Author: Tulunada Surya

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ದಿನಾಂಕ 31-12-2024 ರಂದು ಬೆಳಗ್ಗೆ 10.30 ಕ್ಕೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಸಾವಿಗೀಡಾದ ಹುತಾತ್ಮ ಸೈನಿಕ ಅನೂಪ್ ಪೂಜಾರಿಯವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಿತು. ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರು ಅನೂಪ್ ಪೂಜಾರಿರವರ ಭಾವಚಿತ್ರಕ್ಕೆ ದೀಪ ಹಚ್ಚಿ ಪುಷ್ಪ ಅರ್ಚನೆ ಮಾಡಿ ಅನೂಪ್ ಪೂಜಾರಿ ರವರ ತ್ಯಾಗ ಬಲಿದಾನ ಬಗ್ಗೆ ಸ್ಮರಿಸಿದರು. ಸಭೆಯಲ್ಲಿ ಕೇಂದ್ರ ಸಂಘಟನೆ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ , ಜಿಲ್ಲಾ ಗೌರವಾಧ್ಯಕ್ಷ ಕೃಷ್ಣ ಕುಮಾರ್, ಜಿಲ್ಲಾ ಉಪಾಧ್ಯಕ್ಷ ಜಯರಾಮ್ ಪೂಜಾರಿ, ಕಾರ್ಮಿಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ , ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್, ಜ್ಯೋತಿ , ಲಕ್ಷ್ಮಿ ಬಾಯಿ , ಅವಿನಾಶ್ ಶೆಟ್ಟಿ, ಮಮತಾ ಮತ್ತಿತರ ಪ್ರಮುಖರು…

Read More

ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ವತಿಯಿಂದ ನಡೆದ ಕಾಡು ಪ್ರಾಣಿಗಳು ಕಾಟ ತಡೆ ಕಟ್ಟುವುದಾಕ್ಕಾಗಿ ಜನ ಜಾಗೃತಿ ಸಭೆ ಇಂದು ವಾಮದಪದವಿನ ಚೆನೈತ್ತೋಡಿ ಗ್ರಾಮದ ಗುರು ನಗರ ಭಜನಾ ಮಂದಿರದಲ್ಲಿ ನಡೆಯಿತು ವೇಣೂರು ಅರಣ್ಯಾಧಿಕಾರಿ ಸುನೀಲ್ ಕುಮಾರ್ ಕೆ.ಎಸ್ ಮಾತಾನಾಡಿ ಚಿರತೆಗಳ ಬಂಧನಕ್ಕೆ ಇಲಾಖೆ ಯಿಂದ ಎಲ್ಲಾ ರೀತಿಯ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು.. ತುಳು ನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ವತಿಯಿಂದ ಅರಣ್ಯಾಧಿಕಾರಿ ಮತ್ತು ಪೋಲಿಸ್ ಅಧಿಕಾರಿ ಗಳಿಗೆ ಮನವಿ ನೀಡಲಾಯಿತು ಈ ಸಂದರ್ಭದಲ್ಲಿ ಪೋಲಿಸ್ ಅಧಿಕಾರಿ ಪುಂಜಾಲಕಟ್ಟೆ ಠಾಣೆ ಹಾಗೂ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು ತುಳುನಾಡ ರಕ್ಷಣಾ ವೇದಿಕೆ ವಾಮದಪದವು ಘಟಕದ ಅಧ್ಯಕ್ಷ ಹರೀಶ್ ಪೂಜಾರಿ ಕುಕ್ಕಿ ಪಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಶೇಖರ ಶೆಟ್ಟಿ ಬಧ್ಯಾರು, ಚೆನೈತ್ತೋಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ವನಿತಾ ನಾಯ್ಕ್, ಚೆನೈತ್ತೋಡಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು. ತುಳುನಾಡ ರಕ್ಷಣಾ ವೇದಿಕೆ ಬಂಟ್ಟಾಳ…

Read More

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ದಿನಾಂಕ 31-12-2024 ರಂದು ಬೆಳಗ್ಗೆ 10.30 ಕ್ಕೆ ತು.ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಘಟಕದ ವತಿಯಿಂದ ದಿನಾಂಕ 31-12-2024 ರಂದು ಬೆಳಗ್ಗೆ 10.30 ಕ್ಕೆ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ಕಚೇರಿಯಲ್ಲಿ ಇತ್ತೀಚೆಗೆ ಸಾವಿಗೀಡಾದ ಹುತಾತ್ಮ ಸೈನಿಕ ಅನೂಪ್ ಪೂಜಾರಿ ಯವರ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ.ಈ ಕಾರ್ಯಕ್ರಮದಲ್ಲಿ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ಭಾಗವಹಿಸಲಿದ್ದು ಮತ್ತು ಜಿಲ್ಲಾ ಘಟಕ ಮತ್ತು ವಿವಿಧ ಘಟಕಗಳ ಅಧ್ಯಕ್ಷ ಮತ್ತು ಪದಾಧಿಕಾರಿಗಳು ಭಾಗವಹಿಸಲಿದ್ದಾರೆ. ಸರ್ವರೂ ಆಗಮಿಸಲು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ ತಿಳಿಸಿದ್ದಾರೆ. ಜಿಲ್ಲೆ

Read More

ಸುರತ್ಕಲ್ : ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡು ಗಾಯಗೊಂಡಿದ್ದ ಮಹಿಳೆಯರು ಸಾವನ್ನಪ್ಪಿದ ಘಟನೆ ಸುರತ್ಕಲ್‌ನ ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿ ನಡೆದಿದೆ. ಡಿ. 18ರಂದು ಮಧ್ಯಾಹ್ನ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡು ಗಾಯಗೊಂಡಿದ್ದ ಪುಷ್ಪಾ ಶೆಟ್ಟಿ(72) ಹಾಗೂ ವಸಂತಿ ಶೆಟ್ಟಿ ಚಿಕಿತ್ಸೆ ಫಲಕಾರಿಯಾಗದೆ ಡಿ.26ಗುರುವಾರ ಮೃತಪಟ್ಟಿದ್ದಾರೆ.ಸುರತ್ಕಲ್‌ನ ತಡಂಬೈಲ್ ವೆಂಕಟರಮಣ ಕಾಲನಿಯಲ್ಲಿರುವ ಮನೆಯಲ್ಲಿ ಸಿಲಿಂಡರ್ ಸೋರಿಕೆಯಿಂದ ಬೆಂಕಿ ಹತ್ತಿಕೊಂಡ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಪುಷ್ಪಾ ಹಾಗೂ ಮನೆ ಯಜಮಾನ ವಾಮನ ಅವರ ಪತ್ನಿ ವಸಂತಿ ಅವರಿಗೆ ಕಳೆದ 9 ದಿನಗಳಿಂದ ಖಾಸಗಿ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಇದೀಗ ಗಂಭೀರ ಗಾಯಗೊಂಡಿದ್ದ ಮಹಿಳೆಯರು ಮೃತಪಟ್ಟಿದ್ದಾರೆ. ವಸಂತಿ ಅವರು ಗ್ಯಾಸ್ ಸೋರಿಕೆಯಾಗಿರುವುದನ್ನು ಗಮನಿಸದೆ ಮಧ್ಯಾಹ್ನ ಅಡುಗೆ ಕೋಣೆಗೆ ಹೋಗಿ ಸ್ಟವ್‌ಗೆ ಬೆಂಕಿ ಹಚ್ಚಿದ್ದರಿಂದ ದೊಡ್ಡ ಮಟ್ಟದ ಸ್ಫೋಟವಾಗಿ ಬೆಂಕಿ ಏಕಾಏಕಿ ವ್ಯಾಪಿಸಿಕೊಂಡಿತ್ತು. ವಸಂತಿ ಅವರು ಸಹಾಯಕ್ಕಾಗಿ ಕೂಗಿದಾಗ ಅವರನ್ನು ರಕ್ಷಿಸಲು ಹೋದ ಪುಷ್ಪಾ ಅವರಿಗೂ ಬೆಂಕಿ ಹೊತ್ತಿಕೊಂಡು ತೀವ್ರ…

Read More

ತುಳುನಾಡಿನಲ್ಲಿ ಜಾತಿ ಮತ ಭಾಷೆ ಭೇದವಿಲ್ಲದೆ ಸರ್ವರನ್ನು ಅನುಗ್ರಹಿಸುವವಳು ಕಟೀಲ ಉಳ್ಳಾಲ್ತಿ ಶ್ರೀ ದುರ್ಗಾಪರಮೇಶ್ವರಿ ತಾಯಿ. ತುಳುನಾಡಿನಲ್ಲಿ ಪಂಗಡ ಬೇದ ಭಾವವಿಲ್ಲದೆ ಒಗ್ಗೂಡಿಸುವ ಮನೋಭಾವದಿಂದ ತುಳುವರ್ಲ್ಡ್ ಫೌಂಡೇಶನ್ ಕಟೀಲಿನ ಈ ಪುಣ್ಯ ನೆಲದಲ್ಲಿ ಪ್ರವರ್ತನ ಆರಂಭಿಸಿರುವುದು ಮಹಾತಾಯಿಯ ಅನುಗ್ರಹ. ನಮ್ಮ ನಡುವೆ ಇರುವ ವಿಭಜನೆಗಳ ಹಿಂದಿರುವ ಕಟ್ಟುಕಥೆಗಳ ಬಗ್ಗೆ ಸಮಗ್ರ ಅಧ್ಯಯನ ನಡೆಯಬೇಕು ಹಾಗೂ ಸತ್ಯ ಅಸತ್ಯಗಳ ಬಗ್ಗೆ ಮನವರಿಕೆ ಮಾಡುವ ಕೆಲಸ ಆಗಬೇಕು ಎಂದು ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಹಾಗೂ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರಾದ ಶ್ರೀ ಶ್ರೀಹರಿನಾರಾಯಣದಾಸ ಅಸ್ರಣ್ಣ ಅವರು ಅಭಿಪ್ರಾಯಪಟ್ಟರು. ಅವರು ಶ್ರೀ ದುರ್ಗಾಪರಮೇಶ್ವರಿ ದೇವಳ ಪ್ರಥಮ ದರ್ಜೆ ಕಾಲೇಜು ಶ್ರೀ ಕ್ಷೇತ್ರ ಕಟೀಲಿನಲ್ಲಿ ತುಳುವರ್ಲ್ಡ್ ಫೌಂಡೇಶನ್ನ ಪ್ರಧಾನ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದರು. ತುಳುವರ್ಲ್ಡ್ ಫೌಂಡೇಶನ್ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಅಬುಧಾಬಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ತುಳುವರಿಗೆ ಪ್ರತ್ಯೇಕ ರಾಜ್ಯ ಸ್ಥಾನಮಾನಗಳು ಯಾವುದು ಇಲ್ಲದಿದ್ದರೂ ತುಳು ಭಾಷೆ ಇಂದಿಗೂ ರಾಜ ಮರ್ಯಾದೆಯಲ್ಲಿ ಇದೆ.…

Read More

ನವದೆಹಲಿ: ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್‌ ಸಿಂಗ್‌ (92) ಅವರು ಇಂದು ದೆಹಲಿಯ ಏಮ್ಸ್‌ ಆಸ್ಪತ್ರೆಯಲ್ಲಿ ನಿಧನರಾದರು.ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಸಿಂಗ್‌ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರಲಾಗಿತ್ತು.ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕಾರಣ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆದರೆ, ರಾತ್ರಿ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದಾರೆ.ಮನಮೋಹನ್ ಸಿಂಗ್ ಅವರು 1991-96ರ ಅವಧಿಯಲ್ಲಿ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ದೇಶದ ಹಣಕಾಸು ಸಚಿವರಾಗಿ ಪ್ರಾಮುಖ್ಯತೆಯನ್ನು ಗಳಿಸಿದರು. ಆರ್ಥಿಕತೆಯನ್ನು ಪರಿವರ್ತಿಸುವ ವ್ಯಾಪಕ ಸುಧಾರಣೆಗಳನ್ನು ತಂದರುಯುಪಿಎಯ ಎರಡು ಅವಧಿಯ ಪ್ರಧಾನಿಯಾಗಿ ಅವರು (2004 ಮತ್ತು 2014) ಸೇವೆ ಸಲ್ಲಿಸಿದರು. ಈ ವರ್ಷದ (2024) ಆರಂಭದ ವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಏಪ್ರಿಲ್‌ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು. ಗಾಂಧಿ ಕುಟುಂಬ ಹೊರತು ಪಡಿಸಿ ಕಾಂಗ್ರೆಸ್‌ನಲ್ಲಿ ಹೆಚ್ಚು ಅವಧಿಯ ಪ್ರಧಾನಿ ಆಗಿದ್ದ ಹೆಗ್ಗಳಿಕೆ ಇವರದ್ದು.

Read More

ಮಂಗಳೂರು : ಕಳೆದ 7 ವರ್ಷಗಳಿಂದ ಮಂಗಳೂರಿನ ಗೋಲ್ಡ್ ಫಿಂಚ್ ಸಿಟಿಯಲ್ಲಿ ಎಂ.ಆರ್.ಜಿ. ಗ್ರೂಪ್‌ನ ಚೇರ್ಮನ್ ಡಾ.ಕೆ.ಪ್ರಕಾಶ್ ಶೆಟ್ಟಿಯವರ ಗೌರವ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ಮಂಗಳೂರು ಕಂಬಳವು ಡಿಸೆಂಬರ್ 28ರ ಶನಿವಾರ ಬೆಳಗ್ಗೆ 8.30ಕ್ಕೆ ಪ್ರಾರಂಭಗೊಂಡು ಅದೇ ದಿನ ಸಂಜೆ 6.00ಕ್ಕೆ ಸಭಾ ಕಾರ್ಯಕ್ರಮ ಹಾಗೂ ಮರುದಿನ ಡಿಸೆಂಬರ್ 29ರ ಭಾನುವಾರ ಬೆಳಗ್ಗೆ 08.00ಕ್ಕೆ ಬಹುಮಾನ ವಿತರಣಾ ಸಮಾರಂಭದ ಮೂಲಕ ಸಂಪನ್ನಗೊಳ್ಳಲಿದೆ“ ಎಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದರು. ”ಎಳೆ ಮನಸ್ಸುಗಳನ್ನು ನಮ್ಮ ಈ ಆಚರಣೆಯ ಭಾಗವಾಗಿಸುವ ಸದುದ್ದೇಶದಿಂದ ‘ಕಲರ್ ಕೂಟ’ ಚಿತ್ರಕಲೆ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ಮೂರು ವಿಭಾಗಗಳಲ್ಲಿ 6 ವರ್ಷ ಮೇಲ್ಪಟ್ಟ ಮಕ್ಕಳಿಂದ ಎಲ್ಲರೂ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಬಹುದು. ಭಾಗವಹಿಸಿದ ಎಲ್ಲರಿಗೂ ನೆನಪಿನ ಕಾಣಿಕೆ ಹಾಗೂ ಆಕರ್ಷಕ ಬಹುಮಾನಗಳನ್ನು ನೀಡಿ ಗೌರವಿಸಲಾಗುತ್ತದೆ. ನಮ್ಮ ಕಂಬಳದ ಅನುಭವವನ್ನು ಪುಟ್ಟ ಹಾಗೂ ಯುವ ಪ್ರತಿಭೆಗಳು ತಮ್ಮ ಕುಂಚದಿಂದ ತಮ್ಮ ಹಾಳೆ ಹಾಗೂ ಮನಸ್ಸುಗಳಲ್ಲಿ ಸೃಷ್ಟಿಸಿ ಈ…

Read More

ಹೊಸದಿಲ್ಲಿ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಮೆಂಧಾರ್ ನ ಬಲ್ನೋಯಿ ಪ್ರದೇಶದಲ್ಲಿ ಸೇನಾ ವಾಹನವೊಂದು ಕಮರಿಗೆ ಉರುಳಿದ ಪರಿಣಾಮ ಐವರು ಯೋಧರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮಂಗಳವಾರ ಸಂಜೆ 5:30ಕ್ಕೆ 300 ಅಡಿ ಕಂದಕಕ್ಕೆ ಸೇನಾ ವಾಹನ ಬಿದ್ದು ಮರಾಠಾ ರೆಜಿಮೆಂಟ್‌ನ (Maratha Light Infantry) ಐವರು ಮೃತಪಟ್ಟಿದ್ದರು. ಐವರು ಪೈಕಿ ಮೂವರು ಕರ್ನಾಟಕದವರಾಗಿದ್ದಾರೆ.ಬೆಳಗಾವಿ ಪಂತ ಬಾಳೇಕುಂದ್ರಿ ದಯಾನಂದ ತಿರಕನ್ನವರ್, ಮುಧೋಳದ ಮಹಾಲಿಂಗಪುರದ ಮಹೇಶ್ ಮರಿಗೊಂಡ, ಕುಂದಾಪುರ ಬೀಜಾಡಿಯ ಅನುಪ್‌ ಮೃತರಾಗಿದ್ದಾರೆ. ಸೈನಿಕರು ಮೃತಪಟ್ಟ ಬಗ್ಗೆ ಭಾರತೀಯ ಸೇನೆ ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದೆ. ಅನೂಪ್ ಕುಟುಂಬಕ್ಕೆ ಸೇನಾಧಿಕಾರಿಗಳಿಂದ ಮಾಹಿತಿ ಲಭ್ಯವಾಗಿದೆ. ಕಳೆದ 13 ವರ್ಷಗಳಿಂದ ಅನೂಪ್ ಸೇನೆಯಲ್ಲಿದ್ದು 2 ವರ್ಷದ ಹಿಂದೆ ವಿವಾಹವಾಗಿತ್ತು. ದಂಪತಿಗೆ 1 ವರ್ಷದ ಮಗುವಿದೆ. ಜಿಲ್ಲಾಡಳಿತ, ಜಿಲ್ಲಾ ಪೊಲೀಸರಿಗೂ ಸೇನೆಯಿಂದ ಮಾಹಿತಿ ಕಳುಹಿಸಲಾಗಿದೆ. ಮಹೇಶ್ ನಾಗಪ್ಪ ಮಾರಿಗೊಂಡ (25) ರಬಕವಿ ಬನಹಟ್ಟಿ ತಾಲ್ಲೂಕಿನ ಮಹಾಲಿಂಗಪುರ ನಿವಾಸಿಯಾಗಿದ್ದರು. 7 ವರ್ಷಗಳಿಂದ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ…

Read More

ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರಿ ಸಂಚಲನ ಮೂಡಿಸಿದರು. ಚೈನ್ ಲಿಂಕ್ ಮಾದರಿಯ ಆರ್‌ಪಿಸಿ ತನ್ನ ಸಾವಿರಾರು ಗ್ರಾಹಕರಿಗೆ ಪಂಗನಮ ಹಾಕಿ ಕೋಟಿಗಟ್ಟಲೆ ಹಣ ಲಪಟಾಯಿಸಿದೆ ಅನ್ನೋ ಸುದ್ದಿ ಹೊರ ಬಿದ್ದಿದೆ ಇಂದಿನಿಂದ ಮೂರು ದಿನ ಕಾಲ ವಿತ್ ಡ್ರಾ ಮಾಡಲು ಅವಕಾಶ ನೀಡಿದ ಸಂಸ್ಥೆಯು ಪುನಃ ರಿನಿವಲ್ ಹಾಗೂ ಆದರ್ ಸಂಖ್ಯೆ ಕೇಳುತ್ತಿದ್ದು ಗ್ರಾಹಕರಲ್ಲಿ ಆತಂಕ ಮೂಡಿಸಿದೆ ರ್‌ಪಿಸಿ ಡಿಸೆಂಬರ್ ತಿಂಗಳಿಗೆ ಅಂತ್ಯವಾಗಲಿದೆ ಎಂದು ಈ ಹಿಂದೆ ಕೆಲವರು ಎಚ್ಚರಿಕೆ ನೀಡಿದ್ದರು ಇತ್ತೀಚಿನ ದಿನಗಳಲ್ಲಿ ಸೈಬರ್ ಖದೀಮರು ಕೂಡ ಇಂಥ ಚೈನ್ ಲಿಂಕ್ ಮಾದರಿಯ ಗ್ಯಾಮ್ಲಿಂಗ್ ಬಳಸುತ್ತಿದ್ದಾರೆ ಆರ್‌ಪಿಸಿ ಕೂಡ ಅಂತದೇ ಮಾದರಿ ಅನುಸರಿಸುತಿದ್ದೆಯಾ ಅನ್ನೋ ಶಂಕೆ ಗ್ರಾಹಕರಿಗೆ ಶುರುವಾಗಿದೆ ಗ್ರಾಹಕರು ಜಿಲ್ಲೆಯ ಸಾವಿರಾರು ಮಂದಿ ಜನರು ಆರ್‌ಪಿಸಿಯಲ್ಲಿ ಹಣ ಹೂಡಿಕೆ ಮಾಡಿದ್ದರು ಆರಂಭದಲ್ಲಿ ಕೆಲವು ಗ್ರಾಹಕರಿಗೆ ತಮ್ಮ ಹೂಡಿಕೆ ಹಣಕ್ಕಿಂತ ಡಬಲ್ ಮೊತ್ತ ನೀಡಿತ್ತು ಉಳಿದಂತೆ ಬೇರೆ ಗ್ರಾಹಕರಿಗೆ ಹಿಂದಿನಿಂದ ಮೂರು ದಿನ ಕಾಲ ಅವಕಾಶ ನೀಡಿದ ಆರ್‌ಪಿಸಿ…

Read More

ಡಿಸೆಂಬರ್ 30, ಕಾಡು ಪ್ರಾಣಿಗಳ ಕಾಟ ತಡೆಗಟ್ಟುದ್ದಕ್ಕಾಗಿ ತುಳುನಾಡ ರಕ್ಷಣಾ ವೇದಿಕೆ ಸಹಭಾಗಿತ್ವದಲ್ಲಿ ಜನಜಾಗೃತಿ ಸಭೆ ನಡೆಯಲಿದೆ . ಚೆನೈತ್ತೋಡಿ,ಎಲಿಯನಡು ಗೋಡು, ಅಜ್ಜಿ ಬೆಟ್ಟು ಗ್ರಾಮಗಳಲ್ಲಿ ಕಳೆದ ಒಂದು ತಿಂಗಳಿನಿಂದ ಹಲವು ಚಿರತೆಗಳು ರಾತ್ರಿ ಹೊತ್ತಿನಲ್ಲಿ ಜನಸಂದನಿ ಇರುವ ಪ್ರದೇಶಗಳಲ್ಲಿ ಸಂಚರಿಸುತ್ತಿದ್ದು ಸಾಕು ಪ್ರಾಣಿಗಳನ್ನು ತಿನ್ನುತ್ತಿರುವ ಘಟನೆಗಳು ನಡೆದಿವೆ ಈ ಪರಿಸ್ಥಿತಿಯಿಂದ ಗ್ರಾಮಸ್ಥರು ಭಯಭೀತರಾಗಿದ್ದಾರೆ ಅರಣ್ಯ ಇಲಾಖೆ ಯವರು ತಕ್ಷಣವೇ ಕ್ರಮ ಕೈಗೊಂಡು ಈ ಚಿರತೆಗಳನ್ನು ಹಿಡಿದುಕೊಂಡು ಹೋಗುವಂತೆ ಮನವಿ ಮಾಡಲು ತುಳುನಾಡ ರಕ್ಷಣಾ ವೇದಿಕೆ ವೇದಿಕೆಯ ಸಹಭಾಗಿತ್ವದಲ್ಲಿ. ನಿತ್ಯಾನಂದ ಮುಖ್ಯಪ್ರಾಣ ಭಜನಾ ಮಂದಿರದ ಎದುರುಗಡೆ ಗುರುನಗರ ಚೆನೈತ್ತೋಡಿ ಗ್ರಾಮ ದಲ್ಲಿ ದಿನಾಂಕ 30-12-2024 ರಂದು 9,30 ಕ್ಕೆ ಸಭೆ ಸೇರಲು ನಿರ್ಧಾರಿಸಲಾಗಿದೆ ಈ ಸಭೆಗೆ ಗ್ರಾಮಸ್ಥರ ಒಗ್ಗಟ್ಟಿನ ಅಗತ್ಯವಿದೆ ಕಾರ್ಯಕ್ರಮದಲ್ಲಿ ತುಳುನಾಡ ರಕ್ಷಣಾ ವೇದಿಕೆ ವಾಮದ ಪದವು ಘಟಕ ಪ್ರಮುಖರು ಹಾಗೂ ಸುನಿಲ್ ಕುಮಾರ್ ಕೆಎಸ್ ಉಪ ವಲಯ ಅರಣ್ಯ ಅಧಿಕಾರಿ ವೇಣೂರು ಭಾಗವಹಿಸಲಿರುವರು ಸರ್ವರೂ ಭಾಗವಹಿಸುವಂತೆ ತುಳುನಾಡ ರಕ್ಷಣಾ…

Read More