Author: Tulunada Surya

ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಮನೆಮಾತಾಗಿದ್ದ ‘ರೀಲ್ಸ್ ಅಜ್ಜಿ’ ಲಕ್ಷ್ಮೀ ನಾಯ್ಕ್ (92) ಅವರು ವಯೋಸಹಜ ಅನಾರೋಗ್ಯದಿಂದ ನಿಧನರಾದರು. ತಮ್ಮ ಸರಳ, ಮುಗ್ಧ ಅಭಿನಯದ ಮೂಲಕ ಲಕ್ಷಾಂತರ ಜನರ ಮನಗೆದ್ದಿದ್ದ ಅಜ್ಜಿ ಅಗಲಿಕೆಯಿಂದ ಅಭಿಮಾನಿಗಳಲ್ಲಿ ಆಳವಾದ ಶೋಕ ಮೂಡಿದೆ. 🎭 ಮುಗ್ಧ ಅಭಿನಯದಿಂದ ಜನಮನ ಗೆದ್ದ ಅಜ್ಜಿ ತಮ್ಮ ಮೊಮ್ಮಗ, ‘ಡ್ರಾಮಾ ಜ್ಯೂನಿಯರ್’ ಖ್ಯಾತಿಯ ಸೂರಜ್ ಅವರೊಂದಿಗೆ ಇನ್‌ಸ್ಟಾಗ್ರಾಮ್ ರೀಲ್ಸ್‌ಗಳಲ್ಲಿ ಕಾಣಿಸಿಕೊಂಡು ಲಕ್ಷ್ಮೀ ಅಜ್ಜಿ ಅಪಾರ ಜನಪ್ರಿಯತೆ ಗಳಿಸಿದ್ದರು. ಕಿವಿ ಕೇಳದಿದ್ದರೂ, ಕಣ್ಣು ಮಂಜಾಗಿದ್ದರೂ ಸಹ ಅವರ ಸಹಜ ಅಭಿನಯ ಮತ್ತು ನಗುವಿನ ಮೂಲಕ ನೆಟ್ಟಿಗರನ್ನು ಮನರಂಜಿಸುತ್ತಿದ್ದರು. ಅವರ ಪ್ರತಿಯೊಂದು ರೀಲ್ಸ್ ಕೂಡ ವೈರಲ್ ಆಗುತ್ತಿತ್ತು. 📱 ಸಾಮಾಜಿಕ ಜಾಲತಾಣದ ಸ್ಟಾರ್ ಯುವಕರಷ್ಟೇ ಅಲ್ಲ, ಹಿರಿಯರೂ ಸಹ ಸಾಮಾಜಿಕ ಜಾಲತಾಣದಲ್ಲಿ ಹೇಗೆ ಸಕ್ರಿಯರಾಗಬಹುದು ಎಂಬುದಕ್ಕೆ ಲಕ್ಷ್ಮೀ ಅಜ್ಜಿ ಜೀವಂತ ಉದಾಹರಣೆಯಾಗಿದ್ದರು. 90ರ ದಾಟಿದ ವಯಸ್ಸಿನಲ್ಲೂ ಅವರ ಚುರುಕುತನ ಮತ್ತು ಉತ್ಸಾಹ ಹಲವರಿಗೆ ಪ್ರೇರಣೆಯಾಗಿತ್ತು. 💔 ಅಭಿಮಾನಿಗಳಲ್ಲಿ ಶೋಕದ…

Read More

ಮಂಗಳೂರು: ನಗರದ ಅತ್ತಾವರದಲ್ಲಿರುವ ಕಾಸಾ ಗ್ರಾಂಡ್ ಅಪಾರ್ಟ್‌ಮೆಂಟ್‌ನಲ್ಲಿ ಇಂದು ಮನಕಲಕುವ ಘಟನೆ ನಡೆದಿದೆ. ಕೆಎಂಸಿ ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಯೊಬ್ಬರು 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಮೃತ ವಿದ್ಯಾರ್ಥಿಯನ್ನು ಸಾರ್ಥಕ್ ಎಂದು ಗುರುತಿಸಲಾಗಿದೆ. ಮಾಹಿತಿ ಪ್ರಕಾರ, ಸಾರ್ಥಕ್ ಅವರು ತಮ್ಮ ಸ್ನೇಹಿತನನ್ನು ಭೇಟಿ ಮಾಡಲು ಅಪಾರ್ಟ್‌ಮೆಂಟ್‌ಗೆ ಬಂದಿದ್ದು, ಸೆಕ್ಯೂರಿಟಿ ಬಳಿ ಹೆಸರು ನೋಂದಾಯಿಸಿ ಮೇಲ್ಮಹಡಿಗೆ ತೆರಳಿದ್ದರು. ಬಳಿಕ ತಮ್ಮ ಮೊಬೈಲ್‌ನ್ನು ಕೆಳಗೆ ಇಟ್ಟು, 12ನೇ ಮಹಡಿಯಿಂದ ಜಿಗಿದಿದ್ದಾರೆ ಎಂದು ತಿಳಿದುಬಂದಿದೆ. ಘಟನೆಯ ವಿಷಯ ತಿಳಿದು ಪಾಂಡೇಶ್ವರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಆತ್ಮಹತ್ಯೆಗೆ ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ. ಸ್ಥಳೀಯರಲ್ಲಿ ಆತಂಕ ಈ ಘಟನೆ ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿಸಿದ್ದು, ಅಪಾರ್ಟ್‌ಮೆಂಟ್ ಭದ್ರತೆ ಮತ್ತು ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಬಗ್ಗೆ ಚರ್ಚೆಗಳು ಪ್ರಾರಂಭವಾಗಿವೆ. ಸೂಚನೆ: ಸಮಸ್ಯೆಗಳು ಎದುರಾದಾಗ ಸಹಾಯಕ್ಕಾಗಿ ಸ್ನೇಹಿತರು, ಕುಟುಂಬದವರು ಅಥವಾ ತಜ್ಞರನ್ನು…

Read More

ಉಡುಪಿ, ಮಾ.29: ಬೈರಂಪಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಬೆಳ್ಳರ್ಪಾಡಿ ಮಾನೈ ಪ್ರದೇಶದಲ್ಲಿರುವ ಸರ್ಕಾರಿ ಕ್ರೀಡಾಂಗಣವನ್ನು ಅಕ್ರಮವಾಗಿ ಒತ್ತುವರಿ ಮಾಡಲು ಕೆಲವರು ಯತ್ನಿಸುತ್ತಿರುವ ಘಟನೆ ಹಿನ್ನೆಲೆಯಲ್ಲಿ ಹಿರಿಯಡ್ಕ ಪೋಲಿಸ್ ಠಾಣೆ ತೆರಳಿ ಮನವಿ ನೀಡಿ ಕೂಡಲೇ ಕ್ರಮ ಕೈಗೊಳ್ಳುವಂತೆ ತುಳುನಾಡ ರಕ್ಷಣಾ ವೇದಿಕೆ, ಕಾಪು ತಾಲೂಕು ಘಟಕ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಉಡುಪಿ ಜಿಲ್ಲಾದ್ಯಕ್ಷರಾದ ಫ್ರಾಂಕಿ ಡಿಸೋಜ ಕೊಳಲಗಿರಿ , ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ,ತುಳುನಾಡ ರಕ್ಷಣಾ ವೇದಿಕೆ ಕಾಪು ಅಧ್ಯಕ್ಷರುನಿತೀನ್ ಕುಮಾರ್ ಶೆಟ್ಟಿ ಕಾಪು ತಾಲೂಕುಪ್ರಧಾನ ಕಾರ್ಯದರ್ಶಿ ಕಾರ್ತಿಕ್ ಕುಲಾಲ್ ರ್ಶಿಬೈರಂಪಲ್ಲಿ ಘಟಕ ಅಧ್ಯಕ್ಷರಾದಕೃಷ್ಣಾನಂದ ನಾಯಕ್ಬೈರಂಪಳ್ಳಿ ಘಟಕ ಪ್ರಧಾನ ಕಾರ್ಯದರ್ಶಿರಂಜಿತ್ ಕುಲಾಲ್ಗುಣಾಕಾರ್ ಉಪಾಧ್ಯಕ್ಷರು ಭೈರಂಪಳ್ಳಿ ಘಟಕಕಾರ್ತಕ್ ಕುಮಾರ್, ಸಚಿನ್ ಕುಮಾರ್ ಶೆಟ್ಟಿ, ಅಜಯ್ ಕುಲಾಲ್, ಗೋಪಾಲ ಕುಲಾಲ್, ಸಚಿನ್ ಕುಮಾರ್ ಶೆಟ್ಟಿ ಕಿರಣ್ ಕುಮಾರ್ ಆದಿತ್ಯ, ಅಭಿನಂದನ್, ರಕ್ಷಿತ್, ಸ್ವಾತಿಕ್ ನಾಯಕ್ ಗಣೇಶ್ ಕುಲಾಲ್ ರಾಕೇಶ್ ಕುಲಾಲ್ ಮಂಜುನಾಥ್ ಕುಲಾಲ್ ,ಹರ್ಷ ಪೂಜಾರಿ, ಶೋಧನ್ ಶೆಟ್ಟಿ, ಪ್ರಸಾದ್ ಶೆಟ್ಟಿ,…

Read More

ಕಾರವಾರ: ಕರ್ನಾಟಕದ ಭೂಮಾಪನ ಇಲಾಖೆಯಲ್ಲಿ ಹಲವು ತೊಂದರೆಗಳಿಂದ ಸರ್ವೆ ಕಾರ್ಯಗಳು ನಿಂತು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಭೂಮಾಪಕರಲ್ಲಿ ಅಸಮಾಧಾನ ಹೆಚ್ಚಾಗಿದೆ.ಕಳೆದ ಫೆಬ್ರವರಿ 2026ರಿಂದ ರಾಜ್ಯದಾದ್ಯಂತ ಸುಮಾರು 6,000 ಪರವಾನಗಿ ಭೂಮಾಪಕರು (Licensed Surveyors) ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಭೂಮಿಯ ಅಳತೆ, ದಾಖಲೆ ತಿದ್ದುಪಡಿ ಸೇರಿದಂತೆ ಹಲವಾರು ಪ್ರಮುಖ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.ಈ ಮುಷ್ಕರದ ನೇರ ಪರಿಣಾಮವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸುಮಾರು 4,87,272 ಭೂಮಾಪನ ಅರ್ಜಿಗಳು ಬಾಕಿ ಉಳಿದಿವೆ ಎಂಬ ಮಾಹಿತಿ ಲಭ್ಯವಾಗಿದೆ.ದಶಕಗಳಿಂದ ಇಲಾವರಿ ಸೇವೆಯಲ್ಲಿ ನಿರತರಾಗಿದ್ದ ಈ ಭೂಮಾಪಕರು ಇದೀಗ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿಗೆ ತಲುಪಿದ್ದಾರೆ. ಸರಿಯಾದ ವೇತನ ವ್ಯವಸ್ಥೆ, ಕೆಲಸದ ಭದ್ರತೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ.ಇಲ್ಲಿವರೆಗೆ ಸರ್ಕಾರದಿಂದ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟವಾಗದೇ ಇರುವುದರಿಂದ ಭೂಮಾಪಕರ ಅಸಮಾಧಾನ ಮತ್ತಷ್ಟು ಹೆಚ್ಚುತ್ತಿದೆ. 2002ರಿಂದ 2024ರವರೆಗೆ ಹಲವು ಭರವಸೆಗಳು…

Read More

ಕಾರವಾರ: ಕರ್ನಾಟಕದ ಭೂಮಾಪನ ಇಲಾಖೆಯಲ್ಲಿ ಹಲವು ತೊಂದರೆಗಳಿಂದ ಸರ್ವೆ ಕಾರ್ಯಗಳು ನಿಂತು ಹೋಗುವ ಸ್ಥಿತಿ ನಿರ್ಮಾಣವಾಗಿದ್ದು, ಇದರಿಂದ ಭೂಮಾಪಕರಲ್ಲಿ ಅಸಮಾಧಾನ ಹೆಚ್ಚಾಗಿದೆ.ಕಳೆದ ಫೆಬ್ರವರಿ 2026ರಿಂದ ರಾಜ್ಯದಾದ್ಯಂತ ಸುಮಾರು 6,000 ಪರವಾನಗಿ ಭೂಮಾಪಕರು (Licensed Surveyors) ತಮ್ಮ ನ್ಯಾಯಯುತ ಬೇಡಿಕೆಗಳಿಗಾಗಿ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಮುಂದಾಗಿದ್ದಾರೆ. ಇದರ ಪರಿಣಾಮವಾಗಿ ಭೂಮಿಯ ಅಳತೆ, ದಾಖಲೆ ತಿದ್ದುಪಡಿ ಸೇರಿದಂತೆ ಹಲವಾರು ಪ್ರಮುಖ ಸೇವೆಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ.ಈ ಮುಷ್ಕರದ ನೇರ ಪರಿಣಾಮವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಸುಮಾರು 4,87,272 ಭೂಮಾಪನ ಅರ್ಜಿಗಳು ಬಾಕಿ ಉಳಿದಿವೆ ಎಂಬ ಮಾಹಿತಿ ಲಭ್ಯವಾಗಿದೆ.ದಶಕಗಳಿಂದ ಇಲಾವರಿ ಸೇವೆಯಲ್ಲಿ ನಿರತರಾಗಿದ್ದ ಈ ಭೂಮಾಪಕರು ಇದೀಗ ತಮ್ಮ ಅಸ್ತಿತ್ವಕ್ಕಾಗಿ ಹೋರಾಟ ನಡೆಸುವ ಪರಿಸ್ಥಿತಿಗೆ ತಲುಪಿದ್ದಾರೆ. ಸರಿಯಾದ ವೇತನ ವ್ಯವಸ್ಥೆ, ಕೆಲಸದ ಭದ್ರತೆ ಮತ್ತು ಮೂಲಭೂತ ಸೌಲಭ್ಯಗಳ ಕೊರತೆ ಸೇರಿದಂತೆ ಹಲವು ಸಮಸ್ಯೆಗಳ ವಿರುದ್ಧ ಅವರು ಧ್ವನಿ ಎತ್ತಿದ್ದಾರೆ.ಇಲ್ಲಿವರೆಗೆ ಸರ್ಕಾರದಿಂದ ಯಾವುದೇ ಸ್ಪಷ್ಟ ನಿರ್ಧಾರ ಪ್ರಕಟವಾಗದೇ ಇರುವುದರಿಂದ ಭೂಮಾಪಕರ ಅಸಮಾಧಾನ ಮತ್ತಷ್ಟು ಹೆಚ್ಚುತ್ತಿದೆ. 2002ರಿಂದ 2024ರವರೆಗೆ ಹಲವು ಭರವಸೆಗಳು…

Read More

ಉಡುಪಿ ಜಿಲ್ಲೆಯಲ್ಲಿ ಪೊಲೀಸರ ಮೇಲಿನ ದಾಳಿ ಮತ್ತು ಜೂಜಾಟ ಜಾಲಕ್ಕೆ ಸಂಬಂಧಿಸಿದಂತೆ ಸಂಚಲನಕಾರಿ ಘಟನೆ ಬೆಳಕಿಗೆ ಬಂದಿದೆ. ಕಾರ್ಕಳ ಹಾಗೂ ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಎರಡು ಪ್ರತ್ಯೇಕ ಘಟನೆಗಳ ಸಂಬಂಧ ಐವರು ಆರೋಪಿಗಳನ್ನು ಬಂಧಿಸಲಾಗಿದೆ. 👮‍♂️ ಘಟನೆ ವಿವರ ಮಾರ್ಚ್ 27 ರಂದು ಮಧ್ಯಾಹ್ನ 2:30ರ ಸುಮಾರಿಗೆ ಕಾರ್ಕಳ ಗ್ರಾಮಾಂತರ ಠಾಣೆಯ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ನೇತೃತ್ವದಲ್ಲಿ ಹಂಚಿಕಟ್ಟೆ ಹೋಂಡಾ ಶೋರೂಮ್ ಬಳಿ ವಾಹನ ತಪಾಸಣೆ ನಡೆಯುತ್ತಿತ್ತು. ಈ ವೇಳೆ KA15Z0007 ಸಂಖ್ಯೆಯ ಕಪ್ಪು ಬಣ್ಣದ ಫಾರ್ಚುನರ್ ಕಾರಿಗೆ ನಿಲ್ಲುವಂತೆ ಸೂಚನೆ ನೀಡಿದಾಗ, ಕಾರಿನಲ್ಲಿದ್ದ ಆರೋಪಿಗಳು ಪೊಲೀಸರ ಮೇಲೆ ಕಾರು ಹತ್ತಿಸಲು ಯತ್ನಿಸಿ, ಕೊಲೆ ಪ್ರಯತ್ನ ನಡೆಸಿರುವುದು ತಿಳಿದುಬಂದಿದೆ. 🚓 ಮತ್ತೊಂದು ದಾಳಿ – ಶಿರ್ವದಲ್ಲಿ ಅದೇ ದಿನ ಮಧ್ಯಾಹ್ನ 3:10ರ ಸುಮಾರಿಗೆ ಶಿರ್ವದ ಪದವು ಪ್ರದೇಶದಲ್ಲಿ ಉಪನಿರೀಕ್ಷಕ ಮಂಜುನಾಥ ಮರಬದ ಅವರು ಅನುಮಾನಾಸ್ಪದ ಕಾರನ್ನು ತಡೆದಾಗ, ಚಾಲಕ ವಾಹನವನ್ನು ನಿಧಾನಗೊಳಿಸಿ ಕಿಟಕಿಯಿಂದ ಪೊಲೀಸ್ ಅಧಿಕಾರಿಯನ್ನು ತಳ್ಳಿ ಪರಾರಿಯಾಗಲು…

Read More

ಹೆಮ್ಮಾಡಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಾಡಿಗೆ ಸ್ಕೂಟರ್ ಮೇಲೆ ಅಪಾಯಕಾರಿ ವೀಲಿಂಗ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಯುವಕ ಇದೀಗ ಕಳ್ಳತನ ಯತ್ನ ಪ್ರಕರಣದಲ್ಲೂ ಬಂಧನಕ್ಕೊಳಗಾಗಿದ್ದಾನೆ. ಬಂಧಿತನನ್ನು ಪೌಜಾನ್ ಅಹ್ಮದ್ ಎಂದು ಗುರುತಿಸಲಾಗಿದೆ. ಬೈಂದೂರು ತಾಲೂಕಿನ ಶಿರೂರು ಗ್ರಾಮದ ಕೋಣಮಕ್ಕಿ ಪ್ರದೇಶದಲ್ಲಿರುವ ಪಾತಿಮಾ ಎಂಬವರ ಮನೆಯ ಹಿಂಬಾಗಿಲು ಒಡೆದು ಒಳನುಗ್ಗಿ ಕಳ್ಳತನಕ್ಕೆ ಯತ್ನಿಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಘಟನೆ ವೇಳೆ ಪಾತಿಮಾ ಅವರು ಮನೆಯಲ್ಲಿ ಮಲಗಿದ್ದಾಗ ಆರೋಪಿ ಒಳನುಗ್ಗಿ ಗೋದ್ರೇಜ್ ಅಲಮಾರಿಯನ್ನು ತೆರೆಯಲು ಪ್ರಯತ್ನಿಸಿದ್ದಾನೆ. ಶಬ್ದ ಕೇಳಿ ಎಚ್ಚರಗೊಂಡ ಪಾತಿಮಾ ಅವರು ಕೂಗುತ್ತಿದ್ದಂತೆ, ಆರೋಪಿ ಹಿಂಬಾಗಿಲಿನ ಮೂಲಕ ಪರಾರಿಯಾಗಿದ್ದನು. ಈ ಸಂಬಂಧ ಪಾತಿಮಾ ನೀಡಿದ ದೂರಿನ ಆಧಾರದಲ್ಲಿ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 30/2026 ರಂತೆ BNS ಕಲಂ 331(4), 305 ಮತ್ತು 62 ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಮನಾರ್ಹವಾಗಿ, ಇದೇ ಆರೋಪಿ ಕೆಲ ದಿನಗಳ ಹಿಂದೆ ಹೆಮ್ಮಾಡಿ–ಕುಂದಾಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ…

Read More

ವಿವಾಹಿತ ಪುರುಷನೊಬ್ಬ ವಯಸ್ಕ ಮಹಿಳೆಯೊಂದಿಗೆ ಪರಸ್ಪರ ಒಪ್ಪಿಗೆಯಿಂದ ಲಿವ್-ಇನ್ ಸಂಬಂಧದಲ್ಲಿ ಇರುವುದು ಯಾವುದೇ ಕಾನೂನುಬದ್ಧ ಅಪರಾಧವಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಸ್ಪಷ್ಟಪಡಿಸಿದೆ. ​​ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜೆ.ಜೆ. ಮುನೀರ್ ಮತ್ತು ನ್ಯಾಯಮೂರ್ತಿ ತರುಣ್ ಸಕ್ಸೇನಾ ಅವರಿದ್ದ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ. ವಿವಾಹಿತ ಪುರುಷನು ವಯಸ್ಕ ಮಹಿಳೆಯೊಂದಿಗೆ ಸಮ್ಮತಿಯ ಆಧಾರದ ಮೇಲೆ ಲೈಂಗಿಕ ಸಂಬಂಧ ಹೊಂದಿರುವುದು ಅಪರಾಧವಾಗುವುದಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. ಉತ್ತರ ಪ್ರದೇಶದ ಶಹಜಹಾನ್ಪುರ ಮೂಲದ ದಂಪತಿಗಳು ಸಲ್ಲಿಸಿದ್ದ ಕ್ರಿಮಿನಲ್ ರಿಟ್ ಅರ್ಜಿಯ ವಿಚಾರಣೆಯ ವೇಳೆ ನ್ಯಾಯಾಲಯ ಈ ಮಹತ್ವದ ಹೇಳಿಕೆಯನ್ನು ನೀಡಿದೆ. ಉತ್ತರ ಪ್ರದೇಶದ ಶಾಜಹಾನ್‌ಪುರದ ದಂಪತಿಯೊಂದು ತಮಗೆ ಮಹಿಳೆಯ ಕುಟುಂಬದಿಂದ ಜೀವ ಬೆದರಿಕೆ ಇದೆ ಎಂದು ರಕ್ಷಣೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂದರ್ಭದಲ್ಲಿ ಮಹಿಳೆಯ ಕುಟುಂಬದವರು, “ಪುರುಷ ಈಗಾಗಲೇ ವಿವಾಹಿತನಾಗಿದ್ದು, ಮತ್ತೊಬ್ಬ ಮಹಿಳೆಯೊಂದಿಗೆ ವಾಸವಿರುವುದು ಕಾನೂನುಬಾಹಿರ” ಎಂದು ವಾದಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ…

Read More

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 60ನೇ ಬೆಂಗ್ರೆ ವಾರ್ಡಿನ ಶ್ರೀ ಆದಿ ನಾಗದೇವರ ಬನ ಸ್ಯಾಂಡ್‌ಪಿಟ್ ಬೆಂಗ್ರೆ ಬಳಿ ಅಭಿವೃದ್ಧಿ ಕಾಮಗಾರಿಯು ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆಯು ನಡೆಯಿತು. ನಂತರ ಮಾತನಾಡಿದ ಶಾಸಕರು, ಇಲ್ಲಿನ ಸ್ಥಳೀಯರ ಬಹು ದಿನಗಳ ಬೇಡಿಕೆಯಂತೆ ಈ ಅಭಿವೃದ್ಧಿ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು ಶೀಘ್ರದಲ್ಲಿ ಕಾಮಗಾರಿ ಮುಗಿಸುವಂತೆ ಸಂಬಂಧಪಟ್ಟವರಿಗೆ ಸೂಚನೆ ನೀಡಲಾಗುವುದು ಎಂದರು. ಲೋಕೇಶ್ ಬೆಂಗ್ರೆ, ಮೀರಾ ಕರ್ಕೇರ, ನಿತಿನ್ ಕುಮಾರ್, ವಿನೋದ್ ಮೆಂಡನ್, ಅನಿಲ್, ಕಿಶೋರ್ ಕೊಟ್ಟಾರಿ, ಸುರೇಂದ್ರ ಪಾಂಗಳ್, ಗಂಗಾಧರ, ಸಂಜಯ್ ಸುವರ್ಣ, ಧನಂಜಯ ಪುತ್ರನ್, ಚೇತನ್ ಬೆಂಗ್ರೆ, ವಿಥುನ್, ವಾಸು ಸುವರ್ಣ, ಸುಂದರ ಸಾಲ್ಯಾನ್, ಸುಕುಮಾರ, ಜೀವನ್ ಖಾರ್ವಿ, ಸ್ಥಳೀಯ ನಿವಾಸಿಗಳು, ವಾರ್ಡಿನ ಕಾರ್ಯಕರ್ತರು ಉಪಸ್ಥಿತರಿದ್ದರು.

Read More

ಕೋಟೆಕಾರು, ಉಳ್ಳಾಲ: ಕೋಟೆಕಾರು ಪ್ರದೇಶದಲ್ಲಿರುವ Bombay Saw Mill ಕಾರ್ಖಾನೆಯಿಂದ ಉಂಟಾಗಿರುವ ಗಂಭೀರ ವಾಯು ಮಾಲಿನ್ಯ ಹಾಗೂ ಸಾರ್ವಜನಿಕ ಆರೋಗ್ಯದ ಮೇಲಿನ ದುಷ್ಪರಿಣಾಮಗಳ ಹಿನ್ನೆಲೆಯಲ್ಲಿ, ಈ ಘಟಕವನ್ನು ಶಾಶ್ವತವಾಗಿ ಮುಚ್ಚುವಂತೆ ತುಳುನಾಡ ರಕ್ಷಣಾ ವೇದಿಕೆ ಕೇಂದ್ರಿಯ ಸಂಘಟನಾ ಕಾರ್ಯದರ್ಶಿಯವರು ತೀವ್ರವಾಗಿ ಒತ್ತಾಯಿಸಿದ್ದಾರೆ. ಸ್ಥಳೀಯ ನಿವಾಸಿಗಳಿಂದ ನಿರಂತರವಾಗಿ ಬಂದ ದೂರುಗಳ ಮೇರೆಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ, ಕಾರ್ಖಾನೆ ಅಗತ್ಯ ಲೈಸೆನ್ಸ್ ಇಲ್ಲದೇ ಕಾರ್ಯನಿರ್ವಹಿಸುತ್ತಿರುವುದು ಬೆಳಕಿಗೆ ಬಂದಿರುವುದು ಅತ್ಯಂತ ಆತಂಕಕಾರಿ ಸಂಗತಿಯಾಗಿದೆ. ಈ ಹಿನ್ನೆಲೆ ಘಟಕವನ್ನು ತಾತ್ಕಾಲಿಕವಾಗಿ ಮುಚ್ಚುವಂತೆ ಸೂಚಿಸಿರುವುದನ್ನು ನಾವು ಸ್ವಾಗತಿಸುತ್ತೇವೆ. ಆದರೆ ಇದು ತಾತ್ಕಾಲಿಕ ಕ್ರಮಕ್ಕೆ ಸೀಮಿತವಾಗದೆ, ಶಾಶ್ವತ ಪರಿಹಾರ ಒದಗಿಸಬೇಕು ಎಂದು ನಮ್ಮ ಆಗ್ರಹವಾಗಿದೆ. ಈ ಕಾರ್ಖಾನೆಯಿಂದ ಹೊರಬರುತ್ತಿರುವ ದಟ್ಟ ಹೊಗೆ ಸುತ್ತಮುತ್ತಲಿನ ವಸತಿ ಪ್ರದೇಶಗಳ ಜನರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ. ಮಕ್ಕಳು, ವೃದ್ಧರು ಹಾಗೂ ಉಸಿರಾಟ ಸಂಬಂಧಿತ ಸಮಸ್ಯೆಗಳಿರುವವರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಕಣ್ಣು ಕೆರಳಿಕೆ, ಗಂಟಲು ಉರಿ, ಎದೆ ಬಿಗಿತ ಹಾಗೂ…

Read More