- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ಮಂಗಳೂರು ನಗರದ ಹೃದಯಭಾಗದಲ್ಲಿ ನಡೆದ ಚಿನ್ನದ ದರೋಡೆ ಪ್ರಕರಣವನ್ನು ಪೊಲೀಸರು ಬಗೆಹರಿಸಿದ್ದು, ಈ ಸಂಬಂಧ ಐದು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳಲ್ಲಿ ಒಬ್ಬರು ಅಂಗಡಿಯಲ್ಲಿಯೇ ಉದ್ಯೋಗಿಯಾಗಿದ್ದು, ದರೋಡೆಗೆ ಒಳನೋಟ ನೀಡಿದ ಎನ್ನಲಾಗಿದೆ. ಘಟನೆ ವಿವರ: ಸೆಪ್ಟೆಂಬರ್ 26ರಂದು ರಾತ್ರಿ ಸುಮಾರು 8:45ರ ವೇಳೆಗೆ, ಚಾಯ್ಸ್ ಗೋಲ್ಡ್ ಆಭರಣ ಅಂಗಡಿಯ ಉದ್ಯೋಗಿ ಮುಸ್ತಫಾ ತಮ್ಮ ಸ್ಕೂಟರ್‌ನ ಸೀಟಿನಡಿಯಲ್ಲಿ ಚಿನ್ನದ ಗಟ್ಟಿ ಇಟ್ಟು ಸಾಗಿಸುತ್ತಿದ್ದಾಗ, ಕಾರ್‌ಸ್ಟ್ರೀಟ್‌ನ ಶ್ರೀ ವೆಂಕಟರಮಣ ದೇವಸ್ಥಾನದ ಬಳಿ ದರೋಡೆಕೋರರ ಗುಂಪು ದಾಳಿ ನಡೆಸಿತ್ತು. ಆರು ಮಂದಿ ಒಳಗೊಂಡಿದ್ದ ಈ ತಂಡ, ಮೊದಲಿಗೆ ಸ್ಕೂಟರ್‌ನಲ್ಲಿ ಬಂದು ಮುಸ್ತಫಾ ಅವರನ್ನು ತಡೆದು ನಿಲ್ಲಿಸಿ, ನಂತರ ಬಿಳಿ ಕಾರಿನಲ್ಲಿ ಬಂದು ಅವರನ್ನು ಅಪಹರಿಸಿ, ಹಲ್ಲೆ ಮಾಡಿ ಚಿನ್ನದ ಗಟ್ಟಿಯನ್ನು ಲೂಟಿ ಮಾಡಿತ್ತು. ಬಳಿಕ ಅವರನ್ನು ಎಕ್ಕೂರಿನಲ್ಲಿ ಇಳಿಸಿ ಪರಾರಿಯಾಗಿದ್ದರು. ಬಂಧಿತರು:• ಫರೀಷ್ (18, ಉಳ್ಳಾಲ)• ಸಫ್ವಾನ್ (23)• ಅರಾಫತ್ ಅಲಿ (18)• ಫರಾಜ್ (19)• ಅಪ್ರಾಪ್ತ ವಯಸ್ಕ (ಅಂಗಡಿಯಲ್ಲಿ ಉದ್ಯೋಗಿ) ಪರಿಶೋಧನೆಯಿಂದ ಬೆಳಕಿಗೆ ಬಂದ…
ಮಂಗಳೂರು: ಜಾನಪದ ಕಲೆಯ ಹೆಜ್ಜೆ ಗುರುತು ಮೂಡಿಸಿದ ‘ಪಿಲಿ ನಲಿಕೆ’ ಇದರ 10ನೇ ವರ್ಷದ ವಿಜೃಂಭಣೆಯ ಸ್ಪರ್ಧೆ ಅಕ್ಟೋಬರ್ 1ರಂದು ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯಲಿದೆ ಎಂದು ಪಿಲಿನಲಿಕೆ ಪ್ರತಿಷ್ಠಾನದ ಅಧ್ಯಕ್ಷ ಮಿಥುನ್ ರೈ ತಿಳಿಸಿದ್ದಾರೆ. ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಾರಿ ಸ್ಪರ್ಧೆಗೆ ಚಿತ್ರರಂಗ ಹಾಗೂ ಕ್ರೀಡಾ ಕ್ಷೇತ್ರದ ಗಣ್ಯ ಸೆಲೆಬ್ರಿಟಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ. ಬಾಲಿವುಡ್‌ನ ಸುನೀಲ್ ಶೆಟ್ಟಿ, ಸ್ಯಾಂಡಲ್‌ವುಡ್ ನಟರು ಕಿಚ್ಚ ಸುದೀಪ್, ಪೂಜಾ ಹೆಗ್ಡೆ, ರಾಜ್ ಬಿ. ಶೆಟ್ಟಿ, ಕ್ರಿಕೆಟಿಗರು ಅಜಿಂಕ್ಯ ರಹಾನೆ, ಜಿತೇಶ್ ಶರ್ಮಾ, ಬಾಕ್ಸಿಂಗ್ ಚಾಂಪಿಯನ್ ವಿಜೇಂದ್ರ ಸಿಂಗ್ ಹಾಗೂ ಸಂಗೀತ ನಿರ್ದೇಶಕ ಗುರುಕಿರಣ್ ಮೊದಲಾದವರು ಕಾರ್ಯಕ್ರಮ ವೀಕ್ಷಿಸಲಿದ್ದಾರೆ. ವಿಶೇಷತೆಗಳು:• ಸ್ಪರ್ಧೆ ಆರಂಭ: ಬೆಳಗ್ಗೆ 10 ಗಂಟೆ• ಅಂತ್ಯ: ರಾತ್ರಿ 10 ಗಂಟೆ• ಪ್ರತೀ ತಂಡಕ್ಕೆ ಕಾಲಾವಕಾಶ: 20 ನಿಮಿಷ• ಪ್ರೇಕ್ಷಕರಿಗಾಗಿ ಆಸನ ವ್ಯವಸ್ಥೆ: 25,000ಕ್ಕೂ ಅಧಿಕ ಮಂದಿ ಭಾಗವಹಿಸುವ ತಂಡಗಳು:…
ನವದೆಹಲಿ, ಸೆಪ್ಟೆಂಬರ್ 28:ಲೈಂಗಿಕ ದೌರ್ಜನ್ಯ ಆರೋಪದ ಹಿನ್ನೆಲೆಯಲ್ಲಿ ನಿಗೂಢವಾಗಿ ತಲೆಮರೆಸಿಕೊಂಡಿದ್ದ ದೆಹಲಿ ಮೂಲದ ಪಾರ್ಥ ಸಾರಥಿ ಆಲಿಯಾಸ್ ಬಾಬಾ ಚೈತನ್ಯಾನಂದ ಸರಸ್ವತಿ (62) ಎಂಬುವರನ್ನು ದೆಹಲಿ ಪೊಲೀಸರು ಇಂದು ಬೆಳಿಗ್ಗೆ ಜಾವ 3:30 ಕ್ಕೆ ಆಗ್ರಾದಲ್ಲಿ ಬಂಧಿಸಿದ್ದಾರೆ. ಸ್ವಾಮಿ ಚೈತನ್ಯಾನಂದ ಸರಸ್ವತಿ, ದೆಹಲಿಯ ವಸಂತ್ ಕುಂಜ್‌ನಲ್ಲಿ ಇರುವ ಶ್ರೀ ಶಾರದಾ ಇನ್ಸ್ಟಿಟ್ಯೂಟ್ ಆಫ್ ಇಂಡಿಯನ್ ಮ್ಯಾನೇಜ್‌ಮೆಂಟ್ ಸಂಸ್ಥೆಯ ನಿರ್ದೇಶಕರಾಗಿದ್ದು, ಪ್ರಭಾವಶಾಲಿ ಸ್ಥಾನದಲ್ಲಿದ್ದರು. ಕಳೆದ 50 ದಿನಗಳಿಂದ ಪತ್ತೆ ಮರೆತಿದ್ದ ಬಾಬಾ, ವಿವಿಧ ಹೆಸರಿನಲ್ಲಿ ಹೋಟೆಲ್‌ಗಳಲ್ಲಿ ತಂಗುತ್ತ. ಈ ಅವಧಿಯಲ್ಲಿ ಅವರು ಸುಮಾರು 13 ಹೋಟೆಲ್‌ಗಳನ್ನು ಬದಲಾಯಿಸಿದ್ದರೆಂದು ಪೊಲೀಸರು ತಿಳಿಸಿದ್ದಾರೆ. ಪೋಲೀಸರ ಕಾರ್ಯಾಚರಣೆ ಡೆಹಲಿಯಿಂದ ಆಗ್ರಾವರೆಗೆ ವ್ಯಾಪಿಸಿರುವ ತನಿಖಾ ತಂಡ, ಖಚಿತ ಮಾಹಿತಿ ಆಧರಿಸಿ ಬಾಬಾ ಅವರನ್ನು ಬಂಧಿಸಿದೆ. ಬಂಧನಕ್ಕೂ ಮೊದಲು ಅವರೊಂದಿಗೆ ಸಂಬಂಧ ಹೊಂದಿರುವ ₹8 ಕೋಟಿ ಮೌಲ್ಯದ ಆಸ್ತಿ ಹಾಗೂ ಹಣವನ್ನು, 18 ಬ್ಯಾಂಕ್ ಖಾತೆಗಳು ಮತ್ತು 28 ಸ್ಥಿರ ಠೇವಣಿಗಳ ಮೂಲಕ ಪತ್ತೆ ಹಚ್ಚಿ, ಕ್ರಮಕೈಗೊಳ್ಳಲಾಗಿದೆ. ಗಂಭೀರ ಆರೋಪಗಳ…
ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಜೆಪ್ಪುವಿನ ಭಾರತ್ ಮೈದಾನದಲ್ಲಿ ನೂತನವಾಗಿ ಸುಮಾರು 7 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಂಡ ಅಂಗನವಾಡಿ ಕೇಂದ್ರದ ಉದ್ಘಾಟನೆಯನ್ನು ಶಾಸಕ ವೇದವ್ಯಾಸ ಕಾಮತ್ ರವರು ನೆರವೇರಿಸಿದರು. ನಂತರ ಮಾತನಾಡಿದ ಶಾಸಕರು, ಮಂಗಳೂರು ಮಹಾನಗರ ಪಾಲಿಕೆಯ ಹಿಂದಿನ ಬಿಜೆಪಿ ಆಡಳಿತದ ಅವಧಿಯಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಪ್ರೇಮಾನಂದ ಶೆಟ್ಟಿಯವರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ಈ ಕಾಮಗಾರಿಯ ಶಿಲನ್ಯಾಸ ನೆರವೇರಿಸಲಾಗಿತ್ತು. ಇದೀಗ ಕಟ್ಟಡವು ಲೋಕಾರ್ಪಣೆಗೊಳ್ಳುತ್ತಿದ್ದು ಈ ನಿಟ್ಟಿನಲ್ಲಿ ನಿರಂತರವಾಗಿ ಶ್ರಮಿಸಿದ ಪ್ರೇಮಾನಂದ ಶೆಟ್ಟಿಯವರಿಗೆ ವಿಶೇಷ ಅಭಿನಂದನೆಗಳು. ಮುಂದಿನ ದಿನಗಳಲ್ಲಿ ಮಕ್ಕಳ ಬಾಲ್ಯದ ಶಿಕ್ಷಣಕ್ಕಾಗಿ ಕ್ಷೇತ್ರದಲ್ಲಿ ಅಗತ್ಯವಿರುವೆಡೆ ಬೇಡಿಕೆಗನುಸಾರವಾಗಿ ಹೆಚ್ಚಿನ ಅಂಗನವಾಡಿ ಕೇಂದ್ರಗಳನ್ನು ತೆರೆಯಲು ವಿಶೇಷ ಕ್ರಮ ಕೈಗೊಳ್ಳಲಾಗುವುದು ಎಂದರು. ಈ ಸಂದರ್ಭದಲ್ಲಿ ಸಂಸದ ಬ್ರಿಜೇಶ್ ಚೌಟ, ಬಿಜೆಪಿ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ಭಾನುಮತಿ, ದೀಪಕ್ ಪೈ, ಮಹಿಳಾ ಮತ್ತು ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳಾದ ರೇಷ್ಮಾ, ಅಂಗನವಾಡಿ ಕಾರ್ಯಕರ್ತೆ ರೇಖಾ, ಅಂಬಾ ಮಹೇಶ್ವರಿ ಟ್ರಸ್ಟ್ ನ ಅಧ್ಯಕ್ಷರಾದ ಸೀತಾರಾಮ್, ಪ್ರಕಾಶ್,…
ಚೆನ್ನೈ, ಸೆಪ್ಟೆಂಬರ್ 28:ತಮಿಳುನಾಡಿನಲ್ಲಿ ಪ್ರಸಿದ್ಧ ನಟ ಮತ್ತು ವಿಕ್ಟರಿ ಪಕ್ಷದ ನಾಯಕ ವಿಜಯ್ ಅವರ ರಾಜಕೀಯ ರ್ಯಾಲಿಯಲ್ಲಿ ಸಂಭವಿಸಿದ ಕಾಲ್ತುಳಿತದ ಘಟನೆಯಲ್ಲಿ ಕನಿಷ್ಠ 38 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ 40ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ರಾಜ್ಯದ ಆರೋಗ್ಯ ಸಚಿವ ಮಾ. ಸುಬ್ರಮಣಿಯನ್ ಶನಿವಾರ ತಡರಾತ್ರಿ ಮಾಹಿತಿ ನೀಡಿದ್ದಾರೆ. ಘಟನೆಯು ಕರೂರ್ ಜಿಲ್ಲೆಯಲ್ಲಿ ನಡೆದಿದೆ. ವಿಜಯ್ ಅವರ ಬಸ್‌ನತ್ತ ಹತ್ತಲು ಭಕ್ತರು ಮತ್ತು ಬೆಂಬಲಿಗರು ಮುಗಿಬಿದ್ದ ಸಂದರ್ಭ, ಗಿಜಿಗುಜಿಯಲ್ಲಿ ಹಲವರು ಬಿದ್ದು ಕಾಲ್ತುಳಿತಕ್ಕೆ ಒಳಗಾಗಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ. “ಅನೇಕರು ಆಸ್ಪತ್ರೆಗೆ ಕರೆದೊಯ್ಯುವ ಮೊದಲುವೇ ಸಾವನ್ನಪ್ಪಿದ್ದಾರೆ. ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಸ್ಥಿತಿ ಸ್ಥಿರವಾಗಿದೆ,” ಎಂದು ಸಚಿವರು ತಿಳಿಸಿದ್ದಾರೆ.ಮೃತರಲ್ಲಿ ಎಂಟು ಮಕ್ಕಳು ಸೇರಿದ್ದಾರೆ ಎಂಬುದೂ ಈ ದುರಂತದ ಭೀಕರತೆಯನ್ನು ಇನ್ನಷ್ಟು ತೀವ್ರಗೊಳಿಸಿದೆ. ರಾಜ್ಯಾದ್ಯಂತ ಶೋಕದ ಛಾಯೆ ಮಡುವಿದ್ದು, ಸರ್ಕಾರದಿಂದ ಪರಿಹಾರ ಕಾರ್ಯಾಚರಣೆ ತ್ವರಿತಗತಿಯಲ್ಲಿ ಮುಂದುವರೆದಿದೆ. ವಿಜಯ್ ಅವರು ಈ ಘಟನೆಗೆ ತೀವ್ರ ಶೋಕ ವ್ಯಕ್ತಪಡಿಸಿದ್ದು,…
ಲಯನ್ಸ್ ಕ್ಲಬ್ ಆಫ್ ಮಂಗಳೂರು ಬಲ್ಮಠ ದಲ್ಲಿ ಲಯನ್ಸ್ ರಿಜಿಯನ್ ಚೇರ್ ಪರ್ಸನ್ ಲಯನ್ ಗಾಯತ್ರಿ ರಾವ್ MJF ಅವರ ಅಧಿಕೃತ ಭೇಟಿ ಹಾಗೂ ಝೋನ್ ಸೋಷಿಯಲ್ ಲಯನ್ ಪ್ರೀತಿ ರೈ ಅವರ ಕಾರ್ಯಕ್ರಮ ನಡೆಯಿತು. ಲಯನ್ಸ್ ರಿಜಿಯನ್ ಚೇರ್ ಪರ್ಸನ್ ಲಯನ್ ಗಾಯತ್ರಿ ರಾವ್ MJF ಹಾಗೂ ರೀಜನಿನ ಫಸ್ಟ್ ಮ್ಯಾನ್ ಲಯನ್ ಕೆದಿಗೆ ಅರವಿಂದ್ ರಾವ್ MJF ಮತ್ತು ಝೋನ್ ಚೇರ್ ಪರ್ಸನ್ ಲಯನ್ ಪ್ರೀತಿ ರೈ ಅವರು ಸೆಪ್ಟೆಂಬರ್ 23 ರಂದು ಸಂಜೆ 7.30ಕ್ಕೆ ಮಂಗಳೂರಿನ ಎಂಪೈರ್ ಮಾಲ್‌ನ ಕ್ರೆಡೈ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಅವರು ಲಯನ್ಸ್ ಕ್ಲಬ್ ಆಫ್ ಬಲ್ಮಠದ ಅಧ್ಯಕ್ಷ ಲಯನ್ ಅವಿಲ್ ಡಿಸೋಜಾ, ಕಾರ್ಯದರ್ಶಿ ಲಯನ್ ಪ್ರಸಿಲ್ಲಾ ಡಿಸೋಜಾ, ಖಜಾಂಚಿ ಲಯನ್ ಮೆಲ್ವಿನ್ ಮಸ್ಕರೇನಸ್ ಹಾಗೂ ಕ್ಲಬ್‌ನ ಎಲ್ಲಾ ಸದಸ್ಯರಿಂದ ಸೌಹಾರ್ದ ಪೂರ್ಣವಾಗಿ ಸ್ವಾಗತಿಸಲ್ಪಟ್ಟರು. ಈ ದಿನ ಕ್ಲಬ್‌ನ ವಾರ್ಷಿಕ ಮಾಗಜೀನ್ ಬಿಡುಗಡೆಯಾಯಿತು. ಸಂಪಾದಕಿ ಲಯನ್ ಪ್ರೀತಿ ಕಾಮತ್ ಅವರು…
ಉಡುಪಿಯ ಎಕೆಎಂಎಸ್ ಬಸ್ ಮಾಲೀಕ, ರೌಡಿ ಶೀಟರ್ ಸೈಫುದ್ದೀನ್‌ನನ್ನು ಕೊಲೆ ಮಾಡಲಾಗಿದೆ. ಮಲ್ಪೆಯ ಕೊಡವೂರಿನ ಮನೆಯೊಂದರಲ್ಲಿ ತಲವಾರಿನಿಂದ ಕೊಚ್ಚಿ ಕೊಲೆಗೈಯ್ಯಲಾಗಿದೆ. ಸೈಫುದ್ದೀನ್‌ನ ಸಹಚರನೇ ಕೊಲೆ ಮಾಡಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಮಲ್ಪೆ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.
ಕುಡ್ಲ ಸಾಂಸ್ಕೃತಿಕ ಪ್ರತಿಷ್ಠಾನ ವತಿಯಿಂದ ಮಾಜಿ ಸಂಸದ ಶ್ರೀ ನಳಿನ್ ಕುಮಾರ್ ಕಟೀಲ್ ಮಾರ್ಗದರ್ಶನದಲ್ಲಿ ಕುಡ್ಲದ ಪಿಲಿಪರ್ಬದ ನಾಲ್ಕನೇ ಆವೃತ್ತಿಯ ಸ್ಪರ್ಧಾಕೂಟವು ಇದೇ ಸಪ್ಟೆಂಬರ್ 30 ರಂದು ಮಂಗಳೂರಿನ ಕೇಂದ್ರ ಮೈದಾನದಲ್ಲಿ ಬೆಳಗ್ಗೆ 9.30 ಕ್ಕೆ ಉದ್ಘಾಟನೆಗೊಳ್ಳಲಿದೆ ಎಂದು ಶಾಸಕ ಶ್ರೀ ಡಿ. ವೇದವ್ಯಾಸ್ ಕಾಮತ್ ರವರು ಹೇಳಿದರು. ನಂತರ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ಸರಿಯಾಗಿ ಭವ್ಯ ವಿಶಾಲ ವೇದಿಕೆಯಲ್ಲಿ ಆರಂಭಗೊಳ್ಳಲಿರುವ ಸ್ಪರ್ಧಾಕೂಟದಲ್ಲಿ ಕರಾವಳಿ ಭಾಗದ ಅತ್ಯಂತ ಜನಪ್ರಿಯ ಎಂಬ ಹೆಗ್ಗಳಿಕೆ ಹೊಂದಿರುವ 10 ಹುಲಿವೇಷ ತಂಡಗಳು ಭಾಗವಹಿಸಲಿವೆ. ಪ್ರತಿ ತಂಡವೂ ವೈಭವದ ಮೆರವಣಿಗೆ ಮೂಲಕ ವೇದಿಕೆಗೆ ಪ್ರವೇಶ ಮಾಡಲಿದ್ದು, 20 ನಿಮಿಷಗಳ ಪ್ರದರ್ಶನ ನೀಡಲಿವೆ. ಅಕ್ಕಿಮುಡಿ ಹಾರಿಸುವುದು ಕಡ್ಡಾಯವಾಗಿದ್ದು ಕರಿಹುಲಿಗಳು, ಮರಿಹುಲಿಗಳು, ಹಿಮ್ಮೇಳ, ಧರಣಿ ಮಂಡಲ ಹೀಗೆ ಇಡೀ ಕೂಟವು ವೈವಿಧ್ಯತೆಯಿಂದ ಕೂಡಿರಲಿವೆ ಎಂದರು. ಸ್ಪರ್ಧಾಕೂಟದಲ್ಲಿ 6 ತೀರ್ಪುಗಾರರು ಇರಲಿದ್ದು, ನಾಲ್ವರು ವೇದಿಕೆಯಲ್ಲಿ ಮತ್ತು ಇಬ್ಬರು ಒಳಗೆ ವಿಡಿಯೋ ವೀಕ್ಷಿಸುತ್ತಾ ಥರ್ಡ್ ಅಂಪಾಯರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.…
ಮಂಗಳೂರು: ಸ್ಕ್ಯಾನಿಂಗ್ ಕೇಂದ್ರಗಳಲ್ಲಿ ರೋಗಿಗಳಿಂದ ಗುರುತಿನ ಚೀಟಿ ಕಡ್ಡಾಯವಾಗಿ ಪಡೆಯಬೇಕೆಂಬ ನಿಯಮವಿದೆ. ಈ ನಿಯಮವನ್ನು ಉಲ್ಲಂಘಿಸಿದರೆ, ಅಂತಹ ಕೇಂದ್ರಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಎಚ್ಚರಿಸಿದ್ದಾರೆ. ಅವರು ಪ್ರಸವಪೂರ್ವ ಲಿಂಗ ನಿರ್ಣಯ ತಡೆ ಕಾಯ್ದೆ (PC-PNDT Act) 1994ರ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಮಾತನಾಡಿದರು. 🔍 ಮುಖ್ಯ ಸೂಚನೆಗಳು: ಸ್ಕ್ಯಾನಿಂಗ್‌ಗಾಗಿ ಬರುವ ಪ್ರತಿಯೊಬ್ಬ ರೋಗಿಯ ಗುರುತಿನ ಚೀಟಿ ಪರಿಶೀಲನೆ ಕಡ್ಡಾಯ. ತಜ್ಞ ವೈದ್ಯರ ಸಿಗ್ನೇಚರ್‌ವಿಲ್ಲದ ವರದಿ ಅಮಾನ್ಯ. ಸಿಬ್ಬಂದಿಯಿಂದ ವರದಿ ಅಂಕಿತಗೊಳ್ಳಬಾರದು. ವೈದ್ಯರ ಸೂಚನೆ ಇಲ್ಲದೆ ಗರ್ಭಪಾತ ಮಾತ್ರೆ ಮಾರಾಟ ಮಾಡುವುದು ನಿಷಿದ್ಧ. “ಸ್ಕ್ಯಾನಿಂಗ್ ಕೇಂದ್ರಗಳಿಗೆ ಆಕ್ರಮಣಾತ್ಮಕ ಭೇಟಿ ನೀಡಿ ಪರಿಶೀಲನೆ ನಡೆಯಲಿದೆ” ಎಂದು ಅವರು ಹೇಳಿದರು. ಔಷಧ ನಿಯಂತ್ರಣ ಇಲಾಖೆಯ ಸಹಯೋಗದೊಂದಿಗೆ ನಿರಂತರ ಪರಿಶೀಲನೆ ನಡೆಸಲಾಗುತ್ತಿದೆ. 📊 ಜಿಲ್ಲಾ ಸ್ಕ್ಯಾನಿಂಗ್ ಕೇಂದ್ರಗಳ ಮಾಹಿತಿ: ಒಟ್ಟು ಕೇಂದ್ರಗಳು: 189▪️ ಖಾಸಗಿ: 177▪️ ಸರ್ಕಾರಿ: 12 ಏಪ್ರಿಲ್–ಆಗಸ್ಟ್ 2025ರ ನಡುವೆ ಪರಿಶೀಲಿಸಿದ…
ಹಾಸನ, ಸೆಪ್ಟೆಂಬರ್ 24:ಹಾಸನದ ಹೆಸರಾಂತ ಹಿಮ್ಸ್ ಆಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದಾಗಿ ಬಡ ಮಹಿಳೆ ತೀವ್ರ ನೋವು ಅನುಭವಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ರಾಡ್ ತೆಗೆಸಿಕೊಳ್ಳಲು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಗೆ ತಪ್ಪಾಗಿ ಮತ್ತೊಂದು ಕಾಲಿಗೆ ಶಸ್ತ್ರಚಿಕಿತ್ಸೆ ನಡೆಸಿರುವ ಘಟನೆ ನಡೆದಿದೆ. ಚಿಕ್ಕಮಗಳೂರು ಜಿಲ್ಲೆ, ಬೂಚನಹಳ್ಳಿ ಕಾವಲು ಗ್ರಾಮದ ನಿವಾಸಿ ಜ್ಯೋತಿ ಎಂಬವರಿಗೆ ಸುಮಾರು ಎರಡು ವರ್ಷಗಳ ಹಿಂದೆ ಸಂಭವಿಸಿದ ಅಪಘಾತದಲ್ಲಿ ಎಡಗಾಲು ಮುರಿದಿತ್ತು. ಆಗ ಶಸ್ತ್ರಚಿಕಿತ್ಸೆ ಮೂಲಕ ಕಾಲಿಗೆ ಕಬ್ಬಿಣದ ರಾಡ್ ಅಳವಡಿಸಲಾಗಿತ್ತು. ಇತ್ತೀಚೆಗೆ ಆ ಕಾಲಿನಲ್ಲಿ ಮತ್ತೆ ನೋವು ಕಾಣಿಸಿಕೊಂಡ ಕಾರಣ, ಅವರು ಹಾಸನದ ಹಿಮ್ಸ್ ಆಸ್ಪತ್ರೆಗೆ ಹೋಗಿದ್ದರು. ಅಲ್ಲಿ ವೈದ್ಯರಾದ ಡಾ. ಸಂತೋಷ್ ಪರಿಶೀಲನೆ ನಡೆಸಿ, ಹಿಂದಿನ ರಾಡ್ ತೆಗೆಯಬೇಕೆಂದು ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದರು. ಬಳಿಕ, ಶನಿವಾರ ಜ್ಯೋತಿ ಆಸ್ಪತ್ರೆಗೆ ದಾಖಲಾಗಿದ್ದು, ನಿಶ್ಚೇತಕ ನೀಡಿದ ನಂತರ ಶಸ್ತ್ರಚಿಕಿತ್ಸೆಗೆ ತಯಾರಿ ನಡೆಯಿತು. ಆದರೆ ವೈದ್ಯರು ಎಡಗಾಲು ಬದಲಿಗೆ ತಪ್ಪಾಗಿ ಬಲಗಾಲಿಗೆ ಕತ್ತರಿಸಿ ಆಪರೇಷನ್ ಆರಂಭಿಸಿದರು. ಘಟನೆಯ ದೌರ್ಭಾಗ್ಯ ಇಷ್ಟೇ ಅಲ್ಲ –…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
