ್ಮಾಪಕ ನಟ ಸುಧಾಕರ್ ಬನ್ನಂಜೆ ಯವರಿಗೆ ಉಡುಪಿ ಜಿಲ್ಲಾ ಘಟಕ ವತಿಯಿಂದಸನ್ಮಾನಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಮಂಡಳಿ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ರವರು ಸುಧಾಕರ್ ಬನ್ನಂಜೆ ರವರ ತುಳು ಭಾಷೆ,ಸಾಹಿತ್ಯ, ನಾಟಕ, ಚಲನಚಿತ್ರ ನೀಡಿದ ಕೊಡುಗೆ ಅಪಾರ ಎಂದರು. ಗಂಟ್ ಕಲ್ವೆರ್ ತುಳು ಚಲನಚಿತ್ರ ತುಳುನಾಡ ರಕ್ಷಣಾ ವೇದಿಕೆ ಕಾರ್ಯಕರ್ತರು ವೀಕ್ಷಿಸಿ ಪ್ರೋತ್ಸಾಹಿಸಲು ವಿನಂತಿಸಿದರು. ಸನ್ಮಾನ ಸ್ವೀಕರಿಸಿ ಸುಧಾಕರ್ ಬನ್ನಂಜೆ ಮಾತನಾಡುತ್ತಾ ತುಳು ಪಂಚ ದ್ರಾವಿಡ ಭಾಷೆಯಲ್ಲಿ ಹಿರಿಯ ಭಾಷೆಯಾಗಿದ್ದು ತಮಿಳು ಭಾಷೆಯು ತುಳು ಭಾಷೆಯಿಂದ ಉಗಮವಾದದ್ದು ಎಂದರು . ತುಳು ಭಾಷೆ ಸಾಹಿತ್ಯ ಮತ್ತು ತುಳುನಾಡಿನ ಸಾಮಾಜಿಕ ಅಭಿವೃದ್ಧಿಗಾಗಿ ಹೋರಾಡುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯವನ್ನು ಕೊಂಡಾಡಿದರು. ಸಭೆಯ ಅಧ್ಯಕ್ಷತೆಯನ್ನು ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ವಹಿಸಿದ್ದರು. ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ…

Read More

ದಿನಾಂಕ 01-06- 2025 ರಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಪದಾಧಿಕಾರಿಗಳ ಸಭೆ ಉಡುಪಿ ಬಸ್ ನಿಲ್ದಾಣ ಬಳಿಯ ಅಕ್ಷಯ ಟವರ್ ನಲ್ಲಿ ನಡೆಯಿತು. ಅಧ್ಯಕ್ಷತೆಯನ್ನು ತುಳುನಾಡು ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ವಹಿಸಿದ್ದರು. ಉದ್ಘಾಟನೆಯನ್ನು ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ನೆರವೇರಿಸಿದರು. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಚಲನಚಿತ್ರ ನಿರ್ದೇಶಕ ಸುಧಾಕರ್ ಬನ್ನಂಜೆ ಆಗಮಿಸಿದರು. ಸುಧಾಕರ್ ಬನ್ನಂಜೆ ಮಾತನಾಡುತ್ತಾ ತುಳು ಪಂಚ ದ್ರಾವಿಡ ಭಾಷೆಯಲ್ಲಿ ಭಾಷೆಯಾಗಿದ್ದು ತಮಿಳು ಭಾಷೆಯು ತುಳು ಭಾಷೆಯಿಂದ ಉಗಮವಾದದ್ದು ಮತ್ತು ತುಳು ಭಾಷೆ ಸಾಹಿತ್ಯ ಮತ್ತು ತುಳುನಾಡಿನ ಸಾಮಾಜಿಕ ಹಿತಾಸಕ್ತಿಗಾಗಿ ಹೋರಾಡುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯವನ್ನು ಕೊಂಡಾಡಿದರು. ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಗಂಟ್ ಕಲ್ವೆರ್ ಚಲನಚಿತ್ರ ನಿರ್ದೇಶಕ ಸುಧಾಕರ್ ಬನ್ನಂಜೆ ರವರನ್ನು ಗೌರವಿಸಿ ಸನ್ಮಾನಿಸಲಾಯಿತು ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ , ಹಿರಿಯ ಉಪಾಧ್ಯಕ್ಷ…

Read More

ಮೂಡುಬಿದಿರೆ: ಶ್ರುತ ಪಂಚಮಿ ಜೈನರ ಪವಿತ್ರ ಹಬ್ಬವಾಗಿದೆ. ಭಗವಂತ ವಾಣಿ ಲಿಖಿತ ರೂಪಕ್ಕೆ ಬಂದ ಪವಿತ್ರ ದಿನವಾಗಿದೆ. ಆಚಾರ್ಯ ಧರಸೇನ ರು ತನ್ನ ಶಿಷ್ಯರಾದ ಭೂತಬಲಿ ಮತ್ತು ಪುಷ್ಪದಂತ ರಿoದ ಪ್ರಥಮ ಬಾರಿ ಗುಜರಾತ್ ಬಳಿ ಯ ಗಿರಿ ನಾರ್ ಸಿದ್ದ ಕ್ಷೇತ್ರ ದಲ್ಲಿ ಲಿಪಿ ಬದ್ದ ಗೊಳಿಸಿ ಅಂಕ ಲೇಶ್ವರ ದಲ್ಲಿ ಪೂರ್ತಿ ಗೊಳಿಸಿ ಪೂಜಿಸಿದ ದಂತಹ ಪವಿತ್ರ ದಿನ,ಷಟ್ ಖ oಡ ಆಗಮ ಪೂರ್ಣಗೊo ಡು ಅದರ ಏಕೈಕ ಟೀಕೆ ಕನ್ನಡ ದ ಪ್ರಸಿದ್ದ ಸಿದ್ದಾoಥ ಗ್ರಂಥ ಧವಲ ತ್ರಯ ಗ್ರಂಥ ರಾಣಿ ರವಿ ದೇವಿ ಯಕ್ಕ ಶುಭ ಚಂದ್ರ ಆಚಾರ್ಯ ರಿಗೆ ಶಾಸ್ತ್ರ ದಾನ ನೀಡಿದದಿನವೂ ಹೌದು ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಸ್ವಾಮೀಜಿ ನುಡಿದರು.ಮೂಡುಬಿದಿರೆ ಜೈನಮಠದ ಭಟ್ಟಾರಕ ಸ್ವಾಮೀಜಿಯವರ ಪಾವನ ಉಪಸ್ಥಿತಿ ನೇತೃತ್ವದಲ್ಲಿ ಶನಿವಾರ ನಡೆದ ಶ್ರುತ ಪಂಚಮಿ ಪ್ರಯುಕ್ತ ಧಾರ್ಮಿಕ ಸಭೆ ಯಲ್ಲಿ ಆಶೀರ್ವಚನ ನೀಡಿದರು. ಶ್ರೀಮತಿ…

Read More

ಮಂಗಳೂರು : ಮಂಗಳೂರಿಗೆ ಹೊಸದಾಗಿ ನೇಮಕಗೊಂಡ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ಅವರು ಕೊಲೆಯಂತಹ ಅಪರಾಧಗಳಲ್ಲಿ ಭಾಗಿಯಾಗಿರುವವರಿಗೆ ಮತ್ತು ಅಂತಹ ಆರೋಪಿಗಳನ್ನು ಬೆಂಬಲಿಸುವ ಅಥವಾ ಆಶ್ರಯ ನೀಡುವ ಯಾರಿಗಾದರೂ ಬಲವಾದ ಎಚ್ಚರಿಕೆ ನೀಡಿದ್ದಾರೆ. “ಇದು ಸ್ಪಷ್ಟವಾಗಿರಲಿ: ಕೊಲೆ ಅಥವಾ ಅಪರಾಧ ಆರೋಪಿಗೆ ಆಶ್ರಯ, ಆಹಾರ, ತಪ್ಪಿಸಿಕೊಳ್ಳಲು ವಾಹನ, ಹಣ ಅಥವಾ ಸಂವಹನ ನಡೆಸಲು ಫೋನ್ ನೀಡುವ ಮೂಲಕ ಸಹಾಯ ಮಾಡುವ ಯಾರನ್ನಾದರೂ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಅಡಿಯಲ್ಲಿ ಆರೋಪಿ ಎಂದು ಪರಿಗಣಿಸಲಾಗುತ್ತದೆ” ಎಂದು ಸುಧೀರ್ ಕುಮಾರ್ ರೆಡ್ಡಿ ಹೇಳಿದ್ದಾರೆ. ಈ ಎಚ್ಚರಿಕೆ ಆರೋಪಿಯ ಸ್ನೇಹಿತರು, ಸಂಬಂಧಿಕರು ಮತ್ತು ಅವರ ಮನೆಯ ಸದಸ್ಯರಿಗೂ ಅನ್ವಯಿಸುತ್ತದೆ ಎಂದು ಅವರು ಒತ್ತಿ ಹೇಳಿದರು. “ಅಪರಾಧಿಯನ್ನು ತಿಳಿದೂ ಬೆಂಬಲಿಸುವುದು ಕಾನೂನಿನಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಅಜ್ಞಾನವು ಒಂದು ಕ್ಷಮಿಸಿರುವುದಿಲ್ಲ” ಎಂದು ಅವರು ಹೇಳಿದರು. “ಯಾರನ್ನಾದರೂ ಬಂಧಿಸಲಾಗಿಲ್ಲ ಎಂದು ನೀವು ಭಾವಿಸಿದರೆ, ನಮ್ಮನ್ನು ಪ್ರಶ್ನಿಸಿ, ನಾವು ತಕ್ಷಣ ಕ್ರಮ ಕೈಗೊಳ್ಳುತ್ತೇವೆ. ಯಾರನ್ನೂ ಬಿಡಲಾಗುವುದಿಲ್ಲ” ಎಂದು ಅವರು ಹೇಳಿದರು

Read More

ಮಂಗಳೂರು : ಸುಧೀರ್ ಕುಮಾರ್ ರೆಡ್ಡಿ ಅವರು ಶುಕ್ರವಾರ ಮೇ 30 ರಂದು ಮಂಗಳೂರಿನ ನಗರಕ್ಕೆ ನೂತನ ಪೊಲೀಸ್ ಆಯುಕ್ತರಾಗಿ ಅಧಿಕಾರ ವಹಿಸಿಕೊಂಡರು. ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಅವರನ್ನು ವರ್ಗಾವಣೆ ಮಾಡಿ ಆರ್ಥಿಕ ಅಪರಾಧಗಳ ಉಪ ನಿರೀಕ್ಷಕ ಜನರಲ್ ಆಗಿ ನೇಮಿಸಲಾಯಿತು. ರಾಜ್ಯ ಸರ್ಕಾರ ಮತ್ತು ಪೊಲೀಸ್ ಪ್ರಧಾನ ಕಚೇರಿಯ ಆದೇಶಗಳನ್ನು ಅನುಸರಿಸಿ, ಇಂದು ಬೆಳಿಗ್ಗೆ, ಡಾ. ಅರುಣ್ ಕೆ, ಐಪಿಎಸ್, ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಗಿ ಅಧಿಕೃತವಾಗಿ ಅಧಿಕಾರ ವಹಿಸಿಕೊಂಡರು. ಸುಧೇರ್ ಕುಮಾರ್ ರೆಡ್ಡಿ ಅವರು ಜೂನ್ 2017 ರಿಂದ ಜನವರಿ 2018 ರವರೆಗೆ ಸ್ವಲ್ಪ ಕಾಲ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಆಗಿ ಸೇವೆ ಸಲ್ಲಿಸಿದರು. ಈ ಅವಧಿಯಲ್ಲಿ ಅವರು ಅಕ್ರಮ ಮರಳು ಮಾಫಿಯಾವನ್ನು ನಿಭಾಯಿಸಿದ್ದರು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕ ಶರತ್ ಮಡಿವಾಳ ಅವರನ್ನು ಜುಲೈ 4, 2017 ರಂದು ಬಿ.ಸಿ. ರಸ್ತೆಯಲ್ಲಿ ನಡೆದ ಕೋಮು…

Read More

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಿನ್ನೆ ರಾತ್ರಿಯಿಂದ ಎಡೆಬಿಡದೆ ಗಾಡವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉಳ್ಳಾಲ ತಾಲೂಕಿನ ಎರಡು ಕಡೆ ಎರಡು ಮನೆಗಳ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಮೋಂಟೆಪದವು ಬಳಿ ಐವರು ಗುಡ್ಡ ಕುಸಿತದಲ್ಲಿ ಸಿಲುಕಿದ್ದು, ಆ ಪೈಕಿ ಒಟ್ಟು ಇಬ್ಬರನ್ನು ಈಗಾಗಲೇ ರಕ್ಷಣೆ ಮಾಡಲಾತ್ತು ಆದರೆ ಆಸ್ಪತ್ರೆಯಲ್ಲಿ ಮಗು ಮೃತಪಟ್ಟಿದೆ. ಮಂಜಾನಾಡಿ ಗ್ರಾಮದ ಮದಪಾಡಿಯ ಮೊಂಟೆಪದವು ಕೋಡಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿತ ಪ್ರಕರಣದಲ್ಲಿ ಒಟ್ಟು ಮೂವರು ಸಾವನ್ನಪ್ಪಿದ್ದಾರೆ. ಮುಂದುವರೆದ ಕಾರ್ಯಾಚರಣೆಯಲ್ಲಿ ತಾಯಿ ಹಾಗೂ ಮಗುವನ್ನು ರಕ್ಷಿಸಿದ್ದರು ಆದರೆ ಮಗು ಆಸ್ಪತ್ರೆಯಲ್ಲಿ ಸಾವನ್ನಪ್ಪಿದೆ . ಅವಶೇಷದಡಿ ಸಿಲುಕಿ ಅಜ್ಜಿ ಪ್ರೇಮ (58) ಆರ್ಯನ್ (3) ರಕ್ಷಣಾ ಕಾರ್ಯಚರಣೆಯ ಬಳಿಕ ಆಸ್ಪತ್ರೆಯಲ್ಲಿ ಮಗು ಆಯುಷ್ (2) ಸಾವು. ಮಗುವಿನ ತಾಯಿ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಿದ್ದು ಮಳೆ ಹಾಗೂ ಇಕ್ಕಟ್ಟಿನ ಜಾಗವಾದ ಹಿನ್ನೆಲೆ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿತ್ತು.ಆದರೆ ರಕ್ಷಣಾ ತಂಡ ಹರಸಾಹಸ ಪಟ್ಟು ಪುಟ್ಟ ಮಗುವನ್ನು ರಕ್ಷಿಸಿದರೂ ಮಗು ಬದುಕುಳಿಯಲಿಲ್ಲ.

Read More

ಮಂಗಳೂರು : ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ವತಿಯಿಂದ ಹಿರಿಯ ನಾಗಸ್ವರ ವಾದಕ ಸೈಯದ್ ನಾಸಿರ್ ಎರ್ಮಾಳ್ ಅವರಿಗೆ ಚಾವಡಿ ತಮ್ಮನದ ಗೌರವ ಸಮರ್ಪಣೆಯ ಕಾರ್ಯಕ್ರಮ ಮೇ 31ರಂದು ಸಂಜೆ 4.30 ಗಂಟೆಗೆ ಪಡುಬಿದ್ರೆಯ ಕನ್ನಂಗಾರ್ ಬ್ರಹ್ಮಬೈದರ್ಕಳ ಗರೋಡಿಯಲ್ಲಿ ನಡೆಯಲಿದೆ.ಈ ಚಾವಡಿ ತಮ್ಮನ ಕಾರ್ಯಕ್ರಮದ ಅಧ್ಯಕ್ಷತೆಯನ್ನು ತುಳು ಅಕಾಡೆಮಿಯ ಅಧ್ಯಕ್ಷರಾದ ತಾರಾನಾಥ್ ಗಟ್ಟಿ ಕಾಪಿಕಾಡ್ ವಹಿಸುವರು. ಪಡುಬಿದ್ರಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶಶಿಕಲಾ ವೈ, ಜಾನಪದ ವಿದ್ವಾಂಸರು ಹಾಗೂ ತುಳು ಅಕಾಡೆಮಿ ಮಾಜಿ ಸದಸ್ಯರಾದ ಡಾ.ವೈ.ಎನ್. ಶೆಟ್ಟಿ , ಕನ್ನಂಗಾರ್ ಬ್ರಹ್ಮಬೈದರ್ಕಳ ಗರೋಡಿಯ ಅಧ್ಯಕ್ಷರಾದ ಶೀನ ಪೂಜಾರಿ , ಪಡುಬಿದ್ರಿ ಗ್ರಾಮ ಪಂಚಾಯತ್ ಸದಸ್ಯರಾದ ರಮೀಝ್ ಹುಸೇನ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ತುಳು ಸಂಸ್ಕ್ರತಿ ಸಂಶೋಧಕರಾದ ನಿತೇಶ್ ಅಂಚನ್ ಅಭಿನಂದನಾ ಭಾಷಣ ಮಾಡುವರು, ಅಕಾಡೆಮಿ ರಿಜಿಸ್ಟ್ರಾರ್ ಪೂರ್ಣಿಮಾ ಹಾಗೂ ಸದಸ್ಯ ಸಂಚಾಲಕ ಉದ್ಯಾವರ ನಾಗೇಶ್ ಕುಮಾರ್ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿರುವರು ಎಂದು ತುಳು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.ಇಂದು 60ನೇ ವರ್ಷಕ್ಕೆ ಪಾದಾರ್ಪಣೆ…

Read More

ಮಂಗಳೂರು ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ರವರ ಜಾಗಕ್ಕೆ ಮಂಗಳೂರು ಪೊಲೀಸ್ ಕಮಿಷನರ್ ಆಗಿ ಸುದೀರ್ ರೆಡ್ಡಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ

Read More

ಉಡುಪಿ : ಉಡುಪಿ ಎಸ್.ಪಿ ಡಾ. ಅರುಣ್ ಕೆ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ಉಡುಪಿ ಜಿಲ್ಲೆಗೆ ನೂತನ ಪೊಲೀಸ್ ವರಿಷ್ಠಾಧಿಕಾರಿಯಾಗಿ ಹರಿರಾಂ ಶಂಕರ್ ಅವರನ್ನು ಸರ್ಕಾರ ನೇಮಿಸಿದೆ.

Read More

ಪಿರ್ಯಾದಿದಾರರು ತನ್ನ ಪರಿಚಯದವರ ಹೆಸರಿನಲ್ಲಿ ಇರುವ ಉಳ್ಳಾಲ ತಾಲೂಕು ಇರಾ ಗ್ರಾಮದ ಸರ್ವೆ ನಂಬ್ರ 279/5 ರಲ್ಲಿ 1.39 ಎಕರೆ ವಿಸ್ತೀರ್ಣದ ಜಮೀನಿನ ಪೈಕಿ 0.35 ಎಕರೆ ಪ್ರದೇಶದಲ್ಲಿ ಮನೆಯನ್ನು ಕಟ್ಟುವ ಉದ್ದೇಶದಿಂದ ಕಟ್ಟಡಕಲ್ಲು ತೆಗೆದು ಸಮತಟ್ಟು ಮಾಡಲು ಅನುಮತಿ ನೀಡಲು ಮಂಗಳೂರಿನ ಗಣಿ ಮತ್ತು ಭೂವಿಜ್ಞಾನ ಇಲಾಖೆ ದಿನಾಂಕ 28/10/2024 ರಂದು ಅರ್ಜಿಯನ್ನು ಸಲ್ಲಿಸಿರುತ್ತಾರೆ. ತಹಶೀಲ್ದಾರ್ ಉಳ್ಳಾಲ ತಾಲೂಕುರವರು ಸಮತಟ್ಟು ಮಾಡುವ ಸಲುವಾಗಿ ಜಮೀನಿನಲ್ಲಿ ಲಭ್ಯವಿರುವ ಕಟ್ಟಡಕಲ್ಲು ತೆಗೆಯಲು ಪ್ರಮಾಣಪತ್ರ/ದೃಢಿಕರಣ ಪತ್ರ ನೀಡಬಹುದಾಗಿದೆ ಎಂಬುದಾಗಿ ದಿನಾಂಕ 21/03/2025ರಂದು ವರದಿ ಸಲ್ಲಿಸಿದ್ದರೂ ಕೂಡ ಗಣಿ ಇಲಾಖೆಯಿಂದ ಅನುಮತಿ ನೀಡಿರುವುದಿಲ್ಲ. ಈ ಬಗ್ಗೆ ಅರ್ಜಿಯ ಬಗ್ಗೆ ವಿಚಾರಿಸಲು ಪಿರ್ಯಾದಿದಾರರು ಮಂಗಳೂರು ಗಣಿ ಇಲಾಖೆ ಕಛೇರಿಗೆ ತೆರಳಿದ್ದು, ಅಲ್ಲಿನ ಉಪನಿರ್ದೇಶಕರಾದ ಕೃಷ್ಣವೇಣಿ ರವರು ಸಿಬ್ಬಂದಿ ಪ್ರದೀಪ್ ಎಂಬವರನ್ನು ಕರೆಯಿಸಿ ಫೈಲಿಗೆ 50,000/- ತಗೊಳ್ಳಿ, ನಂತರ ಸೈನ್ ಮಾಡುವ ಎಂದು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಈ ಬಗ್ಗೆ ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಮಂಗಳೂರು…

Read More