Author: Tulunada Surya

ಬ್ರಹ್ಮಾವರ : ಉಡುಪಿ ಜಿಲ್ಲೆಯ ಬ್ರಹ್ಮಾವರ ಸಮೀಪ ಅಕ್ರಮವಾಗಿ ಇಸ್ಪೀಟು ಜುಗಾರಿ ಆಟ ಆಡುತ್ತಿರುವಾಗ ಖಚಿತ ಮಾಹಿತಿ‌ ಮೇರೆಗೆ ಪೊಲೀಸರು ದಾಳಿ ಮಾಡಿ ಆರು ಮಂದಿಯನ್ನು ಅರೆಸ್ಟ್ ಮಾಡಿದ್ದಾರೆ. ಆರೋಪಿಗಳು ಅಂದರ್ ಬಾಹರ್ ಸ್ಥಳ ದಲ್ಲಿ ಆಟಕ್ಕೆ ಬಳಸುತ್ತಿದ್ದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದ ಸಾರಾಂಶ : ಬ್ರಹ್ಮಾವರ ಪೊಲಿಸ್ ಠಾಣಾ ಸರಹದ್ದಿನ ವಾರಂಬಳ್ಳಿ ಗ್ರಾಮದ ಓಝೋನ್ ಲಾಡ್ಜನ 2 ನೇ ಮಹಡಿಯ ರೂಮ್ ಒಂದರಲ್ಲಿನ ಅಂದರ್ ಬಾಹರ್ ಇಸ್ಪೀಟ್ ಜುಗಾರಿ ಆಟದ ಅಡ್ಡೆಗೆ ಬ್ರಹ್ಮಾವರ ಪೊಲೀಸ್ ಠಾಣಾ ಉಪನಿರೀಕ್ಷಕರು ಹಾಗೂ ಸಿಬ್ಬಂದಿಯವರು ಧಾಳಿ ನಡೆಸಿ 1)ಗೋಪಾಲ ನಾಯ್ಕ, ಕುಳ್ಳಂಜೆ ಗ್ರಾಮ, ಕುಂದಾಪುರ, 2) ರಮೇಶ್, ಕಾವೂರು ಗ್ರಾಮ, ಮಂಗಳೂರು, 3) ಅಭಿಲಾಷ, ಕಾವೂರು ಗ್ರಾಮ, ಮಂಗಳೂರು 4) ವಿಕ್ರಮ್, ಕಾವೂರು ಗ್ರಾಮ, ಮಂಗಳೂರು, 5) ರತ್ನಾಕರ ಶೆಟ್ಟಿ, ಕೊರ್ಗಿ ಗ್ರಾಮ, ಕುಂದಾಪುರ, 6) ಮೊಹಮ್ಮದ್ ಹುಸೇನ್, ಮಣಿಪಾಲ, ಉಡುಪಿ ಎಂಬುವವರನ್ನು ವಶಕ್ಕೆ ಪಡೆದಿದ್ದು, ಆಟಕ್ಕೆ ಬಳಸಿದ ನಗದು ರೂ. 2,38,000/-, ಆರೋಪಿತರ…

Read More

ಇಂದು ದಿನಾಂಕ 02-08-2025 ರಂದು ಸಂಜೆ 4.00 ಗಂಟೆಗೆ ಆರ್.ಟಿ.ಒ ಚೆಕ್ ಪೋಸ್ಟ್ ತಲಪಾಡಿ ಸಮೀಪದಲ್ಲಿ ಗ್ರೇ ಲೇನ್ ಕಿಚನ್ & ರೆಸ್ಟೋರೆಂಟ್ ಅದ್ದೂರಿಯಲ್ಲಿ ಹಲವಾರು ಗಣ್ಯರ ಸಮ್ಮುಖದಲ್ಲಿ ಶುಭಾರಂಭಗೊಳ್ಳಲಿದೆ. ಆಡಳಿತ ಮಂಡಳಿಯು ಸರ್ವರೂ ಆಗಮಿಸಿ ಶುಭ ಹಾರೈಸುವಂತೆ ಸ್ವಾಗತ ಕೋರಿದ್ದಾರೆ.

Read More

ಮಂಗಳೂರು ; ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌ನ ವಿದ್ಯಾರ್ಥಿ ಪರಿಷತ್ತು ಮತ್ತು NSS ಘಟಕವು, ಮಂಗಳೂರು ನಗರ ಪೊಲೀಸ್ ಇಲಾಖೆ, CEN ಪೊಲೀಸ್ ಸ್ಟೇಷನ್ ಮತ್ತು ಕೆ.ಎಸ್. ಹೆಗ್ಡೆ, ಮೆಡಿಕಲ್ ಅಕಾಡೆಮಿ ನಿಟ್ಟೆ, ಸಹಯೋಗದೊಂದಿಗೆ “ಡ್ರಗ್ ಫ್ರೀ ಕ್ಯಾಂಪಸ್’ ಎಂಬ ಮಹತ್ವಪೂರ್ಣ ಕಾರ್ಯಕ್ರಮವು ಯಶಸ್ವಿಯಾಗಿ ಎರಡನೇ ವರ್ಷ ನಡೆಯಲಿದ್ದು, ಆಗಸ್ಟ್ 04- 2025ರಂದು ಬೆಳಿಗ್ಗೆ 11:30ಕ್ಕೆ ಕಾರ್ಯಕ್ರಮವನ್ನು ಸ್ವಸ್ತಿಕ ನ್ಯಾಷನಲ್ ಬಿಸಿನೆಸ್ ಸ್ಕೂಲ್‌, ಉರ್ವಾ ಸ್ಕೋರ್ ಆವರಣದಲ್ಲಿ ಆಯೋಜಿಸಲಾಗಿದೆ ಎಂದು ಡಾ. ರಾಘವೇಂದ್ರ ಹೊಳ್ಳರವರು ತಿಳಿಸಿದ್ದಾರೆ. ಮೊದಲ ವರ್ಷದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಮತ್ತು ಹೆತ್ತವರಿಂದ ಉತ್ತಮ ಸ್ಪಂದನೆ ಲಭಿಸಿರುತ್ತದೆ. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಡ್ಡಾಯವಾಗಿ ಡ್ರಗ್ ಪರೀಕ್ಷೆಗೆ ಒಳಗಾಗುತ್ತಾರೆ ಈ ಮೂಲಕ ಕಾಲೇಜು ಆವರಣವನ್ನು ನಶಾಮುಕ್ತನಾಗಿಸುವ ಗುರಿ ಯೊಂದಿಗೆ ಒಂದು ನಿಸ್ವಾರ್ಥ ಸೇವೆಯನ್ನು ಮಾಡಲಾಗುತ್ತಿದೆ ಎಂದರು. ಈ ಕಾರ್ಯಕ್ರಮವನ್ನು ಪತ್ರಕರ್ತರಾದ ಶ್ರೀ ಹರೀಶ್ ರೈ ಉದ್ಘಾಟಿಸಲಿದ್ದು. ಮುಖ್ಯ ಅತಿಥಿಯಾಗಿ ಶ್ರೀ ರವೀಶ್ ಎಸ್ ನಾಯಕ್, ಸಹಾಯಕ ಪೊಲೀಸ್ ಆಯುಕ್ತರು (ಸೈಬರ್ ಎಕನಾಮಿಕ್…

Read More

ಬೆಂಗಳೂರು: ನಗರದಲ್ಲಿ ಟ್ಯೂಷನ್ ಮುಗಿಸಿ ಮನೆಗೆ ಬರುತ್ತಿದ್ದ ಬಾಲಕ ನಿಶ್ಚಿತ್ನನ್ನು ಅಪಹರಿಸಿ, ಬರ್ಬರವಾಗಿ ಹತ್ಯೆಗೈದ ಇಬ್ಬರು ಆರೋಪಿಗಳ ಕಾಲಿಗೆ ಹುಳಿಮಾವು ಠಾಣೆ ಪೊಲೀಸರು ಗುಂಡು ಹಾರಿಸಿ, ಹೆಡೆಮುರಿ ಕಟ್ಟಿದ್ದಾರೆ. ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಎಂಬ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದ ಘಟನೆ ನಡೆದಿದೆ.ಗುರುವಾರ ತಡರಾತ್ರಿ ಕಗ್ಗಲೀಪುರ ರಸ್ತೆಯ ಬಳಿಯಿದ್ದ ಆರೋಪಿಗಳನ್ನು ವಶಕ್ಕೆ ಪಡೆಯಲು ಹುಳಿಮಾವು ಠಾಣೆ ಪೊಲೀಸರು ತೆರಳಿದ್ದರು. ಈ ವೇಳೆ ಮಾರಕಾಸ್ತ್ರಗಳನ್ನು ಬಳಸಿ ಆರೋಪಿಗಳು ಪೊಲೀಸರ ಮೇಲೆ ದಾಳಿಗೆ ಮುಂದಾದಾಗ, ಇನ್ಸ್‌ಪೆಕ್ಟರ್ ಕುಮಾರಸ್ವಾಮಿ ಹಾಗೂ ಪಿಎಸ್ಐ ಅರವಿಂದ್ ಕುಮಾರ್ ಆರೋಪಿಗಳ ಕಾಲಿಗೆ ಗುಂಡು ಹಾರಿಸುವ ಮೂಲಕ ವಶಕ್ಕೆ ಪಡೆದಿದ್ದಾರೆ. ಘಟನೆಯಲ್ಲಿ ಗುರುಮೂರ್ತಿಯ ಎರಡು ಕಾಲುಗಳು ಹಾಗೂ ಗೋಪಾಲಕೃಷ್ಣನ ಒಂದು ಕಾಲಿಗೆ ಗುಂಡು ತಗುಲಿದ್ದು, ಇಬ್ಬರನ್ನೂ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಘಟನೆ ವಿವರ : ಬೆಂಗಳೂರಿನ ಅರಕೆರೆಯ ಶಾಂತಿನಿಕೇತನ ಲೇಔಟ್‌ನಲ್ಲಿ ನಿಶ್ಚಿತ್ ಮತ್ತು ಆತನ ಪೋಷಕರು ವಾಸವಾಗಿದ್ದರು. ನಗರದ ಪ್ರತಿಷ್ಠಿತ ಕಾಲೇಜ್‌ನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದ ನಿಶ್ಚಿತ್…

Read More

ಮಂಗಳೂರು : ದ.ಕ. ಜಿಲ್ಲಾ ಪುಟ್ಬಾಲ್ ಸಂಸ್ಥೆ ಕಳೆದ 26 ವರ್ಷಗಳಿಂದ ನಡೆಸುತ್ತಾ ಬಂದಿರುವ ಅಂತರ್ ಜಿಲ್ಲಾ ಮಟ್ಟದ ಹಿರಿಯ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿಪೂರ್ವ ಕಾಲೇಜು, ಪದವಿ ಕಾಲೇಜಿನ ವಿದ್ಯಾರ್ಥಿ ಹಾಗೂ ವಿದ್ಯಾರ್ಥಿನಿಗಳಿಗಾಗಿ ನಡೆಸುತ್ತಾ ಬರುತ್ತಿದ್ದು, 27ನೇ ವರ್ಷದ ಪಂದ್ಯಾವಳಿ ಆಗೋಸ್ಟ್ 4ನೇ ತಾರೀಖು ಸೋಮವಾರ ಪ್ರಾರಂಭವಾಗಲಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷರಾದ ಡಿ.ಎಂ ಅಸ್ಲಾಂ ರವರು ತಿಳಿಸಿದ್ದಾರೆ. ಮಂಗಳೂರು ನೆಹರೂ ಮೈದಾನಕ್ಕೆ ಹೊಸ ಟರ್ಪ್ ಅಳವಡಿಸಿದ ನಂತರ ಈ ಪಂದ್ಯಾವಳಿಯನ್ನು ಆ ಮೈದಾನದಲ್ಲಿ ನಡೆಸಬೇಕೆಂದು ಬಯಕೆ ನಮ್ಮದಾಗಿತ್ತು. ಆದರೆ ಭಾರೀ ಮಳೆಯ ಕಾರಣ ಈ ಮೈದಾನದ ಕೆಲಸ ವಿಳಂಬವಾದ ಕಾರಣ ಈಗ ಈ ಪಂದ್ಯಾವಳಿ ಎರಡು ತಾಣಗಳಲ್ಲಿ ನಡೆಯಲಿದೆ. ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಡಶಾಲೆಯ ಬಾಲಕರ ಹಾಗೂ ಬಾಲಕಿಯರ ಪಂದ್ಯವಾಳಿಗಳು ನಗರದ ಮಂಗಳಾ ಸ್ಟೇಡಿಯಂ ಪಕ್ಕದಲ್ಲಿರುವ ಕರಾವಳಿ ಉತ್ಸವ ಮೈದಾನದಲ್ಲಿ ನಡೆದರೆ ಪದವಿ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ಪಂದ್ಯಾಟ ನಗರದ ಹೊರಭಾಗದ ಮಂಜನಾಡಿ ಗ್ರಾಮದ ಕಿನ್ಯಾ…

Read More

ಕರ್ನಾಟಕದ ಸಹಕಾರಿ ಬ್ಯಾಂಕಿಂಗ್ ಕ್ಷೇತ್ರದಲ್ಲಿ 113 ವರ್ಷಗಳ ಇತಿಹಾಸವಿರುವ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯ ಎಮ್.ಸಿ.ಸಿ ಬ್ಯಾಂಕ್ ಲಿಮಿಟೆಡ್ 31 ಮಾರ್ಚ್ 2025 ರಂದು ಮುಕ್ತಾಯಗೊಂಡ ವಿತ್ತೀಯ ವರ್ಷದಲ್ಲಿ ಎಲ್ಲಾ ವ್ಯವಹಾರ ಮಾಪನಗಳಲ್ಲಿ ಗಮನಾರ್ಹ ಪ್ರಗತಿಯನ್ನು ಸಾಧಿಸಿದೆ. ಕೇವಲ ಕರ್ನಾಟಕದ ಕರಾವಳಿಯ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿದ್ದ ಬ್ಯಾಂಕಿನ ಕಾರ್ಯವ್ಯಾಪ್ತಿಯು ಪ್ರಸ್ತುತ ಆಡಳಿತ ಮಂಡಳಿ ವಹಿಸಿಕೊಂಡ ನಂತರ ಇಡೀ ಕರ್ನಾಟಕ ರಾಜ್ಯದ್ಯಂತ ವಿಸ್ತರಿಸಿದೆ. ಎಮ್.ಸಿ.ಸಿ. ಬ್ಯಾಂಕ್ ಸಂಪೂರ್ಣವಾಗಿ ಕೋರ್ ಬ್ಯಾಂಕಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು ಇತರ ಖಾಸಗಿ ಮತ್ತು ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಲಭ್ಯವಿರುವ ಎಲ್ಲಾ ಸೇವೆ ಮತ್ತು ಸೌಲಭ್ಯಗಳು ಎಮ್.ಸಿ.ಸಿ. ಬ್ಯಾಂಕಿನಲ್ಲಿ ದೊರೆಯುತ್ತಿವೆ. ಬ್ಯಾಂಕ್ ಕರ್ನಾಟಕ ರಾಜ್ಯದಾದ್ಯಂತ ತನ್ನ ಶಾಖೆಗಳನ್ನು ವಿಸ್ತರಿಸುವ ಕಾರ್ಯಯೋಜನೆಯನ್ನು ಹಮ್ಮಿಕೊಂಡಿದೆ. ಕರ್ನಾಟಕ ರಾಜ್ಯದ್ಯಾಂತ ಕಾರ್ಯವ್ಯಾಪ್ತಿ ಹೊಂದಿರುವ ಎಮ್.ಸಿ.ಸಿ. ಬ್ಯಾಂಕ್, ಮಂಗಳೂರಿನಲ್ಲಿ ನವೀಕೃತಗೊಂಡ ಸುಸಜ್ಜಿತ ಆಡಳಿತ ಕಛೇರಿಯೊಂದಿಗೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ 19 ಶಾಖೆಗಳನ್ನು ಹೊಂದಿದೆ. ಸಹಕಾರ ರತ್ನ ಶ್ರೀ ಅನಿಲ್…

Read More

ಉಡುಪಿ ಜಿಲ್ಲೆಯ ನಗರ ಸಭೆಯಿಂದ 5 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬರುವ ಸ್ಥಳ ಅಕ್ರಮ ಸಕ್ರಮ ಮಂಜೂರಾತಿ ಗೆ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ , 94 ಸಿ.ಮತ್ತು 94 ಸಿಸಿ, ನಿಯಮದಾಡಿ ಅರ್ಜಿ ಮರು ಸಲ್ಲಿಕೆಗೆ ಅವಕಾಶ ನೀಡಬೇಕು , ಗ್ರಾಮ ಪಂಚಾಯಿತಿ ವ್ಯಾಪ್ತಿಯ 9&11 ಎ ಏಕ ನಿವೇಶನ 25 ಸೆಂಟ್ಸಿನ ಒಳಗಡೆ ಇರುವಂತಹ ಜಾಗಗಳಿಗೆ ಹಿಂದೆ ಇದ್ದ ನಿಯಮಾವಳಿ ಪ್ರಕಾರ ಅನುಮೋದನೆ ನೀಡಬೇಕು , 11.ಬಿ ನಿಯಮಾವಳಿ ಯಿಂದ ಕೂಡ ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ ಹಿಂದಿನ ರೀತಿಯಲ್ಲಿ ಕ್ರಮ ಜರುಗಿಸಬೇಕು ಹಾಗೂ ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರ ದಲ್ಲಿ ಏಕ ನಿವೇಶನದ ಸಾವಿರಾರು ಅರ್ಜಿ ಬಾಕಿ ಇರುವುದರಿಂದ ಉಡುಪಿ ಯ ಜನರಿಗೆ ತುಂಬಾ ಸಮಸ್ಯೆ ಉಂಟಾಗಿರುತ್ತದೆ. ಕೂಡಲೇ ಸಮಸ್ಯೆ ಪರಿಹಾರಕ್ಕೆ ಕಂದಾಯ ಸಚಿವರಾದ ಶ್ರೀ ಕೃಷ್ಣ ಬೈರೇಗೌಡ ರವರಿಗೆ ತುಳುನಾಡ ರಕ್ಷಣಾ ವೇದಿಕೆ ಮನವಿ ನೀಡಿ ಒತ್ತಾಯಿಸಿದೆ. ತುಳುನಾಡ ರಕ್ಷಣಾ ವೇದಿಕೆ ಜಿಲ್ಲಾಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ, ಮಹಿಳಾ ಜಿಲ್ಲಾಧ್ಯಕ್ಷೆ…

Read More

ಜೈ ತುಲುನಾಡ್ (ರಿ) ಕಾಸರಗೋಡು ವಲಯ ಸಮಿತಿಯ ವತಿಯಿಂದ ತಾ.27-07-2025 ರಂದು ಕಾಸರಗೋಡು ಕರಂದಕ್ಕಾಡ್‌ನಲ್ಲಿರುವ ಬಿಲ್ಲವ ಸಮಾಜ ಸೇವಾ ಸಂಘ( ರಿ )ಇಲ್ಲಿ ಮರಪಂದಿ ಆಟಿ ಕಾರ್ಯಕ್ರಮವು ನಡೆಯಿತು. ಶ್ರೀ ನಾರಾಯಣ ಗುರು ಮಂದಿರದಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿ ಬಳಿಕ ಬಿಲ್ಲವ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ರಘು ಮೀಪುಗುರಿಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು. ನಂತರ ನಡೆದ ಮಕ್ಕಳ ತುಲು ಭಾಷಣ ಸ್ಪರ್ಧೆಯಲ್ಲಿ ಕಿರಿಯರ ವಿಭಾಗದಲ್ಲಿ.ಧ್ಯೇಯ ವರ್ಕಾಡಿ ಪ್ರಥಮ, ಸಂಸ್ಕೃತಿ ಕುಂಬಳೆ ದ್ವಿತೀಯ ಹಾಗೂ ದರ್ಶಿತ್ ಕೆ ಆರ್ ತೃತೀಯ, ಹಿರಿಯರ ವಿಭಾಗದಲ್ಲಿ ನಿಮಿಷಾ ಎಸ್.ಬಟ್ಟಂಪಾರೆ ಪ್ರಥಮ, ದೃಶ್ಯ ಡಿ.ಬಟ್ಟಂಪಾರೆ ದ್ವಿತೀಯ,ವರ್ಷಾ ಎಸ್ ಬಟ್ಟಂಪಾರೆ ತೃತೀಯ ಬಹುಮಾನವನ್ನು ಪಡೆದರು, ನಂತರ ನಡೆದ ಸಮಾರೋಪ ಸಮಾರಂಭವು ಜೈ ತುಲುನಾಡ್ ರಿ ಕಾಸರಗೋಡು ವಲಯ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ಕುಶಲಾಕ್ಷಿ.ವಿ.ಕುಲಾಲ್ ಕಣ್ವತೀರ್ಥ ರವರ ಅಧ್ಯಕ್ಷತೆಯಲ್ಲಿ ಜರಗಿತು. ಶ್ರೀಯುತ ರಘು ಕೆ ಮೀಪುಗುರಿಯವರು ಮಾತನಾಡುತ್ತಾ ಜೈ ತುಲುನಾಡ್ ಸಂಘಟನೆಯು ಈ ಕಾರ್ಯಕ್ರಮವನ್ನು ತಮ್ಮ…

Read More

ಮಂಗಳೂರು: ಪಡ್ರೆ ಧೂಮಾವತಿ ಕ್ಷೇತ್ರಕ್ಕೆ ಅಪಪ್ರಚಾರ ಮಾಡುತ್ತಿರುವವರನ್ನು ಜುಮಾದಿಯೆ ನೋಡಲಿ ಎಂದು ದೈವಸ್ಥಾನದ ಆಡಳಿತ ಮಂಡಳಿಯ ಪದಾಧಿಕಾರಿಗಳು ಸುರತ್ಕಲ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. “ಪಡ್ರೆ ಶ್ರೀ ಧೂಮಾವತಿ ದೈವಸ್ಥಾನಕ್ಕೆ ಸುಮಾರು 800 ವರ್ಷಗಳಿಗೂ ಮೇಲ್ಪಟ್ಟ ಇತಿಹಾಸವಿದ್ದು ಇತ್ತೀಚೆಗೆ ಗ್ರಾಮದ ಪದ್ಮನಾಭ ಶೆಟ್ಟಿ ಎಂಬವರು ನ್ಯಾಯಾಲಯದಲ್ಲಿ ಸುಮಾರು 13 ಜನರ ಮೇಲೆ ಖಾಸಗಿ ದೂರು ನೀಡಿದ್ದು ಅದರ ಆಧಾರದ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎಫ್.ಐ.ಆರ್. ಆಗಿರುತ್ತದೆ. ಆ ದೂರಿನಲ್ಲಿ ಜಾತ್ರೆಯ ಸಮಯ ಭಕ್ತಾದಿಗಳಿಂದ ಸಂಗ್ರಹವಾದ ಸುಮಾರು 6 ಲಕ್ಷ ರೂಪಾಯಿ ಹಣ ಮತ್ತು ಸುಮಾರು 14-15 ಪವನ್ ಚಿನ್ನ, ಬೆಳ್ಳಿ, ಹಿತ್ತಾಳೆ ಸಹಿತ ಇದನ್ನು ಆಡಳಿತ ಸಮಿತಿಗೆ ಹಸ್ತಾಂತರಿಸದೆ ಕೊಂಡು ಹೋಗಿರುತ್ತಾರೆ ಎಂಬುದಾಗಿ ಕಳ್ಳತನ, ವಂಚನೆ ಪ್ರಕರಣ ದಾಖಲಿಸಿರುತ್ತಾರೆ. ಇದು ಸತ್ಯಕ್ಕೆ ದೂರವಾಗಿದ್ದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸಮಿತಿಯ ಸದಸ್ಯರ ವಿರುದ್ಧ ನಡೆಸಿರುವ ಅಪಪ್ರಚಾರವಾಗಿದೆ. ಸುಳ್ಳು ಆರೋಪ ಮಾಡಿರುವ ಪದ್ಮನಾಭ ಶೆಟ್ಟಿಯನ್ನು ಗ್ರಾಮದ ದೈವ ಜುಮಾದಿಯೇ ನೋಡಿಕೊಳ್ಳಲಿ“…

Read More

ಮಂಗಳೂರು ; ದಕ್ಷಿಣ ಕನ್ನಡ ಫ್ಲವರ್ ಡೆಕೋರೇಟರ್ಸ್ ಮಾಲಕರ ಸಂಘ, ಮಂಗಳೂರು ಇದರ ವತಿಯಿಂದ ನಡೆದ ಮೂರನೇ ವರ್ಷದ ಪುರ್ಪದ ಗೆಲ್ಮೆನ ಆಟಿನ ಕಮ್ಮೆನ ಕಾರ್ಯಕ್ರಮ ಸ್ಕೇಟ್ ಸಿಟಿ ಹೊಯ್ಗೆಬೈಲು ಅಶೋಕನಗರದಲ್ಲಿ ವಿಜೃಂಭಣೆಯಿಂದ ನಡೆಯಿತು ಕಾರ್ಯಕ್ರಮದ ಉದ್ಘಾಟನೆಯ ಬಳಿಕ ಮಾತನಾಡಿದ ಕೆ.ಕೆ ಪೆಜಾವರ ತುಳುನಾಡಿನಲ್ಲಿ ಆಟಿ ತಿಂಗಳಿನಲ್ಲಿ ಆಚರಿಸಲಾಗುವ ಒಂದು ದಿನವೆಂದರೆ ಆಟಿಡೊಂಜಿ ದಿನ. ಈ ದಿನವನ್ನು ಆಟಿ ಅಮವಾಸ್ಯೆಯಂದು ಆಚರಿಸುತ್ತಾರೆ. ಈ ದಿನ ತುಳುನಾಡಿನ ಜನರು “ಪಾಲೆದ ಕಷಾಯ” (ಹಾಲೆ ಮರದ ತೊಗಟೆಯಿಂದ ತಯಾರಿಸಿದ ಕಷಾಯ) ಕುಡಿಯುವ ಸಂಪ್ರದಾಯವಿದೆ. ಈ ಕಷಾಯವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ನಂಬಲಾಗಿದೆ. ಆಟಿ ತಿಂಗಳು ತುಳುನಾಡಿನಲ್ಲಿ ಕಷ್ಟದ ತಿಂಗಳೆಂದು ಪರಿಗಣಿಸಲಾಗುತ್ತದೆ. ಈ ಸಮಯದಲ್ಲಿ ಮಳೆ ಹೆಚ್ಚಾಗಿರುತ್ತದೆ ಮತ್ತು ಕೃಷಿ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ. ಹಾಗಾಗಿ, ಈ ಸಮಯದಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಇರುತ್ತದೆ. ಆಟಿಡೊಂಜಿ ದಿನದಂದು ಆಚರಿಸಲಾಗುವ ಈ ಕಷಾಯ ಸೇವನೆಯು ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆಟಿ ಅಮಾವಾಸ್ಯೆಯಂದು…

Read More