- ಪತ್ರಕರ್ತ ಶ್ರೀಕಾಂತ್ ಹೆಮ್ಮಾಡಿ ಮೇಲಿನ ಹಲ್ಲೆ ಖಂಡನೀಯ: ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಉಡುಪಿ ಪತ್ರಕರ್ತರ ಸಂಘ ಆಗ್ರಹ
- ಆರೂರು ಅಡ್ಜಿಲು ಭಾಗದ ವಿದ್ಯುತ್ ಸಮಸ್ಯೆಗೆ ಸ್ಪಂದಿಸಿದ ಮೆಸ್ಕಾಂ ಒಂದು ತಿಂಗಳೊಳಗೆ ಹೊಸ ಟಿಸಿ ಅಳವಡಿಸುವ ಭರವಸೆ – ತುಳುನಾಡು ರಕ್ಷಣಾ ವೇದಿಕೆ ಆಗ್ರಹ
- ಆಗಸ್ಟ್ 23ರಂದು ಮಂಗಳೂರಿನಲ್ಲಿ ಅಂತರರಾಷ್ಟ್ರೀಯ ಬಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ “ಮರಿಯಾಳದ ಮಿನದನ” ಪೂರ್ವಭಾವಿ ಸಭೆ
- ₹5 ಕೋಟಿ ನಕಲಿ ಔಷಧಿ ಜಾಲ ಬಯಲು: ಫಾರ್ಮ್ಹೌಸ್ನಲ್ಲಿ ನಡೆಯುತ್ತಿದ್ದ ಅಕ್ರಮ ದಂಧೆಗೆ ಅಧಿಕಾರಿಗಳ ದಾಳಿ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಲೇಬಲ್ ಅಂಟಿಸಿ ಔಷಧಿಗಳ ಮರುಪ್ಯಾಕಿಂಗ್ – ಅವಧಿ ಮೀರಿದ ಔಷಧಿಗಳೂ ಪತ್ತೆ
- ಉಡುಪಿ: ತುಳುನಾಡಿನ ಸಂಸ್ಕೃತಿ, ಪರಂಪರೆ ಉಳಿಸುವುದು ಪ್ರತಿಯೊಬ್ಬರ ಜವಾಬ್ದಾರಿ: ಸೂರಜ್ ನಾಯಕ್ ಸೋನಿ
- INDIA through my EYES’ ಚಿತ್ರಕಲಾ ಸ್ಪರ್ಧೆಯಲ್ಲಿ ಚಿನ್ಮಯಿ ಎಸ್. ವಿಜೇತೆ
- ಕರಂಬಾರು ಶಾಲೆಯಲ್ಲಿ ಸಂಭ್ರಮ ಸಡಗರದಿಂದ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ
- ಕೋರ್ದಬ್ಬು ದೈವದ ಪಾತ್ರಿ ಸೀನ ಪಾತ್ರಿ ನಂದಿಕೂರು ಮೆರೆಗ್ ತುಳು ಕಲ್ಚರಲ್ ರಿಸರ್ಚ್ ಫೌಂಡೇಶನ್ದ “ತುಳುವಾಲ ಕುಲಸಿರಿ – 2026” ಪ್ರಶಸ್ತಿ ಘೋಷಣೆ
Author: Tulunada Surya
ತ್ರಿಶೂರ್: ಕೇರಳದ ತ್ರಿಶೂರ್ ಪೂರಂ ಹಬ್ಬಕ್ಕೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾಗಲೇ ದೊಡ್ಡ ದುರಂತ ಸಂಭವಿಸಿದ್ದು, ತಿರುವಂಬಾಡಿ ದೇವಸ್ಥಾನಕ್ಕೆ ಸಂಬಂಧಿಸಿದ ಪಟಾಕಿ ಕಾರ್ಖಾನೆಯಲ್ಲಿ ಪ್ರಬಲವಾದ ಸ್ಫೋಟ ಸಂಭವಿಸಿದ್ದು, 20 ಕ್ಕೂ ಹೆಚ್ಚು ಕಾರ್ಮಿಕರು ಮೃತಪಟ್ಟಿದ್ದಾರೆ ಮತ್ತು ಹಲವಾರಿಗೆ ಗಂಭೀರ ಸುಟ್ಟ ಗಾಯಗಳಾಗಿವೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾದ್ಯತೆ ಇದೆ ಎಂದು ಮೂಲಗಳಿಂದ ತಿಳಿದು ಬಂದಿದೆ ಅಧಿಕಾರಿಗಳ ಪ್ರಕಾರ, ಸ್ಫೋಟ ಸಂಭವಿಸಿದಾಗ ಸುಮಾರು 70 ಕಾರ್ಮಿಕರು ಕಾರ್ಖಾನೆಯಲ್ಲಿದ್ದರು ಮತ್ತು ಅವರಲ್ಲಿ ಹೆಚ್ಚಿನವರು ಕುಂದನೂರಿನವರು ಎನ್ನಲಾಗಿದೆ. ಈ ಸ್ಫೋಟ ಎಷ್ಟು ಪ್ರಬಲವಾಗಿತ್ತೆಂದರೆ, ಹತ್ತಿರದ ಅನೇಕ ನಿವಾಸಿಗಳು ಆರಂಭದಲ್ಲಿ ಇದನ್ನು ಭೂಕಂಪ ಎಂದು ತಪ್ಪಾಗಿ ಭಾವಿಸಿದ್ದರು. ಆದರೆ ಆ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದ ನಂತರ ಇದು ಸ್ಫೋಟ ಎಂದು ತಿಳಿದು ಬಂದಿದೆ. ಕೇರಳದ ತ್ರಿಶೂರ್ ಜಿಲ್ಲೆಯ ಮುಂಡತ್ತಿಕ್ಕೋಡ್‌ನಲ್ಲಿ ನಡೆದ ಭೀಕರ ಪಟಾಕಿ ಸ್ಫೋಟ ಪ್ರಕರಣದ ನಂತರ, ಇದೇ ತಿಂಗಳ 24ರಂದು ನಡೆಯಲಿರುವ ಪ್ರಸಿದ್ಧ ತ್ರಿಶೂರ್ ಪೂರಂ ಉತ್ಸವದ ಪಟಾಕಿ ಪ್ರದರ್ಶನ ನಡೆಸುವ ಬಗ್ಗೆ ಅಂತಿಮ ನಿರ್ಧಾರವನ್ನು…
ಚಿಕ್ಕಮಗಳೂರು: ಅಲ್ಪಸಂಖ್ಯಾತರನ್ನ ಕಾಂಗ್ರೆಸ್ ಪಕ್ಷ ವೋಟ್ ಬ್ಯಾಂಕ್ ಗಾಗಿ ಉಪಯೋಗಿಸಿಕೊಳ್ಳುತ್ತಿದೆ :ನಿಖಿಲ್ ಕುಮಾರಸ್ವಾಮಿ : ಜಾತ್ಯತೀತ ಜನತಾದಳ ಅನ್ನುವುದು ಅದರ ಘೋಷ ವಾಕ್ಯದಲ್ಲೇ ಇದೆ. ನಮ್ಮ ಸಿದ್ದಾಂತದಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವತ್ತಿದ್ರೂ ಜಾತ್ಯತೀತಾನೇ ಜಾತ್ಯಾತೀತವಾಗಿ ಉಳಿಯುತ್ತೇವೆ ಎಂದು ನಿಖಿಲ್ ಕುಮಾರಸ್ವಾಮಿ ಅವರು ಹೇಳಿದರು. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಮಾತನಾಡಿ ಅವರು, ಬಿಜೆಪಿ ಜೆಡಿಎಸ್ ಜತೆ ಮೈತ್ರಿ ಆಗಿರುವುದಕ್ಕೆ ಕಾರ್ಯಕರ್ತರು ಗೊಂದಲದಲ್ಲಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿ ಅವರು ; ನಾವು NDA ಜೊತೆ ಮಿತ್ರ ಪಕ್ಷವಾಗಿ ಕೈ ಜೋಡಿಸಿದ್ದೇವೆ. ಆದರೆ ನಮ್ಮ ಸಿದ್ದಾಂತವನ್ನ ಯಾರ ಜೊತೆಗೆ ಮರ್ಜ್ ಮಾಡಿಲ್ಲ. ನಮ್ಮದು ಬೇರೆ ರಾಜಕೀಯ ಪಕ್ಷವಾಗಿದೆ ಎಂದು ಹೇಳಿದರು. ಜೆಡಿಎಸ್ ಧರ್ಮ ,ಜಾತಿ, ಸಮುದಾಯದ ಆಧಾರದ ಮೇಲೆ ರಾಜಕಾರಣ ಮಾಡಿಲ್ಲ ಜೆಡಿಎಸ್ ಸರ್ವ ಜನಾಂಗದ ಶಾಂತಿಯ ತೋಟದ ಬಗ್ಗೆ ಪರಿಕಲ್ಪನೆ ಇಟ್ಟಿರುವುದನ್ನ ನೋಡಿದ್ದೀರಾ. ಯಾವುದೇ ಧರ್ಮ ,ಜಾತಿ, ಸಮುದಾಯದ ಆಧಾರದ ಮೇಲೆ ರಾಜಕಾರಣ ಮಾಡಿಕೊಂಡು ಬಂದಿಲ್ಲ. ಎಲ್ಲರನ್ನೂ ಸಮಾನವಾಗಿ ನೋಡುವ ಕೆಲಸವನ್ನು…
ಕಡೂರು: ಜನತಾದಳ (ಜಾತ್ಯಾತೀತ) ಪಕ್ಷದ ಸಂಘಟನಾ ಬಲವರ್ಧನೆ ಮತ್ತು ತಳಮಟ್ಟದ ಕಾರ್ಯಕರ್ತರೊಂದಿಗೆ ನೇರ ಸಂಪರ್ಕ ಸಾಧಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ “ಜನರೊಂದಿಗೆ ಜನತಾದಳ” ಸದಸ್ಯತ್ವ ನೋಂದಣಿ ಅಭಿಯಾನಕ್ಕೆ ಕಡೂರು ವಿಧಾನಸಭಾ ಕ್ಷೇತ್ರದಲ್ಲಿ ಭಾರೀ ಸ್ಪಂದನೆ ವ್ಯಕ್ತವಾಗಿದೆ. ಕಡೂರು ಎಪಿಎಂಸಿ ಆವರಣದಲ್ಲಿ ನಡೆದ ಈ ಮಹತ್ವದ ಕಾರ್ಯಕ್ರಮವು ಕಾರ್ಯಕರ್ತರ ಮಹಾಸಂಗಮವಾಗಿ ರೂಪುಗೊಂಡಿತು. ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಕಾರ್ಯಕರ್ತರು ಮತ್ತು ಅಭಿಮಾನಿಗಳು ಕಾರ್ಯಕ್ರಮಕ್ಕೆ ಸಾಕ್ಷಿಯಾದರು. ಪಕ್ಷದ ತತ್ವ, ಸಂಘಟನೆ ಹಾಗೂ ಮುಂದಿನ ರಾಜಕೀಯ ದಿಕ್ಕು ಕುರಿತು ನಾಯಕರು ಸ್ಪಷ್ಟ ಸಂದೇಶ ನೀಡಿದರು. ಈ ಸಂದರ್ಭದಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷರಾದ ನಿಖಿಲ್ ಕುಮಾರಸ್ವಾಮಿ ಅವರು ಮಾತನಾಡಿ, ಯುವಕರನ್ನು ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವ ಅಗತ್ಯತೆಯನ್ನು ಒತ್ತಿ ಹೇಳಿದರು. ಗ್ರಾಮ ಮಟ್ಟದಿಂದಲೇ ಪಕ್ಷವನ್ನು ಬಲಿಷ್ಠಗೊಳಿಸುವುದು ನಮ್ಮ ಮುಖ್ಯ ಗುರಿ ಎಂದರು. ವಿಧಾನ ಪರಿಷತ್ ಶಾಸಕಾಂಗ ಪಕ್ಷದ ನಾಯಕರಾದ ಎಸ್.ಎಲ್. ಭೋಜೇಗೌಡ ಅವರು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷವೇ ಜನತಾದಳ ಎಂದು ಹೇಳಿ, ಸದಸ್ಯತ್ವ ಅಭಿಯಾನವನ್ನು ಯಶಸ್ವಿಗೊಳಿಸಲು ಕರೆ…
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 39ನೇ ಫನ್ನೀರ್ ವಾರ್ಡಿನ ಸೆಮಿನರಿ ವೀವ್ 1ನೇ ಅಡ್ಡರಸ್ತೆ ಅಭಿವೃದ್ಧಿ ಕಾಮಗಾರಿಯು ರೂ. 65 ಲಕ್ಷ ವೆಚ್ಚದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನಡೆಯಿತು ನಂತರ ಮಾತನಾಡಿದ ಶಾಸಕರು, ಈ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ-1 ನ್ನು ಅನುಷ್ಠಾನಗೊಳಿಸಿ ನೂರಕ್ಕೂ ಹೆಚ್ಚು ಕೋಟಿ ಅನುದಾನವನ್ನು ಮೀಸಲಿಡಲಾಗಿತ್ತು. ಆದರೆ ನಂತರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ಕಾಂಗ್ರೆಸ್ ಸರ್ಕಾರ ಮಂಗಳೂರಿನ ಅಭಿವೃದ್ಧಿಗೆ ಮೀಸಲಿಟ್ಟಿದ್ದ ಅನುದಾನಕ್ಕೆ ತಡೆ ನೀಡಿತ್ತು. ಇದೀಗ ನಮ್ಮ ಸತತ ಪ್ರಯತ್ನದ ಫಲವಾಗಿ ಹಿಂದಿನ ಅನುದಾನಗಳನ್ನು ರಾಜ್ಯ ಸರ್ಕಾರವು ಮಹಾತ್ಮಾ ಗಾಂಧಿ ನಗರ ವಿಕಾಸ ಯೋಜನೆ-2 ಹೆಸರಿನಲ್ಲಿ ಮತ್ತೆ ಬಿಡುಗಡೆ ಮಾಡಿದೆ ಎಂದರು. ಈ ಸಂದರ್ಭದಲ್ಲಿ ಅಜಿತ್ ಡಿಸಿಲ್ವ, ರಮೇಶ್ ಹೆಗ್ಡೆ, ಭರತ್ ಕುಮಾರ್, ಸಂದೀಪ್ ಗರೋಡಿ, ರಾಮ್ ಪ್ರಸಾದ್, ಪ್ರವೀಣ್ ನಿಡ್ಡೇಲ್, ನವೀನ್ ಶೆಣೈ, ಗಣೇಶ್, ರೋಹಿದಾಸ್, ರತನ್, ಸೇರಿದಂತೆ ಪಕ್ಷದ ಪ್ರಮುಖರು,…
ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಜನತಾದಳ (ಜಾತ್ಯಾತೀತ) ಘಟಕದಲ್ಲಿ ಸಂಘಟನಾತ್ಮಕ ಚುರುಕು ಹೆಚ್ಚಿಸುವ ನಿಟ್ಟಿನಲ್ಲಿ ರಾಜ್ಯ ನಾಯಕತ್ವ ಮಹತ್ವದ ನೇಮಕಾತಿಗಳನ್ನು ಪ್ರಕಟಿಸಿದೆ. ಜಿಲ್ಲಾ ಘಟಕದ ನೂತನ ಕಾರ್ಯಧ್ಯಕ್ಷರಾಗಿ ಶಶಿರಾಜ ಶೆಟ್ಟಿ ಕೊಳಂಬೆ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಯೋಗಿಶ್ ಶೆಟ್ಟಿ ಜಪ್ಪು ಅವರನ್ನು ನೇಮಕ ಮಾಡಲಾಗಿದೆ. ಇದರೊಂದಿಗೆ ಜಿಲ್ಲಾ ಸಮಿತಿಯ ಸಂಪೂರ್ಣ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದೆ. ಜಿಲ್ಲಾ ಅಧ್ಯಕ್ಷ ಜಾಕೆ ಮಾಧವ ಗೌಡ ಅವರ ಶಿಫಾರಸಿನಂತೆ ಈ ನೇಮಕಾತಿಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ, ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕೇಂದ್ರ ಸಚಿವರಾದ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಅಧಿಕೃತವಾಗಿ ಘೋಷಿಸಿದರು. ಜಿಲ್ಲಾ ಸಮಿತಿಯ ಪ್ರಮುಖರು:• ಅಧ್ಯಕ್ಷ: ಜಾಕೆ ಮಾಧವ ಗೌಡ ಪಂಜಿತ್ತಾಡಿ• ಕಾರ್ಯಧ್ಯಕ್ಷ: ಶಶಿರಾಜ ಶೆಟ್ಟಿ ಕೊಳಂಬೆ • ಮಹಾ ಪ್ರಧಾನ ಕಾರ್ಯದರ್ಶಿ :, ಯೋಗಿಶ್ ಶೆಟ್ಟಿ ಜಪ್ಪು• ಕಾರ್ಯದರ್ಶಿಗಳು: ಮೋಹನ್‌ದಾಸ್ ಶೆಟ್ಟಿ, ಪುತ್ತು ಮೋನು ಹುಸೇನ್ (ಮಂಗಳೂರು), ಪ್ರಿಯಾ ಸಾಲಿಯಾನ್ (ಪುತ್ತೂರು), ಮುನೀರ್ ಮುಕ್ಕಚೇರಿ• ಖಜಾಂಚಿ: ಗಂಗಾಧರ ಉಳ್ಳಾಲ•…
ಯಾದಗಿರಿ: ಭೀಕರ ರಸ್ತೆ ಅಪಘಾತದಲ್ಲಿ ಆರು ಮಂದಿ ದುರ್ಮರಣಕ್ಕೀಡಾದ ಘಟನೆ ಬೀದರ್–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ. ಖಾಸಗಿ ಸ್ಲೀಪರ್ ಬಸ್ ಹಾಗೂ ಕಾರಿನ ನಡುವೆ ಸಂಭವಿಸಿದ ಮುಖಾಮುಖಿ ಡಿಕ್ಕಿ ನಂತರ ಉಂಟಾದ ಭಾರೀ ಬೆಂಕಿಯಿಂದ ಕಾರಿನಲ್ಲಿದ್ದ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಲಿಂಗಸುಗೂರಿನಿಂದ ಕಲಬುರಗಿ ಕಡೆಗೆ ಸಾಗುತ್ತಿದ್ದ ಸ್ಲೀಪರ್ ಬಸ್‌ಗೆ ವಿರುದ್ಧ ದಿಕ್ಕಿನಿಂದ ಬಂದ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯಾದ ತಕ್ಷಣವೇ ಎರಡೂ ವಾಹನಗಳಿಗೆ ಬೆಂಕಿ ತಗುಲಿ, ಕೆಲವೇ ಕ್ಷಣಗಳಲ್ಲಿ ಅವು ಜ್ವಾಲಾಮುಖಿಯಾಗಿ ಹೊತ್ತಿ ಉರಿದವು. ಬೆಂಕಿಯ ತೀವ್ರತೆಗೆ ಕಾರಿನಲ್ಲಿದ್ದವರು ಹೊರಬರಲು ಸಾಧ್ಯವಾಗದೆ ಒಳಗಡೆಯೇ ಸಿಲುಕಿಕೊಂಡಿದ್ದಾರೆ. ಪ್ರಾಥಮಿಕ ಮಾಹಿತಿ ಪ್ರಕಾರ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಒಟ್ಟು ಆರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತದೇಹಗಳು ಸಂಪೂರ್ಣವಾಗಿ ಕರಕಲಾಗಿರುವುದರಿಂದ ಗುರುತು ಪತ್ತೆ ಕಷ್ಟವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನೊಂದೆಡೆ, ಬಸ್‌ಗೆ ಬೆಂಕಿ ತಗುಲುತ್ತಿದ್ದಂತೆಯೇ ಎಚ್ಚೆತ್ತ ಪ್ರಯಾಣಿಕರು ತುರ್ತು ದ್ವಾರ ಹಾಗೂ ಕಿಟಕಿಗಳ ಮೂಲಕ ಹೊರಗೆ ಜಿಗಿದು ಜೀವ ಉಳಿಸಿಕೊಂಡಿದ್ದಾರೆ. ಚಾಲಕ ಹಾಗೂ ನಿರ್ವಾಹಕರ ಸಮಯಪ್ರಜ್ಞೆಯಿಂದಾಗಿ ದೊಡ್ಡ ಅನಾಹುತ…
ಮಂಗಳೂರಿನ ಹಂಪನ್‌ಕಟ್ಟೆಯ ವೈಟ್ ಸ್ಟೋನ್ ಪ್ರೀಮಿಯರ್ ಇನ್ ಸಭಾಂಗಣದಲ್ಲಿ ಗುರುವಾರ ನಡೆದ ವೈಟ್ ಸ್ಟೋನ್ ಶರೀಫ್ ಹಾಜಿಯವರ ಸನ್ಮಾನ ಕಾರ್ಯಕ್ರಮವು ಅಪಾರ ಆತ್ಮೀಯತೆ ಹಾಗೂ ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಯಿತು. ಮಂಗಳೂರು ಗೆಳೆಯರ ಬಳಗದ ವತಿಯಿಂದ ಆಯೋಜಿಸಲಾದ ಈ ಸಮಾರಂಭದಲ್ಲಿ, ಶರೀಫ್ ಹಾಜಿಯವರ ವ್ಯಕ್ತಿತ್ವ, ನಿಸ್ವಾರ್ಥ ಸೇವೆ ಹಾಗೂ ಮೌನ ದಾನಧರ್ಮಗಳನ್ನು ಅನೇಕ ಗಣ್ಯರು ಹೃದಯಸ್ಪರ್ಶಿಯಾಗಿ ವಿವರಿಸಿದರು. ಸಾಮಾನ್ಯವಾಗಿ ಕಂಡುಬರುವ ಔಪಚಾರಿಕ ಮಾತುಗಳಿಗೆ ಬದಲಾಗಿ, ಅತಿಥಿಗಳೆಲ್ಲರೂ ಮನದಾಳದಿಂದ ಬಂದ ಅನುಭವಗಳನ್ನು ಹಂಚಿಕೊಂಡಿದ್ದು ಕಾರ್ಯಕ್ರಮದ ವಿಶೇಷತೆಯಾಗಿತ್ತು. ಶರೀಫ್ ಹಾಜಿಯವರ ದಾನಧರ್ಮದ ಅನೇಕ ಘಟನೆಗಳು ಸಭೆಯಲ್ಲಿ ಅನಾವರಣಗೊಂಡವು. ಬಡ ಮಹಿಳೆಗೆ ಹೊಲಿಗೆ ಯಂತ್ರ ನೀಡಿದ ಸಂದರ್ಭದಲ್ಲೂ ಫೋಟೋ ತೆಗೆದು ಪ್ರಸಾರ ಮಾಡುವುದನ್ನು ನಿರಾಕರಿಸಿ, “ಅವಳ ಗೌರವ ಕಾಪಾಡಿ, ಉದ್ಯೋಗಕ್ಕೆ ಪ್ರೋತ್ಸಾಹ ನೀಡಿ” ಎಂಬ ಅವರ ಮನೋಭಾವ ಎಲ್ಲರ ಮನ ಗೆದ್ದಿತು. ಇದೇ ರೀತಿ “ನಂಡೆ ಪೆಂಙಳ್” ಸಾಮೂಹಿಕ ವಿವಾಹ ಯೋಜನೆಗೆ ಅವರು ನೀಡಿದ ನಿರೀಕ್ಷೆಗೂ ಮೀರಿದ ಸಹಾಯಧನವನ್ನು ಆಝಾದ್ ಮನ್ಸೂರ್ ಹಾಜಿ ಸ್ಮರಿಸಿದರು. ಸಮಾಜ ಸೇವೆಗೆ…
ಜನತಾ ದಳ (ಜಾತ್ಯಾತೀತ) ಪಕ್ಷದ ವಿಸ್ತರಣೆ ಹಾಗೂ ಯುವಜನರನ್ನು ಪಕ್ಷದತ್ತ ಆಕರ್ಷಿಸುವ ಉದ್ದೇಶದಿಂದ ಇಂದು ಬೆಂಗಳೂರಿನ ಜೆಡಿಎಸ್ ರಾಜ್ಯ ಕಚೇರಿಯಲ್ಲಿ ಮಹತ್ವದ ಸೇರ್ಪಡೆ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಸುಳ್ಯದ ಪ್ರತಿಷ್ಠಿತ ಕೆದಂಬಾಡಿ ಕುಟುಂಬಕ್ಕೆ ಸೇರಿದ ಡಾ. ಆರ್ಥಿಕ್ ಕೆದಂಬಾಡಿ ಅವರು, ಪ್ರಸ್ತುತ ಎಂ.ಬಿ.ಎ ವಿದ್ಯಾರ್ಥಿಯಾಗಿದ್ದು, ಅಧಿಕೃತವಾಗಿ ಜನತಾ ದಳ (ಜಾತ್ಯಾತೀತ) ಪಕ್ಷಕ್ಕೆ ಸೇರ್ಪಡೆಗೊಂಡರು. ದಕ್ಷಿಣ ಕನ್ನಡ ಜಿಲ್ಲಾ ವಿದ್ಯಾರ್ಥಿ ಜನತಾ ದಳದ ಅಧ್ಯಕ್ಷರಾದ ನಿಹಾಲ್ ಎಸ್ ಕೋಡ್ತುಗುಳಿ ಅವರ ಪ್ರಯತ್ನದ ಫಲವಾಗಿ ಈ ಸೇರ್ಪಡೆ ನೆರವೇರಿತು. ಸೇರ್ಪಡೆ ನಂತರ ಮಾತನಾಡಿದ ಡಾ. ಆರ್ಥಿಕ್ ಕೆದಂಬಾಡಿ ಅವರು, ಜೆಡಿಎಸ್ ಪಕ್ಷದ ಜನಪರ ಧೋರಣೆಗಳು, ವಿಶೇಷವಾಗಿ ವಿದ್ಯಾರ್ಥಿಗಳು ಮತ್ತು ಯುವಜನರ ಹಿತಾಸಕ್ತಿಗಳನ್ನು ಕಾಪಾಡುವ ನಿಲುವುಗಳು ತಮಗೆ ಪ್ರೇರಣೆಯಾಗಿವೆ ಎಂದು ಹೇಳಿದರು. ಸಮಾಜಮುಖಿ ರಾಜಕೀಯದ ಮೂಲಕ ರಾಜ್ಯದ ಸಮಗ್ರ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆ ನೀಡುವ ಸಂಕಲ್ಪದಿಂದ ಪಕ್ಷವನ್ನು ಸೇರಿದ್ದಾಗಿ ಅವರು ತಿಳಿಸಿದರು. ಈ ಸಂದರ್ಭದಲ್ಲಿ ನಿಹಾಲ್ ಎಸ್ ಕೋಡ್ತುಗುಳಿ ಅವರು ಮಾತನಾಡಿ,…
ಬೆಂಗಳೂರು: ಜನತಾದಳ ಜಾತ್ಯತೀತ ಪಕ್ಷದ ಕಚೇರಿಯಲ್ಲಿ ಸಂವಿಧಾನ ಶಿಲ್ಪಿ, ಮಹಾನ್ ಮಾನವತಾವಾದಿ ಹಾಗೂ ಭಾರತರತ್ನ ಡಾ ಬಿ ಆರ್ ಅಂಬೇಡ್ಕರ್ ಅವರ ಜಯಂತಿಯನ್ನು ಅತ್ಯಂತ ಗೌರವಭಾವದಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ದೇಶದ ಸಾಮಾಜಿಕ ನ್ಯಾಯದ ಹೋರಾಟಕ್ಕೆ ಅಪಾರ ಕೊಡುಗೆ ನೀಡಿದ ಮಹನೀಯರ ಆದರ್ಶಗಳನ್ನು ಸ್ಮರಿಸಿ, ಅವರ ಚಿಂತನೆಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಸಂಕಲ್ಪವನ್ನು ವ್ಯಕ್ತಪಡಿಸಲಾಯಿತು. ಮಾಜಿ ಉಪ ಪ್ರಧಾನಿಗಳು ಹಾಗೂ ಹಸಿರು ಕ್ರಾಂತಿಯ ಹರಿಕಾರರಾದ ಡಾ. ಬಾಬು ಜಗಜೀವನ್ ರಾಮ್ ಅವರಿಗೆ ಎಚ್ ಡಿ ಕುಮಾರ ಸ್ವಾಮಿ ಪುಷ್ಪರ್ಚಣೆ ಗೈದು ನಮನಗಳನ್ನು ಸಮರ್ಪಿಸಿದರು ಕಾರ್ಯಕ್ರಮದ ಅಂಗವಾಗಿ ಜಗಜೀವನ್ ರಾಮ್ ಅವರಿಗೂ ನಮನಗಳನ್ನು ಸಲ್ಲಿಸಲಾಯಿತು. ಹಸಿರು ಕ್ರಾಂತಿಯ ಹರಿಕಾರರಾಗಿಯೂ, ದೇಶದ ರೈತರ ಬದುಕಿನಲ್ಲಿ ಮಹತ್ವದ ಬದಲಾವಣೆ ತರಲು ಶ್ರಮಿಸಿದ ಅವರ ಸೇವೆಯನ್ನು ಈ ವೇಳೆ ಕೊಂಡಾಡಲಾಯಿತು. ಕಾರ್ಯಕ್ರಮದಲ್ಲಿ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾದ ಶ್ರೀ ಎಂ. ಕೃಷ್ಣಾರೆಡ್ಡಿ ಅವರು ಮಾತನಾಡಿ, ಡಾ. ಅಂಬೇಡ್ಕರ್ ಅವರ ಸಂವಿಧಾನಿಕ ಮೌಲ್ಯಗಳು ಮತ್ತು ಸಮಾನತೆಯ…
ತುಳು ಚಿತ್ರರಂಗದ ಮುಂಚೂಣಿ ವ್ಯಕ್ತಿ, ಪ್ರತಿಭಾವಂತ ನಾಟಕ ರಚನೆಗಾರರು, ಸಮಾಜಮುಖಿ ಚಿಂತಕರು, ಭಾರತೀಯ ಜನತಾ ಪಕ್ಷದ ಹಿರಿಯ ನಾಯಕರು ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ನಮ್ಮ ಆತ್ಮೀಯ ಮಿತ್ರರಾದ ರಾಮಚಂದರ್ ಬೈಕಂಪಾಡಿ ಅವರ ನಿಧನವು ತುಳುನಾಡಿನ ಸಾಂಸ್ಕೃತಿಕ ಲೋಕಕ್ಕೂ, ಸಮಾಜ ಜೀವನಕ್ಕೂ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆ ಅನಿರೀಕ್ಷಿತ ಅಘಾತವಾಗಿದ್ದು, ತುಳು ಭಾಷೆ, ಸಂಸ್ಕೃತಿ ಮತ್ತು ನಾಟಕ ರಂಗದ ಬೆಳವಣಿಗೆಗೆ ಅವರು ನೀಡಿದ ಸೇವೆ ಅಪಾರ ಮತ್ತು ಅಮೂಲ್ಯವಾಗಿದೆ. ನಾಟಕಗಳ ಮೂಲಕ ಸಮಾಜದ ಅಸಮಾನತೆ, ಸಂಸ್ಕೃತಿ ಮೌಲ್ಯಗಳು ಹಾಗೂ ಜನಜಾಗೃತಿಯ ವಿಚಾರಗಳನ್ನು ಜನಸಾಮಾನ್ಯರೊಳಗೆ ತಲುಪಿಸುವಲ್ಲಿ ಅವರು ವಿಶೇಷ ಪಾತ್ರವಹಿಸಿದ್ದರು. ತುಳು ಚಿತ್ರರಂಗದ ಬೆಳವಣಿಗೆಯಲ್ಲಿಯೂ ಅವರು ತೋರಿದ ಸಮರ್ಪಣೆ, ಶ್ರಮ ಮತ್ತು ಬದ್ಧತೆ ಸದಾ ಸ್ಮರಣೀಯವಾಗಿರುತ್ತದೆ. ಸಾಮಾಜಿಕ ಧುರೀಣರಾಗಿ ಅವರು ಅನೇಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸಮಾಜದ ಎಲ್ಲಾ ವರ್ಗಗಳ ಜನರೊಂದಿಗೆ ಆತ್ಮೀಯ ಬಾಂಧವ್ಯವನ್ನು ಬೆಳೆಸಿಕೊಂಡಿದ್ದರು. ಸರಳತೆ, ಸೌಜನ್ಯ, ನಿಷ್ಠೆ ಮತ್ತು ನಾಯಕತ್ವದ ಗುಣಗಳಿಂದ ಅವರು ಎಲ್ಲರ ಹೃದಯಗಳಲ್ಲಿ ಅಚ್ಚಳಿಯದ ಗುರುತು…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
