ಉಡುಪಿ: ದಿನಾಂಕ 04.06.2025 ಬುಧವಾರ ದಂದು ಉಡುಪಿ ಜಿಲ್ಲಾ ನೂತನ ಎಸ್ ಪಿ ಅಧಿಕಾರ ಸ್ವೀಕರಿಸಿದ ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಗಳಿಸಿರುವ ಶ್ರೀ ಹರಿರಾಮ್ ಶಂಕರ್ ಅವರನ್ನು ತುಳುನಾಡ ರಕ್ಷಣಾ ವೇದಿಕೆ ನಿಯೋಗ ಭೇಟಿ ಮಾಡಿ ಹೂಗುಚ್ಛ ನೀಡಿ ಅಭಿನಂದಿಸಿದರು.

ಹಾಗೂ ಉಡುಪಿ ಜಿಲ್ಲೆಯಲ್ಲಿ ತುಳುನಾಡು ಪರಂಪರೆ ಅನುಸಾರವಾಗಿ ನಾಗಾರಾಧನೆ, ಭೂತಾರಾಧನೆ, ದೈವಾರಾಧನೆ, ಕೋಲ ನೇಮ ಯಕ್ಷಗಾನ ಕಂಬಳ ಉರುಸ್, ಜಾತ್ರೆ, ಮುಂತಾದ ಎಲ್ಲಾ ಧರ್ಮಗಳಿಗೆ
ಸೇರಿದ ಉತ್ಸವಗಳು ಜಾತಿ ಮತ ಭೇದವಿಲ್ಲದೆ ಸೌಹಾರ್ದಯುತ ವಾಗಿ ಸಾವಿರಾರು ವರ್ಷಗಳಿಂದ ನಡೆದುಕೊಂಡು ಬಂದಿರುತ್ತದೆ.
ಕೋಲ ನೇಮ ದಂತಹ ಕಾರ್ಯಕ್ರಮದ ನಂತರ ರೂಢಿಗತವಾಗಿ ನಿಯಮನುಸಾರ ಕೋಳಿ ಅಂಕದಂತಹ ಕಾರ್ಯಕ್ರಮ ವಿಧಿವತ್ತಾಗಿ ಆಚರಣೆಗೊಂಡು ಬರುತ್ತಿದೆ. ಸಾರ್ವಜನಿಕರ ಈ ಸಂಪ್ರದಾಯಿಕ ಜಾನಪದ ಆಚರಣೆಗೆ ಮತ್ತು ನಂಬಿಕೆಗೆ ಸಂಪೂರ್ಣವಾಗಿ ಸಹಕಾರ ನೀಡಲು ನೂತನ ಪೋಲಿಸ್ ವರಿಷ್ಠಾಧಿಕಾರಿ ಶ್ರೀ ಹರಿರಾಮ್ ಶಂಕರ್ ರವರಿಗೆ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಮನವಿ ನೀಡಿ ವಿನಂತಿಸಲಾಯಿತು.

ತುಳುನಾಡ ರಕ್ಷಣಾ ವೇದಿಕೆ ನಿಯೋಗದಲ್ಲಿ
ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪು, ಉಡುಪಿ ಜಿಲ್ಲಾ ಅಧ್ಯಕ್ಷ ಫ್ರ್ಯಾಂಕಿ ಡಿಸೋಜ ಕೊಳಲಗಿರಿ,
ಕಾರ್ಮಿಕ ಘಟಕ ಜಿಲ್ಲಾಧ್ಯಕ್ಷ ಜಯ ಪೂಜಾರಿ ಲಕ್ಷ್ಮಿ ನಗರ,
ಮಹಿಳಾ ಘಟಕ ಜಿಲ್ಲಾಧ್ಯಕ್ಷ
ಸುನಂದ ಕೋಟ್ಯಾನ್ ,
ಜಿಲ್ಲಾ ಹಿರಿಯ ಉಪಾಧ್ಯಕ್ಷ
ಜಯರಾಮ್ ಪೂಜಾರಿ, ಜಿಲ್ಲಾ ಉಪಾಧ್ಯಕ್ಷ ಉಮೇಶ್ ಶೆಟ್ಟಿ ಬಾಣಬೆಟ್ಟು ,
ಉಡುಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಂದ್ರ ಪೂಜಾರಿ ಹಾವಂಜೆ ,
ಕುಂದಾಪುರ ತಾಲೂಕು ಅಧ್ಯಕ್ಷ ಸತೀಶ್ ಕಾರ್ವಿ ,
ಬ್ರಹ್ಮವರ ತಾಲೂಕು ಅಧ್ಯಕ್ಷ ಸತೀಶ್ ಪೂಜಾರಿ ಕೀಳಿಂಜೆ ,
ಕಾಪು ಮಹಿಳಾಧ್ಯಕ್ಷೆ ಅನುಸೂಯ ಶೆಟ್ಟಿ
ಉಡುಪಿ ಜಿಲ್ಲಾ ಜೊತೆ ಕಾರ್ಯದರ್ಶಿ ಪ್ರೀತಂ ಡಿ’ಕೋಸ್ತ, ಕಾರ್ಮಿಕ ಘಟಕ ಜಿಲ್ಲಾ ಉಪಾಧ್ಯಕ್ಷ ಕುಶಾಲ್ ಅಮೀನ್ ಬೆಂಗ್ರೆ , ಕಾರ್ಮಿಕ ಘಟಕ ಜಿಲ್ಲಾ ಸಂಘಟನಾ ಕಾರ್ಯದರ್ಶಿ ರೋಷನ್ ಬಂಗೇರ ,
ಮಹಿಳಾ ಜಿಲ್ಲಾ ಉಪಾಧ್ಯಕ್ಷೆ ಗುಲಾಬಿ , ಶಂಕರ್, ಹರಿಣಾಕ್ಷಿ ಉಚ್ಚಿಲ, ಮಮತಾ , ಹರ್ಷ , ರೋಹನ್ ಉಚ್ಚಿಲ, ಧನವತಿ , ತಿಲಕ್ ಶೆಟ್ಟಿ , ರತ್ನಾಕರ್ ಶೆಟ್ಟಿ , ದಿನೇಶ್ , ಲಕ್ಷ್ಮಿ ಆದಿಉಡುಪಿ, ಸದಾಶಿವ ಶ್ರೀಯಾನ್ ಸೇರಿದಂತೆ ಮತ್ತಿತರ ತುಳುನಾಡ ರಕ್ಷಣಾ ವೇದಿಕೆ ಮುಖಂಡರು ಉಪಸ್ಥಿತರಿದ್ದರು




