ಚಿರಾಯು ಅಸೋಸಿಯೇಶನ್ ರಿ. ಕರ್ನಾಟಕ ಹಾಗೂ ಜನಸೇವಾ ಫೌಂಡೇಶನ್ ರಿ. ಸಹಯೋಗದೊಂದಿಗೆ ಗಣರಾಜ್ಯೋತ್ಸವದ ಅಂಗವಾಗಿ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ಕಾರ್ಯಕ್ರಮ ವಿದ್ಯಾವರ್ಧಕ ಸಂಘ ದಾರವಾಡದಲ್ಲಿ ಆದಿತ್ಯವಾರ ನಡೆಯಿತು.
ಕಾರ್ಯಕ್ರಮದಲ್ಲಿ ಸಮಾಜ ಸೇವಕ, ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತ ಇಸ್ಮಾಯಿಲ್ ಶಾಫಿ ಬಬ್ಬುಕ್ಟೆಯವರಿಗೆ ರಾಷ್ಟ್ರೀಯ ಸಮಾಜ ಸೇವಾ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆಯವರು ಕನ್ನಡ ನಾಡು ನುಡಿ ನೆಲ,ಜಲದ ರಕ್ಷಣೆಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದು ಸಮಾಜ ಸೇವಾ ಕ್ಷೇತ್ರದಲ್ಲಿ ಕ್ರಿಯಾತ್ಮಕ ಕಾರ್ಯ ತತ್ಪರತೆ ಹಾಗೂ ನಿಶ್ವಾರ್ಥ ಸೇವೆ ಸಲ್ಲಿಸಿದ್ದಾರೆ.
ಹುಟ್ಟು ಹೋರಾಟಗಾರ, ಛಲವಾದಿ, ಅಪ್ರತಿಮ ಸಮಾಜಸೇವಕ, ಸದಾ ಚಟುವಟಿಕೆಯಲ್ಲಿರುವ ಚಲನಶೀಲ ಶಕ್ತಿಯ ರೂಪವಾಗಿದ್ದಾರೆ,
ಇವರು ಕೊರೋನಾ ಸಂದರ್ಭದಲ್ಲಿ ಅರ್ಹ ಫಲಾನುಭವಿಗಳಿಗೆ ದಿನಸಿ ಸಾಮಾಗ್ರಿ, ಬಡವರಿಗೆ ಸಹಾಯ ಮಾಡಿ ಸಮಾಜದ ಬಡ ಜನರ ಕಣ್ಣೀರನ್ನು ಒರೆಸುವ ಕೆಲಸವನ್ನು ಮಾಡಿದ್ದಾರೆ,
ಕಾರ್ಯಕ್ರಮವನ್ನು
ದಾರವಾಡ ಪೋಲೀಸ್ ಠಾಣೆಯ ಎ.ಎಸ್.ಐ ಉದ್ಘಾಟಿಸಿದರು.
ಜನಸೇವಾ ಪೌಂಡೇಶನ್ ಅಧ್ಯಕ್ಷ ಡಾ.ಎಫ್.ಕೆ ನಿಗದಿ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದರು.
ಹುಬ್ಬಳ್ಳಿ ದಿವ್ಯ ಜ್ಞಾನ ಗುರುಕುಲ ಮತ್ತು ಜ್ಯೋತಿಷ್ಯ ಕೇಂದ್ರದ ಅಧ್ಯಕ್ಷ ವೇದಮೂರ್ತಿ ಬಸವಲಿಂಗಯ್ಯ ಶಾಸ್ತ್ರಿಗಳು ಸೂರಗಿಮಠ, ಶ್ರೀ ಕಾಡಯ್ಯಾ ಶಿವಮೂರ್ತಿಹೀರೇಮಠ, ಡಾ. ರಮೇಶ್ ಕುಮಾರ್ ಶಾಸ್ತ್ರಿ, ಡಾ. ಸತೀಶ ಮಲ್ಲಯ್ಯಾ ಸ್ವಾಮಿ ಶಾಸ್ತ್ರಿಗಳು, ಡಾ. ಸಂತೋಷ ಶಾಸ್ತ್ರಿ ಗಳು ಹೀರೇಮಠ, ಎಸ್.ಡಿ. ನಾಗರಾಜ್ ಸಿದ್ದನಕಟ್ಟೆ, ನಾಗಪ್ಪ ಬಂಡೀವಡ್ಡರ, ಶ್ರೀಮತಿ ಬೇಬಿ ರಾಣಿ ಆರ್, ದೇವಕಿ ಯೋಗಾನಂದ, ಚಿರಾಯು ಅಸೋಸಿಯೇಶನ್ ಕರ್ನಾಟಕ ಅಧ್ಯಕ್ಷರಾದ ಡಾ. ಮಂಜುನಾಥ ಎನ್. ಶಿವಕ್ಕನವರ ಮೊದಲಾದವರು ಉಪಸ್ಥಿತರಿದ್ದರು.
Trending
- ಜೆಡಿಎಸ್. ದ .ಕ. ಜಿಲ್ಲಾ ಘಟಕದ ನೂತನ ಕಾರ್ಯಧ್ಯಕ್ಷರಾಗಿ ಶಶಿರಾಜ್ ಶೆಟ್ಟಿ ಕೊಳಂಬೆ ಹಾಗೂ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಯೋಗಿಶ್ ಶೆಟ್ಟಿ ಜಪ್ಪು ಸೇರಿದಂತೆ ನೂತನ ಜಿಲ್ಲಾ ಸಮಿತಿ ಪದಾಧಿಕಾರಿಗಳ ನೇಮಕ
- ಯಾದಗಿರಿ ದುರಂತ | ಮುಖಾಮುಖಿ ಡಿಕ್ಕಿಗೆ ಬೆಂಕಿ – 9 ಮಂದಿ ಸಾವು
- ವೈಟ್ ಸ್ಟೋನ್ ಶರೀಫ್ ಹಾಜಿಗೆ ಅರ್ಥಪೂರ್ಣ ಸನ್ಮಾನ — ಮನಸೂರೆಗೊಂಡ ಕಾರ್ಯಕ್ರಮ
- ಬೆಂಗಳೂರು ಜೆಡಿಎಸ್ ಕಚೇರಿಯಲ್ಲಿ ಜೆಡಿಎಸ್ಗೆ ಸೇರ್ಪಡೆಗೊಂಡ ಎಂ.ಬಿ.ಎ ವಿದ್ಯಾರ್ಥಿ ಡಾ. ಆರ್ಥಿಕ್ ಕೆದಂಬಾಡಿ
- ಜೆಡಿಎಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆ, ಬಾಬಾಸಾಹೇಬ್ ಅಂಬೇಡ್ಕರ್ ಹಾಗೂ ಬಾಬು ಜಗಜೀವನ್ ರಾಮ್ ಅವರಿಗೆ ನಮನ
- ನಾಟಕಕಾರ, ಸಮಾಜಸೇವಕ ರಾಮಚಂದರ್ ಬೈಕಂಪಾಡಿ ಅಗಲಿಕೆ – ತುಳುನಾಡಿಗೆ ಅಪಾರ ನಷ್ಟ – ತುಳುನಾಡ ರಕ್ಷಣಾ ವೇದಿಕೆ
- ಬಾರ್ ಟೈಗರ್ಸ್ ತಂಡ, ರಾಘವೇಂದ್ರ ರಾವ್ ಅವರ ಮಾಲೀಕತ್ವದಲ್ಲಿ ಚಾಂಪಿಯನ್ ಪಟ್ಟ
- ಸುಳ್ಯ ತಾಲೂಕಿನ ಪಕ್ಷದ ಕಚೇರಿಯಲ್ಲಿ ವಿದ್ಯಾರ್ಥಿ ಜನತಾದಳಕ್ಕೆ ಸೇರ್ಪಡೆ
