- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ನವದೆಹಲಿ, ಸೆಪ್ಟೆಂಬರ್ 18:2001ರಲ್ಲಿ ಮುಂಬೈನ ಗೋಲ್ಡನ್ ಕ್ರೌನ್ ಹೋಟೆಲ್‌ನ ಮಾಲೀಕರಾಗಿದ್ದ ಜಯಾ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ಯಾಂಗ್‌ಸ್ಟರ್ ಛೋಟಾ ರಾಜನ್‌ಗೆ ಬಾಂಬೆ ಹೈಕೋರ್ಟ್ ನೀಡಿದ್ದ ಜಾಮೀನನ್ನು ಸುಪ್ರೀಂ ಕೋರ್ಟ್ ಇಂದು ರದ್ದುಗೊಳಿಸಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರ ಪೀಠವು ಈ ತೀರ್ಪು ನೀಡಿದ್ದು, ರಾಜ್ಯ ಸರಕಾರದ ಪರವಾಗಿ ಕೇಂದ್ರ ತನಿಖಾ ದಳ (CBI) ಸಲ್ಲಿಸಿದ್ದ ಮೇಲ್ಮನವಿಗೆ ಸ್ಪಂದಿಸಿದೆ. “ಅವನು 27 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ, ನಾಲ್ಕು ಗಂಭೀರ ಪ್ರಕರಣಗಳಲ್ಲಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿ. ಇಂತಹವನಿಗೆ ಜಾಮೀನು ನೀಡಬೇಕಾದ ಅಗತ್ಯವೇನು?” ಎಂದು ಪೀಠವು ಗಂಭೀರ ಪ್ರಶ್ನೆ ಎತ್ತಿದೆ. CBI ಪರವಾಗಿ ಹಾಜರಾದ ಹೆಚ್ಚುವರಿ ಸಲಿಸಿಟರ್ ಜನರಲ್ ಎಸ್.ವಿ. ರಾಜು ಅವರು, ಛೋಟಾ ರಾಜನ್‌ಗಾಗಿ ಜೀವಾವಧಿ ಶಿಕ್ಷೆ ವಿಧಿಸಿದ್ದನ್ನು ಬಾಂಬೆ ಹೈಕೋರ್ಟ್ ತಾತ್ಕಾಲಿಕವಾಗಿ ಅಮಾನತುಗೊಳಿಸಿದ್ದುದಾಗಿ ಪೀಠಕ್ಕೆ ಮಾಹಿತಿ ನೀಡಿದರು. ಕೊಲೆ ಪ್ರಕರಣದ ಹಿನ್ನೆಲೆ:2001ರ ಜುಲೈನಲ್ಲಿ, ದಕ್ಷಿಣ ಮುಂಬೈನ ಗೋಲ್ಡನ್ ಕ್ರೌನ್ ಹೋಟೆಲ್‌ನ ಮಾಲೀಕರಾಗಿದ್ದ ಜಯಾ ಶೆಟ್ಟಿ ಅವರು ಸುಲಿಗೆ ಹಣವನ್ನು…
ಮಂಗಳೂರು : ಮಂಗಳೂರು ಮಲ್ಲಿಕಟ್ಟೆ ಪ್ರದೇಶದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ನಕಲಿ ದಾಖಲೆಗಳನ್ನು ಬಳಸಿಕೊಂಡು ಕೋಟ್ಯಂತರ ರೂ. ಸಾಲವನ್ನು ವಂಚಿಸಿ ಪಡೆದ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. Electro World Enterprises ಹಾಗೂ M H Enterprises ಎಂಬ ಎರಡು ಸಂಸ್ಥೆಗಳು MSME ಯೋಜನೆಯ ಅಡಿಯಲ್ಲಿ ನಕಲಿ ದಾಖಲೆಗಳನ್ನು ಸಲ್ಲಿಸಿ ಕ್ರಮವಾಗಿ ₹1.20 ಕೋಟಿ ಮತ್ತು ₹1.30 ಕೋಟಿಗಳ ಸಾಲವನ್ನು ಮಂಜೂರು ಮಾಡಿಕೊಂಡಿದ್ದು, ಈ ಮೊತ್ತವನ್ನು ನಿಗದಿತ ವ್ಯಾಪಾರದ ಬದಲು ವೈಯಕ್ತಿಕವಾಗಿ ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಿ ಬಳಸಲಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತು ಎಸ್.ಬಿ.ಐ ಚೀಫ್ ಮ್ಯಾನೇಜರ್ ಸೆಪ್ಟೆಂಬರ್ 16 ರಂದು ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಅದರಂತೆ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 316(2), 316(5), 318(2), 318(3) ಮತ್ತು 3(5) ಅಡಿಯಲ್ಲಿ ಅ.ಕ್ರ 130/2025 ಮತ್ತು 131/2025 ಎಂಬ ಎರಡು ಪ್ರತ್ಯೇಕ ಪ್ರಕರಣಗಳನ್ನು ಪೊಲೀಸರು…
ಮಂಗಳೂರು: ಮಂಗಳೂರಿನ ಪ್ರಸಿದ್ಧ ಪೂಂಜಾ ಇಂಟರ್‌ನ್ಯಾಶನಲ್ ಹೊಟೇಲ್‌ನ ಸ್ಥಾಪಕರಾದ ಪ್ರಭಾಕರ ಪೂಂಜಾ (72) ಅಲ್ಪಕಾಲದ ಅಸೌಖ್ಯದಿಂದ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಅವರು ಬುಧವಾರ ನಿಧನರಾದರು. ಮೂಲತಃ ಬಂಟ್ವಾಳದವರಾದ ಪೂಂಜಾ, ಮಂಗಳೂರು ಉದ್ಯಮ ಕ್ಷೇತ್ರದಲ್ಲಿ ಖಾಸಾ ಹೆಸರು ಗಳಿಸಿದ್ದವರು. 1980ರ ದಶಕದಲ್ಲಿ ಮುಂಬೈಯಲ್ಲಿ ಭೂಗತ ಜಗತ್ತಿನ ಸಂಪರ್ಕದಲ್ಲಿದ್ದ ಅವರು, ಅಲ್ಲಿ ಪ್ರಭಾವಿ ಡಾನ್ ಗೆ ಚಾಲಕರಾಗಿದ್ದವರು. 1986ರ ವೇಳೆಗೆ ಮಂಗಳೂರಿಗೆ ವಾಪಸಾಗಿದ ಅವರು, city’s skyline ಗೆ ಹೊಸ ರೂಪ ನೀಡಿದ ಪೂಂಜಾ ಇಂಟರ್‌ನ್ಯಾಶನಲ್ ಎಂಬ ಬೃಹತ್ ಹೊಟೇಲ್‌ನ್ನು ಆರಂಭಿಸಿದರು. ಆ ಕಾಲದಲ್ಲಿ ಮೋತಿ ಮಹಲ್ ಹೊರತುಪಡಿಸಿದರೆ, ಇಂತಹ ಅದ್ದೂರಿ ಹೊಟೇಲ್ ಮಂಗಳೂರಿನಲ್ಲಿ ವಿರಳವೇ. ಕನ್ನಡ ಭಾಷೆಯಲ್ಲಿ ನಿಪುಣತೆ ಇಲ್ಲದಿದ್ದರೂ, ಅವರು ಹಿಂದಿ, ತುಳು ಮತ್ತು ಮರಾಠಿಯಲ್ಲಿ ಸುಸ್ಪಷ್ಟವಾಗಿ ಮಾತನಾಡುತ್ತಿದ್ದರು. ಮುಂಬೈ ಮತ್ತು ಮಂಗಳೂರಿನ ಅನೇಕ ಪೊಲೀಸ್ ಅಧಿಕಾರಿಗಳ ಜೊತೆ ನಿಕಟ ಸಂಪರ್ಕ ಹೊಂದಿದ್ದ ಪೂಂಜಾ, ಹಳೆಯ ಭೂಗತ ಸಂಬಂಧಗಳನ್ನು ಪಕ್ಕಕ್ಕಿಟ್ಟು ಮಂಗಳೂರಿನಲ್ಲಿ ಉದ್ಯಮ ಶುರು ಮಾಡಿದವರು. ಶರದ್ ಶೆಟ್ಟಿ ಅವರ…
ಖ್ಯಾತ ಸಂಶೋಧಕ ಸಾಹಿತಿ ನಿವೃತ್ತ ಉಪನ್ಯಾಸಕ ಡಾ. ಕೆ. ಜಿ. ವಸಂತ ಮಾಧವರು ಸೆಪ್ಟಂಬರ್ 17ರ ರಾತ್ರಿಬೆಂಗಳೂರಿನ ಮಗಳ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಓರ್ವ ಪುತ್ರ ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ. ಪ್ರೊಫೆಸರ್ ಡಾ. ಕೆ.ಜಿ. ವಸಂತ ಮಾಧವ (ಗುಜ್ಜಾಡಿ ವಸಂತ ಮಾಧವ ಕೊಡಂಚ) ಅವರು 1937ರ ಏಪ್ರಿಲ್ 9ರಂದು ಜನಿಸಿದರು.ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಸ್ನಾತಕೋತ್ತರ ಪದವಿಯನ್ನು ಮತ್ತು ಕೆನರಾದ ರಾಜಕೀಯ ಇತಿಹಾಸ : 1565-1763 ಎನ್ನುವ ವಿಷಯದ ಮೇಲೆ ಮಹಾಪ್ರಬಂಧವನ್ನು ರಚಿಸಿ ಪಿಎಚ್.ಡಿ. ಪದವಿಯನ್ನು ಪಡೆದವರು. ಮುಲ್ಕಿ ವಿಜಯಾ ಕಾಲೇಜಿನಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ೩೨ ವರ್ಷ ಕರ್ತವ್ಯ ನಿರ್ವಹಿಸಿದ ವಸಂತ ಮಾಧವರು. ನಿವೃತ್ತಿಯ ನಂತರ ಕೇರಳದ ಕ್ಯಾಲಿಕಟ್ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಪ್ರೊಫೆಸರ್‌ರಾಗಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಸುಮಾರು ಇಪ್ಪತ್ತರಷ್ಟು ಇತಿಹಾಸ ಕೃತಿಗಳನ್ನು ಮತ್ತು ಸಾವಿರಾರು ಲೇಖನಗಳನ್ನು ಬರೆದಿದ್ದಾರೆ. ವಸಂತ ಮಾಧವರ ಕುರಿತಾದ ಕೃತಿಯನ್ನು ಡಾ. ಎಸ್. ಪದ್ಮನಾಭ ಭಟ್ಟರು ರಚಿಸಿದ್ದು ನಾಡಿಗೆ…
ಉಡುಪಿ: ನಗರದಲ್ಲಿ ಮಾದಕ ವಸ್ತು ಎಂ.ಡಿ.ಎಂ.ಎ ಹಾಗೂ ಗಾಂಜಾ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದು ಆತನಿಂದ 43,800 ಮೌಲ್ಯದ ಎಂ.ಡಿ.ಎಂ.ಎ ಸಹಿತ ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಡುಪಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಪ್ರಭು ಡಿ.ಟಿ ಹಾಗೂ ಉಡುಪಿ ನಗರ ಠಾಣೆ ಪೊಲೀಸ್ ನಿರೀಕ್ಷಕ ಮಂಜುನಾಥ್. ವಿ ಬಡಿಗೇರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಿತು.ಬಂಧಿತ ಆರೋಪಿ ಇಕ್ಬಾಲ್ (33) ಎಂದು ತಿಳಿಯಲಾಗಿದೆ.ಆರೋಪಿ ಮೂಡನಿಡಂಬೂರು ಗ್ರಾಮದ ಗರಡಿ ರಸ್ತೆಯಲ್ಲಿ ಸ್ಕೂಟಿಯಲ್ಲಿ ನಿಷೇದಿತ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 172/2025 ಕಲಂ NARCOTIC DRUGS & PSYCHOTROPIC SUBSTANCES ACT, 1985 (U/s-8(C) 20(b)(II)(A) ರಂತೆ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಶ್ರೀದೇವಿ ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಕೆಂಜಾರು ಕರಂಬಾರು 2025-2026ನೇ ಸಾಲಿನ ನೂತನ ಅಧ್ಯಕ್ಷರಾಗಿ ಚೇತನ್ ಕುಲಾಲ್, ಉಪಾಧ್ಯಕ್ಷರಾಗಿ ಉಮೇಶ್ ಅಮೀನ್, ಕಾರ್ಯದರ್ಶಿಯಾಗಿ ದಿನೇಶ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ ಪ್ರಸಾದ್ ಪೂಜಾರಿ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ರಾಜೇಶ್ ಅಮೀನ್, ಸುನಿಲ್, ನಿರಂಜನ್ ಪುತ್ರನ್, ಪ್ರದೀಪ್ ಅಮೀನ್, ಲೋಕೇಶ್, ಧನಂಜಯ ಪೂಜಾರಿ, ಹರೀಶ್ ಪೂಜಾರಿ, ವಾಸು ಸಾಲ್ಯಾನ್, ರತನ್ ಸಾಲ್ಯಾನ್, ಶಂಭು, ಗುರುಕಿರಣ್ ಕುಂದರ್, ವೀಕ್ಷಿತ್, ವಿಹಾರ್, ಪರಶುರಾಮ್ ಪೂಜಾರಿ, ಯಶವಂತ್, ಸುರೇಶ್, ಕಿಶೋರ್ ಆಯ್ಕೆಯಾಗಿದ್ಧಾರೆ.
ಮಂಗಳೂರು : ಲಯನ್ಸ್ ಇಂಟರ್ ನ್ಯಾಷನಲ್ ಜಿಲ್ಲೆ 317 ಡಿ ಇದರ ಆಶ್ರಯದಲ್ಲಿ “ಸಿಂಹವಾಹಿನಿ ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆ ಸೆಪ್ಟಂಬರ್ 21 ರಂದು ಭಾನುವಾರ ಬೆಳಿಗ್ಗೆ 8.30 ಕ್ಕೆ ಕುದ್ಮಲ್ ರಂಗರಾವ್ ಪುರಭವನ ಮಂಗಳೂರಿನಲ್ಲಿ ನಡೆಯಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಲಯನ್ ರಾಜೇಶ್ ಶೆಟ್ಟಿ ಶಬರಿಯವರು ತಿಳಿಸಿದ್ದಾರೆ. ಲಯನ್ಸ್ ಜಿಲ್ಲಾ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಸುಮಾರು 25 ತಂಡಗಳು ಭಾಗವಹಿಸಲಿದ್ದು ಸೆಟ್ಟಿಂಗ್ ಸೇರಿ ಒಂದು ತಂಡಕ್ಕೆ 20 ನಿಮಿಷಗಳ ಕಾಲಾವಧಿ ನೀಡಲಾಗಿದೆ. ಪ್ರಶಸ್ತಿ ಪುರಸ್ಕೃತರಿಗೆ ನಗದು ಸಹಿತ ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಪ್ರಧಾನ ಅತಿಥಿಗಳಾಗಿ ಖ್ಯಾತ ಹಿನ್ನಲೆ ಗಾಯಕಿ ಬಿ.ಕೆ. ಸುಮಿತ್ರ ಭಾಗವಹಿಸಲಿದ್ದಾರೆ ಎಂದು ಹೇಳಿದರು. ಲಯನ್ಸ್ ಜಿಲ್ಲೆ 317 ಡಿ ಜಿಲ್ಲಾ ಗವರ್ನರ್ ಕುಡ್ಲಿ ಅರವಿಂದ ಶೆಣೈ ಸಮಾರಂಭವನ್ನು ಉದ್ಘಾಟಿಸಲಿದ್ದು ಹಾಗೂ ಬಹುಮಾನ ವಿತರಿಸಲಿದ್ದಾರೆ. ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಪ್ರಧಾನ ಅರ್ಚಕರಾದ ವೇದಮೂರ್ತಿ ಹರಿನಾರಾಯಣ ಅಸ್ರಣ್ಣ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಗೌರವ ಅತಿಥಿಗಳಾಗಿ ಸಂಸದ ಕ್ಯಾಪ್ಟನ್ ಬ್ರಜೇಶ್ ಚೌಟ,…
ಉಡುಪಿ, ಸೆಪ್ಟೆಂಬರ್ 16:ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಉಡುಪಿ ಜಿಲ್ಲೆಯಲ್ಲಿ ತಾತ್ಕಾಲಿಕ ಸುಡುಮದ್ದು ಮಾರಾಟ ಮಳಿಗೆ ತೆರೆಯಲು ಆಸಕ್ತ ನಾಗರಿಕರು ಹಾಗೂ ವ್ಯಾಪಾರಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಸುಡುಮದ್ದು ಮಾರಾಟಕ್ಕೆ ತಾತ್ಕಾಲಿಕ ಪರವಾನಿಗೆ ಪಡೆಯಲು ಇಚ್ಛಿಸುವವರು ಅಕ್ಟೋಬರ್ 10ರ ಒಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಅರ್ಜಿ ಸಲ್ಲಿಸಲು ಐಇ-5 ನಮೂನೆ ಬೇಕಾಗಿದ್ದು, ಅದು ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿದೆ. ತಹಶೀಲ್ದಾರರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದಲ್ಲಿ ರಚಿಸಲಾದ ಸಮಿತಿಗೆ ಅರ್ಜಿ ಸಲ್ಲಿಸಿ ಅಗತ್ಯ ನಿರಾಕ್ಷೇಪಣಾ ಪತ್ರ ಪಡೆದು, ನಂತರ ಜಿಲ್ಲಾಧಿಕಾರಿಗಳ ಕಚೇರಿಗೆ ಸಲ್ಲಿಸಬೇಕಾಗುತ್ತದೆ. ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ₹300 ಪರಿಶೀಲನಾ ಶುಲ್ಕ ಮತ್ತು ಪರವಾನಿಗೆ ಮಂಜೂರಾದ ಬಳಿಕ ₹600 ಪರವಾನಿಗೆ ಶುಲ್ಕ ಪಾವತಿಸಬೇಕಾಗುತ್ತದೆ. ಅರ್ಜಿ ಜೊತೆಗೆ ಸಲ್ಲಿಸಬೇಕಾದ ದಾಖಲೆಗಳು: ತಾತ್ಕಾಲಿಕ ಅಂಗಡಿ ತೆರೆಯುವ ಸ್ಥಳದ ನೀಲಿ ನಕ್ಷೆ ಅರ್ಜಿದಾರರ ಭಾವಚಿತ್ರ ಜಮೀನಿನ ಇತ್ತೀಚಿನ ಪಹಣಿ ಪತ್ರ ಖಾಸಗಿ ಜಮೀನಾಗಿದ್ದರೆ ಮಾಲಕರ ಒಪ್ಪಿಗೆ ಪತ್ರ (₹100 ಸ್ಟಾಂಪ್ ಪೇಪರ್‌ನಲ್ಲಿ) ಸರ್ಕಾರಿ ಜಮೀನಾದರೆ…
ಮಂಗಳೂರು, ಸೆಪ್ಟೆಂಬರ್ 16: ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ಹೊನ್ನಕಟ್ಟೆ – ಕಾನಾ ರೈಲ್ವೆ ಮೇಲ್ಸೇತುವೆಯಲ್ಲಿ ಕಾಂಕ್ರೀಟೀಕರಣ ಕಾರ್ಯ ಪ್ರಾರಂಭವಾಗುತ್ತಿರುವುದರಿಂದ, ಸೆಪ್ಟೆಂಬರ್ 17 ರಿಂದ ಅಕ್ಟೋಬರ್ 16ರವರೆಗೆ, ಒಟ್ಟು 30 ದಿನಗಳ ಕಾಲ ಸೇತುವೆ ಮೇಲೆ ಎಲ್ಲಾ ರೀತಿಯ ವಾಹನ ಸಂಚಾರ ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಬದಲಿ ಮಾರ್ಗವಿವರ: ➡️ ಮಂಗಳೂರು → ಎಂ.ಆರ್.ಪಿ.ಎಲ್ (MRPL) ಕಡೆಗೆ ಹೋಗುವ ವಾಹನಗಳು: ➡️ MRPL → ಮಂಗಳೂರು ಕಡೆಗೆ ಬರುವ ವಾಹನಗಳು: ಸುರತ್ಕಲ್–ಗೋವಿಂದದಾಸ್ ಮಾರ್ಗದಲ್ಲಿ ಹೆಚ್ಚುವರಿ ನಿಯಂತ್ರಣೆ: ಸಾರ್ವಜನಿಕರಿಗೆ ಮನವಿ: ಮಹಾನಗರಪಾಲಿಕೆ ಆಯುಕ್ತರು ಸಾರ್ವಜನಿಕರು ಹಾಗೂ ವಾಹನ ಚಾಲಕರಿಗೆ ಈ ತಾತ್ಕಾಲಿಕ ಬದಲಾವಣೆಗಳನ್ನು ಗಮನಿಸಿ ಸಹಕರಿಸಲು ಕೋರಿದ್ದಾರೆ. ಕಾಮಗಾರಿಯನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಿ, ಮುಂಬರುವ ದಿನಗಳಲ್ಲಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದು ತಿಳಿಸಲಾಗಿದೆ.
ಮಂಗಳೂರು:ಸೆಪ್ಟೆಂಬರ್ 16 ಮಂಗಳೂರಿನಿಂದ ತುಳು ಎಂ.ಎ. ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರವನ್ನು ಕೋಣಾಜೆಗೆ ಸ್ಥಳಾಂತರಿಸುವ ವಿಶ್ವವಿದ್ಯಾನಿಲಯ ನಿರ್ಧಾರವನ್ನು ಹಿಂಪಡೆಯುಮಂತೆ ಸಲಹೆ ನೀಡಲು ಅಖಿಲ ಭಾರತ ತುಳು ಒಕ್ಕೂಟ (ರಿ.) ಸ್ಪೀಕರ್ ಯು.ಟಿ. ಖಾದರ್‌ಗೆ ಮನವಿ.ಮಂಗಳೂರು: ಮಂಗಳೂರಿನಿಂದ ತುಳು ಎಂ.ಎ. ಸ್ನಾತಕೋತ್ತರ ಪದವಿ ಅಧ್ಯಯನ ಕೇಂದ್ರವನ್ನು ಕೋಣಾಜೆಗೆ ಸ್ಥಳಾಂತರಿಸುವ ವಿಶ್ವವಿದ್ಯಾನಿಲಯ ನಿರ್ಧಾರವನ್ನು ಹಿಂಪಡೆಯುವಂತೆ ಸಲಹೆ ನೀಡಲು ಅಖಿಲ ಭಾರತ ತುಳು ಒಕ್ಕೂಟ (ರಿ.) ಸ್ಪೀಕರ್ ಯು.ಟಿ. ಖಾದರ್‌ಗೆ ಮನವಿ ಸಲ್ಲಿಸಿದೆ.2018ರಲ್ಲಿ ವಿಶ್ವ ವಿದ್ಯಾನಿಲಯದ ಹಂಪನಕಟ್ಟೆಯ ಸಂಧ್ಯಾ ಕಾಲೇಜಿನಲ್ಲಿ ಪ್ರಾರಂಭಿಸಿದ ತುಳು ಎಂ.ಎ. ಸ್ನಾತಕೋತ್ತರ ಪದವಿ ಅಧ್ಯಯನವು ತುಳುನಾಡ ಜನರಿಗೆ ನೀಡಿದ ಅತ್ಯಂತ ಪ್ರಮುಖ ಕೊಡುಗೆಯಾಗಿದೆ. ಈ ಕೇಂದ್ರದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲಾ ಮೂಲಭೂತ ಸೌಕರ್ಯಗಳಿದ್ದು ಅನುಕೂಲವಾಗಿರುತ್ತದೆ. ಇದೀಗ ಈ ಅಧ್ಯಯನ ಕೇಂದ್ರವನ್ನು ಕೋಣಾಜೆಯ ಮಂಗಳ ಗಂಗೋತ್ರಿಗೆ ಸ್ಥಳಾಂತರಿಸುವ ಪ್ರಯತ್ನ ನಡೆಯುತ್ತಿರುವುದು ಇದಕ್ಕೆ ಅಖಿಲ ಭಾರತ ತುಳು ಒಕ್ಕೂಟ ಹಾಗೂ ಸರ್ವ ಧರ್ಮದ ತುಳುವರು ಈ ನಿರ್ಧಾರವನ್ನು ಹಿಂತೆಗೆಯಲು ವಿಶ್ವವಿದ್ಯಾನಿಲಯವನ್ನು ಆಗ್ರಹಿಸುತ್ತಿದೆ.ಬಹಳಷ್ಟು ವಿದ್ಯಾರ್ಥಿಗಳು ಹಗಲಿನಲ್ಲಿ ಬೇರೆ…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
