ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೈದ್ಯರ ಘಟಕ ವತಿಯಿಂದ ದಿನಾಂಕ 01-07-2025 ರಂದು ಮದ್ಯಾಹ್ನ 2 ಗಂಟೆಗೆ ಉಡುಪಿ ಅಕ್ಷಯ ಟವರ್ ನಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು ರವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ವೈದ್ಯರ ದಿನಾಚರಣೆ ನಡೆಯಿತು.

ಕಾರ್ಯಕ್ರಮ ಉದ್ಘಾಟನೆ ಯನ್ನು ಆಯುಷ್ ಫೆಡರೇಷನ್ ಆಫ್ ಇಂಡಿಯಾ (ಎಎಫ್ಐ) ಉಡುಪಿ ಜಿಲ್ಲಾಧ್ಯಕ್ಷ ಡಾ. ಎನ್. ಟಿ. ಅಂಚನ್.

ಇಂಡಿಯನ್ ಮೆಡಿಕಲ್ಅಸೋಸಿಯೇಷನ್ , ಉಡುಪಿ ಜಿಲ್ಲಾಧ್ಯಕ್ಷ ಡಾ. ಸುರೇಶ್ ಶೆಣೈ,

ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಉಡುಪಿ ಜಿಲ್ಲಾಧ್ಯಕ್ಷ ಡಾ ಯು ಬಿ ಶಬರಿ ರವರು ದೀಪ ಬೆಳಗಿಸಿ ಉದ್ಘಾಟಿಸಿದರು.

ಕೇಂದ್ರೀಯ ಸಂಘಟನಾ ಕಾರ್ಯದರ್ಶಿ ಭಟ್ ಕಡಬ ಪ್ರಾಸ್ತಾವಿಕವಾಗಿ ಮಾತನಾಡಿದರು


ವೈದ್ಯರ ಘಟಕ ರಾಜ್ಯ ಸಂಘಟನಾ ಕಾರ್ಯದರ್ಶಿ ಡಾ ರವೀಂದ್ರ ಸ್ವಾಗತ ಭಾಷಣ ಗೈದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಉಡುಪಿ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ, ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ ಮಹಿಳಾ ಜಿಲ್ಲಾಧ್ಯಕ್ಷೇ ಸುನಂದ ಕೋಟ್ಯಾನ್ ಭಾಗವಹಿಸಿದ್ದರು

ಕಾರ್ಯಕ್ರಮ ನಿರೂಪಣೆಯನ್ನು ವೈದರ ಘಟಕ ಜಿಲ್ಲಾಧ್ಯಕ್ಷ ಸಂದೀಪ್ ಸನಿಲ್ ರವರು ಮಾಡಿದರು . ಡಾಕ್ಟರ್ ಬಿ ಸಿ ರಾಯ್ ರವರ ಜನ್ಮ ದಿನಾಚರಣೆ ನೆನಪಿಸುವ ಸಲುವಾಗಿ ನಡೆದ ರಾಷ್ಟ್ರೀಯ ವೈದ್ಯರ ದಿನಾಚರಣೆ ಅಂಗವಾಗಿ ವೈದ್ಯಕೀಯ ಕ್ಷೇತ್ರದಲ್ಲಿ ಉತ್ತಮ ಸೇವೆ ಸಲ್ಲಿಸಿರುವ
ಆಯುಷ್ ಫೆಡರೇಷನ್ ಆಫ್ ಇಂಡಿಯಾ (ಎಎಫ್ಐ) ಉಡುಪಿ ಜಿಲ್ಲಾಧ್ಯಕ್ಷ ಡಾ. ಎನ್. ಟಿ. ಅಂಚನ್, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ಉಡುಪಿ ಜಿಲ್ಲಾಧ್ಯಕ್ಷ ಡಾ. ಸುರೇಶ್ ಶೆಣೈ, ಇಂಡಿಯನ್ ಡೆಂಟಲ್ ಅಸೋಸಿಯೇಷನ್ ಉಡುಪಿ ಜಿಲ್ಲಾಧ್ಯಕ್ಷ ಡಾ ಯು ಬಿ ಶಬರಿರವರನ್ನು ಸಾಲು ಹೊದಿಸಿ ಮಾಲೆ ಹಾಕಿ , ಹಣ್ಣು ಹಂಪಲು ನೀಡಿ ಸನ್ಮಾನ ಪತ್ರ ವಾಚಿಸಿ ಗೌರವ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು

ಸನ್ಮಾನ ಸ್ವೀಕರಿಸಿ ಮಾತನಾಡಿದ ಡಾ.ಎನ್ ಎನ್.ಟಿ. ಅಂಚನ್ ಮತ್ತು ಡಾ ಸುರೇಶ್ ಶೆಣೈ ರವರು ತುಳುನಾಡ ರಕ್ಷಣಾ ವೇದಿಕೆ ಕಳೆದ 16 ವರ್ಷಗಳಿಂದ ಸಲ್ಲಿಸಿದ ಸೇವೆಯನ್ನು ಕೊಂಡಾಡಿದರು. ಹಾಗೂ ವೈದ್ಯರಾಗಿ ಸೇವೆ ಸಲ್ಲಿಸುವುದರಲ್ಲಿ ನಮಗೆ ಸಂತ್ರಪ್ತಿ ಸಿಗುತ್ತದೆ. ಸಾಧ್ಯವಾದಷ್ಟು ಪ್ರಾಮಾಣಿಕ ಸೇವೆ ಸಲ್ಲಿಸುತ್ತಿದ್ದು ಪ್ರತಿ ವೈದ್ಯರು ತಮ್ಮಲ್ಲಿ ಬರುವ ಜನರಿಗೆ ಸಮಾಧಾನ ದಿಂದ ದೈರ್ಯ ತುಂಬುವ ಕೆಲಸ ಮಾಡಬೇಕೆಂದು ವೈದ ಸಮುದಾಯಕ್ಕೆ ವಿನಂತಿಸಿದರು. ವೈದ್ಯರ ಘಟಕ ಜಿಲ್ಲಾ ಉಪಾಧ್ಯಕ್ಷ ಡಾ. ರಾಜೇಶ್ ಶೆಟ್ಟಿ , ಡಾ.ಗಣೇಶ್ ಶೆಟ್ಟಿ, ಡಾ .ಕೌಶಿಕ್, ಸತೀಶ್ ರಾವ್, ಡಾ ಕೀರ್ತಿ ಮತ್ತಿತರ ವೈದ್ಯರ ಘಟಕ ಪದಾಧಿಕಾರಿಗಳು ಸನ್ಮಾನ ಕಾರ್ಯಕ್ರಮ ತೊಡಗಿಸಿಕೊಂಡರು. ಸಾಮಾಜಿಕ ಜಾಲತಾಣ ಜಿಲ್ಲಾ ಸಂಚಾಲಕ ಸತೀಶ್ ಪೂಜಾರಿ ಕೀಳಿಂಜೆ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ , ಕುಂದಾಪುರ ತಾಲೂಕು ಅಧ್ಯಕ್ಷ ಸತೀಶ್ ಖಾರ್ವಿ, ಜಿಲ್ಲಾ ಜೊತೆ ಕಾರ್ಯದರ್ಶಿ ಸುಭಾಷ್ ಸುಧನ್ ,ಪ್ರೀತಮ್ ಡಿ ಕೋಸ್ತ, ಕಾಪು ಮಹಿಳಾಧ್ಯಕ್ಷೆ ಅನುಸೂಯ ಶೆಟ್ಟಿ , ಜಿಲ್ಲಾ ಕಾರ್ಮಿಕ ಘಟಕ ಉಪಾಧ್ಯಕ್ಷ ಕುಶಾಲ್ ಅಮೀನ್ ಬೇಂಗ್ರೆ,
ಬ್ರಹ್ಮಾವರ ತಾಲೂಕು ಪ್ರಧಾನ ಕಾರ್ಯದರ್ಶಿ ಶರತ್ ರಾಜ್ ಆರೂರು, ಕೋಶಾಧಿಕಾರಿ ನಿತಿನ್ ಶೆಟ್ಟಿ ಪೇತ್ರಿ , ರೋಷನ್ ಬಂಗೇರ, ಆಶಾ, ಜ್ಯೋತಿ , ಮಮತಾ , ವಿಜಯ .ಜಿ. ಪೈ , ಶ್ಯಾಮಲಾ , ಚರಿತ ಅಂಚನ್, ಹೇಮಾ ,ರತ್ನಾಕರ್, ಪ್ರಶಾಂತ್ ರೈ , ಪ್ರಕಾಶ್ ನಾಯಕ್, ಗುಲಾಬಿ,
ಜಯಲಕ್ಷ್ಮಿ , ಶಕುಂತಲಾ, ಸವಿತಾ , ಸಂಗೀತ, ಹರಿಣಾಕ್ಷಿ , ಮತ್ತಿತರರು ಉಪಸ್ಥಿತರಿದ್ದರು



