ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ “ಸ್ವಾಮಿ ದಯಾನಂದ ಸರಸ್ವತಿ”ಯವರ 200ನೇ ವರ್ಷದ ಜನ್ಮ ಶತಾಬ್ದಿ ಅಂಗವಾಗಿ “ಜಿಲ್ಲಾ ಪದಾಧಿಕಾರಿಗಳ ನಾಯಕತ್ವ ಶಿಬಿರ” ಆರ್ಯ ಸಮಾಜ ಸಭಾಂಗಣದಲ್ಲಿ ನಡೆಯಿತು. ಶಿಬಿರವನ್ನು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಇದರ ರಾಜ್ಯ ಉಪಾಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ನೆರವೇರಿಸಿದರು.
ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾದ ಲಯನ್ ಚಂದ್ರಹಾಸ ಶೆಟ್ಟಿ, acsa ದ ರಾಜ್ಯಾಧ್ಯಕ್ಷರಾದ ತುಷಾರ್ ಕದ್ರಿ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, acsa ನಾಯಕರಾದ ತನುಷ್ ಎಮ್ ಶೆಟ್ಟಿ , ಜಗತ್ ಎಕ್ಕೂರ್ , ದೀಕ್ಷಿತ್ ಅತ್ತಾವರ್, ಸಿದ್ದಾಂತ ಎಸ್ ಶೆಟ್ಟಿ ,ಅಬೂಬಕರ್ ಸಿದ್ದೀಕ್ , ಅರೆ ಸಮಾಜ ಕಾರ್ಯದರ್ಶಿಗಳಾದ , ಪುರುಷೋತ್ತಮ್ ಆರ್ಯ, ದೀಪಕ್ ಮಂಜೇಶ್ವರ್ ಉಪಸ್ಥಿತರಿದ್ದರು. ಲಯನ್ ಚಂದ್ರಹಾಸ ಶೆಟ್ಟಿ ಅವರು “ವಿದ್ಯಾರ್ಥಿ ಜೀವನ ಮತ್ತು ನಾಯಕತ್ವ “ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ ವಿಚಾರ ಮಂಡಿಸಿದರು.
ನಂತರ ನಡೆದ ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಕ್ಲೀನ್ ಪ್ಲಸ್ ಇದರ ಮಾಲಕರಾದ ಶ್ರೀಮತಿ ಸುನಿತಾ ಡಿಸೋಜಾ ,yenopoya ಮೆಡಿಕಲ್ ಕಾಲೇಜ್ ದೇರಳಕಟ್ಟೆ ಇದರ ಪ್ರಾಧ್ಯಾಪಕರಾದ ಕು/ Roshni ,ಲಯನ್ಸ್ ಜಿಲ್ಲೆ, 317d ಇದರ ವಲಯ ಅಧ್ಯಕ್ಷರಾದ ಚರಣ್ ಆಳ್ವ ,ಭೂ ನ್ಯಾಯ ಮಂಡಳಿ ಸದಸ್ಯರಾದ ಆದಿಲ್ ಅಮೀನ್ ಉಪಸ್ಥಿತರಿದ್ದರು. ಶಿಬಿರದಲ್ಲಿ ಸುಮಾರು 109 ಜನ ವಿದ್ಯಾರ್ಥಿಗಳು ಪ್ರತಿನಿಧಿಗಳಾಗಿ ಭಾಗವಹಿಸಿದರು. ಈ ಶಿಬಿರವನ್ನು acsa ದ ಸಲಹೆಗಾರರಾದ, ವಕೀಲರಾದ ದಿನಕರ್ ಶೆಟ್ಟಿ ಅವರ ನೇತೃತ್ವದಲ್ಲಿ ನಡೆಯಿತು.