Author: Tulunada Surya

ತುಳುನಾಡ ರಕ್ಷಣಾ ವೇದಿಕೆ ಇದರ ನೂತನ ಭೈರಂಪಲ್ಲಿ ಘಟಕ ವನ್ನು ಭೈರಂಪಳ್ಳಿಯಲ್ಲಿ ಉದ್ಘಾಟಿಸುವ ಬಗ್ಗೆ ಹಾಗೂ ಕಾರ್ಯಕಾರಿ ಸಮಿತಿಯನ್ನು ರಚಿಸಲು ಪೂರ್ವಭಾವಿ ಸಭೆ ಹಾಗೂ ಸದಸ್ಯತ್ವ ನೊಂದಾವಣಿ ದಿನಾಂಕ 08-12-2024 ರಂದು ಬೈರಂಪಲ್ಲಿ ಸಾಂತ್ಯಯರ್ ನಲ್ಲಿ ನಡೆಸಲಾಯಿತು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೀಕ್ಷಕರಾದ ಪ್ರಾಂಕಿ ಡಿಸೋಜ ರವರು ಸಂಘಟನೆ ಬಗ್ಗೆ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಸಭೆಯಲ್ಲಿ ನಿತೀನ್ ಶೆಟ್ಟಿ , ಕೃಷ್ಣ ನಂದ್, ಸಂತೋಷ ಶೆಟ್ಟಿ, ಮಂಜುನಾಥ್, ಹರೀಶ್ ಕುಲಾಲ್, ಸುಚೆತನ್, ಹರೀಶ್, ನರಸಿಂಹ, ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು

Read More

10 ರ ಹರೆಹದ ಸನ್ನಿಧಿ ಕಾಶಕೋಡಿ ಕನ್ನಡ ತುಳು ಅಷ್ಟೇ ಅಲ್ಲದೆ ಮಲಯಲಂ ಇಂಗ್ಲಿಷ್ ಹಿಂದಿ ಹೀಗೆ ಆರುಭಾಷೆಗಳಲ್ಲಿ ಮತದಾನ ಜಾಗೃತಿ ನಡೆಸಿದ್ದು ಉಳಿದಂತೆ ತುಳು ಕನ್ನಡ ಭಾಷೆಗಳಲ್ಲಿ ಆರೋಗ್ಯ ಜಾಗೃತಿ, ಪರಿಸರಸ್ನೇಹಿ ಹಬ್ಬ ಆಚರಣೆ ಕುರಿತಂತೆ ಜಾಗೃತಿ ಮೂಡಿಸಿ ಎಲ್ಲರ ಪ್ರಸಂಶೆಗೆ ಪಾತ್ರಳಾಗಿರುತ್ತಾಳೆ. ಬಾಲಕಿಯವಿನೂತನ ರೀತಿಯಲ್ಲಿ ಪರಿಸರ ಸ್ನೇಹಿ ಗಣಪ. ಸ್ವಚ್ಛತೆಯ ಅಭಿಯಾನ ಹೀಗೆ ಹಲವು ಜಾಗೃತಿಯನ್ನು ಮನೆ ಮನೆಗೆ ಹಾಗೂ ಸಾರ್ವಜನಿಕ ಪ್ರದೇಶಗಳಲ್ಲಿ ಆರಿವು ಮೂಡಿಸಿದ ಈ ಕೆಲಸ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಕರ್ನಾಟಕ ವಿಧಾನಸಭಾ ಅಧ್ಯಕ್ಷರಾದ ಯು ಟಿ ಖಾದರ್ ಗೃಹ ಮಂತ್ರಿ ಡಾ. ಪರಮೇಶ್ವರ್ ಜಿ. ಕೇಂದ್ರ ರೈಲ್ವೆ ಖಾತೆಯ ಸಹಾಯಕ ಸಚಿವರಾದ ಸೋಮಣ್ಣ ಸ್ಕೌಟ್ & ಗೈಡ್ಸ ಸಂಸ್ಥೆಯ ರಾಜ್ಯ ಉಸ್ತುವಾರಿಯಾದ ಪಿ. ಜಿ. ಆರ್ ಸಿಂಧ್ಯಾ ಆರೋಗ್ಯ ಸಚಿವರಾದ ದಿನೇಶ್ ಗುಂಡೂರಾವ್ ಸಂಸದರಾದ ಬ್ರಿಜೇಶ್ ಚೌಟ ಗೌರವಿಸಿದರು. ಹಾಗೆಯೇ ದಿನಾಂಕ 08-12-2024 ರಂದು ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೇಶ್…

Read More

ದೇಶದಲ್ಲಿ ಯುವಕರ ಹೃದಯದ ಆರೋಗ್ಯದ ಬಗ್ಗೆ ಹೆಚ್ಚುತ್ತಿರುವ ಆತಂಕದ ನಡುವೆ, ಪುಣೆಯ 30 ವರ್ಷದ ಕುಸ್ತಿಪಟು ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಹೃದಯಾಘಾತದಿಂದ ದುರಂತವಾಗಿ ಸಾವನ್ನಪ್ಪಿದ್ದಾರೆ. ಮೃತ ಕುಸ್ತಿಪಟು ವಿಕ್ರಮ್ ಪರ್ಖಿ ಕುಸ್ತಿ ಲೋಕದಲ್ಲಿ ಚಿರಪರಿಚಿತರಾಗಿದ್ದರು. ಮುಳಶಿ ತಾಲೂಕಿನ ಮಾನದಲ್ಲಿ ವಾಸವಿದ್ದ ಅವರು ಬುಧವಾರ ಬೆಳಗ್ಗೆ ತಾಲೀಮು ನಿಮಿತ್ತ ಮಾನದಲ್ಲಿರುವ ಜಿಮ್‌ಗೆ ತೆರಳಿದ್ದರು ವ್ಯಾಯಾಮ ಮಾಡುವಾಗ, ವಿಕ್ರಮ್ ಪರ್ಖಿ ಅಸ್ವಸ್ಥಗೊಂಡು ಕುಸಿದು ಬಿದ್ದಿದ್ದಾರೆ. ತಕ್ಷಣವೇ ಪಿಂಪ್ರಿ ಚಿಂಚ್‌ವಾಡ್‌ನಲ್ಲಿರುವ ಆಸ್ಪತ್ರೆಗೆ ಸಾಗಿಸಲಾಯಿತು. ದುರದೃಷ್ಟವಶಾತ್ ಚಿಕಿತ್ಸೆ ಪಡೆಯುವ ಮುನ್ನವೇ ಕೊನೆಯುಸಿರೆಳೆದಿದ್ದಾರೆ. ವಿಕ್ರಮ್ ಪರ್ಖಿ ಅವರು ಮಾಜಿ ಸೈನಿಕ ಶಿವಾಜಿರಾವ್ ಪರ್ಖಿ ಅವರ ಪುತ್ರ ಮತ್ತು ಯುವ ನಾಯಕ ಬಾಬಾಸಾಹೇಬ್ ಪರ್ಖಿ ಅವರ ಸಹೋದರ. ಕಳೆದ ವರ್ಷ ಮಾರ್ಚ್ನಲ್ಲಿ ಪುಣೆಯ ಮಾಮಾಸಾಹೇಬ್ ಮೊಹಲ್ ಕುಸ್ತಿ ಸಂಕುಲ್‌ನಲ್ಲಿ ಮಾರುಂಜಿಯಲ್ಲಿ ತಾಲೀಮು ಮಾಡಿದ ನಂತರ ಕುಸ್ತಿಪಟು ಸ್ವಪ್ನಿಲ್ ಪಡಾಲೆ ಹೃದಯಾಘಾತದಿಂದ ನಿಧನರಾಗಿದ್ದರು

Read More

ಸರ್ವ ಕಾಲೇಜು ವಿದ್ಯಾರ್ಥಿ ಸಂಘ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ “ಸ್ವಾಮಿ ದಯಾನಂದ ಸರಸ್ವತಿ”ಯವರ 200ನೇ ವರ್ಷದ ಜನ್ಮ ಶತಾಬ್ದಿ ಅಂಗವಾಗಿ “ಜಿಲ್ಲಾ ಪದಾಧಿಕಾರಿಗಳ ನಾಯಕತ್ವ ಶಿಬಿರ” ಆರ್ಯ ಸಮಾಜ ಸಭಾಂಗಣದಲ್ಲಿ ನಡೆಯಿತು. ಶಿಬಿರವನ್ನು ಭಾರತೀಯ ವೈದ್ಯಕೀಯ ಸಂಘ ಕರ್ನಾಟಕ ಇದರ ರಾಜ್ಯ ಉಪಾಧ್ಯಕ್ಷರಾದ ಡಾ. ಅಣ್ಣಯ್ಯ ಕುಲಾಲ್ ನೆರವೇರಿಸಿದರು. ಮುಖ್ಯ ಅತಿಥಿಯಾಗಿ ದಕ್ಷಿಣ ಕನ್ನಡ ಜಿಲ್ಲಾ ಹೋಟೆಲ್ ಮಾಲಕರ ಸಂಘದ ಅಧ್ಯಕ್ಷರಾದ ಲಯನ್ ಚಂದ್ರಹಾಸ ಶೆಟ್ಟಿ, acsa ದ ರಾಜ್ಯಾಧ್ಯಕ್ಷರಾದ ತುಷಾರ್ ಕದ್ರಿ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕ ಅಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು, acsa ನಾಯಕರಾದ ತನುಷ್ ಎಮ್ ಶೆಟ್ಟಿ , ಜಗತ್ ಎಕ್ಕೂರ್ , ದೀಕ್ಷಿತ್ ಅತ್ತಾವರ್, ಸಿದ್ದಾಂತ ಎಸ್ ಶೆಟ್ಟಿ ,ಅಬೂಬಕರ್ ಸಿದ್ದೀಕ್ , ಅರೆ ಸಮಾಜ ಕಾರ್ಯದರ್ಶಿಗಳಾದ , ಪುರುಷೋತ್ತಮ್ ಆರ್ಯ, ದೀಪಕ್ ಮಂಜೇಶ್ವರ್ ಉಪಸ್ಥಿತರಿದ್ದರು. ಲಯನ್ ಚಂದ್ರಹಾಸ ಶೆಟ್ಟಿ ಅವರು “ವಿದ್ಯಾರ್ಥಿ ಜೀವನ ಮತ್ತು ನಾಯಕತ್ವ “ವಿಚಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ತಮ್ಮ…

Read More

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವೈದ್ಯರ ಘಟಕದ ಪ್ರಮುಖ ಪದಾಧಿಕಾರಿಗಳ ಸಭೆಯು ಉಡುಪಿ ಜಿಲ್ಲಾ ವೈದ್ಯರ ಘಟಕದ ಡಾ . ಸಂದೀಪ್ ಸನಿಲ್ ರವರ‌ ಅಧ್ಯಕ್ಷತೆಯಲ್ಲಿ. ದಿನಾಂಕ 28-11-2024ರಂದು ಬುಧವಾರ ಮಧ್ಯಾಹ್ನ 2 ಗಂಟೆಗೆ ಉಡುಪಿ ಜಿಲ್ಲಾ ತುರವೇ ಕಚೇರಿಯಲ್ಲಿ ಜರಗಿತು. ‌ ಸಭೆಯಲ್ಲಿ ಮಾತನಾಡಿದ ತುರವೇ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ನಮ್ಮ ಸಂಘಟನೆ ನಿಷ್ಟಾವಂತ ಕಾರ್ಯಕರ್ತರ, ಪದಾಧಿಕಾರಿಗಳ, ಹಿತೈಷಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದ್ದು ಅವರ ಬೆಂಬಲಕ್ಕೆ ನಮ್ಮ ಸಂಘಟನೆಯ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಿಸುತ್ತಿರುವ ವಿವಿದ ಘಟಕ ಸದಾ ಸಿದ್ಧರಿದ್ದೇವೆ ಎಂದರು. ಸಭೆಯಲ್ಲಿ ಕೇಂದ್ರೀಯ ಮಂಡಳಿ ಸಂಘಟನೆ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ರಾಜ್ಯ ವೈದ್ಯರ ಘಟಕ ಸಂಘಟನಾ ಕಾರ್ಯದರ್ಶಿ ಡಾ. ರವೀಂದ್ರ , ಕುಂದಾಪುರ ತಾಲೂಕು ಘಟಕ ಅಧ್ಯಕ್ಷ ಸತೀಶ್ ಖಾರ್ವಿ ,ಡಾ. ಸೂರಜ್ ಎಕೆ , ಡಾ. ಪ್ರವೀಣ್ ಶೆಟ್ಟಿ ಡಾ. ಚಂದ್ರಶೇಖರ್ ಶೆಟ್ಟಿ , ಡಾ. ರಾಜೇಶ್ ಶೆಟ್ಟಿ ,…

Read More

ತುಳುನಾಡ ರಕ್ಷಣಾ ವೇದಿಕೆ, ಕಾರ್ಮಿಕ ಘಟಕ ಉಡುಪಿ ಜಿಲ್ಲೆ ಇವರ ವತಿಯಿಂದ ಕಾಮದೇನು ಗೋಶಾಲಾ ಮಹಾ ಸಂಘ ನಂಚಾರು ಇವರಿಗೆ ಎರಡು ಪಿಕಪ್ ವಾಹನಗಳ ಮೂಲಕ 65 ಪಿಂಡಿ ಒಣಹುಲ್ಲು ಸಮರ್ಪಣೆ ಮಾಡಲಾಯಿತು ಈ ಸಂದರ್ಭ ತುಳುನಾಡು ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷರಾದ ಜಯ ಪೂಜಾರಿ , ಫ್ರಾಂಕಿ ಡಿಸೋಜ ಕೊಳಲಗಿರಿ, ಜಿಲ್ಲಾ ವೀಕ್ಷಕರು, ರೋಶನ್ ಬಂಗೇರ, ಸಂಘಟನಾ ಕಾರ್ಯದರ್ಶಿ ಕಾರ್ಮಿಕ ಘಟಕ, ಕುಶಲ ಅಮೀನ್, ಉಪಾಧ್ಯಕ್ಷರು ಕಾರ್ಮಿಕರ ಘಟಕ, ಉಮೇಶ್ ಶೆಟ್ಟಿ ಹಾವಂಜಿ ಜಿಲ್ಲಾ ಉಪಾಧ್ಯಕ್ಷರು ಹಾಗೂ ಗೋಶಾಲೆಯ ಅಧ್ಯಕ್ಷರಾದ ರಾಜೇಂದ್ರ ಚೆಕ್ಕೆರ, ಕಾರ್ಯದರ್ಶಿ ಅಜಿತ್ ಶೆಟ್ಟಿ ಉಪ್ಪುರು ಉಪಸ್ಥಿತರಿದ್ದರು.

Read More

ಮಿಲ್ಲತ್ ನಗರ ಬಂಡಿಕೊಟ್ಯ ಪ್ರದೇಶಕ್ಕೆ ಉಳ್ಳಾಲ ನಗರ ಸಭೆವತಿಯಿಂದ ಪೈಫ್ ಲೈನ್ ನಿಂದ ಸರಬರಾಜು ಆಗುವ ಕುಡಿಯುವ ನೀರು. ಪೆಟ್ರೋಲ್ ಬಣ್ಣಕ್ಕೆ ತಿರುಗಿದೆ. ಇದರ ಕುರಿತು ದಿನಾಂಕ 27-08-2024 ರಂದು ಪತ್ರ ಸಂಖ್ಯೆ 002024(81)ರಲ್ಲಿ ಉಳ್ಳಾಲ ನಗರ ಸಭೆಯ ಪೌರಾಯುಕ್ತರಿಗೆ ಮನವಿ ಲಿಖಿತ ಮುಖಾಂತರ ನೀಡಿದ್ದೇನೆ. ಈಗಾಗಲೇ 4 ತಿಂಗಳು ಆದರೂ ಯಾವುದೇ ರೀತಿಯ ಪರಿಹಾರವನ್ನು ಕಂಡೆತ್ತುವಲ್ಲಿ ಉಳ್ಳಾಲ ನಗರಸಭೆಯ ಅಧಿಕಾರಿಗಳು ವಿಫಲರಾಗಿದ್ದಾರೆ.ಉಳ್ಳಾಲ ನಗರ ಸಭೆ ಅಧಿಕಾರಿಗಳು ಬಹಳ ಬೇಜವಾಬ್ದಾರಿತನ ತೋರಿದ್ದಾರೆ. ಮುಂದಿನ ದಿನಗಳಲ್ಲಿ ನನ್ನ ವಾರ್ಡಿಗೆ ಶುದ್ಧವಾದ ಕುಡಿಯುವ ನೀರನ್ನು ಪೂರೈಸದಿದ್ದರೆ ಉಳ್ಳಾಲ ನಗರ ಸಭೆಯ ಮುಂಭಾಗದಲ್ಲಿ ನನ್ನ ವಾರ್ಡಿನ ನಾಗರಿಕರನ್ನು ಸೇರಿಸಿ ಹಾಹೋ ರಾತ್ರಿ ಧರಣಿಯನ್ನು ಮಾಡುತ್ತೇವೆ.ಉಳ್ಳಾಲ ನಗರ ಸಭೆ ಅಧ್ಯಕ್ಷರು ಹಾಗೂ ಉಳ್ಳಾಲ್ ಸಭೆ ಅಧಿಕಾರಿಗಳು ಈ ಕೂಡಲೆ ಎಚ್ಚೆತ್ತು ಸಾರ್ವಜನಿಕರ ಆರೋಗ್ಯ ದೃಷ್ಟಿ ಕೋನದಲ್ಲಿ ಈ ನೀರು ಸೇವನೆಯಿಂದ ವ್ಯತ್ಯಾಸ ಉಂಟಾದರೆ ಉಳ್ಳಾಲ ನಗರ ಸಭೆಯ ಆಡಳಿತವೇ ಹೊಣೆಗಾರರು

Read More

ತುಳುನಾಡ ಸೂರ್ಯ: ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ರಜತ ಮಹೋತ್ಸವ ಆಚರಣೆಯ ಹಿನ್ನೆಲೆಯಲ್ಲಿ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರಧಾನ ಸಮಾರಂಭ ಕಾರ್ಯಕ್ರಮ ನಾಳೆ (ನ.26) ನಡೆಯಲಿದೆ. ಭೈರವೈಕ್ಯ ಡಾ. ಬಾಲಗಂಗಾಧರನಾಥ ಮಹಾಸ್ವಾಮೀಜಿಗಳ ಪೂರ್ಣಾನುಗ್ರಹದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಬೆಳಗ್ಗೆ 10.30ಕ್ಕೆ ಬಿಜಿಎಸ್ ಸಭಾಂಗಣದಲ್ಲಿ ‘ಬಿಜಿಎಸ್ ಕರಾವಳಿ ರತ್ನ’ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ. ಸುಮಾರು 25 ಮಂದಿ ಸಾಧಕರು ಪ್ರಶಸ್ತಿ ಪಡೆಯಲಿದ್ದಾರೆ. ಈ ವಿಶೇಷ ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಶ್ರೀ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನ್ನಿಧ್ಯವಹಿಸಲಿದ್ದಾರೆ. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನಮ್ ನ ಪರಮಪೂಜ್ಯ ಸ್ವಾಮೀಜಿಗಳಾದ ಶ್ರೀ ಗುರುದೇವಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ. ಶ್ರೀ ಆದಿಚುಂಚನಗಿರಿ ಮಂಗಳೂರು ಶಾಖಾ ಮಠದ ಶ್ರೀ ಡಾ. ಧರ್ಮಪಾಲನಾಥ ಸ್ವಾಮೀಜಿ ದಿವ್ಯ ಉಪಸ್ಥಿತಿ ಇರಲಿದ್ದಾರೆ. ಸಭಾಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ ಭರತ್ ಶೆಟ್ಟಿ, ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ…

Read More

ಮಂಗಳೂರು : ಕಳೆದ ಕೆಲ ದಿನದಿಂದ ಡ್ರೀಮ್ ಡೀಲ್ಸ್ ಗ್ರೂಪ್ನ ಸಿಬ್ಬಂದಿಗಳು ಬಿಡುಗಡೆ ಮಾಡುತ್ತಿರುವ ಲಕ್ಕಿ ಡ್ರಾ ವೇಳೆ ಹಿಂಬದಿ ಇರುವ ಸಿಬ್ಬಂದಿ ತನ್ನ ಕಿಸೆಯಿಂದ ತಮಗೆ ಬೇಕಾದ ಲಕ್ಕಿ ಡ್ರಾ ಕಾಯಿನ್ ಅನ್ನು ಕಣ್ಣಿಗೆ ಬಟ್ಟೆಕಟ್ಟಿದ ವ್ಯಕ್ತಿಗೆ ಕೊಡುವ ಚಿತ್ರಣ ವೈರಲ್ ಆಗಿದ್ದು ಈ ಬಗ್ಗೆ ಡ್ರೀಮ್ ಡೀಲ್ ಗ್ರೂಪ್ ನ ಆಡಳಿತ ವರ್ಗ ಸ್ಪಷ್ಟನೆ ನೀಡಿದೆ. ಈ ಬಗ್ಗೆ ಪತ್ರಿಕಾಗೋಷ್ಠಿ ಕರೆದಿದ್ದು ಈ ಕೃತ್ಯದಲ್ಲಿ ಕಾಣದ ಕೈಗಳ ಕೈವಾಡವಿದೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರುದಾಖಲಾಗಿದ್ದು ಈ ಕೃತ್ಯದಲ್ಲಿ ಭಾಗಿಯಾದವರ ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.ನಿನ್ನೆ ಲಕ್ಕಿ ಡ್ರಾ ಸಂದರ್ಭದಲ್ಲಿ ಉಬೈದ್ ಮತ್ತು ಹರ್ಷಿತ್ ಅನ್ನುವ ನಮ್ಮ ಕೆಲಸದವರು ಸಂಸ್ಥೆಗೆ ಮೋಸ ಮಾಡಿದ್ದಾರೆ. ಇದು ಗಮನಕ್ಕೆ ಬಂದ ತಕ್ಷಣವೇ ಮರು ಡ್ರಾ ಮಾಡಿದ್ದೇವೆ. ಬಳಿಕ ಅವರ ವಿರುದ್ಧ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದೇವೆ. ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಕಂಪೆನಿ ಮುಂದೆಯೂ ಜನರ ವಿಶ್ವಾಸಕ್ಕೆ ಬದ್ಧವಾಗಿದೆ. ಪೊಲೀಸ್…

Read More

ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷ ಕೃಷ್ಣ ಕುಮಾರ್ ಅಧ್ಯಕ್ಷತೆಯಲ್ಲಿ ಕುಲ ಕುಲ ಕುಲವೆಂದು ಬಡಿದಾಡಬೇಡಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ ಅದ್ಭುತ ಸಂದೇಶ ನೀಡಿದ ಸಮಾಜ ಸುಧಾರಕ ಸಂತ ಕನಕದಾಸರ ಜಯಂತಿ ಆಚರಣೆ ಕಚೇರಿಯಲ್ಲಿ ದಿನಾಂಕ 18- 11 -2024 ಸೋಮವಾರ ಸಂಜೆ 5:00 ಗಂಟೆಗೆ ಸರಿಯಾಗಿ ಜರಗಿತು . ಜಿಲ್ಲಾ ವೀಕ್ಷಕ ಫ್ರ್ಯಾಂಕಿ ಡಿಸೋಜಾ ಕೊಳಲಗಿರಿ ಪ್ರಾಸ್ತವಿಕ ಮಾತನಾಡಿದರು, ವೇದಿಕೆಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಮಹಿಳಾ ಪ್ರಧಾನ ಕಾರ್ಯದರ್ಶಿ ನಾಗಲಕ್ಷ್ಮಿ , ಮಹಿಳಾ ಕೋಶಾಧಿಕಾರಿ ಸುನಂದ ಕೋಟ್ಯಾನ್, ಜ್ಯೋತಿ, ಉದಯ್ , ಸಾಬುದ್ದೀನ್ , ಪ್ರೀತಂ ಮತ್ತಿತರರು ಉಪಸ್ಥಿತರಿದ್ದರು

Read More