ಮಂಗಳೂರು: ದಿನಾಂಕ 06-06-2025 ರಂದು ಶುಕ್ರವಾರ ಬೆಳಿಗ್ಗೆ 11 ಕ್ಕೆ ಯೋಗೀಶ್ ಶೆಟ್ಟಿ ಜಪ್ಪು ರವರ ನೇತೃತ್ವದಲ್ಲಿ ತುಳುನಾಡ ರಕ್ಷಣಾ ವೇದಿಕೆ ನಿಯೋಗ ನೂತನ ಮಂಗಳೂರು ಪೋಲಿಸ್ ಕಮಿಷನರ್ ರವರ ಭೇಟಿ ಮಾಡಿ ಹೂಗುಚ್ಛ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಸಂಘಟನೆ ಕಳೆದ 16 ವರ್ಷಗಳಿಂದ ಪೋಲಿಸ್ ಇಲಾಖೆಗೆ ಸರ್ವ ರೀತಿಯಲ್ಲೂ ಸಹಕಾರ ನೀಡಿದ್ದು . ಮುಂದಿನ ದಿನಗಳಲ್ಲಿ ತಮ್ಮ ಅವಧಿ ಯಲ್ಲಿ ಮಂಗಳೂರು ಉತ್ತಮ ಶಾಂತಿ ನೆಮ್ಮದಿ ವಾತಾವರಣ ಸೃಷ್ಟಿಸಲು ತಾವು ಕೈಗೊಳ್ಳುವ ಜನಪರ ಕಾರ್ಯಕ್ರಮಗಳಿಗೆ ಸದಾ ಬೆಂಬಲವಿದೆ. ಎಂದು ನೂತನ ಪೊಲೀಸ್ ಕಮಿಷನರ್ ರಿಗೆ ತಿಳಿಸಿದರು.
ನಿಯೋಗದಲ್ಲಿ ತುಳುನಾಡ ರಕ್ಷಣಾ ವೇದಿಕೆ ವಕೀಲರ ಘಟಕದ ಮುಖಂಡ ನಾಯ್ಯವಾದಿ ರಾಘವೇಂದ್ರ ರಾವ್, ತುರವೇ ಕೇಂದ್ರೀಯ ಮಂಡಳಿ ಜೊತೆ ಕಾರ್ಯದರ್ಶಿ ಜ್ಯೋತಿ ಜೈನ್, ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ , ಮಂಗಳೂರು ಘಟಕ ಅಧ್ಯಕ್ಷ ಶರಣ್ ರಾಜ್, ಮಂಗಳೂರು ಮಹಿಳಾ ಅಧ್ಯಕ್ಷೆ ಆಶಾ ಶೆಟ್ಟಿ ಅತ್ತಾವರ , ಕಾರ್ಮಿಕ ಘಟಕ ಅಧ್ಯಕ್ಷ ಅನಿಲ್ ಪೂಜಾರಿ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಕ್ಲೀಟಸ್ ಲೋಬೊ, ಉಳ್ಳಾಲ ಘಟಕ ಉಪಾಧ್ಯಕ್ಷ ಮುನೀರ್ ಮುಕ್ಕಚೇರಿ, ಯುವ ಘಟಕ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಕುಡುಪು , ಮಹಿಳಾ ಸಂಘಟನಾ ಕಾರ್ಯದರ್ಶಿ ವೀಣಾ ಶೆಟ್ಟಿ, ಮಂಗಳೂರು ನಗರ ಉಪಾಧ್ಯಕ್ಷೆ ಶಾರದ ಶೆಟ್ಟಿ, ಪ್ರೀಷನ್ ಶೆಟ್ಟಿ ಉಳ್ಳಾಲ್ , ಪ್ರಶಾಂತ್. ಎಂ. ರೈ ಬಜ್ಪೆ ಮತ್ತಿತರರು ಮುಖಂಡರು ಉಪಸ್ಥಿತರಿದ್ದರು.
