- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಕೋಟೆಕಾರು :ಮಾಡೂರು ಮಾರಿಯಣ್ಣ ಪಾಲ್ ನ ಶ್ರೀ ಶಿವದುರ್ಗಂಭ ಮಠದಲ್ಲಿ ದಿನಾಂಕ 01-03-2026 ರಂದು ಬೆಳಿಗ್ಗೆ 11 ಗಂಟೆಗೆ ಮಠದ ಜೀರ್ಣೋದ್ಧಾರ ಕಾರ್ಯ ನಿಮಿತ್ತ ಭಕ್ತಾದಿಗಳ ಸಹಕಾರದಿಂದ ನಿಧಿ ಸಂಗ್ರಹ ಕಾರ್ಯಕ್ರಮವು ಮಠದ ಅವರಣದಲ್ಲಿ ಸಭಾಂಗಣದಲ್ಲಿ ಭಕ್ತಿಭಾವಪೂರ್ಣವಾಗಿ ನಡೆಯಿತು. ಮಠದ ಅಭಿವೃದ್ಧಿ ಹಾಗೂ ಧಾರ್ಮಿಕ ಪರಂಪರೆಯ ಸಂರಕ್ಷಣೆಯನ್ನು ಉದ್ದೇಶಿಸಿ ಆಯೋಜಿಸಲಾದ ಈ ಕಾರ್ಯಕ್ರಮದಲ್ಲಿ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರಾದ ಸಂತೋಷ್ ಶೆಟ್ಟಿ ಬೋಳಿಯಾರ್ ಅವರು ಸ್ವಾಗತ ಭಾಷಣ ಮಾಡಿದರು. ಮಠದ ಇತಿಹಾಸ, ಅದರ ಸಾಮಾಜಿಕ ಹಾಗೂ ಆಧ್ಯಾತ್ಮಿಕ ಮಹತ್ವವನ್ನು ವಿವರಿಸಿ, ಜೀರ್ಣೋದ್ಧಾರ ಕಾರ್ಯಕ್ಕೆ ಎಲ್ಲರ ಸಹಕಾರ ಅಗತ್ಯವಿದೆ ಎಂದು ಮನವಿ ಮಾಡಿದರು. ಮಠ ಆಡಳಿತ ಮುಕ್ತೇಶರಾದ ಚಂದ್ರಶೇಖರ್ ಉಚ್ಚಿಲ ಅವರು ಮಾತನಾಡಿ, ಮಠವು ಅನೇಕ ವರ್ಷಗಳಿಂದ ಭಕ್ತರಿಗೆ ಆಧ್ಯಾತ್ಮಿಕ ಮಾರ್ಗದರ್ಶನ ನೀಡುತ್ತಿದ್ದು, ಭೌತಿಕ ಸೌಕರ್ಯಗಳ ಅಭಿವೃದ್ಧಿ ಅವಶ್ಯಕತೆಯಾಗಿದೆ ಎಂದರು. ಟ್ರಸ್ಟಿ ಯಶವಂತ ಆಳ್ವ ಅವರು ಮಠದ ಭವಿಷ್ಯ ರೂಪರೇಖೆಯನ್ನು ವಿವರಿಸಿ, ದಾನಿಗಳ ಸಹಕಾರದಿಂದ ಶೀಘ್ರದಲ್ಲೇ ಜೀರ್ಣೋದ್ಧಾರ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸ ವ್ಯಕ್ತಪಡಿಸಿದರು. ಜೀರ್ಣೋದ್ಧಾರ…
ಮೂಡಬಿದ್ರೆ,:ಸಂಕುಚಿತ ಮನೋಭಾವಗಳಿಂದ ಸಮಾಜ ವಿಭಜನೆಯ ಅಂಚಿನತ್ತ ಸಾಗುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಸಮಗ್ರತೆ, ಸಹಭಾಗಿತ್ವ ಮತ್ತು ಧಾರ್ಮಿಕ ಮೌಲ್ಯಗಳ ಅಳವಡಿಕೆ ಅತ್ಯಂತ ಅಗತ್ಯವೆಂದು ಸ್ವಸ್ತಿ ಶ್ರೀ ಭಾರತ ಭೂಷಣ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು. ಅವರು ಮೂಡಬಿದ್ರೆಯ ಶ್ರೀ ಮಹಾವೀರ ಭವನದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲಾ ತೌಳವ ಇಂದ್ರ ಸಮಾಜದ ಆಶ್ರಯದಲ್ಲಿ ನಡೆದ ಇಂದ್ರ ಸಮಾಜದ ವಟುಗಳಿಗೆ ಸಾಮೂಹಿಕ ಉಪನಯನ ಸಂಸ್ಕಾರ ಹಾಗೂ ಜೈನ ಸಮಾಜದ ಮಕ್ಕಳಿಗೆ ವೃತೋಪದೇಶ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿ ಮಾತನಾಡಿದರು. ತೌಳವ ಇಂದ್ರ ಸಮಾಜವು ಯಾವುದೇ ಭೇದಭಾವವಿಲ್ಲದೆ ಜೈನ ಬಾಲಕ–ಬಾಲಕಿಯರನ್ನು ಒಟ್ಟುಗೂಡಿಸಿ ಧರ್ಮಮಾರ್ಗದಲ್ಲಿ ಬದುಕು ರೂಪಿಸಿಕೊಳ್ಳಲು ಪ್ರೇರೇಪಿಸುವ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಸಂಸ್ಕಾರಮೂಲಕ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕಾಗಿದೆ. ಜೈನ ಸಮಾಜದ ಏಳಿಗೆಗೆ ಇದು ಹೊಸ ನಾಂದಿ ಆಗಬೇಕು. ಜೈನ ಸಂಸ್ಕೃತಿ, ಆಚಾರ-ವಿಚಾರಗಳನ್ನು ಉಳಿಸಿ ಬೆಳೆಸಲು ಇಂತಹ ಸಂಘಟಿತ ಪ್ರಯತ್ನಗಳು ಅವಶ್ಯಕವೆಂದು ಶ್ರೀಗಳು ತಿಳಿಸಿದರು. ವಟುಗಳಿಗೆ ಧರ್ಮೋಪದೇಶ ನೀಡಿದ ಅವರು, ಜೈನ ಆಚಾರ್ಯರು ನಿರೂಪಿಸಿದ ನಾಲ್ಕು ಅನುಯೋಗಗಳಲ್ಲಿ…
ಮಂಗಳೂರು: ನಗರದ ಸಹೋದಯ ಹಾಲ್ ನಲ್ಲಿ ಖ್ಯಾತ ಸಾಹಿತಿ ಮತ್ತು ಚಿಂತಕ ಎಂ ಜಿ ಹೆಗಡೆ ಅವರ “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ” ಕೃತಿಯ ಬಿಡುಗಡೆ ಹಾಗೂ “ಗಾಂಧಿಮನೆಯ ಅವಲಕ್ಕಿಸರ” ಪುಸ್ತಕ ಪರಿಚಯ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ನೆರವೇರಿತು. ಸಾಹಿತ್ಯಾಸಕ್ತರು, ಚಿಂತಕರು, ಸಮಾಜಮುಖಿ ಹೋರಾಟಗಾರರು ಹಾಗೂ ಮಾಧ್ಯಮ ಪ್ರತಿನಿಧಿಗಳ ಸಮ್ಮುಖದಲ್ಲಿ ನಡೆದ ಈ ಕಾರ್ಯಕ್ರಮ ಚಿಂತನೆಗೆ ದಾರಿಯಾದ ಒಂದು ಮಹತ್ವದ ವೇದಿಕೆಯಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ನಾಯಕರು ಹಾಗೂ ಮಾಜಿ ಸಚಿವರಾದ ಬಿ. ರಾಮಾನಾಥ್ ರೈ ಅವರು “ಭಾರತ ಮುಸ್ಲಿಂ ರಾಷ್ಟ್ರವಾಗುವುದೇ” ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದರು. ದೇಶದ ಸಂವಿಧಾನಿಕ ಮೌಲ್ಯಗಳು, ಧರ್ಮನಿರಪೇಕ್ಷತೆಯ ಪರಂಪರೆ ಮತ್ತು ಸಮಾನತೆಯ ಆಧಾರಗಳ ಕುರಿತು ತಮ್ಮ ಅಭಿಪ್ರಾಯ ಹಂಚಿಕೊಂಡ ಅವರು, ಲೇಖಕರ ಚಿಂತನೆಗಳು ಸಮಾಜದಲ್ಲಿ ವಿಚಾರಮಂಥನಕ್ಕೆ ಕಾರಣವಾಗುತ್ತವೆ ಎಂದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಾಜಿ ಸಚಿವ ಜಯಪ್ರಕಾಶ್ ಹೆಗಡೆ ಅವರು ಸಾಹಿತ್ಯವು ಸಮಾಜದ ದಿಕ್ಕು ತೋರಿಸುವ ಶಕ್ತಿ ಎಂದು ಹೇಳಿ, ಇಂತಹ ಕೃತಿಗಳು ಕಾಲಪ್ರಜ್ಞೆಯ ಪ್ರಶ್ನೆಗಳನ್ನು ಎತ್ತಿ ಸಮಾಜದಲ್ಲಿ…
ಟೆಹ್ರಾನ್: ಮಧ್ಯಪೂರ್ವದಲ್ಲಿ ಉದ್ವಿಗ್ನತೆ ತೀವ್ರಗೊಳಿಸುವ ಬೆಳವಣಿಗೆಯಲ್ಲಿ, ಇರಾನ್ ಸರ್ವೋಚ್ಚ ನಾಯಕ Ayatollah Ali Khamenei ಅಮೆರಿಕ–ಇಸ್ರೇಲ್ ಜಂಟಿಯಾಗಿ ನಡೆಸಿದ ವೈಮಾನಿಕ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎಂದು ಇರಾನ್ ರಾಜ್ಯ ಮಾಧ್ಯಮ ಅಧಿಕೃತವಾಗಿ ದೃಢಪಡಿಸಿದೆ. ಈ ಕುರಿತು ಅಮೆರಿಕ ಅಧ್ಯಕ್ಷ Donald Trump ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಇರಾನ್ ಮಾಧ್ಯಮವೂ ಹತ್ಯೆಯನ್ನ ದೃಢಪಡಿಸಿದೆ. ಇಸ್ಲಾಮಿಕ್ ಗಣರಾಜ್ಯದ ಮೇಲೆ ನಡೆದ ಈ ದಾಳಿ ಬಳಿಕ ದೇಶಾದ್ಯಂತ 40 ದಿನಗಳ ರಾಷ್ಟ್ರೀಯ ಶೋಕಾಚರಣೆ ಘೋಷಿಸಲಾಗಿದೆ. ಟೆಹ್ರಾನ್ ಸೇರಿದಂತೆ ಹಲವು ನಗರಗಳಲ್ಲಿ ಭದ್ರತಾ ಕ್ರಮಗಳನ್ನು ಕಟ್ಟು ನಿಟ್ಟಾಗಿ ಜಾರಿಗೊಳಿಸಲಾಗಿದೆ. ಕುಟುಂಬ ಸದಸ್ಯರೂ ಬಲಿ? ಇರಾನ್‌ನ ಫಾರ್ಸ್ ನ್ಯೂಸ್ ಏಜೆನ್ಸಿಯ ವರದಿ ಪ್ರಕಾರ, ಖಮೇನಿ ಅವರ ಮಗಳು, ಮೊಮ್ಮಗ ಹಾಗೂ ಅಳಿಯ ಸೇರಿ ನಾಲ್ವರು ಆಪ್ತ ಸಂಬಂಧಿಕರು ಕೂಡ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಆದರೆ ಈ ಕುರಿತು ಸಂಪೂರ್ಣ ವಿವರಗಳನ್ನು ಅಧಿಕಾರಿಗಳು ಇನ್ನೂ ಬಹಿರಂಗಪಡಿಸಿಲ್ಲ. ಟಿವಿ ಘೋಷಣೆಯ ವೇಳೆ ಭಾವುಕ ಕ್ಷಣ ಈ ಸುದ್ದಿ ದೇಶದ ಟಿವಿ ವಾಹಿನಿಗಳಲ್ಲಿ…
Madikeri: ಮದೆನಾಡು ವ್ಯಾಪ್ತಿಯ ಬೆಟ್ಟತ್ತೂರು ಗ್ರಾಮದಲ್ಲಿ ಹೃದಯವಿದ್ರಾವಕ ಘಟನೆ ಸಂಭವಿಸಿದೆ. ಗ್ರಾಮದ ಗಿರೀಶ್ ಅವರ ಪುತ್ರಿ ಪೂಜಾ (17), ಮಡಿಕೇರಿಯ St. Michael’s School ನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದರು. ಸೋಮವಾರ ಸಂಜೆ ಸುಮಾರು 5:30ರ ವೇಳೆಗೆ, ಶಾಲೆಯಿಂದ ಬಸ್ ಮೂಲಕ ಬೆಟ್ಟತ್ತೂರು ತಲುಪಿದ ಪೂಜಾ, ಎಂದಿನಂತೆ ತನ್ನ ಮನೆಯನ್ನು ಕಡೆಗಣಿಸಿ ನಡೆದುಕೊಂಡು ಹೋಗುತ್ತಿದ್ದಾಗ, ಏಕಾಏಕಿ ಕಾಡಾನೆ ದಾಳಿ ನಡೆಸಿದೆ. ಅಚಾನಕ್ ನಡೆದ ಈ ದಾಳಿಯಲ್ಲಿ ಬಾಲಕಿ ತೀವ್ರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ಬಳಿಕ ಸ್ಥಳೀಯರು ಮತ್ತು ಕುಟುಂಬಸ್ಥರು ತಕ್ಷಣ ಸ್ಥಳಕ್ಕೆ ಧಾವಿಸಿದರೂ, ಆ ವೇಳೆಗೆ ಪೂಜಾ ಜೀವ ಕಳೆದುಕೊಂಡಿದ್ದರು. ಮೃತದೇಹವನ್ನು ಮಡಿಕೇರಿಯ ಸರ್ಕಾರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಗ್ರಾಮಸ್ಥರ ಆಕ್ರೋಶ ಘಟನೆಯ ಸುದ್ದಿ ಹರಡುತ್ತಿದ್ದಂತೆಯೇ ಗ್ರಾಮಸ್ಥರು ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮದೆನಾಡು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಾಡಾನೆ, ಚಿರತೆ ಸೇರಿದಂತೆ ಕಾಡುಪ್ರಾಣಿಗಳ ಸಂಚಾರ ಹೆಚ್ಚಾಗಿದೆ ಎಂದು ಅವರು…
(ತುಳುನಾಡ ಸೂರ್ಯ) ಮಂಗಳೂರು: ಭರತನಾಟ್ಯದ ಸಂಪ್ರದಾಯವನ್ನು ಹೊಸ ತಲೆಮಾರಿಗೆ ರವಾನಿಸುವ ಭರವಸೆಯೊಂದಿಗೆ ವಿದುಷಿ ಶ್ರೀಯಾ ರಾವ್ ಸಣ್ಣಯ್ಯ ಅವರ ರಂಗಪ್ರವೇಶ ಸಮಾರಂಭ ರವಿವಾರ ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ವಿಜೃಂಭಣೆಯಿಂದ ನೆರವೇರಿತು.ನೃತ್ಯ ಸುಧಾ ಮಂಗಳೂರು ಸಂಸ್ಥೆಯ ಸ್ಥಾಪಕಿ ಹಾಗೂ ಹಿರಿಯ ನೃತ್ಯಗುರು ವಿದುಷಿ ಸೌಮ್ಯಾ ಸುಧೀಂದ್ರ ರಾವ್ ಅವರ ಪುತ್ರಿ ಮತ್ತು ಶಿಷ್ಯೆ ಆಗಿರುವ ಶ್ರೀಯಾ, ತಮ್ಮ ತಾಯಿಯ ಮಾರ್ಗದರ್ಶನದಲ್ಲಿ ಸಂಪೂರ್ಣ ಸಿದ್ಧತೆಯೊಂದಿಗೆ ರಂಗಪ್ರವೇಶ ಮಾಡಿ ದರು. ಕಾರ್ಯಕ್ರಮದಲ್ಲಿ ಭರತನಾಟ್ಯದ ಸಂಪ್ರದಾಯ ಬದ್ಧ ಪ್ರದರ್ಶನಗಳನ್ನು ಮುಂದಿಟ್ಟುಕೊಂಡು ಅವರು ತಮ್ಮ ಕಲಾಪ್ರತಿಭೆಯನ್ನು ತೋರಿಸಿದರು.ಹಿರಿಯ ನೃತ್ಯಗುರು ನಾಟ್ಯಾಚಾರ್ಯ ಉಳ್ಳಾಲ ಮೋಹನ್ ಕುಮಾರ್ ಅವರು ಮಾತನಾಡಿ, “ಶ್ರೀಯಾ ಕಲೆಯನ್ನೇ ಮೈಗೂಡಿಸಿಕೊಂಡು ಹುಟ್ಟಿದಂತಹ ಕಲಾವಿದೆ. ಸನಾತನ ಭರತನಾಟ್ಯದ ಸಂಪ್ರದಾಯವನ್ನು ಮುಂದುವರೆಸುವ ಶಕ್ತಿ ಮತ್ತು ಭಕ್ತಿ ಅವರಲ್ಲಿದೆ. ರಂಗಪ್ರವೇಶದಲ್ಲಿ ಹಿರಿಯರು ನೀಡಿದ ನೃತ್ಯ ಬಂಧಗಳನ್ನು ಅವರು ಅತ್ಯಂತ ಸುಂದರವಾಗಿ ಉಳಿಸಿಕೊಂಡಿದ್ದಾರೆ” ಎಂದು ಪ್ರಶಂಸಿಸಿದರು.ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅವರು ಶ್ರೀಯಾ ಅವರ ಭವಿಷ್ಯಕ್ಕೆ ಶುಭ ಹಾರೈಸಿ, “ಭರತನಾಟ್ಯ…
ಉಳ್ಳಾಲ ತಾಲೂಕಿನ ಬೆಳ್ಮ ಗ್ರಾಮ ಪಂಚಾಯತ್ ವ್ಯಾಪ್ತಿಯ ವಾಣಿಜ್ಯ ಕಟ್ಟಡಗಳ ತ್ಯಾಜ್ಯ ನೀರು ಹರಿದು ಬಂದು ದೇರಳಕಟ್ಟೆಯ ಕೆ.ಎಸ್. ಹೆಗ್ಡೆ ಆಸ್ಪತ್ರೆ ಸಮೀಪದ ರಿಕ್ಷಾ ಪಾರ್ಕ್ ಬಳಿ ಜಮಾಯಿಸಿರುವ ತ್ಯಾಜ್ಯ ನೀರಿನ ಸಮಸ್ಯೆಯನ್ನು ಖಂಡಿಸಿ, ತುಳುನಾಡ ರಕ್ಷಣಾ ವೇದಿಕೆಯ ಆಟೋ ಘಟಕದ ವತಿಯಿಂದ 28/02/2026 ಶನಿವಾರ ಬೆಳಗ್ಗೆ 10.00 ಗಂಟೆಗೆ ಪ್ರತಿಭಟನಾ ಸಭೆ ಆಯೋಜಿಸಲಾಯಿತು. ಸಭೆಯಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಅವರು ಮಾತನಾಡಿ, ಉಳ್ಳಾಲ ತಾಲೂಕಿನ ದೇರಳಕಟ್ಟೆ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಪ್ರದೇಶವಾಗಿದ್ದು, ಇಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳು ಹಾಗೂ ಅಂತಾರಾಷ್ಟ್ರೀಯ ಮಟ್ಟದ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಷ್ಟೇ ಅಲ್ಲದೆ, ಕರ್ನಾಟಕದ ವಿವಿಧ ಜಿಲ್ಲೆಗಳಿಂದಲೂ ಅನೇಕ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಆಗಮಿಸುತ್ತಿದ್ದಾರೆ. ಇಂತಹ ಮಹತ್ವದ ಕೇಂದ್ರದಲ್ಲಿ, ಆಸ್ಪತ್ರೆ ಪಕ್ಕದಲ್ಲೇ ಇರುವ ಆಟೋ ರಿಕ್ಷಾ ಪಾರ್ಕ್ ಬಳಿ ತ್ಯಾಜ್ಯ ನೀರು ದೀರ್ಘಕಾಲದಿಂದ ನಿಂತು ದುರ್ವಾಸನೆ ಬೀರುತ್ತಿರುವುದು ಅತ್ಯಂತ ಕಳವಳಕಾರಿ ಸಂಗತಿಯಾಗಿದೆ. ಈ…
ದಕ್ಷಿಣ ಭಾರತದ ಸಿನಿರಂಗದಲ್ಲಿ ಬಹುಕಾಲದಿಂದ ಚರ್ಚೆಗೆ ಗ್ರಾಸವಾಗಿದ್ದ ಪ್ರೇಮಕಥೆ ಕೊನೆಗೂ ಮದುವೆಯ ಮಂಟಪದಲ್ಲಿ ಸಾಕಾರವಾಗಿದೆ. ಜನಪ್ರಿಯ ನಟ ವಿಜಯ್ ದೇವರಕೊಂಡ ಹಾಗೂ ನಟಿ ರಶ್ಮಿಕಾ ಮಂದಣ್ಣ ಅವರು ರಾಜಸ್ಥಾನದ ಸುಂದರ ನಗರಿ **ಉದಯಪುರ**ದಲ್ಲಿ ವೈಭವವಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ದೀರ್ಘಕಾಲದಿಂದ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಸಪ್ತಪದಿ ತುಳಿದು ಜೀವನಸಫರ ಆರಂಭಿಸಿದ್ದಾರೆ. ಐಷಾರಾಮಿ ವೇದಿಕೆಯಲ್ಲಿ ಅದ್ದೂರಿ ಸಮಾರಂಭ ಈ ವಿಶೇಷ ಕ್ಷಣಕ್ಕೆ ಸಾಕ್ಷಿಯಾದದ್ದು ಉದಯಪುರದ ಪ್ರಸಿದ್ಧ ಐಷಾರಾಮಿ ರೆಸಾರ್ಟ್ ITC Mementos Udaipur. ಅರಮನೆ ಶೈಲಿಯ ವಿನ್ಯಾಸ, ನೈಸರ್ಗಿಕ ಸೌಂದರ್ಯ ಮತ್ತು ಶಾಂತ ವಾತಾವರಣದ ನಡುವೆ ನಡೆದ ವಿವಾಹ ಸಮಾರಂಭ ಕಣ್ಣಿಗೆ ಹಬ್ಬವಾಯಿತು. ಆಂಧ್ರ ಮತ್ತು ಕೊಡವ ಸಂಪ್ರದಾಯಗಳ ಸಮ್ಮಿಶ್ರಣದಲ್ಲಿ ನಡೆದ ಈ ಮದುವೆ ಸಂಪ್ರದಾಯ ಮತ್ತು ಆಧುನಿಕತೆಯ ಸುಂದರ ಸಂಯೋಜನೆ ಆಗಿತ್ತು. ಭಾವುಕ ಕ್ಷಣಗಳು ವಿಜಯ್ ದೇವರಕೊಂಡ ಹಂಚಿಕೊಂಡಿರುವ ಮದುವೆ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ತಾಳಿಕಟ್ಟುವ ಪವಿತ್ರ ಕ್ಷಣದಲ್ಲಿ ರಶ್ಮಿಕಾ ಮಂದಣ್ಣ…
Kundapura: Udupi ಜಿಲ್ಲೆಯ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕಂಡ್ಲೂರು ಪೇಟೆಯಲ್ಲಿ ನಡೆದ ಘಟನೆಗೆ ಸಂಬಂಧಿಸಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾದ ವಿಡಿಯೋ ಪ್ರಕರಣದಲ್ಲಿ ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ಕಂಡ್ಲೂರು ಪೇಟೆಯ ಕಟಿಂಗ್ ಶಾಪ್‌ನಲ್ಲಿ ಬಿಹಾರ ಮೂಲದ ಕಾನೂನು ಸಂಘರ್ಷಕ್ಕೊಳಗಾದ ಬಾಲಕನೊಬ್ಬ ಹೇಳಿದ ಮಾತುಗಳನ್ನು ಕೆಲವರು ಮೊಬೈಲ್‌ನಲ್ಲಿ ಚಿತ್ರೀಕರಿಸಿ, ಸಾರ್ವಜನಿಕರಲ್ಲಿ ಪ್ರಚೋದನೆ ಉಂಟುಮಾಡುವ ಉದ್ದೇಶದಿಂದ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ ಎಂಬ ದೂರನ್ನು ಬಾಲಕನ ತಂದೆ ನೀಡಿದ್ದರು. ಈ ದೂರಿನ ಮೇರೆಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೇ ವೇಳೆ, ಘಟನೆಯ ಹಿನ್ನೆಲೆಯಲ್ಲಿ ಕಟಿಂಗ್ ಶಾಪ್ ಎದುರು 20-30 ಮಂದಿ ಗುಂಪುಗೂಡಿ ಬೆದರಿಕೆ ಹಾಕಿದ ಬಗ್ಗೆ ಶಾಪ್ ಮಾಲೀಕ ಶಶಾಂಕ ಭಂಡಾರಿ ನೀಡಿದ ದೂರಿನ ಆಧಾರದ ಮೇಲೆ ಮತ್ತೊಂದು ಪ್ರಕರಣವೂ ದಾಖಲಾಗಿದೆ. ಪೊಲೀಸರ ಮಾಹಿತಿ ಪ್ರಕಾರ, ಘಟನೆಗೆ ಸಂಬಂಧಿಸಿ ಈಗಾಗಲೇ 20-30 ಮಂದಿಯನ್ನು ಗುರುತಿಸಲಾಗಿದ್ದು, ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಪ್ರಕ್ರಿಯೆ ಮುಂದುವರಿದಿದೆ. ಪ್ರಕರಣದಲ್ಲಿ ಶಶಾಂಕ…
ಮಂಗಳೂರು: ಸಹಕಾರ ಕ್ಷೇತ್ರದ ಭೀಷ್ಮ, ‘ಸಹಕಾರ ರತ್ನ’ ಎಂದು ಕೀರ್ತಿಸಲ್ಪಡುವ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಅವರ 77ನೇ ಜನ್ಮದಿನದ ಅಂಗವಾಗಿ ಅಭಿವಂದನಾ ಸಮಾರಂಭ ಹಾಗೂ 77 ಮಂದಿ ಫಲಾನುಭವಿಗಳಿಗೆ ಸವಲತ್ತು ವಿತರಣಾ ಕಾರ್ಯಕ್ರಮವು ಪ್ರಧಾನ ಕಚೇರಿಯ ಬ್ಯಾಂಕ್ ಸಭಾಂಗಣದಲ್ಲಿ ಭವ್ಯವಾಗಿ ನೆರವೇರಿತು. ಕಾರ್ಯಕ್ರಮವನ್ನು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು, “ಸಹಕಾರಿ ಕ್ಷೇತ್ರದಲ್ಲಿ ಡಾ. ರಾಜೇಂದ್ರ ಕುಮಾರ್ ಸಾಧಿಸಿರುವುದು ಅಭೂತಪೂರ್ವ. ತಮ್ಮ ಹುಟ್ಟುಹಬ್ಬವನ್ನೇ ಸಮಾಜಮುಖಿ ಕಾರ್ಯಕ್ರಮದ ರೂಪದಲ್ಲಿ ಆಚರಿಸುವುದು ಅವರ ಜನಪರ ಮನೋಭಾವಕ್ಕೆ ಸಾಕ್ಷಿ. ಅವರು ಸಹಕಾರಿ ಪಿತಾಮಹ ಮೊಳಹಳ್ಳಿ ಶಿವರಾಯ ಅವರಿಗೆ ಸರಿಸಮನಾಗಿ ಬೆಳೆಯಲಿ,” ಎಂದು ಹಾರೈಸಿದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಮಾಜಿ ಮುಖ್ಯಮಂತ್ರಿ ಎಂ. ವೀರಪ್ಪ ಮೊಯಿಲಿ ಅಭಿವಂದನಾ ಭಾಷಣದಲ್ಲಿ, “ಡಾ. ರಾಜೇಂದ್ರ ಕುಮಾರ್ ಭಾರತ ಕಂಡ ಸಮರ್ಥ ಸಹಕಾರಿ ನಾಯಕರು. ಕೃಷಿ ಆಧಾರಿತ ಸಮಾಜದಲ್ಲಿ ರೈತರ ಆರ್ಥಿಕ ನ್ಯಾಯಕ್ಕಾಗಿ ಅವರು ನಿರಂತರ ಶ್ರಮಿಸಿದ್ದಾರೆ. ಬ್ಯಾಂಕ್ ಇಂದು ಹಿಮಾಲಯದ ಎತ್ತರಕ್ಕೆ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
