Author: Tulunada Surya

ಮಂಗಳೂರು : ಪಣಂಬೂರಿನ ನವಮಂಗಳೂರು ಬಂದರು ಪ್ರಾಧಿಕಾರ (ಎನ್‌ಎಂಪಿಎ)ದಲ್ಲಿ ತುರ್ತು ಕ್ರಮವಾಗಿ, ಅರೇಬಿಯನ್ ಸಮುದ್ರದಲ್ಲಿ ಬೆಂಕಿ ಹೊತ್ತಿಕೊಂಡ ಸಿಂಗಾಪುರದ ಸರಕು ಸಾಗಣೆ ಹಡಗಿನಿಂದ ರಕ್ಷಿಸಲ್ಪಟ್ಟ 18 ಸಿಬ್ಬಂದಿಯನ್ನು ರಕ್ಷಿಸಿದ್ದುಅವರಲ್ಲಿ ಐವರು ಗಾಯಗೊಂಡಿದ್ದಾರೆ, ಅವರಲ್ಲಿ ಇಬ್ಬರು ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಕೊಲಂಬೊದಿಂದ ಮುಂಬೈಗೆ ತೆರಳುತ್ತಿದ್ದ ಎಂವಿ ವಾನ್ ಹೈ 503 ಎಂಬ ಹಡಗು, ಜೂನ್ 9 ರ ಸೋಮವಾರದಂದು ಕೇರಳದ ಬೇಪೋರ್ ಕರಾವಳಿಯಿಂದ ಸುಮಾರು 78 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ದೊಡ್ಡ ಬೆಂಕಿ ಅವಘಡ ಸಂಭವಿಸಿದೆ ಎಂದು ವರದಿಯಾಗಿದೆ ಭಾರತೀಯ ನೌಕಾಪಡೆಯ ಹಡಗು ಐಎನ್‌ಎಸ್ ಸೂರತ್ ರಕ್ಷಣಾ ಕಾರ್ಯಾಚರಣೆಯನ್ನು ನಡೆಸಿತು ಮತ್ತು ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನವಮಂಗಳೂರು ಬಂದರಿಗೆ ಆಗಮಿಸಿದೆ.

Read More

ದಿನಾಂಕ: 16.06.2025 ರಂದು ಬೆಳಿಗ್ಗೆ 11-00 ಗಂಟೆಯಿಂದ ಬೆಳ್ತಂಗಡಿ ತಾಲೂಕು ಕಛೇರಿ, ಬೆಳ್ತಂಗಡಿ ಇಲ್ಲಿ “ಲೋಕಾಯುಕ್ತ ಜನ ಸಂಪರ್ಕ ಸಭೆ” ಯನ್ನು ಆಯೋಜಿಸಲಾಗಿರುತ್ತದೆ. ಮಂಗಳೂರು ಲೋಕಾಯುಕ್ತ ವಿಭಾಗದ ಪೊಲೀಸ್ ಅಧೀಕ್ಷಕರು. ಪೊಲೀಸ್ ಉಪಾಧೀಕ್ಷಕರು ಹಾಗೂ ಪೊಲೀಸ್ ನಿರೀಕ್ಷಕರು ದಿನಾಂಕ 16.06.2025 ರಂದು ಭೇಟಿ ನೀಡಿ, ಕರ್ನಾಟಕ ಲೋಕಾಯುಕ್ತ ಕಾಯಿದೆಯಡಿ ದೂರು ಅರ್ಜಿಯ ನಮೂನೆಗಳನ್ನು ವಿತರಿಸಿ, ಭರ್ತಿ ಮಾಡಿ, ಆಫಿದಾವಿತ್ ಮಾಡಿಸಿದ ದೂರು ಅರ್ಜಿಗಳನ್ನು ಸ್ವೀಕರಿಸಲಾಗುವುದು. ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳಲ್ಲಿ ವಿಳಂಬ ಹಾಗೂ ಇನ್ನಿತರೇ ತೊಂದರೆ ನೀಡುತ್ತಿರುವ ಸರಕಾರಿ ಅಧಿಕಾರಿ/ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನೀಡಬಹುದಾಗಿದೆ. ಸಾರ್ವಜನಿಕರು ಈ ಅವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಕೋರಲಾಗಿದೆ. ಇದಲ್ಲದೇ ಉಳಿದ ದಿನಗಳಲ್ಲೂ ಕಛೇರಿ ವೇಳೆಯಲ್ಲಿ ಸಹ ಸಾರ್ವಜನಿಕರು ತಮ್ಮ ಅಹವಾಲು/ದೂರುಗಳನ್ನು ನೀಡಬಹುದಾಗಿದೆ ಅಥವಾ ದೂರವಾಣಿ ಮೂಲಕವೂ ಸಂಪರ್ಕಿಸಬಹುದಾಗಿದೆ. ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯುವಂತೆ ಕೋರಲಾಗಿದೆ. ಅರ್ಜಿದಾರರು ನಮೂನೆ 1 & ॥ ರಲ್ಲಿ ಭರ್ತಿ ಮಾಡಿ ಅಫಿದಾವಿತ್ ಮಾಡಿ ಸಲ್ಲಿಸಿದ ಅರ್ಜಿಗಳನ್ನು ಈ ಕಛೇರಿಗೆ…

Read More

ಮೂಡುಬಿದಿರೆ: ಬೆಳುವಾಯಿ ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ರೆನ್ಸಿಟ ಅತಿ ಹೆಚ್ಚು 619 ( 99.04% ) ಅಂಕಗಳಿಸಿದ್ದು ಶಾಲೆಯಲ್ಲಿ ಪ್ರಥಮ ಮತ್ತು ಕರ್ನಾಟಕ ರಾಜ್ಯದಲ್ಲಿ 7ನೇ ಸ್ಥಾನ ಪಡೆದು ಕಲಿತ ಶಾಲೆಗೆ ನಮ್ಮ ತುಳುನಾಡಿಗೆ ಹೆಮ್ಮೆ ತಂದಿರುತ್ತಾರೆ. ಇವರನ್ನು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ದಿನಾಂಕ 08-06-2025 ರಂದು ಮೂಡುಬಿದಿರೆಯಲ್ಲಿ ಶಾಲು ಹೊದಿಸಿ, ಮಾಲೆ ಹಾಕಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರೆನ್ಸಿಟ ರವರ ತಂದೆ ರೋಬರ್ಟ್ ಫೆರ್ನಾಂಡಿಸ್ ಹಾಗೂ ತಾಯಿ ರೈನಾ ಫೆರ್ನಾಂಡಿಸ್, ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಘಟಕ ಕೋಶಾಧಿಕಾರಿ ರೋಷನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

Read More

ಉಡುಪಿ ಜಿಲ್ಲೆಗೆ ನಿಯುಕ್ತರಾದ ಮಾನ್ಯ ಹರಿರಾಮ್ ಶಂಕರ್ ಐಪಿಎಸ್ ರವರನ್ನು ಧಾರ್ಮಿಕ ಮಾರ್ಗದರ್ಶಕ ಸಂತೋಷ ಆಚಾರ್ಯ ಉಡುಪಿ ಬೇಟಿ ಮಾಡಿ ಶ್ರೀ ಮಧುಕರ್ ಶೆಟ್ಟಿ ಐಪಿಎಸ್ ರವರ ಭಾವಚಿತ್ರ ನೀಡಿ ಶಾಲು ಹಾಕಿ ಅಬಿನಂದಿಸಿ ಹರಸಿದರು. ಹಾಗೂ ಇತರ ಧಾರ್ಮಿಕ ಮುಖಂಡರಾದ ಸಮಾಜ ಸೇವಕ ಶ್ರೀ ಶಶಿಧರ್ ಕಟಪಾಡಿ ಮತ್ತು ಶ್ರೀ ರವಿ ಶರ್ಮಾ ಪಾಲಮೆ ಉಪಸ್ಥಿತರಿದ್ದರು.

Read More

ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಮಳೆಯಿಂದ ಉಂಟಾಗಿರುವ ಅವ್ಯವಸ್ಥೆಗಳು ಸೇರಿದಂತೆ ಜನಸಾಮಾನ್ಯರು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಬಗ್ಗೆ ಪಾಲಿಕೆ ಆಯುಕ್ತರು ಹಾಗೂ ಅಧಿಕಾರಿಗಳೊಂದಿಗೆ ಶಾಸಕ ವೇದವ್ಯಾಸ ಕಾಮತ್ ರವರು ತುರ್ತು ಸಭೆ ನಡೆಸಿದರು. ಈ ವೇಳೆ ಮಾತನಾಡಿದ ಶಾಸಕರು, ಪಾಲಿಕೆ ವ್ಯಾಪ್ತಿಯಲ್ಲಿ ವಿಪರೀತ ಮಳೆ ಸುರಿದಿದ್ದರೂ ಜನರಿಗೆ ಕುಡಿಯುವ ನೀರಿನ ಸಮಸ್ಯೆ ತಪ್ಪಿಲ್ಲ. ಇನ್ನೊಂದೆಡೆ ರಾಜಕಾಲುವೆಗಳಲ್ಲಿ ಸಮರ್ಪಕವಾಗಿ ಹೂಳೆತ್ತದಿರುವಿಕೆಯಿಂದ ಮನೆಗಳಿಗೆ ಮಳೆ ನೀರು ನುಗ್ಗಿ ಜನಸಾಮಾನ್ಯರು ತೀವ್ರ ಸಂಕಷ್ಟ ಅನುಭವಿಸುವಂತಾಗಿದೆ. ಸಾಲದ್ದಕ್ಕೆ ಮಳೆಯಿಂದ ತೊಂದರೆಗೀಡಾದವರಿಗೆ ಪಾಲಿಕೆ ವತಿಯಿಂದ ಯಾವುದೇ ನೆರವು ಸಿಗುತ್ತಿಲ್ಲ. ಕಸ ವಿಲೇವಾರಿಯ ಅವ್ಯವಸ್ಥೆಯ ಬಗ್ಗೆಯೂ ಜನರಿಂದ ದೂರುಗಳು ಬರುತ್ತಿವೆ. ಬಲ್ಲಾಳ್ ಬಾಗ್ ಬಳಿಯ ಶಿಥಿಲಗೊಂಡಿರುವ ರಾಜಕಾಲುವೆಯ ಬ್ರಿಡ್ಜ್ ನಿಂದ ನೀರು ಸಾರಾಗವಾಗಿ ಹರಿಯದೇ ಅದರಿಂದಲೂ ಕೃತಕ ನೆರೆ ಸೃಷ್ಟಿಯಾಗುತ್ತಿದ್ದು ಆ ಬಗ್ಗೆಯೂ ಕ್ರಮಕೈಗೊಳ್ಳುವುದು ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿ ಪಾಲಿಕೆ ಅಧಿಕಾರಿಗಳು ಯಾವುದನ್ನೂ ಹಗುರವಾಗಿ ಪರಿಗಣಿಸದೇ ಜನರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಬೇಕು ಎಂದು ಕಟ್ಟುನಿಟ್ಟಿನ…

Read More

ಮನೆಯೊಂದಕ್ಕೆ ವಿದ್ಯುತ್ ಸಂಪರ್ಕ ನೀಡಬೇಕಾದರೆ 20 ಸಾವಿರ ಲಂಚ ನೀಡಬೇಕು ಎಂದು ಬೇಡಿಕೆ ಇಟ್ಟ ಬ್ರಹ್ಮಾವರ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅಶೋಕ್ ಪೂಜಾರಿ ರೆಡ್ ಹ್ಯಾಂಡಾಗಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ. ದಿನೇಶ್ ಪೂಜಾರಿ ಎಂಬವರು ತಮ್ಮ ಮನೆಗೆ ವಿದ್ಯುತ್ ಸಂಪರ್ಕ ಪಡೆಯಲು ಮೆಸ್ಕಾಂ ಎಇಇ ಭೇಟಿಯಾಗಿದ್ದರು. ಸ್ಥಳ ಪರಿಶೀಲನೆ ನಡೆಸಿದ ಎಇಇ ವಿದ್ಯುತ್ ಸಂಪರ್ಕ ನೀಡಬೇಕಾದರೆ 20 ಸಾವಿರ ಲಂಚ ನೀಡಬೇಕು ಎಂಬ ಬೇಡಿಕೆಯನ್ನು ಇರಿಸಿದ್ದರು. ಈ ಬಗ್ಗೆ ದಿನೇಶ್ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದರು. ದಿನೇಶ್ ಎಂಬಾತನಿಂದ 20 ಸಾವಿರ ಲಂಚ ಪಡೆಯುತ್ತಿದ್ದ ಸಂದರ್ಭ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ಮೆಸ್ಕಾಂ ಎಇಇ ಅಶೋಕ್ ಪೂಜಾರಿಯನ್ನು ಬಂಧಿಸಿದ್ದಾರೆ. ಈ ಹಿಂದೆ ಕುಂದಾಪುರದ ಎಇಇ ಆಗಿದ್ದ ಅಶೋಕ್ ಪೂಜಾರಿ ಕಳೆದ ನಾಲ್ಕು ವರ್ಷಗಳಿಂದ ಬ್ರಹ್ಮಾವರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಮಂಗಳೂರು ಲೋಕಾಯುಕ್ತ ಎಸ್ಪಿ ಕುಮಾರಚಂದ್ರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಮಂಜುನಾಥ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತ್ತು.

Read More

ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಆರ್‌ಸಿಬಿ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಭೀಕರ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‌ಸಿಬಿ ಮಾರ್ಕೆಟಿಂಗ್ ವಿಭಾಗ ಮುಖ್ಯಸ್ಥ ನಿಖಿಲ್ ಸೋಸಲೆ ಸಹಿತ ಬಂಧಿತ ನಾಲ್ವರು ಆರೋಪಿಗಳಿಗೆ, ಜೂ.19ರ ವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಬೆಂಗಳೂರಿನ 41ನೇ ಎಸಿಜೆಎಂ ನ್ಯಾಯಾಲಯವು ಶುಕ್ರವಾರ ಆದೇಶ ನೀಡಿದೆ. ಇಲ್ಲಿನ ಕಬ್ಬನ್‍ಪಾರ್ಕ್ ಠಾಣಾ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರ್‌ಸಿಬಿ ಮ್ಯಾನೇಜ್‍ಮೆಂಟ್ ಮಾರ್ಕೆಟಿಂಗ್ ವಿಭಾಗದ ನಿಖಿಲ್ ಸೋಸಲೆ, ಡಿಎನ್‍ಎ ಸಂಸ್ಥೆಯ ಸುನೀಲ್ ಮ್ಯಾಥ್ಯೂ, ಕಿರಣ್ ಹಾಗೂ ಸುಮಂತ್ ಎಂಬುವರನ್ನು ಬಂಧಿಸಿ ಬಳಿಕ ಬೌರಿಂಗ್ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ. ನ್ಯಾಯಾಲಯದಲ್ಲಿ ವಾದ, ಪ್ರತಿವಾದ ಆಲಿಸಿದ ಬಳಿಕ ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ಜೂ.19ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ನ್ಯಾಯಾಧೀಶರು ತೀರ್ಪು ನೀಡಿದರು. ವಿಕ್ಟರಿ ಪರೇಡ್ ಬಗ್ಗೆ ಆರ್‌ಸಿಬಿ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ…

Read More

ಮಂಗಳೂರು: ದಿನಾಂಕ 06-06-2025 ರಂದು ಶುಕ್ರವಾರ ಬೆಳಿಗ್ಗೆ 11 ಕ್ಕೆ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆ ನಿಯೋಗ ನೂತನ ಮಂಗಳೂರು ಪೋಲಿಸ್ ಕಮಿಷನರ್ ರವರ ಭೇಟಿ ಮಾಡಿ ಹೂಗುಚ್ಛ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸಂಘಟನೆ ಕಳೆದ 16 ವರ್ಷಗಳಿಂದ ಪೋಲಿಸ್ ಇಲಾಖೆಗೆ ಸರ್ವ ರೀತಿಯಲ್ಲೂ ಸಹಕಾರ ನೀಡಿದ್ದು . ಮುಂದಿನ ದಿನಗಳಲ್ಲಿ ತಮ್ಮ ಅವಧಿ ಯಲ್ಲಿ ಮಂಗಳೂರು ಉತ್ತಮ ಶಾಂತಿ ನೆಮ್ಮದಿ ವಾತಾವರಣ ಸೃಷ್ಟಿಸಲು ತಾವು ಕೈಗೊಳ್ಳುವ ಜನಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲವಿದೆ. ಎಂದು ನೂತನ ಪೊಲೀಸ್ ಕಮಿಷನರ್ ರಿಗೆ ತಿಳಿಸಿದರು.ನಿಯೋಗದಲ್ಲಿ ತುಳುನಾಡ ರಕ್ಷಣಾ ವೇದಿಕೆ ವಕೀಲರ ಘಟಕದ ಮುಖಂಡ ನಾಯ್ಯವಾದಿ ರಾಘವೇಂದ್ರ ರಾವ್, ತುರವೇ ಕೇಂದ್ರೀಯ ಮಂಡಳಿ ಜೊತೆ ಕಾರ್ಯದರ್ಶಿ ಜ್ಯೋತಿ ಜೈನ್, ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ , ಮಂಗಳೂರು ಘಟಕ ಅಧ್ಯಕ್ಷ ಶರಣ್ ರಾಜ್, ಮಂಗಳೂರು ಮಹಿಳಾ ಅಧ್ಯಕ್ಷೆ ಆಶಾ ಶೆಟ್ಟಿ…

Read More

ಉಡುಪಿ: ದಿನಾಂಕ 04.06.2025 ಬುಧವಾರ ದಂದು ಉಡುಪಿ ಜಿಲ್ಲಾ ನೂತನ ಎಸ್ ಪಿ ಅಧಿಕಾರ ಸ್ವೀಕರಿಸಿದ ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿರುವ ಶ್ರೀ ಹರಿರಾಮ್ ಶಂಕರ್ ಅವರನ್ನು ತುಳುನಾಡ ರಕ್ಷಣಾ ವೇದಿಕೆ ನಿಯೋಗ ಭೇಟಿ ಮಾಡಿ ಹೂಗುಚ್ಛ ನೀಡಿ ಅಭಿನಂದಿಸಿದರು. ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳುನಾಡು ಪರಂಪರೆ ಅನುಸಾರವಾಗಿ ನಾಗಾರಾಧನೆ, ಭೂತಾರಾಧನೆ, ದೈವಾರಾಧನೆ, ಕೋಲ ನೇಮ ಯಕ್ಷಗಾನ ಕಂಬಳ ಉರುಸ್, ಜಾತ್ರೆ, ಮುಂತಾದ ಎಲ್ಲಾ ಧರ್ಮಗಳಿಗೆಸೇರಿದ ಉತ್ಸವಗಳು ಜಾತಿ ಮತ ಭೇದವಿಲ್ಲದೆ ಸೌಹಾರ್ದಯುತ ವಾಗಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುತ್ತದೆ.ಕೋಲ ನೇಮ ದಂತಹ ಕಾರ್ಯಕ್ರಮದ ನಂತರ ರೂಢಿಗತವಾಗಿ ನಿಯಮನುಸಾರ ಕೋಳಿ ಅಂಕದಂತಹ ಕಾರ್ಯಕ್ರಮ ವಿಧಿವತ್ತಾಗಿ ಆಚರಣೆಗೊಂಡು ಬರುತ್ತಿದೆ. ಸಾರ್ವಜನಿಕರ ಈ ಸಂಪ್ರದಾಯಿಕ ಜಾನಪದ ಆಚರಣೆಗೆ ಮತ್ತು ನಂಬಿಕೆಗೆ ಸಂಪೂರ್ಣವಾಗಿ ಸಹಕಾರ ನೀಡಲು ನೂತನ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ ರವರಿಗೆ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಮನವಿ ನೀಡಿ ವಿನಂತಿಸಲಾಯಿತು. ತುಳುನಾಡ ರಕ್ಷಣಾ ವೇದಿಕೆ ನಿಯೋಗದಲ್ಲಿತುಳುನಾಡ ರಕ್ಷಣಾ…

Read More

ಉಡುಪಿ ಜಿಲ್ಲೆಯಲ್ಲಿ ಮಟ್ಕಾ ದಂದೆ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದ್ದು, ಶಿರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾದ ಮಟ್ಕಾ ಪ್ರಕರಣದಲ್ಲಿ ಬಂದಿತನಾದ ಮಟ್ಕಾ ಬುಕ್ಕಿಯ ಮಾಹಿತಿಯ ಆಧಾರದಲ್ಲಿ ಉಡುಪಿಯಲ್ಲಿ ಒಟ್ಟು 12 ಪ್ರಕರಣಗಳು ವರದಿಯಾಗಿದ್ದು, 12 ಆರೋಪಿಗಳನ್ನು ದಸ್ತಗಿರಿ ಮಾಡಲಾಗಿರುತ್ತದೆ. 1) ಮಲ್ಪೆಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ : 66/2025ಕಲಂ: 112 BNS 2023 ಕಲಂ : 78(i) (iii) KP Act ರಲ್ಲಿ ಪ್ರಕಾಶ್‌ಮೂಲ್ಯ, ಪ್ರಾಯ: 43 ವರ್ಷತಂದೆ: ದಿ:ಕೃಷ್ಣಮೂಲ್ಯ, ವಾಸ: ಮನೆನಂಬ್ರ: 3-135-1, ಮಾತೃಛಾಯಾ, ಮೂಡಬೆಟ್ಟು, ಪಂಚನಬೆಟ್ಟು ಅಂಚೆ, ಹಿರಿಯಡ್ಕ, ಬೊಮ್ಮರಬೆಟ್ಟುಗ್ರಾಮ, ಉಡುಪಿ ತಾಲೂಕು ಮತ್ತು ಜಿಲ್ಲೆ. 2) ಮಲ್ಪೆಪೊಲೀಸ್‌ ಠಾಣೆ ಅಪರಾಧ ಕ್ರಮಾಂಕ ::66/2025 ಕಲಂ: 112 BNS 2023 & 78(i) (iii) KP Act ರಲ್ಲಿ ರತ್ನಾಕರ ಅಮೀನ್ ಪ್ರಾಯ 48 ವರ್ಷ ತಂದೆ : ದಿ : ರಾಜುಸನಿಲ್ , ವಾಸ : ಅಮೀನ ನಿವಾಸ , ನಾರಾಯಣ ಗುರು ಸಮುದಾಯ ಭವನ…

Read More