ಜಮ್ಮುಕಾಶ್ಮೀರದ ಪಹಲ್ಗಾಮ್ನಲ್ಲಿ ನಡೆದ ಉಗ್ರಗಾಮಿ ದಾಳಿ ಮಾನವೀಯತೆಯ ಮೇಲೆ ನಡೆದ ಘೋರ ದಾಳಿಯಾಗಿದೆ. ತುಳುನಾಡ ರಕ್ಷಣಾ ವೇದಿಕೆ ಇದನ್ನು ತೀವ್ರ ಕಠಿಣವಾಗಿ ಖಂಡಿಸುತ್ತದೆ.
*ಕಾಶ್ಮೀರ ಕಣಿವೆ ಸಹಜತೆಗೆ ಮರಳಿದೆ ಎಂಬ ಧೈರ್ಯ ವಿಶ್ವಾಸ ಹೆಚ್ಚಾಗುತ್ತಿರುವ ಮಧ್ಯೆಯೇ ಈ ಘಟನೆ ಜನರನ್ನು ಬೆಚ್ಚಿಬೀಳಿಸಿದೆ. ನಿಸ್ಸಹಾಯಕ ಮಹಿಳೆ ಮತ್ತು ಮಕ್ಕಳೆದುರು ಅವರ ತಂದೆಯನ್ನು , ಪತ್ನಿ ಮುಂದೆ ಗಂಡಂದಿರನ್ನು ಕೊಲ್ಲುವವರು ಮನುಷ್ಯರೇ ಅಲ್ಲ.
ಕಾಶ್ಮೀರದಲ್ಲಿ ಪ್ರವಾಸೋದ್ಯಮ ನಂಬಿ ಬದುಕುವ ಜನರು ಇಂತಹ ಘಟನೆಯಿಂದ ಕಂಗಾಲಾಗಿದ್ದಾರೆ. ಬದುಕಿನ ಕೆಲ ದಿನಗಳನ್ನು ಸಂತೋಷ ಮೋಜು ಮಾಡಲು ದೇಶ ವಿದೇಶಗಳಿಂದ ಬರುವ ಭೂಲೋಕದ ಸ್ವರ್ಗ ಎಂಬ ಖ್ಯಾತಿಯ ಕಾಶ್ಮೀರದಲ್ಲಿ ಮುಂದೆಂದೂ ಇಂತಹ ಘಟನೆಗಳು ಮರುಕಳಿಸದಂತೆ ಕಠಿಣ ಕ್ರಮ ಕೇಂದ್ರ ಸರಕಾರ ಕೈಗೊಳ್ಳಬೇಕೆಂದು ತುಳುನಾಡ ರಕ್ಷಣಾ ವೇದಿಕೆ ಕೇಂದ್ರೀಯ ಅಧ್ಯಕ್ಷ ಯೋಗೀಶ್ ಶೆಟ್ಟಿ ಜಪ್ಪು ಆಗ್ರಹಿಸಿದರು ಎಂದು ತುಳುನಾಡ ರಕ್ಷಣಾ ವೇದಿಕೆ ಪ್ರಕಟನೆ ತಿಳಿಸಿದೆ
Trending
- ಉಡುಪಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರ ಕಾರ್ಯವೈಖರಿಗೆ ಮೆಚ್ಚುಗೆ; ನಮ್ಮ ಕರ್ನಾಟಕ ಸೇನೆಯಿಂದ ಅಭಿನಂದನೆ
- ಬಿ.ಸಿ.ರೋಡ್ ಹತ್ಯೆ ಪ್ರಕರಣ: ಮರಣೋತ್ತರ ಪರೀಕ್ಷೆ ಪೂರ್ಣ – ಲಾವಣ್ಯ ಪಾರ್ಥಿವ ಶರೀರ ಸ್ವಗ್ರಾಮಕ್ಕೆ ರವಾನೆ
- ಮಂಗಳೂರು :ನಾಗೋರಿ ಭೂಕುಸಿತ ಹಾಗೂ ಸೋಮೇಶ್ವರ ಕಡಲುಕೊರೆತ ಪ್ರದೇಶಗಳಿಗೆ ಭೇಟಿ ನೀಡಿದ ವಿಧಾನ ಪರಿಷತ್ ಶಾಸಕ ಎಸ್.ಎಲ್. ಭೋಜೆಗೌಡ, ಸಂತ್ರಸ್ತರಿಗೆ ಶಾಶ್ವತ ಪರಿಹಾರ ಕಲ್ಪಿಸಲು ಸರ್ಕಾರಕ್ಕೆ ಶಿಫಾರಸು – ಜಿಲ್ಲಾಧಿಕಾರಿಗೆ ಮನವಿ ಸಲ್ಲಿಕೆ
- ಬಿ.ಸಿ.ರೋಡ್ನಲ್ಲಿ ಯುವತಿಯ ಭೀಕರ ಹತ್ಯೆ,ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಮಾರಕಾಸ್ತ್ರದಿಂದ ದಾಳಿ; ಆರೋಪಿ ಪರಾರಿ – ವ್ಯಾಪಕ ತನಿಖೆ ಆರಂಭ
- ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ಜೆಡಿಎಸ್ ನೂತನ ಪದಾಧಿಕಾರಿಗಳಿಗೆ ನೇಮಕ ಪತ್ರ ವಿತರಣೆ,ಪಕ್ಷ ಸಂಘಟನೆಗೆ ಮತ್ತಷ್ಟು ವೇಗ ನೀಡಲಾಗುವುದು: ಎನ್.ಪಿ. ಪುಷ್ಪರಾಜನ್
- ಡಿ.ಕೆ. ಟ್ರಾನ್ಸ್ಪೋರ್ಟ್ & ಲಾಜಿಸ್ಟಿಕ್ ಸರ್ವೀಸಸ್ಗೆ ಯಶಸ್ವಿ ಒಂದು ವರ್ಷದ ಸಂಭ್ರಮ,ವಿಶ್ವಾಸ, ಸಮಯಪಾಲನೆ ಮತ್ತು ಗುಣಮಟ್ಟದ ಸೇವೆಯಿಂದ ಸಾರಿಗೆ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು
- ಸಂತ್ರಸ್ತ ಕುಲಾಲ ಕುಟುಂಬಕ್ಕೆ ನಿವೇಶನ ಸಹಿತ ‘ಕುಂಭ ಕುಟೀರ’ ಮನೆ ಹಸ್ತಾಂತರ,ಕರ್ನಾಟಕ ರಾಜ್ಯ ಕುಂಬಾರರ ಯುವ ವೇದಿಕೆ ಮತ್ತು ಮಹಿಳಾ ಸಂಘಟನೆಗಳ ಒಕ್ಕೂಟದಿಂದ ಮಾನವೀಯ ಸೇವೆಯ ಮಾದರಿ
- ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮಾಜಿ ಸಚಿವ ಎಚ್.ಡಿ. ರೇವಣ್ಣ ಭೇಟಿ

