Author: Tulunada Surya

ಮಂಗಳೂರು: ಮಂಗಳೂರು ಸಹಕಾರಿ ಬ್ಯಾಂಕ್ ಒಂದರಲ್ಲಿ ಭಾರಿ ಗೋಲ್ಡ್ ಗೋಲ್ಮಾಲ್ ನಡೆದಿದೆ. ಗ್ರಾಹಕರು ತಮ್ಮ ಕಷ್ಟಕ್ಕೆ ಅಡವಿಟ್ಟ ಚಿನ್ನಕ್ಕೆ ಅದೇ ಬ್ಯಾಂಕ್‌ನ ಕ್ಯಾಷಿಯರ್ ಕನ್ನ ಹಾಕಿ ಎಗರಿಸಿದ್ದಾನೆ. ಕದ್ದ ಬಂಗಾರವನ್ನು ಬೇರೊಂದು ಬ್ಯಾಂಕ್‌ನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಹಣ ಸಾಲ ಪಡೆದು ಮಜಾ ಮಾಡಿ, ಈಗ ಸಿಕ್ಕಿಬಿದ್ದಿದ್ದಾನೆ. ಮಂಗಳೂರಿನ ಶಕ್ತಿನಗರದ ಪದುವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಅದೇ ಬ್ಯಾಂಕ್‌ನ ಕ್ಯಾಷಿಯರ್ ಗ್ರಾಹಕರು ಅಡವಿಟ್ಟ ಚಿನ್ನಕ್ಕೆ ಕನ್ನ ಹಾಕಿದ್ದಾನೆ. ಪ್ರೀತೇಶ್ ಕಳೆದ ಕೆಲ ವರ್ಷಗಳಿಂದ ಈ ಬ್ಯಾಂಕ್‌ನಲ್ಲಿ ಕ್ಯಾಷಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಅದರ ಜೊತೆಗೆ ಗ್ರಾಹಕರು ಸಾಲಕ್ಕಾಗಿ ಚಿನ್ನವನ್ನು ಅಡವಿಟ್ಟಾಗ ಅದರ ಜವಾಬ್ದಾರಿಯನ್ನು ನೋಡಿಕೊಳ್ಳುತ್ತಿದ್ದ. ಇತ್ತ ಗ್ರಾಹಕರು ಬ್ಯಾಂಕ್‌ನ ಖಜಾನೆಗೆ ಚಿನ್ನ ಒಪ್ಪಿಸುತ್ತಿದ್ದಂತೆಯೇ ಪ್ರೀತೇಶ್‌ಗೆ ಚಿನ್ನದ ಮೇಲಿನ ವ್ಯಾಮೋಹ ಹೆಚ್ಚಾಗಿದೆ. ಎರಡು ಸಾವಿರಕ್ಕೂ ಅಧಿಕ ಗ್ರಾಹಕರು ಇರುವ ಬ್ಯಾಂಕ್‌ನ ಇಪ್ಪತ್ತಾರು ಗ್ರಾಹಕರ ಚಿನ್ನಕ್ಕೆ ಪ್ರೀತೇಶ್ ಕನ್ನ ಹಾಕಿದ್ದಾನೆ. ಬ್ಯಾಂಕ್‌ನ ದಾಖಲೆಗಳಲ್ಲಿ ಚಿನ್ನಕ್ಕಾಗಿ ಮಾಡಿದ ಲೋನ್‌ಗಳು ಕ್ಲಿಯರ್ ಆಗಿದೆ ಅಂತಾ ನಕಲಿ…

Read More

ತುಳುರಂಗಭೂಮಿಯ ಹೆಸರಾಂತ ನಾಟಕ ಸಂಸ್ಥೆ ಚಾಪರ್ಕ ತಂಡದ 60ನೇ ನಾಟಕದ ಮುಹೂರ್ತ ಇಂದು ಬೆಳಗ್ಗೆ ಶರವು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ನಡೆಯಿತು.ತುಳುರಂಗಭೂಮಿಯಲ್ಲಿ ಹಾಸ್ಯದೊಂದಿಗೆ ಕೌಟುಂಬಿಕ ವಿಚಾರಗಳೊಂದಿಗೆ ಕಳೆದ 3 ಧಶಕಗಳಿಂದ ದೇಶ ವಿದೇಶದ ತುಳು ಕಲಾಭಿಮಾನಿಗಳನ್ನು ರಂಜಿಸುತ್ತಿರುವ ತೆಲಿಕೆದ ಬೊಳ್ಳಿ ಡಾl ದೇವುದಾಸ್ ಕಾಪಿಕಾಡ್ ರವರ ಬತ್ತಳಿಕೆಯಿಂದ ಮೂಡಿಬರುತ್ತಿರುವ ಮತ್ತೊಂದು ಕೌಟುಂಬಿಕ ಹಾಸ್ಯ ನಾಟಕ “ಎನ್ನನೇ ಕಥೆ” ವಿಭಿನ್ನ ಕಥಾ ಹಂದರವನ್ನು ಹೊಂದಿದ್ದು ಈ ಬಾರಿ ಕಲಾಪ್ರೇಕ್ಷಕರನ್ನು ರಂಜಿಸಲು ಸಕಲ ತಯಾರಿಯಲ್ಲಿ ಚಾಪರ್ಕ ತಂಡ ನಿರತವಾಗಿದೆ.ಕಾಪಿಕಾಡ್ ರವರ ದಶಕದ ಹಿಂದಿನ ಕೌಟುಂಬಿಕ ಸೂಪರ್ ಹಿಟ್ ನಾಟಕ “ಇಲ್ಲ ಇಲ್ಲದ ಕಥೆ”, “ಕಥೆ ನನ ಬರೆಯೋಡು” ಸಾಲಿಗೆ “ಎನ್ನನೇ ಕಥೆ” ಸೇರ್ಪಡೆಯಾಗಲಿದೆ ಎನ್ನುವುದು ಕಾಪಿಕಾಡ್ ರವರ ಅಭಿಮಾನಿಗಳ ನಿರೀಕ್ಷೆ.ಎಂದಿನಂತೆ ಕಾಪಿಕಾಡ್ ರ ಬಳಗದಲ್ಲಿ ಹಾಸ್ಯ ದಿಗ್ಗಜರಾದ ಬೋಜರಾಜ್ ವಾಮಂಜೂರು, ಸಾಯಿಕೃಷ್ಷಕುಡ್ಲರ ಜೊತೆ ಸ್ವತ ಕಾಪಿಕಾಡ್ ಕಮಾಲ್ ಮಾಡಲಿದ್ದಾರೆ,ಹಿರಿಯ ಕಲಾವಿದರಾದ ಸದಾಶಿವ ಅಮೀನ್, ತಿಮ್ಮಪ್ಪ ಕುಲಾಲ್, ಸುರೇಶ್ ಕುಲಾಲ್, ಸುಜಾತ ಶಕ್ತಿ ನಗರ, ಶರತ್…

Read More

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಕೈಪಿಡಿಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳವಾರ ಬೆಂಗಳೂರು ವಾರ್ತಾಭವನ ದಲ್ಲಿ ಬಿಡುಗಡೆಗೊಳಿಸಿದರು.ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ದಕ್ಷಿಣ ಕನ್ನಡ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘದ ಸುವರ್ಣ ಸಂಭ್ರಮ ಕಾರ್ಯಕ್ರಮ ಉದ್ಘಾಟನೆಗೆ ಆಹ್ವಾನಿಸಲಾಯಿತು. ಈ ವೇಳೆ ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ಕೆ ವಿ ಪ್ರಭಾಕರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೇಷಾ ಖಾನಮ್,ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರು, ಪ್ರಧಾನ ಕಾರ್ಯದರ್ಶಿ ಲೋಕೇಶ್, ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಉಪಾಧ್ಯಕ್ಷ ಭಾಸ್ಕರ್ ರೈ ಕಟ್ಟ, ಕೋಶಾಧಿಕಾರಿ ಪುಷ್ಪರಾಜ್ ಬಿ ಎನ್, ಕಾರ್ಯಕಾರಿ ಸಮಿತಿ ಸದಸ್ಯ ರಾಜೇಶ್ ದಡ್ಡಂಗಡಿ, ಬೆಂಗಳೂರು ನಗರ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಸೋಮಶೇಖರ್ ಗಾಂಧಿ ಉಪಸ್ಥಿತರಿದ್ದರು.

Read More

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೈದ್ಯರ ಘಟಕ ವತಿಯಿಂದ ದಿನಾಂಕ 01-07-2025 ರಂದು ಮದ್ಯಾಹ್ನ 2 ಗಂಟೆಗೆ ಉಡುಪಿ ಅಕ್ಷಯ ಟವರ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ನಡೆಯಿತು. ಕಾರ್ಯಕ್ರಮ ಉದ್ಘಾಟನೆ ಯನ್ನು ಆಯುಷ್ ಫೆಡರೇಷನ್ ಆಫ್ ಇಂಡಿಯಾ (ಎಎಫ್ಐ) ಉಡುಪಿ ಜಿಲ್ಲಾಧ್ಯಕ್ಷ ಡಾ. ಎನ್. ಟಿ. ಅಂಚನ್. ಇಂಡಿಯನ್ ಮೆಡಿಕಲ್ಅಸೋಸಿಯೇಷನ್ , ಉಡುಪಿ ಜಿಲ್ಲಾಧ್ಯಕ್ಷ ಡಾ. ಸುರೇಶ್ ಶೆಣೈ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಉಡುಪಿ ಜಿಲ್ಲಾಧ್ಯಕ್ಷ ಡಾ ಯು ಬಿ ಶಬರಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು. ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಭಟ್ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿದರು ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ ರವೀಂದ್ರ ಸ್ವಾಗತ ಭಾಷಣ ಗೈದರು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಜಿಲ್ಲಾ ಕಾರ್ಮಿಕ…

Read More

ಸುರತ್ಕಲ್ : ಬಂಟರ ಸಂಘ (ರಿ) ಸುರತ್ಕಲ್ ಇದರ 2025-27 ನೇ ಸಾಲಿನ ನಿರ್ದೇಶಕರ ಸಭೆ ಸುರತ್ಕಲ್ ಬಂಟರ ಭವನದಲ್ಲಿ ನಡೆಯಿತು. ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಧ್ಯಕ್ಷರಾಗಿ ಹಿರಿಯ ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ ಆಯ್ಕೆಗೊಂಡಿದ್ದಾರೆ. ಉಪಾಧ್ಯಕ್ಷರಾಗಿ ಪ್ರವೀಣ್ ಪಿ ಶೆಟ್ಟಿ , ಪ್ರಧಾನ ಕಾರ್ಯದರ್ಶಿಯಾಗಿ ಲೀಲಾಧರ್ ಶೆಟ್ಟಿ ಕಟ್ಲ , ಕೋಶಾಧಿಕಾರಿಯಾಗಿ ರತ್ನಾಕರ ಶೆಟ್ಟಿ ಸುರತ್ಕಲ್,ಸಹಕಾರ್ಯದರ್ಶಿಯಾಗಿ ಮೀರಾ ವಾಣಿ ಶೆಟ್ಟಿ ಕಾಟಿಪಳ್ಳ, ಸಂಘಟನಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಕುಡುಂಬೂರು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ದೇವೇಂದ್ರ ಕೆ ಶೆಟ್ಟಿ ಕ್ರೀಡಾ ಕಾರ್ಯದರ್ಶಿಯಾಗಿ ಪುಷ್ಪರಾಜ್ ಶೆಟ್ಟಿ ಮದ್ಯ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಶ್ರೀಕಾಂತ್ ಶೆಟ್ಟಿ ಕಾಟಿಪಳ್ಳ, ಸುಜೀರ್ ಶೆಟ್ಟಿ ಸೂರಿಂಜೆ, ಗಿರೀಶ್ ಎಂ ಶೆಟ್ಟಿ ಪೆರ್ಮುದೆ, ಪ್ರಮೋದ್ ಶೆಟ್ಟಿ ಹೊಸಬೆಟ್ಟು, ಸುಕೇಶ್ ಶೆಟ್ಟಿ ಚೇಳಾರ್, ರಾಮಚಂದ್ರ ಶೆಟ್ಟಿ ಕುಳಾಯಿ, ದಾಮೋದರ ಶೆಟ್ಟಿ ತೋಕೂರು, ಪದ್ಮನಾಭ ಶೆಟ್ಟಿ ಕುತ್ತೆತ್ತೂರು, ಸವಿತಾ ಭವಾನಿ ಶಂಕರ್ ಶೆಟ್ಟಿ ಬಾಳ, ಜ್ಯೋತಿ ಜೆ ಶೆಟ್ಟಿ…

Read More

ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯು ಹಮ್ಮಿಕೊಂಡಿರುವ ‘ಅಕಾಡೆಮಿಡ್ ಒಂಜಿ ದಿನ ಬಲೆ ತುಳು ಓದುಗ’ ಅಭಿಯಾನದ ಐದನೇ ಕೂಟವು ಜೂನ್ 30ರಂದು ನಡೆಯಲಿದೆ.ವಿದ್ಯಾರ್ಥಿ ಯುವ ಜನರಲ್ಲಿ ತುಳು ಸಾಹಿತ್ಯ ಓದಿನ ಅಭಿರುಚಿ ಮೂಡಿಸುವ ಸಲುವಾಗಿ ಹಮ್ಮಿಕೊಂಡಿರುವ ಈ ಅಭಿಯಾನದ ಐದನೇ ಕೂಟದಲ್ಲಿ ಮಂಗಳೂರಿನ ಸೈಂಟ್ ಅಲೋಷಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ತುಳು ವಿಭಾಗ ಹಾಗೂ ಕನ್ನಡ ವಿಭಾಗದ ವಿದ್ಯಾರ್ಥಿಗಳು ಭಾಗವಹಿಸುವರು.ಕಾರ್ಯಕ್ರಮವನ್ನು ಬೆಳಿಗ್ಗೆ 10:00 ಗಂಟೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಡಾ. ವಿಶ್ವನಾಥ ಬದಿಕಾನ ಅವರು ಉದ್ಘಾಟಿಸುವರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ್ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸುವರು. ಅಕಾಡೆಮಿಯ ಮಾಜಿ ಸದಸ್ಯೆ ವಿಜಯಲಕ್ಷ್ಮಿ ಪ್ರಸಾದ ರೈ, ಸಂತ ಆಲೋಸಿಯಸ್ ಸಂಸ್ಥೆಯ ಉಪನ್ಯಾಸಕಿ ಪ್ರಶಾಂತಿ ಶೆಟ್ಟಿ ಇರುವೈಲು ಮುಖ್ಯ ಅತಿಥಿಯಾಗಿ ಭಾಗವಹಿಸುವರು ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

Read More

ಪುತ್ತೂರು : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪ ಯುವಕನೊಬ್ಬ ಪ್ರೀತಿಸಿ ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ, ಆಕೆ ಗರ್ಭಿಣಿಯಾದ ಬಳಿಕ ಆತ ವಿವಾಹವಾಗಲು ನಿರಾಕರಿಸಿರುವ ಪ್ರಕರಣದಲ್ಲಿ ಗರ್ಭಿಣಿ ವಿದ್ಯಾರ್ಥಿನಿ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮನೀಡಿದ್ದಾಳೆ ಎಂದು ತಿಳಿದು ಬಂದಿದೆ. ಬಪ್ಪಳಿಗೆ ನಿವಾಸಿ ಕೃಷ್ಣರಾವ್‌ ಮತ್ತು ಸಂತ್ರಸ್ತ ಯುವತಿ ಇಬ್ಬರೂ ಮಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. 2024ರ ಅ.11ರಂದು ಆರೋಪಿ ಕೃಷ್ಣ ಸಂತ್ರಸ್ತ ಯುವತಿಯನ್ನು ತನ್ನ ಮನೆಗೆ ಕರೆಸಿಕೊಂಡು ಬಲವಂತದಿಂದ ದೈಹಿಕ ಸಂಪರ್ಕ ಬೆಳೆಸಿದ್ದಾನೆ. ಕೆಲವು ತಿಂಗಳ ನಂತರ ಸಂತ್ರಸ್ತೆ ಗರ್ಭಿಣಿಯಾಗಿದ್ದು, ವಿಚಾರವನ್ನು ಆರೋಪಿ ಕೃಷ್ಣನಿಗೆ ತಿಳಿಸಿದ್ದಾನೆ. ಈ ವೇಳೆ ಮನೆಯವರ ಬಳಿ ಈ ವಿಚಾರ ಹೇಳದಿದ್ದರೆ ತಾನು ಮದುವೆಯಾಗುವುದಾಗಿ ಹೇಳಿದ್ದ. ಬಳಿಕ ಮದುವೆಗೆ ನಿರಾಕರಿಸಿದ್ದ ಯುವಕನ ಮೇಲೆ ಯುವತಿ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಅತ್ಯಾಚಾರ ಮತ್ತು ನಂಬಿಕೆ ದ್ರೋಹ ಪ್ರಕರಣ ದಾಖಲಿಸಿದ್ದಳು, ಪ್ರಕರಣ ದಾಖಲಾಗುತ್ತಿದ್ದಂತೆ ಯುವಕ ತಲೆಮರೆಸಿಕೊಂಡಿದ್ದಾನೆ. ಪೊಲೀಸರು ಅತ್ಯಚಾರ ಹಾಗೂ ನಂಬಿಕೆ ದ್ರೋಹ ಪ್ದಕರಣ ದಾಖಲಿಸಿಕೊಂಡು…

Read More

ತುಳುನಾಡ ರಕ್ಷಣಾ ವೇದಿಕೆ ಬ್ರಹ್ಮಾವರ ತಾಲೂಕು ಅಧ್ಯಕ್ಷರಾಗಿ ಪ್ರದೀಪ್ ಪೂಜಾರಿ (ದೀಪು)ಚಾಂತಾರ್, ಉಪಾಧ್ಯಕ್ಷರಾಗಿ ಸಂದೇಶ್ ಶೆಟ್ಟಿ ಹೇರೂರು, ಪ್ರಧಾನ ಕಾರ್ಯದರ್ಶಿಯಾಗಿ ಶರತ್ ರಾಜ್ ಆರೂರು, ಮತ್ತು ಕೋಶಾಧಿಕಾರಿಯಾಗಿ ನಿತಿನ್ ಶೆಟ್ಟಿ ಪೇತ್ರಿ ರವರನ್ನು ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿರವರು ಮತ್ತು ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ ರವರ ಶಿಫಾರಸು ಮೇರೆಗೆ ಆಯ್ಕೆಮಾಡಲಾಗಿದೆ. ಇವರ ಆಯ್ಕೆ ಯಿಂದಬ್ರಹ್ಮಾವರ ತಾಲೂಕುನಲ್ಲಿ ತುಳುನಾಡ ರಕ್ಷಣಾ ವೇದಿಕೆ ಇನ್ನಷ್ಟು ಬಲಿಷ್ಠವಾಗಿ ಬೆಳೆಯಲು , ತುಳು ಅಚಾರ ವಿಚಾರ, ಸಂಸ್ಕೃತಿ ಮತ್ತು ಬ್ರಹ್ಮಾವರ ಸರ್ವತೋಮುಖ ಅಭಿವೃದ್ಧಿಯಾಗಲು ಜನರ ಬೇಡಿಕೆ ಈಡೇರಿಕೆಗೆ ಹೋರಾಟ ಮಾಡಲು ಬಲ ಬಂದಂತಾಗಿದೆ. ಎಂದು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ತಿಳಿಸಿದರು. ಬ್ರಹ್ಮಾವರ ತಾಲೂಕು ನಿಕಟಪೂರ್ವ ಅಧ್ಯಕ್ಷ ಸತೀಶ್ ಪೂಜಾರಿ ಕೀಳಂಜೆ, ಜಿಲ್ಲಾ ಹಿರಿಯ ಉಪಾಧ್ಯಕ್ಷ ಜಯರಾಮ್ ಪೂಜಾರಿ, ವೈದ್ಯರ ಘಟಕ ಜಿಲ್ಲಾಧ್ಯಕ್ಷ ಸಂದೀಪ್ ಸನಿಲ್, ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ…

Read More

ಮಂಗಳೂರು: ಸಾಮಾಜಿಕ ಜವಾಬ್ದಾರಿ ಮತ್ತು ಸಮುದಾಯ ಅಭಿವೃದ್ಧಿಯತ್ತ ತನ್ನ ಅಚಲ ಬದ್ಧತೆಯ ಭಾಗವಾಗಿ, ಎಂಸಿಸಿ ಬ್ಯಾಂಕ್ 2025 ಜೂನ್ ತಿಂಗಳಲ್ಲಿ ಮಂಗಳೂರು, ಉಡುಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಾದ್ಯಂತ ವಿವಿಧ ಶಾಲೆಗಳು, ಅನಾಥಾಶ್ರಮಗಳು ಮತ್ತು ಸಂಸ್ಥೆಗಳಿಗೆ ನೋಟ್ ಪುಸ್ತಕ, ಕೊಡೆ ಮತು ಸ್ಕೂಲ್ ಬ್ಯಾಗ್‌ಗಳನ್ನು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡಿತು. ಬ್ಯಾಂಕಿನ ಅಧ್ಯಕ್ಷ ಸಹಕಾರ ರತ್ನ ಅನಿಲ್ ಲೋಬೊ ಮತ್ತು ನಿರ್ದೇಶಕರ ಮಂಡಳಿಯ ನೇತೃತ್ವದಲ್ಲಿ ನಡೆಯುತ್ತಿರುವ ಈ ಚಟುವಟಿಕೆಗಳು, ಅರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ಸೇವೆ ಸಲ್ಲಿಸಲು ಮತ್ತು ಶೈಕ್ಷಣಿಕ ಸಬಲೀಕರಣವನ್ನು ಉತ್ತೇಜಿಸಲು ಬ್ಯಾಂಕಿನ ಸಮರ್ಪಣೆಯನ್ನು ಪ್ರತಿಬಿಂಬಿಸುತ್ತವೆ

Read More

ಮಂಗಳೂರು : ತುಳು ನಾಟಕ ಪರಂಪರೆಯಲ್ಲಿ ಶಿಕ್ಷಕರ ಹಾಗೂ ಶಿಕ್ಷಣ ಸಂಸ್ಥೆಗಳ ಪಾತ್ರ ಮಹತ್ತರವಾಗಿತ್ತು ಎಂದು ಹಿರಿಯ ನಿರ್ದೇಶಕ ತಮ್ಮ ಲಕ್ಷ್ಮಣ ಅವರು ಹೇಳಿದರು. ಅವರು ಮಂಗಳವಾರದಂದು ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಪಡೀಲ್ ಅಮೃತ ಕಾಲೇಜ್ ಸಹಯೋಗದಲ್ಲಿ ಆಯೋಜಿಸಲಾದ ತುಳು ನಾಟಕ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.ಶತಮಾನಗಳ ಹಿಂದೆಯೇ ಪಂಜೆ ಮಂಗೇಶರಾಯರ ಕಾರಣದಿಂದಾಗಿ ಶಾಲೆಗಳಲ್ಲಿ ನಾಟಕ ಆರಂಭವಾಗಿತ್ತು ಎಂಬ ವಿಚಾರವನ್ನು ತಮ್ಮ ಲಕ್ಷಣ ಅವರು ಈ ಸಂದರ್ಭದಲ್ಲಿ ನೆನಪಿಸಿದರು.ವಿದ್ಯಾರ್ಥಿಗಳು ತುಳು ನಾಟಕದ ಬಗ್ಗೆ ಆಸಕ್ತಿ ಬೆಳೆಸಿಕೊಳ್ಳಬೇಕು ಹಾಗೂ ರಂಗಭೂಮಿಯಲ್ಲಿ ತೊಡಗಿಸಿಕೊಳ್ಳಬೇಕು, ಶಾಲೆಯಿಂದಲೇ ತುಳು ನಾಟಕಗಳ ಬೆಳವಣಿಗೆ ಆರಂಭಗೊಂಡಿತು ಹಾಗೂ ವೃತ್ತಿಪರವಾಗಿ ಬೆಳವಣಿಗೆ ಹೊಂದಿದೆ. ಅದನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಯುವ ಪೀಳಿಗೆ ಮೇಲಿದೆ ಎಂದರು.ಮುಖ್ಯ ಅತಿಥಿಯಾಗಿ ಪಾಲ್ಗೊಂಡ ‌ ಹಿರಿಯ ರಂಗನಟ ಪ್ರಭಾಕರ ಕಾಪಿಕಾಡ್ ಮಾತನಾಡಿ, ನಾಟಕದ ಮೂಲಕ ಸ್ನೇಹ, ಪ್ರೀತಿ, ಸಾಮರಸ್ಯವನ್ನು ಮೂಡಿಸಬೇಕು ಎಂದು ಹೇಳಿದರುಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅಧ್ಯಕ್ಷತೆ ವಹಿಸಿದ್ದರು.…

Read More