
ಮೂಡುಬಿದಿರೆ: ಬೆಳುವಾಯಿ ಬ್ಲೋಸಂ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿನಿ ರೆನ್ಸಿಟ ಅತಿ ಹೆಚ್ಚು 619 ( 99.04% ) ಅಂಕಗಳಿಸಿದ್ದು ಶಾಲೆಯಲ್ಲಿ ಪ್ರಥಮ ಮತ್ತು ಕರ್ನಾಟಕ ರಾಜ್ಯದಲ್ಲಿ 7ನೇ ಸ್ಥಾನ ಪಡೆದು ಕಲಿತ ಶಾಲೆಗೆ ನಮ್ಮ ತುಳುನಾಡಿಗೆ ಹೆಮ್ಮೆ ತಂದಿರುತ್ತಾರೆ. ಇವರನ್ನು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಮಂಡಳಿ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ರವರು ದಿನಾಂಕ 08-06-2025 ರಂದು ಮೂಡುಬಿದಿರೆಯಲ್ಲಿ ಶಾಲು ಹೊದಿಸಿ, ಮಾಲೆ ಹಾಕಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ರೆನ್ಸಿಟ ರವರ ತಂದೆ ರೋಬರ್ಟ್ ಫೆರ್ನಾಂಡಿಸ್ ಹಾಗೂ ತಾಯಿ ರೈನಾ ಫೆರ್ನಾಂಡಿಸ್, ತುಳುನಾಡ ರಕ್ಷಣಾ ವೇದಿಕೆ ಮಂಗಳೂರು ಘಟಕ ಕೋಶಾಧಿಕಾರಿ ರೋಷನ್ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.

