- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಬೆಂಗಳೂರು: ತುಳು ಭಾಷೆಯನ್ನು ಕರ್ನಾಟಕದ ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ಪ್ರಸ್ತಾಪದ ಹಿನ್ನೆಲೆ, ಆಂಧ್ರಪ್ರದೇಶದಲ್ಲಿ ಹೆಚ್ಚುವರಿ ಅಧಿಕೃತ ಭಾಷೆ ಘೋಷಣೆಯ ಸಂದರ್ಭದಲ್ಲಿ ಅನುಸರಿಸಿದ ಮಾನದಂಡಗಳ ಅಧ್ಯಯನಕ್ಕಾಗಿ ಸರ್ಕಾರ ನೇಮಿಸಿದ್ದ ಸಮಿತಿ ತನ್ನ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಂದಿನ ನಿರ್ದೇಶಕಿ ಕೆ.ಎಂ. ಗಾಯತ್ರಿ ಅವರ ಅಧ್ಯಕ್ಷತೆಯಲ್ಲಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ತಾರಾನಾಥ ಗಟ್ಟಿ ಕಾಪಿಕಾಡ್ ಅವರ ಉಪಸ್ಥಿತಿಯಲ್ಲಿ ಆರು ಸದಸ್ಯರ ಸಮಿತಿ ರಚಿಸಲಾಗಿತ್ತು. ಸಮಿತಿಯು ಜನವರಿ 19 ಮತ್ತು 20ರಂದು ಆಂಧ್ರಪ್ರದೇಶ ರಾಜ್ಯದ ಸಚಿವಾಲಯ ಹಾಗೂ ವಿವಿಧ ಇಲಾಖೆಗಳು ಮತ್ತು ಕಚೇರಿಗಳಿಗೆ ಭೇಟಿ ನೀಡಿ, ಅಲ್ಲಿ ಉರ್ದು ಭಾಷೆಯನ್ನು ಎರಡನೇ ಅಧಿಕೃತ ಭಾಷೆಯಾಗಿ ಘೋಷಿಸುವ ವೇಳೆ ಅನುಸರಿಸಿದ ವಿಧಿವಿಧಾನಗಳು ಮತ್ತು ಆಡಳಿತಾತ್ಮಕ ಮಾನದಂಡಗಳ ಬಗ್ಗೆ ವಿವರವಾದ ಅಧ್ಯಯನ ನಡೆಸಿತು. ಅಧ್ಯಯನದ ಬಳಿಕ ಸಿದ್ಧಪಡಿಸಿದ ವರದಿಯನ್ನು ವಿಕಾಸ ಸೌಧದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಜೆ. ಮಂಜುನಾಥ್ ಅವರಿಗೆ ಸಮಿತಿ ಸದಸ್ಯರು ಅಧಿಕೃತವಾಗಿ ಸಲ್ಲಿಸಿದರು.…
🌼 ಬಂಗಾರಿ ಪರ್ಬೊದ ಸಭಿ ನೆನಪು – 2026 🌼 (56ನೇ ವರ್ಷದ ಕಡೀರ್ದ ತುಳು ಸಂಘಟನೆ) 📅 ದಿನಾಂಕ: 09–03–2026, ಸೋಮವಾರ⏰ ಸಮಯ: ಕಾಂಡೆ 10.00 ಗಂಟೆ – ಮಧ್ಯಾಹ್ನ 1.00 ಗಂಟೆ📍 ಸ್ಥಳ: ಮಂಗಳೂರು ಥಿಯೋಸೋಫಿಕಲ್ ಸೊಸೈಟಿ (ರಿ.), ಪಿ.ವಿ.ಎಸ್. ವೃತ್ತದ ಬಳಿ ⸻ ಗುರ್ಕಾರ್ ಶ್ರೀಮತಿ ಹೇಮಾ ದಾಮೋದರ ನಿಸರ್ಗಗುರ್ಕಾರ್, ತುಳುನಾಡ ಕೂಟ (ರಿ.), ಕುಡ್ಲ ⸻ ಉದ್ಘಾಟನೆ ಶ್ರೀಮತಿ ಪಿ. ಕೆ. ಗೌರವಿ ರಾಜಶೇಖರ್ಉದ್ಯಮಿ ಹಾಗೂ ಅಭಿವೃದ್ಧಿ ಸಮಿತಿ ಸದಸ್ಯರುಶ್ರೀ ಗೋಕರ್ನ ನಾಥ ಕ್ಷೇತ್ರ, ಕೂದ್ರೋಳಿ, ಮಂಗಳೂರು ⸻ ಗಣ್ಯ ಅತಿಥಿಗಳು ಶ್ರೀ ನಿತ್ಯಾನಂದ ಶೆಟ್ಟಿ, ತುಪ್ಪೆಕಲ್ಉದ್ಯಮಿಗುರ್ಕಾರ್, ಮಂಗಳೂರು ಥಿಯೋಸೋಫಿಕಲ್ ಸೊಸೈಟಿ (ರಿ.) ಶ್ರೀಮತಿ ಕುಸುಮಾ ಹೆಚ್. ದೇವಾಡಿಗಅಧ್ಯಕ್ಷರು, ಜಿಲ್ಲಾ ಸಣ್ಣ ಕೈಗಾರಿಕಾ ಸಂಘ ⸻ 🎭 ಸಾಂಸ್ಕೃತಿಕ ಕಾರ್ಯಕ್ರಮ 🎭 ಶ್ರೀಮತಿ ಬಾಲಿನಿ ಎಸ್. ಕರ್ಕೇರ ಹಾಗೂ ತಂಡ ಇವರಿಂದ‘ಸತ್ಯದಪ್ಪೆ ದೇಯಿ ಬೈದೆದಿ’ಎಂಬ ಕಿರು ರೂಪಕ ಪ್ರದರ್ಶನ ⸻ ✍️ ಮಾತೆರ್ನಾ ಮೋಕೆಡ್ ಎದ್ಕೊನುನ•…
ದಕ್ಷಿಣ ಬೆಂಗಳೂರಿನ ಖಾಸಗಿ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರ ವಿರುದ್ಧ ಅತ್ಯಾಚಾರ ಹಾಗೂ ಕ್ರಿಮಿನಲ್ ಬೆದರಿಕೆ ಆರೋಪದಡಿ ಪ್ರಕರಣ ದಾಖಲಾಗಿರುವ ಘಟನೆ ಬೆಳಕಿಗೆ ಬಂದಿದೆ. ಸಂಸ್ಥೆಯ ಮಾಜಿ ಮಹಿಳಾ ನೌಕರಿಯೊಬ್ಬರು ಅಧಿಕೃತ ಸಭೆಗಳ ನೆಪದಲ್ಲಿ ತಮ್ಮ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಜಯನಗರದ ಅಶೋಕ ಪಿಲ್ಲರ್ ಸಮೀಪದಲ್ಲಿರುವ ಖಾಸಗಿ ಆಸ್ಪತ್ರೆಯ ಕಾರ್ಯನಿರ್ವಾಹಕ ನಿರ್ದೇಶಕ ತ್ರಿವಿಕ್ರಮ್ ರಾವ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸುಮಾರು ಮೂರು ತಿಂಗಳ ಹಿಂದೆ ಸಂಸ್ಥೆಗೆ ಸೇರಿದ್ದ ಮಹಿಳೆಯನ್ನು ವಿವಿಧ ಗ್ರಾಹಕರ ಹಾಗೂ ಹೂಡಿಕೆದಾರರ ಸಭೆಗಳಿಗೆ ತನ್ನೊಂದಿಗೆ ಬರಲು ಅವರು ಒತ್ತಾಯಿಸುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.ದೂರುದಾರಿಯ ಪ್ರಕಾರ, ವೃತ್ತಿಪರ ಚರ್ಚೆಗಳ ಹೆಸರಿನಲ್ಲಿ ಖಾಸಗಿ ಸ್ಥಳಗಳಲ್ಲಿ ಭೇಟಿಯಾಗಲು ಕರೆಸಿಕೊಂಡು, ಅನಾಚಾರ ವರ್ತನೆ ತೋರಲಾಗುತ್ತಿತ್ತು. ಕೆಲವೊಮ್ಮೆ ಕಚೇರಿ ಹೊರಗಿನ ಸಭೆಗಳ ಹೆಸರಿನಲ್ಲಿ ತಾರಾ ಹೋಟೆಲ್‌ಗಳಿಗೆ ಕರೆದೊಯ್ಯಲಾಗುತ್ತಿತ್ತು ಎಂದು ಅವರು ಆರೋಪಿಸಿದ್ದಾರೆ. ಒಂದು ಸಂದರ್ಭದಲ್ಲಿ ಎಂ.ಜಿ. ರಸ್ತೆಯ ಓಬೆರಾಯ್ ಹೋಟೆಲ್‌ನ ಕೊಠಡಿಯಲ್ಲಿ ತನ್ನ ಮೇಲೆ ಅತ್ಯಾಚಾರ…
ಮಲ್ಪೆ: ಉಡುಪಿ ಜಿಲ್ಲೆಯ ಹಿಂದೂ ಸಂಘಟನೆಯ ಮುಖಂಡರಾದ ಮಂಜು ಕೊಳ ಅವರ ಮೇಲೆ ಮಂಗಳವಾರ ರಾತ್ರಿ ಮಲ್ಪೆ ಬೀಚ್ ಸಮೀಪ ಚೂರಿ ಇರಿತ ನಡೆದ ಘಟನೆ ಸಂಭವಿಸಿದೆ. ಗಾಯಗೊಂಡ ಅವರನ್ನು ತಕ್ಷಣವೇ ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ. ಮಂಜು ಕೊಳ ಅವರು ಹಿಂದೂ ಯುವಸೇನೆಯ ಮುಖಂಡರಾಗಿದ್ದು, ಉಡುಪಿ ನಗರಸಭೆಯ ಮಾಜಿ ಉಪಾಧ್ಯಕ್ಷೆ ಲಕ್ಷ್ಮೀ ಮಂಜುನಾಥ್ ಅವರ ಪತಿಯಾಗಿದ್ದಾರೆ. ಬೀಚ್ ಬಳಿ ಜೋಡಿಯೊಂದರ ಪ್ರೇಮ ಸಂಬಂಧಿತ ವಿಚಾರವಾಗಿ ರಾಜಿ ಪಂಚಾಯಿತಿ ನಡೆಸಲು ಅವರು ತೆರಳಿದ್ದ ವೇಳೆ ವಾಗ್ವಾದ ಜಗಳಕ್ಕೆ ತಿರುಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಧನುಷ್ ಎಂಬ ಯುವಕನ ವಿಚಾರದಲ್ಲಿ ಮಾತಿನ ಚಕಮಕಿ ತೀವ್ರಗೊಂಡು, ಯುವಕನೊಬ್ಬ ಹೊಟ್ಟೆ ಭಾಗಕ್ಕೆ ಚೂರಿ ಇರಿದಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ತೀವ್ರವಾಗಿ ಗಾಯಗೊಂಡ ಮಂಜು ಕೊಳ ಅವರು ಅಲ್ಲೇ ಕುಸಿದಿದ್ದು, ತಕ್ಷಣ ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದಾರೆ. ಆದರ್ಶ್…
ಮಂಗಳೂರು: ನಿರಂತರ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ bunt community federation indiaറ് ಮುಲ್ಕಿಯಲ್ಲಿ ನಿರ್ಮಾಣಗೊಳ್ಳುತ್ತಿರುವ “ಡಾ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣ” ಕಾಮಗಾರಿಯನ್ನು ತ್ವರಿತಗತಿಯಲ್ಲಿ ಮುಂದುವರಿಸಿದೆ. ಡಿಸೆಂಬರ್ ತಿಂಗಳಲ್ಲಿ ಸಂಕೀರ್ಣವನ್ನು ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದು ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ತಿಳಿಸಿದ್ದಾರೆ. ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಅಮೃತೋತ್ಸವ ಕಟ್ಟಡದ ಸಭಾಂಗಣದಲ್ಲಿ ನಡೆದ ಒಕ್ಕೂಟದ ಆಡಳಿತ ಮಂಡಳಿ ಸಭೆಯಲ್ಲಿ ಮಾತನಾಡಿದ ಅವರು, ಮಹಾದಾನಿ ಡಾ. ಕನ್ಯಾನ ಸದಾಶಿವ ಶೆಟ್ಟಿಯವರ ಆಶಯ ಮತ್ತು ಆಶೀರ್ವಾದದಿಂದ ಸಂಕೀರ್ಣದ ಕಾಮಗಾರಿ ವೇಗವಾಗಿ ಸಾಗುತ್ತಿದೆ ಎಂದರು. ಸಂಕೀರ್ಣದ ಸೌಲಭ್ಯಗಳು ನಿರ್ಮಾಣ ಹಂತದಲ್ಲಿರುವ ಸಂಕೀರ್ಣದಲ್ಲಿ• ಶ್ರೀಮತಿ ಶಶಿರೇಖಾ ಆ ಶೆಟ್ಟಿ ವೇದಿಕೆ• ಕಿರು ಸಭಾಂಗಣ• ಧರ್ಮಚಾವಡಿ• ಪ್ರವೀಣ್ ಭೋಜ ಶೆಟ್ಟಿ ಆಡಳಿತ ಕಚೇರಿ ಇತ್ಯಾದಿ ವ್ಯವಸ್ಥೆಗಳು ಇರಲಿವೆ. ಸಭೆಯನ್ನು ಒಕ್ಕೂಟದ ಮಹಾ ನಿರ್ದೇಶಕ ತೋನ್ಸೆ ಆ ಶೆಟ್ಟಿ ಉದ್ಘಾಟಿಸಿದರು. 40 ವರ್ಷಗಳ ಇತಿಹಾಸ ಹೊಂದಿರುವ ಒಕ್ಕೂಟ, ಐಕಳ ಹರೀಶ್ ಶೆಟ್ಟಿ ಅವರ ನೇತೃತ್ವದಲ್ಲಿ ಹೊಸ ಚೈತನ್ಯ ಪಡೆದುಕೊಂಡಿದೆ. ಬಡವರು…
ಮಂಗಳೂರು, ಮಾ.02: ದ.ಕ ಜಿಲ್ಲೆಯಲ್ಲಿ ಲಂಚದ ಆರೋಪದ ಮೇರೆಗೆ ಮಂಗಳೂರು ವಿಭಾಗದ ಲೋಕಾಯುಕ್ತ ಪೊಲೀಸರು ಮತ್ತೊಂದು ಯಶಸ್ವಿ ಬಲೆ ಬೀಸಿದ್ದಾರೆ. ಕರ್ನಾಟಕ ಸರ್ಕಾರದ ಮಾನ್ಯತೆ ಪಡೆದ ಪ್ರಥಮ ದರ್ಜೆ ಇಲೆಕ್ಟ್ರಿಕಲ್ ಗುತ್ತಿಗೆದಾರರಾಗಿರುವ ಫಿರ್ಯಾದುದಾರರು 2025ನೇ ಸಾಲಿನಲ್ಲಿ ಉಡುಪಿ ಜಿಲ್ಲೆಯ ವಿವಿಧ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ದಾರಿ ದೀಪ ವಿಸ್ತರಣೆಯ ಸರ್ಕಾರಿ ಕಾಮಗಾರಿಗಳನ್ನು ನಿರ್ವಹಿಸಿದ್ದರು. ಈ ಕಾಮಗಾರಿಗಳ ಬಿಲ್ ಪಾವತಿಗಾಗಿ 4 ಶೇಕಡಾ ಪ್ರಮಾಣದಲ್ಲಿ ರೂ.22,600/- ಲಂಚ ನೀಡುವಂತೆ ಮಂಗಳೂರು ಲೋಕೋಪಯೋಗಿ ಇಲಾಖೆಯ ವಿದ್ಯುತ್ ಉಪವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಸ್‌ಡಿಎ ಸಂಪತ್ ಬೇಡಿಕೆ ಇಟ್ಟಿದ್ದರೆಂದು ಆರೋಪಿಸಲಾಗಿದೆ. ಈ ಕುರಿತು ಮಂಗಳೂರು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿತ್ತು. ಇಂದು (02.03.2026) ಆರೋಪಿತ ಎಸ್‌ಡಿಎ ಸಂಪತ್ ಅವರು ಫಿರ್ಯಾದುದಾರರಿಂದ ರೂ.22,600/- (ಇಪ್ಪತ್ತೆರಡು ಸಾವಿರದ ಆರು ನೂರು) ಲಂಚದ ಹಣ ಸ್ವೀಕರಿಸುವ ಸಂದರ್ಭದಲ್ಲಿ ಲೋಕಾಯುಕ್ತ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ತಕ್ಷಣವೇ ಅವರನ್ನು ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಲಾಗಿದೆ. ಈ…
ಕಾಪು: ಉಡುಪಿ ತಾಲೂಕಿನ ಬೈರಂಪಳ್ಳಿ ಗ್ರಾಮದ ಪಂಚಾಯತ್ ವ್ಯಾಪ್ತಿಯ ಸರ್ವೇ ನಂ. 82/3 ರಲ್ಲಿರುವ ಬೆಳ್ಳರ್ಪಾಡಿ ಮಾಣೈ ಹರಿಖಂಡಿಗೆ ರಸ್ತೆ ಪಕ್ಕ ಸುಂದರ ಪೂಜಾರಿ ಮತ್ತು ಶ್ರೀನಿವಾಸ ಪೂಜಾರಿ ಅವರ ಮನೆಗಳ ಸಮೀಪದ 0.79 ಎಕರೆ ಸರಕಾರಿ ಜಾಗವನ್ನು ಶಾಲಾ ಮಕ್ಕಳ ಹಾಗೂ ಗ್ರಾಮಸ್ಥರ ಕ್ರೀಡಾಂಗಣವಾಗಿ ಶಾಶ್ವತವಾಗಿ ಕಾಯ್ದಿರಿಸಲು ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ಘಟಕದ ವತಿಯಿಂದ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಸುಮಾರು 35 ವರ್ಷಗಳಿಂದ ಮಾತ್ರ ಫ್ರೆಂಡ್ಸ ಸಹಯೋಗದೊಂದಿಗೆ ಈ ಜಾಗವನ್ನು ಗ್ರಾಮಸ್ಥರು ಕ್ರೀಡಾಂಗಣವಾಗಿ ಉಪಯೋಗಿಸಿಕೊಂಡು ಬರುತ್ತಿದ್ದಾರೆ. ಸ್ಥಳೀಯ ಮಕ್ಕಳಿಗೆ, ಯುವಕರಿಗೆ ಹಾಗೂ ಸಾರ್ವಜನಿಕ ಕ್ರೀಡಾ ಚಟುವಟಿಕೆಗಳಿಗೆ ಈ ಮೈದಾನ ಅತ್ಯಂತ ಅಗತ್ಯವಾಗಿದೆ. ಗ್ರಾಮದಲ್ಲಿ ಪ್ರತ್ಯೇಕ ಕ್ರೀಡಾಂಗಣದ ವ್ಯವಸ್ಥೆ ಇಲ್ಲದಿರುವುದರಿಂದ ಈ ಜಾಗವೇ ಎಲ್ಲರಿಗೂ ಏಕೈಕ ಮೈದಾನವಾಗಿದ್ದು, ಗ್ರಾಮಸ್ಥರ ಹಿತದೃಷ್ಟಿಯಿಂದ ಇದನ್ನು ಶಾಶ್ವತವಾಗಿ ಕ್ರೀಡಾಂಗಣವಾಗಿ ಉಳಿಸಬೇಕೆಂದು ಒತ್ತಾಯಿಸಲಾಗಿದೆ. ಈ ಸಂಬಂಧ ಬೈರಂಪಳ್ಳಿ ಗ್ರಾಮ ಪಂಚಾಯತ್ 17.07.2014 ರಂದು ನಡೆದ ಸಭೆಯಲ್ಲಿ ನಿರ್ಣಯ ಸಂಖ್ಯೆ 3/14-15 ರಂತೆ…
ಚಿಕ್ಕಮಗಳೂರು: ಜಿಲ್ಲೆಯ ಕೊಪ್ಪ ತಾಲ್ಲೂಕು ಹರಿಹರಪುರದಲ್ಲಿರುವ ಕಾಳನಾಯ್ಕನ ಕಟ್ಟೆ ಶ್ರೀ ರಕ್ತೇಶ್ವರಿ, ವರ್ತೆ ಪಂಜುರ್ಲಿ, ಮರ್ಲು ಚಿಕ್ಕು ದೇವಸ್ಥಾನದ 23ನೇ ವಾರ್ಷಿಕೋತ್ಸವ ಇತ್ತೀಚೆಗೆ ಜರಗಿತು. ಈ ಸಂದರ್ಭದಲ್ಲಿ ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಯಕ್ಷಗಾನ ಕಲಾವಿದರಿಂದ ವಿಶೇಷ ತಾಳಮದ್ದಳೆ ಕೂಟವನ್ನು ಏರ್ಪಡಿಸಲಾಗಿತ್ತು. ಯಕ್ಷ ವೇದಿಕೆ ಹರಿಹರಪುರ ಆಶ್ರಯದಲ್ಲಿ ಕಾರ್ಯಕ್ರಮ ಜರಗಿತು. ಜಾಬಾಲಿ – ನಂದಿನಿ:ಕಟೀಲು ಕ್ಷೇತ್ರ ಮಹಾತ್ಮೆ ಪ್ರಸಂಗದಿಂದ ಆಯ್ದ ‘ಜಾಬಾಲಿ – ನಂದಿನಿ’ ಆಖ್ಯಾನವನ್ನು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಕಲಾವಿದರು ಪ್ರಸ್ತುತಪಡಿಸಿದರು. ಪ್ರಮುಖ ಪಾತ್ರಗಳಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿಂದ ಪ್ರೊ.ಭಾಸ್ಕರ ರೈ ಕುಕ್ಕುವಳ್ಳಿ (ಜಾಬಾಲಿ) ಮತ್ತು ವಿಜಯ ಶಂಕರ ಆಳ್ವ ಮಿತ್ತಳಿಕೆ (ನಂದಿನಿ) ಅರ್ಥಧಾರಿಗಳಾಗಿ ಭಾಗವಹಿಸಿದರು. ಉಳಿದ ಪಾತ್ರಗಳಲ್ಲಿ ಸ್ಥಳೀಯ ಕಲಾವಿದರಾದ ಅರವಿಂದ ಸೋಮಯಾಜಿ (ದೇವೇಂದ್ರ), ಕೆ.ಎಸ್. ಮಂಜುನಾಥ ಹರಿಹರಪುರ (ಶ್ರೀದೇವಿ) ಮತ್ತು ಶ್ರವಣಕುಮಾರ್ (ಪುರಜನರು) ಪಾಲ್ಗೊಂಡರು.ಹಿಮ್ಮೇಳದಲ್ಲಿ ಕಿಗ್ಗ ಹಿರಣ್ಣಾಚಾರ್ ಮತ್ತು ವೆಂಕಟರಮಣ ಮೂರ್ತಿ ಕೊಪ್ಪ ಭಾಗವತರಾಗಿದ್ದರು. ವೆಂಕಟೇಶ ಕೊಗ್ರೆ ಮದ್ದಳೆ ನುಡಿಸಿದರು.ಕಾರ್ಯಕ್ರಮ ಸಂಘಟಕರಾದ ಕೆ. ಎಸ್. ಮಂಜುನಾಥ…
ಕುಂದಾಪುರ, ಮಾ.1: ಹೊಸಂಗಡಿಯ ಭಾಗಿಮನೆ ಸಮೀಪ ಟ್ರೆಕ್ಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರು ನದಿಯಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ರವಿವಾರ ಸಂಭವಿಸಿದೆ. ಮೃತರನ್ನು ಶುಭಶ್ರೀ ಕಾರಂತ್ (53) ಎಂದು ಗುರುತಿಸಲಾಗಿದೆ. ಅವರು ಸ್ಥಳೀಯವಾಗಿ ಪರಿಚಿತ ಉದ್ಯಮಿಯಾಗಿದ್ದರು ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ, ಕುಂದಾಪುರದಿಂದ ಸುಮಾರು 8–10 ಜನರ ತಂಡ ರವಿವಾರ ಬೆಳಗ್ಗೆ ಹೊಸಂಗಡಿಯ ಮೆಟ್ಕಲ್ ಗುಡ್ಡ ಪ್ರದೇಶಕ್ಕೆ ಟ್ರೆಕ್ಕಿಂಗ್‌ಗೆ ತೆರಳಿತ್ತು. ಟ್ರೆಕ್ಕಿಂಗ್ ಮುಗಿದ ಬಳಿಕ ಸಮೀಪದ ನದಿಯ ಬಳಿ ವಿಶ್ರಾಂತಿ ಪಡೆಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ. ಈಜಲು ನದಿಗೆ ಇಳಿದ ವೇಳೆ ಅಥವಾ ಕಾಲು ಜಾರಿ ನೀರಿಗೆ ಬಿದ್ದ ಪರಿಣಾಮ ಮುಳುಗಿರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ತಂಡದ ಸದಸ್ಯರು ತಕ್ಷಣ ಸ್ಥಳೀಯರ ಸಹಾಯದಿಂದ ಹುಡುಕಾಟ ನಡೆಸಿದರೂ, ಮಹಿಳೆಯನ್ನು ರಕ್ಷಿಸಲು ಸಾಧ್ಯವಾಗಲಿಲ್ಲ. ಬಳಿಕ ಮಾಹಿತಿ ಪಡೆದ ಪೊಲೀಸರು ಮತ್ತು ಸ್ಥಳೀಯರು ಮೃತದೇಹವನ್ನು ಮೇಲಕ್ಕೆತ್ತಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕುಂದಾಪುರದ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮಾಸೆಬೈಲು ಪೊಲೀಸ್ ಠಾಣೆ ಪೊಲೀಸರು…
ಟೆಹ್ರಾನ್: ಹತ್ಯೆಗೀಡಾದ ಅಯತೊಲ್ಲಾ ಅಲಿ ಖಮೇನಿ ಅವರ ಮಧ್ಯಂತರ ಉತ್ತರಾಧಿಕಾರಿಯಾಗಿ ಅಯತೊಲ್ಲಾ ಅಲಿ ರೆಜಾ ಅರಾಫಿ ಅವರನ್ನು ನೇಮಿಸಲಾಗಿದೆ. ಅಲಿ ರೆಜಾ ಅರಾಫಿ ಹಿರಿಯ ಧಾರ್ಮಿಕ ವಿದ್ವಾಂಸರು. 67 ವರ್ಷದ ಅಯತೊಲ್ಲಾ ಅಲಿ ರೆಜಾ ಅರಾಫಿ ಅವರು ದಿವಂಗತ ಅಯತೊಲ್ಲಾ ಅಲಿ ಖಮೇನಿ ಅವರ ಆಪ್ತ ಸಹಾಯಕರೂ ಆಗಿದ್ದಾರೆ. ಹೊಸ ಸರ್ವೋಚ್ಚ ನಾಯಕ ಆಯ್ಕೆಯಾಗುವವರೆಗೆ ಅಲಿ ರೆಜಾ ನೇತೃತ್ವದ ಮೂವರು ಸದಸ್ಯರ ಆಡಳಿತ ಮಂಡಳಿಯು ಆಡಳಿತ ನಡೆಸಲಿದೆ. ಇರಾನ್‌ನ ಸಾಂವಿಧಾನಿಕ ವ್ಯವಸ್ಥೆಯಡಿಯಲ್ಲಿ, ಮಧ್ಯಂತರ ಮಂಡಳಿಯಲ್ಲಿ ಅಯತೊಲ್ಲಾ ಅಲಿರೆಜಾ ಅರಾಫಿ ಜೊತೆಗೆ, ದೇಶದ ಅಧ್ಯಕ್ಷ ಮಸೌದ್ ಪೆಸೆಕಿಯನ್ ಮತ್ತು ಮುಖ್ಯ ನ್ಯಾಯಮೂರ್ತಿ ಘೋಲಮ್-ಹೊಸೇನ್ ಮೊಹ್ಸೆನ್-ಎಜೆಯ್ ಸೇರಿದ್ದಾರೆ. ಅರಾಫಿ ಪ್ರಸ್ತುತ ಇರಾನ್‌ನ ಪ್ರಬಲ ಗಾರ್ಡಿಯನ್ ಕೌನ್ಸಿಲ್‌ನ ಉಪಾಧ್ಯಕ್ಷರಾಗಿದ್ದಾರೆ, ಇದು ಚುನಾವಣೆಗಳು ಮತ್ತು ಸಂಸತ್ತು ಅಂಗೀಕರಿಸಿದ ಕಾನೂನುಗಳಿಗೆ ಅಭ್ಯರ್ಥಿಗಳನ್ನು ಪರಿಶೀಲಿಸುತ್ತದೆ. ಅವರು ಇರಾನ್‌ನ ಸೆಮಿನರಿ ವ್ಯವಸ್ಥೆಯ ಮುಖ್ಯಸ್ಥರೂ ಆಗಿದ್ದಾರೆ ತಂತ್ರಜ್ಞರಾದ ಅಯತೊಲ್ಲಾ ಅಲಿರೆಜಾ ಅರಾಫಿ ಅವರು ಅರೇಬಿಕ್ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುತ್ತಾರೆ. ಅವರು…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
