Author: Tulunada Surya

ಮಂಗಳೂರು : ಪಿರ್ಯಾದಿದಾರರ ಅಜ್ಜಿ ಪದ್ಮಾವತಿ ರವರು ಮೃತಪಟ್ಟ ಕಾರಣ ಅವರ ಹೆಸರಿನಲ್ಲಿದ್ದ ಆಸ್ತಿಯ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡುವ ಸಲುವಾಗಿ ಪಿರ್ಯಾದಿದಾರರು ಕಳೆದ ವರ್ಷ ಮುಲ್ಕಿ ತಾಲೂಕು ತಹಶೀಲ್ದಾರ ರವರ ಕಚೇರಿಗೆ ಅರ್ಜಿ ಸಲ್ಲಿಸಿದ್ದು, ಸದರಿ ಅರ್ಜಿಯು ಮುಲ್ಕಿ ಕಂದಾಯ ನಿರೀಕ್ಷಕರ ಕಚೇರಿಗೆ ವಿಚಾರಣೆಗಾಗಿ ಕಳುಹಿಸಿದ್ದು, ಮುಲ್ಕಿ ಕಂದಾಯ ನಿರೀಕ್ಷಕರಾದ ಬಿ.ಎಸ್ ದಿನೇಶ್ ರವರು ಒಂದು ವರ್ಷಕ್ಕಿಂತ ಹೆಚ್ಚು ಕಾಲ ಯಾವುದೇ ಕ್ರಮ ಕೈಗೊಳ್ಳದೇ ಬಾಕಿ ಇರಿಸಿಕೊಂಡಿದ್ದು ಈ ಬಗ್ಗೆ ಪಿಯಾದಿದಾರರು ದಿನಾಂಕ: 19-12-2024 ರಂದು ಅರ್ಜಿಯ ಬಗ್ಗೆ ಕಂದಾಯ ನಿರೀಕ್ಷಕರ ಕಛೇರಿಗೆ ಹೋಗಿ ವಿಚಾರಿಸಲಾಗಿ ಮುಲ್ಕಿ ಕಂದಾಯ ನಿರೀಕ್ಷಕರಾದ ಜಿ.ಎಸ್ ದಿನೇಶ್ ರವರು ಆಸ್ತಿಗೆ ಸಂಬಂಧಿಸಿದ ಪಹಣಿಯಲ್ಲಿ ವಾರಸುದಾರರುಗಳ ಹೆಸರುಗಳನ್ನು ಸೇರ್ಪಡೆ ಮಾಡಲು ರೂ 4 ಲಕ್ಷ ರೂಪಾಯಿ ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಆದರೆ ಕಾನೂನು ಬದ್ಧವಾಗಿ ಮಾಡಬೇಕಾದ ಸರ್ಕಾರಿ ಕೆಲಸಕ್ಕೆ ಲಂಚ ನೀಡಿ ಕೆಲಸ ಮಾಡಿಸಿಕೊಳ್ಳಲು ಇಚ್ಛೆ ಇಲ್ಲದ ಕಾರಣ ಮಂಗಳೂರು ಲೋಕಾಯುಕ್ತ ಪೊಲೀಸ್…

Read More

ದಿನಾಂಕ 18-12-2024 ರಂದು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಉಡುಪಿ ಜಿಲ್ಲಾ ನೂತನ ಅಧ್ಯಕ್ಷರಾಗಿ ನೇಮಕಗೊಂಡ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಪದಗ್ರಹಣ ಸಮಾರಂಭ ನಡೆಯಿತು. ಉದ್ಘಾಟನೆಯನ್ನು ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ದೀಪ ಬೆಳಗಿಸಿ ನೆರವೇರಿಸಿ ಮಾತನಾಡುತ್ತಾ ತುಳುನಾಡ ರಕ್ಷಣಾ ವೇದಿಕೆ ಉತ್ತಮ ವ್ಯಕ್ತಿತ್ವದ ಸಮಾಜಪರ ಕಾಳಜಿ ಹೊಂದಿರುವ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಿದ್ದು ಅವರು ಮುಂದಿನ ದಿನಗಳಲ್ಲಿ ಉಡುಪಿ ಜಿಲ್ಲೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸಂಘಟನೆಯನ್ನು ಸಮರ್ಥವಾಗಿ ಬಲಪಡಿಸಲು ಕೆಲಸ ಮಾಡುತ್ತಾರೆ ಎಂದುನಂಬಿರುತ್ತೇವೆ. ಅವರು ಉಡುಪಿ ಜಿಲ್ಲೆಯ ಕಾರ್ಯಕರ್ತರ ಪದಾಧಿಕಾರಿಗಳನ್ನು ಜೊತೆಯಾಗಿ ಸೇರಿಸಿಕೊಂಡು ಸರ್ವರ ಪ್ರೀತಿಗೆ ಪಾತ್ರರಾಗಿ ಜನರ ಆಶೋತ್ತರಕ್ಕೆ ಸ್ಪಂದಿಸುವರು ಎಂದು ನಂಬಿರುತ್ತೇನೆ. ಅವರಿಗೆ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸುತ್ತಾರೆ ಎಂದು ವಿಶ್ವಾಸದ ಮಾತುಗಳನ್ನಾಡಿ ಅವರಿಗೆ ಉಡುಪಿ ಜಿಲ್ಲಾ ಕಚೇರಿಯ ಬೀಗದ ಗೊಂಚಲು ಮತ್ತು ಸಂಘಟನೆಯ ಪುಸ್ತಕವನ್ನು ನೀಡಿ ಹೂಗುಚ್ಛ ನೀಡಿ ಅಭಿನಂದಿಸಿರುತ್ತಾರೆ. ಹಾಗೂ ಸಭೆಯಲ್ಲಿ…

Read More

ಮಂಗಳೂರಿನಲ್ಲಿ ಉಚ್ಚ ನ್ಯಾಯಲಯದ ಪೀಠ ಸ್ಥಾಪನೆ ಮಾಡುವ ಬಗ್ಗೆ ಹೋರಾಟ ಸಮಿತಿಯ ಸಂಚಾಲಕರರು ಹಾಗೂ ವಿಧಾನ ಪರಿಷತ್ ನ ಸದಸ್ಯರಾದ ಐವನ್ ಡಿ ಸೋಜರವರ ನೇತ್ರತ್ವದಲ್ಲಿ ವಿಧಾನ ಸಭೆ ಯ ಸಭಾದಕ್ಷರಾದ ಯು ಟಿ ಖಾದರ್ ರವರ ಸಮುಕ್ಕದಲ್ಲಿ ಮುಖ್ಯಮಂತ್ರಿಯವರಿಗೆ, ಮಂಗಳೂರು ವಕೀಲರ ಸಂಘ ದ ಪರವಾಗಿ ಮನವಿಯನ್ನು ಸಲ್ಲಿಸಲಾಯಿತು. ಈ ಬಗ್ಗೆ ಸಂಘದ ಅಧ್ಯಕ್ಷರಾದ ಎಚ್ ವಿ ರಾಘವೇಂದ್ರ ಮತ್ತು ಹಿರಿಯ ವಕೀಲರಾದ ಎಂ.ಪಿ ನೊರೂಂನ್ಹ ರವರು ಕರಾವಳಿಯಲ್ಲಿ ಉಚ್ಛ ನ್ಯಾಯಲಯದ ಸಂಚಾರಿ ಪೀಠ ವನ್ನು ಜರೂರಾಗಿ ಸ್ಥಾಪಿಸುವ ಬಗ್ಗೆ ಮನವರಿಕೆ ಮಾಡಿದರು . ಈ ಬಗ್ಗೆ ಮಾನ್ಯ ಮುಖ್ಯಮಂತ್ರಿಗಳು ಮತ್ತು ಕಾನೂನು ಸಚಿವರು ಉಚ್ಚ ನ್ಯಾಯಲಯದ ನ್ಯಾಯಧೀಶರೊಂದಿಗೆ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುದಾಗಿ ತಿಳಿಸಿರುತಾರೆ. ನಿಯೋಗದಲ್ಲಿ ಶಾಸಕರಾದ ವೇದವ್ಯಾಸ್ ಕಾಮತ್, ಭರತ್ ಶೆಟ್ಟಿ, ಕಿಶೋರ್ ಕುಮಾರ್,. ಮಂಜುನಾಥ್ ಭಂಡಾರಿ, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಹಿರಿಯ ವಕೀಲರದ ಮೋನಪ್ಪ ಭಂಡಾರಿ, ಹಾಗೂ ಹಿರಿಯ ವಕೀಲರಾದ ಟಿ.…

Read More

ಮಂಗಳೂರು : ಗ್ರಾಮಸ್ಥರೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದಾಗಲೇ ಮಂಗಳೂರು ಭ್ರಷ್ಟಾಚಾರ ನಿಗ್ರಹ ದಳ ಪೊಲೀಸರಿಗೆ ಸಿಕ್ಕಿ ಬಿದ್ದ ಕಡಬ ತಾಲೂಕಿನ ಐತೂರು ಗ್ರಾಮ ಪಂಚಾಯತ್‌ ಪಿಡಿಒ ಪ್ರೇಮ್‌ ಸಿಂಗ್‌ ಅವರಿಗೆ ಮಂಗಳೂರಿನ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯವು 3 ವರ್ಷಗಳ ಸಾದಾ ಸಜೆ ಹಾಗೂ 50,000 ರೂ. ದಂಡ ವಿಧಿಸಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸಿಬಿ ಡಿವೈಎಸ್‌ಪಿಯಾಗಿದ್ದ ಮಂಜುನಾಥ ಬಿ. ಕವರಿ ಅವರ ಮಾರ್ಗದರ್ಶನದಲ್ಲಿ ಪೊಲೀಸ್‌ ನಿರೀಕ್ಷಕರಾದ ಮೋಹನ್‌ ಕೊಟ್ಟಾರಿ ಮತ್ತು ಯೋಗೀಶ್‌ ತನಿಖಾಧಿಕಾರಿಗಳಾಗಿದ್ದರು. ಪೊಲೀಸ್‌ ನಿರೀಕ್ಷಕ ಶ್ಯಾಮ ಸುಂದರ್‌ ಎಚ್‌.ಎಂ. ಅವರು ಆರೋಪಿಯ ವಿರುದ್ಧ ದೋಷಾರೋಪಣ ಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ರವೀಂದ್ರ ಮುನ್ನಿಪಾಡಿ ಅವರು ಸರಕಾರದ ಪರವಾಗಿ ವಾದ ಮಂಡಿಸಿದ್ದರು.

Read More

ತಮಿಳುನಾಡು ಮೂಲದ 18ನೇ ವರ್ಷದ ಗುಕೇಶ್ ವಿಶ್ವ ಚೆಸ್ ಸಾಮ್ರಾಟದ ಪಟ್ಟಕ್ಕೇರಿದ್ದಾರೆ.ಈ ಗೆಲುವಿನ ಮೂಲಕ ಗುಕೇಶ್, ಚೆಸ್ ಇತಿಹಾಸದಲ್ಲೇ ಅತ್ಯಂತ ಕಿರಿಯ ವಿಶ್ವ ಚಾಂಪಿಯನ್ ಎಂಬ ಖ್ಯಾತಿಗೆ ಪಾತ್ರರಾದರು. ವಿಶ್ವನಾಥ್ ಆನಂದ್ ಬಳಿಕ ಚದುರಂಗದ ಕಿಲಾಡಿ ಆದ 2ನೇ ಭಾರತೀಯ ಎಂಬ ಹೆಗ್ಗಳಿಕೆ ಗುಕೇಶ್??ಗೆ ಸೇರಿದೆ. ಡಿ.ಗುಕೇಶ್.. ಪೂರ್ತಿ ಹೆಸರು ಗುಕೇಶ್ ದೊಮ್ಮರಾಜು. ಮೂಲತಃ ತಮಿಳುನಾಡಿನವರು. ತಮ್ಮ 7ನೇ ವಯಸ್ಸಿಗೆ ಚೆಸ್ ಆಡಲು ಶುರುಮಾಡಿದ ಗುಕೇಶ್, 12ನೇ ವಯಸ್ಸಿಗೆ ಚೆಸ್ ಗ್ರ‍್ಯಾಂಡ್ ಮಾಸ್ಟರ್ ಆಗಿ ದೊಡ್ಡ ಸಾಧನೆ ಮಾಡಿದರು. ಇದೀಗ 18ನೇ ವಯಸ್ಸಿನಲ್ಲಿ ವಿಶ್ವ ಚಾಂಪಿಯನ್‌ಶಿಪ್ ಗೆದ್ದು ದೇಶದ ಕೀರ್ತಿ ಪತಾಕೆ ಹಾರಿಸಿದ್ದಾರೆವಿಶ್ವ ಚಾಂಪಿಯನ್ ಶಿಪ್ ಗೆದ್ದ ಬೆನ್ನಲ್ಲೇ ಗುಕೇಶ್ ಭಾವುಕರಾಗಿದ್ದಾರೆ.. ವಿಶ್ವ ಚಾಂಪಿಯನ್ ಶಿಪ್ ಗೆಲ್ಲುವ ಕನಸು ನನಸಾದ ಬೆನ್ನಲ್ಲೇ ಗುಕೇಶ್ ಭಾವುಕರಾಗಿ ಆನಂದಬಾಷ್ಪ ಸುರಿಸಿದ್ದಾರೆ. ಗುಕೇಶ್ ಚದುರಂಗದಾಟದ ಸಾಮ್ರಾಟನಾಗ್ತಿದ್ದಂತೆ ಅಭಿನಂದನೆಗಳ ಮಹಾಪೂರ ಹರಿದು ಬರುತ್ತಿದೆ. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ಮೋದಿ ಸೇರಿ ಹಲವು ಗಣ್ಯರು ಶುಭ ಕೋರಿದ್ದಾರೆ.…

Read More

ದಿನಾಂಕ 10- 12-2024 ಮಂಗಳವಾರ ಸಂಜೆ 4.23 ರಂದು ಕೇಂದ್ರೀಯ ಕಚೇರಿಯಲ್ಲಿ ನಡೆದ ಕೇಂದ್ರೀಯ ಪ್ರಮುಖರ ಸಭೆಯಲ್ಲಿ ಈ ಕೂಡಲೇ ಜಾರಿಗೆ ಬರುವಂತೆ ಉಡುಪಿ ಜಿಲ್ಲಾ ಅಧ್ಯಕ್ಷರಾಗಿ ಫ್ರ್ಯಾಂಕೀ ಡಿಸೋಜಾ ಕೊಳಲಗಿರಿ ರವರನ್ನು ಮತ್ತು ಉಡುಪಿ ಜಿಲ್ಲಾ ಗೌರವ ಅಧ್ಯಕ್ಷರಾಗಿ ಕೃಷ್ಣಕುಮಾರ್ ರವರನ್ನು ನೇಮಕ ಮಾಡಲಾಗಿದೆ. ನೇಮಕಾತಿ ಪತ್ರ ನನ್ನು ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ನೀಡಿದರು ಉಡುಪಿ ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ ಉಪಸ್ಥಿತರಿದ್ದರು ಎಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಕಚೇರಿ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Read More

ತುಳುನಾಡ ರಕ್ಷಣಾ ವೇದಿಕೆ ಇದರ ನೂತನ ಭೈರಂಪಲ್ಲಿ ಘಟಕ ವನ್ನು ಭೈರಂಪಳ್ಳಿಯಲ್ಲಿ ಉದ್ಘಾಟಿಸುವ ಬಗ್ಗೆ ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲು ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೊಂದಾವಣಿ ದಿನಾಂಕ 08-12-2024 ರಂದು ಬೈರಂಪಲ್ಲಿ ಸಾಂತ್ಯಯರ್ ನಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕರಾದ ಪ್ರಾಂಕಿ ಡಿಸೋಜ ರವರು ಸಂಘಟನೆ ಬಗ್ಗೆ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ನಿತೀನ್ ಶೆಟ್ಟಿ , ಕೃಷ್ಣ ನಂದ್, ಸಂತೋಷ ಶೆಟ್ಟಿ, ಮಂಜುನಾಥ್, ಹರೀಶ್ ಕುಲಾಲ್, ಸುಚೆತನ್, ಹರೀಶ್, ನರಸಿಂಹ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು

Read More

10 ರ ಹರೆಹದ ಸನ್ನಿಧಿ ಕಾಶಕೋಡಿ ಕನ್ನಡ ತುಳು ಅಷ್ಟೇ ಅಲ್ಲದೆ ಮಲಯಲಂ ಇಂಗ್ಲಿಷ್ ಹಿಂದಿ ಹೀಗೆ ಆರುಭಾಷೆಗಳಲ್ಲಿ ಮತದಾನ ಜಾಗೃತಿ ನಡೆಸಿದ್ದು ಉಳಿದಂತೆ ತುಳು ಕನ್ನಡ ಭಾಷೆಗಳಲ್ಲಿ ಆರೋಗ್ಯ ಜಾಗೃತಿ, ಪರಿಸರಸ್ನೇಹಿ ಹಬ್ಬ ಆಚರಣೆ ಕುರಿತಂತೆ ಜಾಗೃತಿ ಮೂಡಿಸಿ ಎಲ್ಲರ ಪ್ರಸಂಶೆಗೆ ಪಾತ್ರಳಾಗಿರುತ್ತಾಳೆ. ಬಾಲಕಿಯವಿನೂತನ ರೀತಿಯಲ್ಲಿ ಪರಿಸರ ಸ್ನೇಹಿ ಗಣಪ. ಸ್ವಚ್ಛತೆಯ ಅಭಿಯಾನ ಹೀಗೆ ಹಲವು ಜಾಗೃತಿಯನ್ನು ಮನೆ ಮನೆಗೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಆರಿವು ಮೂಡಿಸಿದ ಈ ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಗೃಹ ಮಂತ್ರಿ ಡಾ. ಪರಮೇಶ್ವರ್ ಜಿ. ಕೇಂದ್ರ ರೈಲ್ವೆ ಖಾತೆಯ ಸಹಾಯಕ ಸಚಿವರಾದ ಸೋಮಣ್ಣ ಸ್ಕೌಟ್ & ಗೈಡ್ಸ ಸಂಸ್ಥೆಯ ರಾಜ್ಯ ಉಸ್ತುವಾರಿಯಾದ ಪಿ. ಜಿ. ಆರ್ ಸಿಂಧ್ಯಾ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಸಂಸದರಾದ ಬ್ರಿಜೇಶ್ ಚೌಟ ಗೌರವಿಸಿದರು. ಹಾಗೆಯೇ ದಿನಾಂಕ 08-12-2024 ರಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೇಶ್…

Read More

ದೇಶದಲ್ಲಿ ಯುವಕರ ಹೃದಯದ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ, ಪುಣೆಯ 30 ವರ್ಷದ ಕುಸ್ತಿಪಟು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ದುರಂತವಾಗಿ ಸಾವನ್ನಪ್ಪಿದ್ದಾರೆ. ಮೃತ ಕುಸ್ತಿಪಟು ವಿಕ್ರಮ್ ಪರ್ಖಿ ಕುಸ್ತಿ ಲೋಕದಲ್ಲಿ ಚಿರಪರಿಚಿತರಾಗಿದ್ದರು. ಮುಳಶಿ ತಾಲೂಕಿನ ಮಾನದಲ್ಲಿ ವಾಸವಿದ್ದ ಅವರು ಬುಧವಾರ ಬೆಳಗ್ಗೆ ತಾಲೀಮು ನಿಮಿತ್ತ ಮಾನದಲ್ಲಿರುವ ಜಿಮ್‌ಗೆ ತೆರಳಿದ್ದರು ವ್ಯಾಯಾಮ ಮಾಡುವಾಗ, ವಿಕ್ರಮ್ ಪರ್ಖಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್ ಚಿಕಿತ್ಸೆ ಪಡೆಯುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ವಿಕ್ರಮ್ ಪರ್ಖಿ ಅವರು ಮಾಜಿ ಸೈನಿಕ ಶಿವಾಜಿರಾವ್ ಪರ್ಖಿ ಅವರ ಪುತ್ರ ಮತ್ತು ಯುವ ನಾಯಕ ಬಾಬಾಸಾಹೇಬ್ ಪರ್ಖಿ ಅವರ ಸಹೋದರ. ಕಳೆದ ವರ್ಷ ಮಾರ್ಚ್ನಲ್ಲಿ ಪುಣೆಯ ಮಾಮಾಸಾಹೇಬ್ ಮೊಹಲ್ ಕುಸ್ತಿ ಸಂಕುಲ್‌ನಲ್ಲಿ ಮಾರುಂಜಿಯಲ್ಲಿ ತಾಲೀಮು ಮಾಡಿದ ನಂತರ ಕುಸ್ತಿಪಟು ಸ್ವಪ್ನಿಲ್ ಪಡಾಲೆ ಹೃದಯಾಘಾತದಿಂದ ನಿಧನರಾಗಿದ್ದರು

Read More

ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ “ಸ್ವಾಮಿ ದಯಾನಂದ ಸರಸ್ವತಿ”ಯವರ 200ನೇ ವರ್ಷದ ಜನ್ಮ ಶತಾಬ್ದಿ ಅಂಗವಾಗಿ “ಜಿಲ್ಲಾ ಪದಾಧಿಕಾರಿಗಳ ನಾಯಕತ್ವ ಶಿಬಿರ” ಆರ್ಯ ಸಮಾಜ ಸಭಾಂಗಣದಲ್ಲಿ ನಡೆಯಿತು. ಶಿಬಿರವನ್ನು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಇದರ ರಾಜ್ಯ ಉಪಾಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾದ ಲಯನ್ ಚಂದ್ರಹಾಸ ಶೆಟ್ಟಿ, acsa ದ ರಾಜ್ಯಾಧ್ಯಕ್ಷರಾದ ತುಷಾರ್ ಕದ್ರಿ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, acsa ನಾಯಕರಾದ ತನುಷ್ ಎಮ್ ಶೆಟ್ಟಿ , ಜಗತ್ ಎಕ್ಕೂರ್ , ದೀಕ್ಷಿತ್ ಅತ್ತಾವರ್, ಸಿದ್ದಾಂತ ಎಸ್ ಶೆಟ್ಟಿ ,ಅಬೂಬಕರ್ ಸಿದ್ದೀಕ್ , ಅರೆ ಸಮಾಜ ಕಾರ್ಯದರ್ಶಿಗಳಾದ , ಪುರುಷೋತ್ತಮ್ ಆರ್ಯ, ದೀಪಕ್ ಮಂಜೇಶ್ವರ್ ಉಪಸ್ಥಿತರಿದ್ದರು. ಲಯನ್ ಚಂದ್ರಹಾಸ ಶೆಟ್ಟಿ ಅವರು “ವಿದ್ಯಾರ್ಥಿ ಜೀವನ ಮತ್ತು ನಾಯಕತ್ವ “ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ…

Read More