- ಕರಂಬಾರಿನಲ್ಲಿ ನಾಗರಿಕ ಸೇವಾ ಸಮಿತಿ ಭವ್ಯವಾಗಿ ನೆರವೆರಿದ 12ನೇ ವಾರ್ಷಿಕೋತ್ಸವ
- ಅಪ್ರಾಪ್ತ ವಿದ್ಯಾರ್ಥಿನಿ ಗರ್ಭಪಾತ ಪ್ರಕರಣ: ಶಿಕ್ಷಕ ಬಂಧನ
- ಹೆಬ್ರಿ: ರಸ್ತೆ ದಾಟುವ ವೇಳೆ ಮಿನಿ ಗೂಡ್ಸ್ ಡಿಕ್ಕಿ – ವಿದ್ಯಾರ್ಥಿನಿ ಸಾವು, ಮತ್ತೊಬ್ಬರಿಗೆ ಗಂಭೀರ ಗಾಯ ಸ್ಥಳೀಯರಿಂದ ಪ್ರತಿಭಟನೆ
- ಮಂಗಳೂರು: ಪ್ರೀತಿಯಲ್ಲಿ ಮನಸ್ತಾಪ – 22ರ ಯುವಕ ಆತ್ಮಹತ್ಯೆ, ಯುವತಿಯ ವಿರುದ್ಧ ಆರೋಪ
- ಉಡುಪಿ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಅಗ್ರ ಸಾಧನೆಗೆ ತುರವೇ ಉಡುಪಿ ಜಿಲ್ಲಾ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ಅಭಿನಂದನೆ
- ಮಂಗಳೂರು :ಏಪ್ರಿಲ್ 12ರಂದು ಬಂಟರ ಯಾನೆ ನಾಡವರ ಮಾತೃ ಸಂಘದ ಮಹತ್ವದ ಅಧಿವೇಶನ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮ
- ಬೆಂಗಳೂರು–ಮೈಸೂರು ಮಾರ್ಗಕ್ಕೆ ಇನ್ನಷ್ಟು ವೇಗ ಮತ್ತು ಸುಧಾರಣೆ : ಕುಮಾರಸ್ವಾಮಿ ಮೈಸೂರು ವಿಭಾಗದಲ್ಲಿ ಕಾಮಗಾರಿಗಳು ಶೀಘ್ರ ಪೂರ್ಣಗೊಳ್ಳಲಿದೆ: ಸೋಮಣ್ಣ
- ಸರ್ಕಾರಿ ಕಚೇರಿಗಳಲ್ಲಿ ನಿಯಮ ಪಾಲನೆ ಕಡ್ಡಾಯ: ಲೋಕಾಯುಕ್ತ ಡಿವೈಎಸ್ಪಿ ದಿನಕರ ಶೆಟ್ಟಿ ಎಚ್ಚರಿಕೆ
Author: Tulunada Surya
ಕುಂದಾಪುರ: ಉಡುಪಿ ಜಿಲ್ಲೆಯ ಕುಂದಾಪುರ ಠಾಣೆಯ ಪೊಲೀಸ್ ಉಪ ನಿರೀಕ್ಷಕ ನಂಜಾ ನಾಯ್ಕ್ ಅವರು ರೌಂಡ್ಸ್‌ನಲ್ಲಿರುವಾಗ ಕುಂದಾಪುರ ಕಸಬಾ ಗ್ರಾಮದ ಮದ್ದುಗುಡ್ಡೆ ಪಂಚಗಂಗಾವಳಿ ಹೊಳೆಯ ಕುದ್ರುವಿನ ಬಳಿ ಸಾರ್ವಜನಿಕ ಸ್ಥಳದಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ದಾಳಿ ನಡೆಸಿ ಐವರನ್ನು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ತಿಳಿಯಲಾಗಿದೆ. ದಯಾನಂದ, ಅಣ್ಣಯ್ಯ, ರವೀಂದ್ರ, ಮೊಮಿನ್ ಮೊಹಮ್ಮದ್ ಜಮೀಲ್, ಜಯರಾಮ್ ಆರೋಪಿಗಳಾಗಿದ್ದು, ಇವರಿಂದ ಆಟಕ್ಕೆ ಬಳಸಿದ ಪರಿಕರ ಹಾಗೂ 1620 ರೂ.ನಗದನ್ನು ವಶಕ್ಕೆ ಪಡೆದಿದ್ದಾರೆ. ನಾರಾಯಣ ಹಾಗೂ ಇನ್ನೂ ಕೆಲವರು ದಾಳಿಯ ವೇಳೆ ಪರಾರಿಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಆರೋಪಿಗಳ ವಿಚಾರಣೆ ನಡೆಸಿದ್ದಾರೆ
ಮಂಗಳೂರು: ತೆಂಕು – ಬಡಗು ಯಕ್ಷಗಾನದ ಹವ್ಯಾಸಿ ವೇಷಧಾರಿ, ಹೋಟೆಲ್ ಉದ್ಯಮಿ ಮತ್ತು ಸಾಮಾಜಿಕ ಸೇವಾ ಕಾರ್ಯಕರ್ತ ಪಣಿಯೂರುಗುತ್ತು ಕರುಣಾಕರ ಶೆಟ್ಟಿ ಅವರು 2024 – 25 ನೇ ಸಾಲಿನ ಅಂತಾರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಭಾರತೀಯ ಬಾಹ್ಯಾಕಾಶ ನೌಕೆ ಆರ್ಯಭಟ ಉಪಗ್ರಹ ಉಡ್ಡಯನವಾದ ವರ್ಷವೇ ಸ್ಥಾಪನೆಗೊಂಡ ಬೆಂಗಳೂರಿನ ಆರ್ಯಭಟ ಸಾಂಸ್ಕೃತಿಕ ಸಂಸ್ಥೆಯು 50 ವರ್ಷಗಳನ್ನು ಪೂರೈಸಿದ್ದು, ಪ್ರತಿವರ್ಷದಂತೆ ಈ ಬಾರಿಯೂ ದೇಶ ವಿದೇಶದ ಅನನ್ಯ ಸಾಧಕರನ್ನು ಗುರುತಿಸಿ ಈ ವಿಶೇಷ ಪ್ರಶಸ್ತಿಯನ್ನು ನೀಡುತ್ತಿದೆ. ಕಲಾ ರಂಗದ ಕರುಣಾಕರ:ಉಡುಪಿ ಜಿಲ್ಲೆಯ ಪ್ರತಿಷ್ಠಿತ ಪಣಿಯೂರು ಕುಟುಂಬದವರಾದ ಕರುಣಾಕರ ಶೆಟ್ಟರಿಗೆ ಪ್ರಸ್ತುತ 66ರ ಹರೆಯ. ಯಕ್ಷಗಾನ ಕಲೆಯಲ್ಲಿ ಅಪಾರ ಅಭಿಮಾನ ಹೊಂದಿದ ಅವರು ಬಡಗುತಿಟ್ಟಿನ ಹವ್ಯಾಸಿ ವೇಷಧಾರಿಯಾಗಿ ಪ್ರಸಿದ್ಧ ಕಲಾವಿದರೊಂದಿಗೆ ಪಾತ್ರವಹಿಸಿದ್ದಾರೆ. ತೆಂಕು – ಬಡಗುತಿಟ್ಟಿನ ಪ್ರಮುಖರೊಂದಿಗೆ ತಾಳಮದ್ದಳೆ ಅರ್ಥ ಧಾರಿಯಾಗಿಯೂ ಭಾಗವಹಿಸಿದ್ದಾರೆ. ಅಲ್ಲದೆ ಹಲವು ವರ್ಷ ಐತಿಹಾಸಿಕ ಮೂಲ್ಕಿ ಮೇಳವನ್ನು ನಡೆಸಿದ ಅನುಭವ ಅವರಿಗಿದೆ.ಸುಮಾರು ನಾಲ್ಕು ದಶಕಗಳ ರಂಗಾನುಭವ ಹೊಂದಿದ ಪಣಿಯೂರು ಅವರು…
ಮಂಗಳೂರು: ಕರ್ನಾಟಕ ವುಶು ಅಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ವುಶು ಅಸೋಸಿಯೇಶನ್ ವತಿಯಿಂದ ಮಂಗಳೂರಿನ ಯು.ಎಸ್ ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ 24 ನೇ ರಾಜ್ಯ ಮಟ್ಟದ ವುಶು ಚಾಂಪಿಯನ್‌ಶಿಪ್ ಪಂದ್ಯಾಟದಲ್ಲಿ ಮಂಗಳೂರಿಗೆ ಒಟ್ಟು ೩೬ ಪದಕಗಳು ಲಭಿಸಿವೆ. ವಿವಿಧ ವಿಭಾಗಗಳಲ್ಲಿ ನಡೆದ ಈ ಸ್ಪರ್ಧೆಯಲ್ಲಿ 9 ಮಂದಿ ಚಿನ್ನ, 10 ಮಂದಿ ಬೆಳ್ಳಿ ಮತ್ತು 12 ಮಂದಿ ಕಂಚಿನ ಪದಕ ಪಡೆದುಕೊಂಡಿದ್ದಾರೆ. ಏ.27 ರಿಂದ ನಾಲ್ಕು ದಿನಗಳ ಕಾಲ ನಡೆದ ಈ ಚಾಂಪಿಯನ್‌ಶಿಪ್‌ನಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ 600 ಮಂದಿ ವುಶು ಕ್ರೀಡಾಪಟುಗಳು, ತರಬೇತಿದಾರರು, ನಿರ್ಣಾಯಕರು ಭಾಗವಹಿಸಿದ್ದರು. ಜಿಲ್ಲಾ ವುಶು ಕಾರ್ಯದರ್ಶಿ ಮತ್ತು ಇಮ್ಮೋರ್ಟಲ್ಸ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್ನೆಸ್ ಅಕಾಡೆಮಿಯ ಸಂಸ್ಥಾಪಕ ರೋಹನ್ ಎಸ್ ಅವರು ಈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ವಿದ್ಯಾರ್ಥಿಗಳ ಪ್ರತಿಭೆ ಪ್ರದರ್ಶನಕ್ಕೆ ಇದೊಂದು ಉತ್ತಮ ವೇದಿಕೆಯಾಗಿತ್ತು. ಕ್ರೀಡಾಕೂಟದಲ್ಲಿ ಮಂಗಳೂರಿನ ಇಮ್ಮೋರ್ಟಲ್ಸ್ ಮಾರ್ಷಲ್ ಆರ್ಟ್ಸ್ ಆಂಡ್ ಫಿಟ್ನೆಸ್ ಅಕಾಡೆಮಿಯ ಹಿಸ್ಸಾನ್, ಶಮಿಯುಲ್ಲಾ, ಸಾನ್ವಿ ಎಸ್, ಮಾನ್ವಿತಾ, ಧ್ರುವಿನ್,…
ಸುಮಾರು 2 ದಶಕಗಳ ಕಾಲ ಪತ್ರಕರ್ತರಾಗಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಕಾಸರಗೋಡು ಪತ್ರಕರ್ತರ ದತ್ತಿನಿಧಿ ಪ್ರಶಸ್ತಿಯನ್ನು ಎನ್ಕೌಂಟರ್ ಪತ್ರಿಕೆ ಸಂಪಾದಕ ಇಕ್ಬಾಲ್ ಕುತ್ತಾರ್ ಆಯ್ಕೆ ಮಾಡಲಾಗಿತ್ತು. ಕರ್ನಾಟಕ ಸರಕಾರದ ಸನ್ಮಾನ್ಯ ಸಚಿವರಾದ ಶ್ರೀ ಚೆಲುವರಾಯ ಸ್ವಾಮಿ ಅವರಿಂದ ಕಾಸರಗೋಡು ಪತ್ರಕರ್ತರ ದತ್ತಿನಿಧಿ ಪ್ರಶಸ್ತಿಯನ್ನು ಎನ್ಕೌಂಟರ್ ಪತ್ರಿಕೆ ಸಂಪಾದಕ ಇಕ್ಬಾಲ್ ಕುತ್ತಾರ್ ಸ್ವೀಕರಿಸಿದರು.
ಸುಹಾಸ್ ಶೆಟ್ಟಿ ಹತ್ಯೆಗೆ ಸಂಭಂದಿಸಿದಂತೆ ಮಂಗಳೂರು ಪೋಲಿಸರು 8 ಜನರನ್ನು ಬಂಧಿಸಿದ್ದಾರೆ.ಈ ಬಗ್ಗೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಸುದ್ದಿಗೋಷ್ಠಿ ನಡೆಸಿದ್ದು ಒಟ್ಟು 8 ಜನರನ್ನು ಬಂಧಿಸಿದ್ದು ಇನ್ನೂ 2 ಜನರ ಬಂಧನವಾಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಬಂಧಿತರನ್ನು ಮಂಗಳೂರು ಮೂಲದ ಅಬ್ದುಲ್ ಸಫ್ವಾನ್(29) ನಿಯಾಜ್(28), ಮೊಹಮ್ಮದ್ ಮುಝುಮಿಲ್(32), ಕಲಂದರ್ ಶಾಫಿ(31), ಮೊಹಮ್ಮದ್ ರಿಜ್ವಾನ್(28) ಆದಿಲ್ ಮೆಹರೂಫ್ ಚಿಕ್ಕಮಗಳೂರು ಮೂಲದ ರಂಜಿತ್(19) ನಾಗರಾಜ್(2೦) ಎಂದು ತಿಳಿದಿದೆ. ಆರು ಜನ ಸೇರಿ ಸುಹಾಸ್ ಶೆಟ್ಟಿ ಮೇಲೆ ಹತ್ಯೆನಡೆಸಿದ್ದು ಪ್ರಮುಖ ಆರೋಪಿ ಸಫ್ವಾನ್ ಎಂದು ಗುರುತಿಸಲಾಗಿದೆ. ಸಫ್ವಾನ್ ಮೇಲೆ 2023 ರ ಮೇಲೆ ಮಾರಣಾಂತಿಕ ಹಲ್ಲೆಯಾಗುತ್ತದೆ ಪ್ರಶಾಂತ್ ,ಧನರಾಜ್ ಸುಹಾಸ್ ಶೆಟ್ಟಿ ಸ್ನೇಹಿತ ರಾಗಿದ್ದು ಸಫ್ವಾನ್ ಗೆ ಸುಹಾಸ್ ಕೊಲೆ ಮಾಡುವ ಆತಂಕ ಇತ್ತು ಎಂದು ತಿಳಿದಿದೆ. ಈ ಹಿನ್ನಲೆ ಸುಹಾಸ್ ನ್ನು ಕೊಲೆ ಮಾಡಲು ತೀರ್ಮಾನ ಮಾಡಲಾಗಿದ್ದು ಫಾಝೀಲ್ ನ ತಮ್ಮನನ್ನು ಸಂಪರ್ಕಿಸಿ ಕೊಲೆ ಮಾಡೋಕೆ ತೀರ್ಮಾನ ಮಾಡುತ್ತಾರೆ.ಸುಹಾಸ್ ಕೊಲೆ…
ದುಬೈ: ಯುಎಇ ನಲ್ಲಿ ಕಳೆದ ಮೂರು ದಶಕಗಳಿಂದ ಕರ್ನಾಟಕ ಸಂಘಟನೆಗಳ ಪರ ಕ್ರೀಡಾ ಕಾರ್ಯಕ್ರಮಗಳ ನೇತೃತ್ವವನ್ನು ವಹಿಸಿಕೊಂಡು ಬಂದಿರುವ ಉತ್ತಮ ಕ್ರೀಡಾ ಸಂಘಟಕರಾದ ನೊಯಲ್ ಡಿ.ಅಲ್ಮೆಡಾ ಅವರಿಗೆ ಕನ್ನಡ ಸಂಘ ಅಲೈನ್ ವತಿಯಿಂದ “ಗಲ್ಫ್ ಕ್ರೀಡಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಕಳೆದ ಎರಡು ದಶಕಗಳಿಂದ ಕನ್ನಡ ಪರ ಚಟುವಟಿಕೆಗಳನ್ನು ಯಶಸ್ವಿಯಾಗಿ ಆಯೋಜಿಸಿ ಕೊಂಡು ಬಂದಿರುವ ಕರ್ನಾಟಕ ಸಂಘಟನೆಗಳ ಪೈಕಿ ಕನ್ನಡ ಸಂಘ ಅಲೈನ್ ಕೂಡ ಒಂದು. ಇದರ 22ನೇ ವಾರ್ಷಿಕೋತ್ಸವದ ಅಂಗವಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಇತ್ತೀಚೆಗೆ ಅಲೈನ್ ನ ರಾಡಿಸ್ಸನ್ ಬ್ಲೂ ಹೋಟೆಲ್ ನಲ್ಲಿ ಆಚರಿಸಲಾಯಿತು.ಈ ಸಂದರ್ಭದಲ್ಲಿ ಕ್ರೀಡಾ ಕ್ಷೇತ್ರದ ಸಂಘಟನೆಯಲ್ಲಿ ಅತ್ಯುತ್ತಮ ಸೇವೆಗೈದ ನೊಯಲ್ ಡಿ.ಅಲ್ಮೇಡಾ ಅವರಿಗೆ “ಗಲ್ಫ್ ಕ್ರೀಡಾ ರತ್ನ” ಪ್ರಶಸ್ತಿ ನೀಡಿ ಗೌರವಿಸಲಾಯಿತು ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಯು.ಎ.ಇ. ಹಿರಿಯ ಉದ್ಯಮಿ ಡಾ. ಬಿ.ಆರ್. ಶೆಟ್ಟಿ, ಗೌರವ ಅತಿಥಿಗಳಾಗಿ ಅಬುಧಾಬಿ ಕರ್ನಾಟಕ ಸಂಘದ ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿಯವರು ಮತ್ತು ಅಲೈನ್ ಜೂನಿಯರ್ ಸ್ಕೂಲ್ ನ…
ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾ ವತಿಯಿಂದ ಕಾರ್ಮಿಕ ದಿನಾಚರಣೆಯು ಮೇ 1 ಗುರುವಾರ ಉಡುಪಿ ಬಸ್ ನಿಲ್ದಾಣ ಬಳಿಯ ಅಕ್ಷಯ ಟವರ್ ನಲ್ಲಿ ನಡೆಯಿತು ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅಧ್ಯಕ್ಷ ಯೋಗೇಶ್ ಶೆಟ್ಟಿ ಜಪ್ಪು ಅವರು ದೀಪ ಬೆಳಗಿಸಿದ ರೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ವಾಗತ ಭಾಷಣವನ್ನು ಮಾಡಿದ ಉಡುಪಿ ಜಿಲ್ಲಾ ಘಟಕದ ಅಧ್ಯಕ್ಷ ಫ್ರಾಂಕಿ ಡಿಸೋಜ ಕೊಳಲಗಿರಿ ರವರು ತುಳುನಾಡ ರಕ್ಷಣಾ ವೇದಿಕೆ ಕಳೆದ 16 ವರ್ಷಗಳಿಂದ ಯೋಗೀಶ್ ಶೆಟ್ಟಿ ಜಪ್ಪುರವರ ನೇತೃತ್ವದಲ್ಲಿ ನೂರಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ . ಪ್ರಾಸ್ತಾವಿಕ ಭಾಷಣ ಕೇಂದ್ರೀಯ ಮಂಡಳಿ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬರವರು ಕಾರ್ಮಿಕರಿಗೆ ಅನ್ಯಾಯವಾದಾಗ ತುಳುನಾಡ ರಕ್ಷಣಾ ವೇದಿಕೆ ನಿರಂತರ ಹೋರಾಟ ಮಾಡಿ ನ್ಯಾಯ ದೊರಕಿಸಿ ಕೊಟ್ಟಿದೆ. ವೇದಿಕೆಯಲ್ಲಿ ಜಿಲ್ಲಾ ಕಾರ್ಮಿಕ ಘಟಕ ಅಧ್ಯಕ್ಷ ಜಯ ಪೂಜಾರಿ ಲಕ್ಷ್ಮಿನಗರ ರವರು ಕಾರ್ಮಿಕರ ಹಿತರಕ್ಷಣೆಗೆ ತುಳುನಾಡ ರಕ್ಷಣಾ ವೇದಿಕೆ ಸದಾ ಸಿದ್ದ ವಾಗಿರುತ್ತದೆ. ಎಂದರು. ಜಿಲ್ಲಾ ಸಂಘಟನಾ…
ಮಂಗಳೂರು: ಮಂಗಳೂರಿನಲ್ಲಿ ಮತ್ತೆ ನೆತ್ತರು ಹರಿದಿದ್ದು, ಹಿಂದೂಪರ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಇಂದು ದಕ್ಷಿಣ ಕನ್ನಡ ಜಿಲ್ಲಾ ಬಂದ್ ಗೆ ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂ ಸಂಘಟನೆಗಳು ಕರೆ ನೀಡಿವೆ 2022 ರಲ್ಲಿ ಸುರತ್ಕಲ್‌ನಲ್ಲಿ ನಡೆದ ಫಾಜಿಲ್ ಕೊಲೆ ಪ್ರಕರಣದ ಪ್ರಮುಖ ಆರೋಪಿ ಸುಹಾಸ್ ಶೆಟ್ಟಿಯನ್ನು ಗುರುವಾರ ರಾತ್ರಿ 8.27 ರ ಸುಮಾರಿಗೆ ಮಂಗಳೂರಿನ ಹೊರವಲಯದ ಬಜ್ಪೆ ಠಾಣೆ ವ್ಯಾಪ್ತಿಯ ಕಿನ್ನಿಪದವು ಎಂಬಲ್ಲಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿದೆ. ಈ ಘಟನೆ ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸುಹಾಸ್ ಶೆಟ್ಟಿ ಈ ಹಿಂದೆ ಬಜರಂಗದಳದ ಕಾರ್ಯಕರ್ತರಾಗಿದ್ದರು ಮತ್ತು ಅವರ ವಿರುದ್ಧ ಹಲವು ಕೊಲೆ ಪ್ರಯತ್ನದ ಪ್ರಕರಣಗಳು ದಾಖಲಾಗಿದ್ದವು. ಹಿಂದೂ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೆ ಪ್ರತೀಕಾರವಾಗಿ 2022ರ ಜುಲೈ 28ರಂದು ಫಾಜಿಲ್ನ ಕೊಲೆಯಾಗಿತ್ತು . ಈ ಪ್ರಕರಣದಲ್ಲಿ ಸುಹಾಸ್ ಶೆಟ್ಟಿ ಪ್ರಮುಖ ಆರೋಪಿಯಾಗಿದ್ದರು. ಇದೀಗ ಮಂಗಳೂರಿನ ಬಜ್ಪೆ ಕಿನ್ನಿಪದವು ಬಳಿ ಹಿಂದೂ…
ವಾಮಂಜೂರು ಸಮೀಪದ ಕುಡುಪು ಎಂಬಲ್ಲಿ ಏಪ್ರಿಲ್ 27 ರಂದು ಕ್ರಿಕೆಟ್ ಪಂದ್ಯಾಟ ನಡೆಯುತ್ತಿದ್ದ ಸ್ಥಳಕ್ಕೆ ಬಂದಿದ್ದ ಕೇರಳ ಮೂಲದ ಕಾರ್ಮಿಕ ಅಶ್ರಫ್ ಎಂಬಾತನ ಮೇಲೆ ಮೂವತ್ತರಷ್ಟು ದುಷ್ಕರ್ಮಿಗಳು ವಿನಾಕಾರಣ ಥಳಿಸಿ ಕೊಂದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೆ ಅಸಹಜ ಸಾವು ಎಂದು ಬಿಂಬಿಸಿ ಆರೋಪಿಗಳನ್ನು ರಕ್ಷಿಸಲು ಪ್ರಯತ್ನಿಸಿದರು ಎಂಬ ಆರೋಪದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಇನ್ಸ್ ಪೆಕ್ಟರ್ ಶಿವಕುಮಾರ್ ಹಾಗೂ ಅದಕ್ಕೆ ಸಾಥ್ ನೀಡಿದ ಎಸ್ ಬಿ ಚಂದ್ರ ಹಾಗೂ ಪೊಲೀಸ್ ಸಿಬ್ಬಂದಿ ಯಲ್ಲಾಲಿಂಗ ಅವರನ್ನು ಅಮಾನತು ಮಾಡಲಾಗಿದೆ. ಮಂಗಳೂರು ಭಾಗದಲ್ಲಿ ನಡೆದ ಮೊದಲ ಗುಂಪು ಹತ್ಯೆ ಪ್ರಕರಣ ಇದಾಗಿದ್ದು, ಸ್ಥಳೀಯ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಸಾರ್ವಜನಿಕವಾಗಿ ಕೆಲವು ಆಕ್ರೋಶಗಳಿಗೆ ಕಾರಣವಾಗಿತ್ತು. ಈ ಸಂಬಂಧ ಉನ್ನತ ಅಧಿಕಾರಿಗಳಿಗೆ ಸ್ಪಷ್ಟ ಮಾಹಿತಿ ನೀಡದೆ ಕರ್ತವ್ಯ ಲೋಪ ಎಸಗಿರುವ ಆರೋಪಗಳು ಕೇಳಿಬಂದಿವೆ.
ಕೊಣಾಜೆ : ಪಜೀರು ಗ್ರಾಮದ ಅಡ್ಕ ಎಂಬಲ್ಲಿ ವಿದ್ಯುತ್ ಸ್ಪರ್ಶಿಸಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಗುರುವಾರ ಸಂಭವಿಸಿದೆ. ಮೃತಪಟ್ಟ ವ್ಯಕ್ತಿಯನ್ನು ಆಡ್ಕ ನಿವಾಸಿ ಅಬ್ದುಲ್ ರಝಾಕ್ (52) ಎಂದು ಗುರುತಿಸಲಾಗಿದೆ. ಅವರು ತನ್ನ ಮನೆಯ ಬಳಿ ಹಲಸು ಕೊಯ್ಯಲೆಂದು ಮರ ಏರಿದ್ದ ವೇಳೆ ವಿದ್ಯುತ್ ಸ್ಪರ್ಶಗೊಂಡಿದೆ. ಸುಮಾರು ಹೊತ್ತಾದರೂ ಮನೆಗೆ ಬಂದಿಲ್ಲ ಎಂದು ಅವರ ಪತ್ನಿ ಮರದ ಬಳಿ ಹೋದ ವೇಳೆ ರಝಾಕ್ ಅವರು ಮರದ ಕೆಳಗೆ ಪ್ರಜ್ಞೆತಪ್ಪಿ ಬಿದ್ದಿದ್ದರು ಎಂದು ತಿಳಿದುಬಂದಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ದೂರಲಾಗಿದೆ. ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಬ್ದುಲ್ ರಝಾಕ್ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ. ಭಾರತ್ ಸೋಷಿಯಲ್ ವೆಲ್ಫೇರ್ ಟ್ರಸ್ಟ್ ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ರಝಾಕ್ ಅವರು ಹಲವು ವರ್ಷಗಳಿಂದ ಟೈಲರ್ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದರು.
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
