ಮೂಡುಬಿದಿರೆ: ಮಾನ್ಯವರ್ ಕಾನ್ಸಿ ರಾಮ್ ರವರು ಬಹುಜನ ಚಳುವಳಿಗೆ ಮಾಡಿದ ತ್ಯಾಗ ಹಾಗೂ ಕೊಡುಗೆಯ ಫಲವಾಗಿ ಬಿ.ಏಸ್.ಪಿ.ಯು ರಾಷ್ಟ್ರ ಮಟ್ಟದಲ್ಲಿ 3ನೇ ಪಾರ್ಟಿಯಾಗಿ ಬೆಳೆದಿದೆ ಎಂದು ಬಿ. ಏಸ್. ಪಿ. ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ. ಟಿ. ರಾಧಕೃಷ್ಣ ಹೇಳಿದರು.

ದ. ಕ. ಮೂಡಬಿದ್ರಿ ಸಮಾಜ ಮಂದಿರದಲ್ಲಿ ಬಹುಜನ ಸಮಾಜ ಪಾರ್ಟಿ, ದ. ಕ. ಜಿಲ್ಲಾ ಘಟಕ ಇದರ ವತಿಯಿಂದ ರವಿವಾರ ಹಮ್ಮಿಕೊಂಡಿದ್ದ ಮಾನ್ಯವರ್ ಕಾನ್ಸಿರಾಮ್ ರವರ ಹುಟ್ಟುಹಬ್ಬವನ್ನು ಬಹುಜನ ದಿವಸ ಆಚರಣೆ ಪ್ರಯುಕ್ತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಬಿಎಸ್. ಪಿ. ಯ ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂತಪ್ಪ ಅಲಂಗಾರ್ ರವರು ಬಿ. ಏಸ್. ಪಿ. ಜಿಲ್ಲಾ ಘಟಕ ಏರ್ಪಡಿಸಿದ ವಿಚಾರ ಸಂಕಿರಣದಲ್ಲಿ ಮಾನವ್ಯರ್ ಕಾನ್ಸಿರಾಮ್ ರವರ ಸಿದ್ಧಾಂತ ಹಾಗೂ ರಾಜಕಾರಣ ಎಂಬ ವಿಷಯದಲ್ಲಿ ವಿಚಾರ ಮಂಡಸಿ ಮಾತನಾಡುತ್ತ ಬಹುಜನ ಸಮಾಜ ಪಾರ್ಟಿಯ ಸ್ಥಾಪಕ ಮಾನ್ಯವರ್ ಕಾನ್ಸಿರಾಮ್ ರವರು ಈ ದೇಶ ಕಂಡ ಮಹಾನ್ ರಾಜಕೀಯ ಮುತ್ಸದಿ. ಉತ್ತರ ಪ್ರದೇಶದಲ್ಲಿ ಬೆಹನ್ಜಿ ಮಾಯಾವತಿಯವರನ್ನು 4 ಬಾರಿ ಮುಖ್ಯಮಂತ್ರಿಯಾಗಿ ರಾಜ್ಯವನ್ನು ಆಳಲು ರಾಜಕೀಯ ತಂತ್ರಗಾರಿಕೆಯಿಂದ ಯಶಸ್ವಿ ಯಾಗಿದ್ದ, ಸಾಮ್ರಾಟ್ ಅಶೋಕ ಚಕ್ರವರ್ತಿಯ ಸಾಮ್ರಾಜ್ಯದ ವೈಭವವನ್ನು ಉ. ಪ್ರ.ದಲ್ಲಿ ನಿರ್ಮಿಸಿ, ಜನ ಸಾಮಾನ್ಯರನ್ನು ರಾಜಕೀಯ ಗದ್ದುಗೆಯಲ್ಲಿ ತರುವಂತೆ ರಾಜಕಾರಣ ಮಾಡಿದ, ಬುದ್ಧತ್ವದ ಕರುಣೆ, ಪ್ರೀತಿ, ಸಹೋದರತೆ ವ್ಯಕಿತ್ವ ತುಂಬಿದ ಮಹಾನ್ ಮಾನವತಾವಾದಿ ಯಾಗಿದ್ದರು. ಬಾಬಾ ಸಾಹೇಬ್ ಅಂಬೇಡ್ಕರ್ ರವರ ವಿಚಾರಧಾರೆ ಹಾಗೂ ಮಹಾ ಪುರುಷರ ಸಾಮಾಜಿಕ ಪರಿವರ್ತನಾ ಚಳುವಳಿಯನ್ನು ಮುನ್ನಡೆಸಿದ
ಯುಗಪುರುಷ ಯಾರಾದರೂ ಇದ್ದರೇ ಅವರು ಮಾನ್ಯವರ್ ಕಾನ್ಸಿ ರಾಮ್ ಸಾಬ್ ಎಂದು ಹೇಳಿದರು.
ಇನ್ನೋರ್ವ ಮುಖ್ಯ ಅತಿಥಿ ಬಿ. ಏಸ್. ಪಿ. ರಾಜ್ಯ ಕಾರ್ಯದರ್ಶಿ ವೇಳಾಯುಧನ್ ಮಾತನಾಡುತ್ತ ಮಾನ್ಯವರ್ ಕಾನ್ಸಿ ರಾಮ್ ಸ್ಥಾಪಿದ ಬ್ಯಾಮ್ಸೆಫ್ ನೌಕರರ ಸಂಘಟನೆಯನ್ನು ಜಿಲ್ಲೆಯಲ್ಲಿ ಕ್ರಿಯಾತ್ಮಕವಾಗಿ ಸಂಘಟಿಸಬೇಕಾಗಿದೆ ಎಂದು ಹೇಳಿದರು.
ಬಿ. ಏಸ್. ಪಿ. ಜಿಲ್ಲಾ ಅಧ್ಯಕ್ಷರಾದ ಗೋಪಾಲ ಮುತ್ತೂರು, ಅಧ್ಯಕ್ಷತೆ ವಹಿಸಿ ಮಾತನಾಡುತ್ತ ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆ ಯಲ್ಲಿ ಎಲ್ಲ ತಾಲೂಕುಗಳಲ್ಲಿ ಪಕ್ಷವನ್ನು ಸಂಘಟಿಸಿ ಚುನಾವಣೆಯನ್ನು ಎದುರಿಸಬೇಕಾಗಿದೆ ಎಂದು ಹೇಳಿದರು.
ಬಿ.ಎಸ್.ಪಿ. ಜಿಲ್ಲಾ ಮುಖಂಡರಾದ ನಾರಾಯಣ ಬೋಧ, ದೇವಪ್ಪ ಬೋಧ, ಶಿವಪ್ಪ ಗಾರ್ಡಡಿ, ಏನ್. ಪೋಡಿಯ, ಕಿರಣ್ ಕುಮಾರ್, ಶಿವರಾಮ್ ಪೇಜಾವರ ಮುಂತಾದವರು ಉಪಸ್ಥಿತಿದ್ದರು. ಪ್ರಾರಂಭದಲ್ಲಿ ಕಿರಣ್ ಕುಮಾರ್ ಸ್ವಾಗತಿದರು. ನಿತಿನ್ ಮುತ್ತೂರು ಕಾರ್ಯಕ್ರಮ ನಿರ್ವಹಿಸಿ, ಧನ್ಯವಾದ ಅರ್ಪಿಸಿದ್ದರು.
