- ಸೇವಾ ಸಂಕಲ್ಪ ಅಭಿಯಾನಕ್ಕೆ ಮಾದರಿ ಹೆಜ್ಜೆ ಕುಲಶೇಖರ ಕಲ್ಪನೆ ಪರಿಸರದಲ್ಲಿ ನವೀಕೃತ ಬಸ್ ನಿಲ್ದಾಣ ಉದ್ಘಾಟನೆ
- ಮಾಡೂರು ಶ್ರೀ ಶಿವ ದುರ್ಗಾಂಬಾ ಮಠದಲ್ಲಿ ಅ.15ರಿಂದ ನವರಾತ್ರಿ ಮಹೋತ್ಸವ ವಿಶೇಷ ಪೂಜೆ, ಗಣಹೋಮ, ಮಹಾ ಚಂಡಿಕಾಯಾಗ, ಅಖಂಡ ಭಜನೆ ಹಾಗೂ ಅನ್ನಸಂತರ್ಪಣೆ
- ಗಾಂಧಿ ಜಯಂತಿ ಅಂಗವಾಗಿ ಉಡುಪಿಯಲ್ಲಿ ತುಳುನಾಡ ರಕ್ಷಣಾ ವೇದಿಕೆಯಿಂದ ವಿಶೇಷ ಕಾರ್ಯಕ್ರಮ ಗಾಂಧೀಜಿ ತತ್ವಗಳನ್ನು ಸ್ಮರಿಸಿ ತಾಯಿ–ಮಕ್ಕಳ ಆಸ್ಪತ್ರೆಯಲ್ಲಿ ಹಣ್ಣುಹಂಪಲು ವಿತರಣೆ
- ಅ.5ರಂದು ಕರ್ನಾಟಕ ರಾಜ್ಯ ಗ್ರಂಥಾಲಯ ಸಂಘದಿಂದ ಬೆಂಗಳೂರಿನಲ್ಲಿ ಶಾಂತಿಯುತ ಪ್ರತಿಭಟನೆ
- MRPL ಸ್ಫೋಟ ಪ್ರಕರಣ: ನಿರ್ಲಕ್ಷ್ಯದ ಆರೋಪದಡಿ FIR ಗಂಭೀರ ಗಾಯಗೊಂಡ ಕಾರ್ಮಿಕ ಮನೀಶ್ ಕರ್ಕಡ ಸಾವು; ಸುತ್ತಮುತ್ತ 54 ಮನೆಗಳಿಗೆ ಹಾನಿ
- ಎಂಆರ್ಪಿಎಲ್ ಸ್ಫೋಟ: ಸ್ಥಳೀಯರ ಸುರಕ್ಷತೆಯೊಂದಿಗೆ ಯಾವುದೇ ರಾಜಿ ಬೇಡ ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ, ಗಾಯಾಳುಗಳಿಗೆ ಸಂಪೂರ್ಣ ಉಚಿತ ಚಿಕಿತ್ಸೆ ನೀಡಲಿ ಕೈಗಾರಿಕೆ ಆರಂಭದ ವೇಳೆ ನೀಡಿದ ಭರವಸೆಗಳು ಅನುಷ್ಠಾನವಾಗಲಿ: ಯೋಗಿಶ್ ಶೆಟ್ಟಿ ಜಪ್ಪು
- ಎಂಆರ್ಪಿಎಲ್ನಲ್ಲಿ ಭಾರೀ ಸ್ಫೋಟ: ಎಂಟು ಮಂದಿ ಗಾಯ ಕೋಕರ್ ಹೈಡ್ರೋ ಟ್ರೀಟಿಂಗ್ ಘಟಕದಲ್ಲಿ ಬೆಂಕಿ; ಓರ್ವನಿಗೆ ಶೇ.35ರಷ್ಟು ಸುಟ್ಟ ಗಾಯ
- ಎಂಆರ್ಪಿಎಲ್ ಘಟಕದಲ್ಲಿ ಭಾರೀ ಸ್ಫೋಟದ ಸದ್ದು: ಬೆಂಕಿ, ದಟ್ಟ ಹೊಗೆಯಿಂದ ಸ್ಥಳೀಯರಲ್ಲಿ ಆತಂಕ
Author: Tulunada Surya
ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026ರ ಕೇಂದ್ರ ಬಜೆಟ್ ಭವಿಷ್ಯದ ಭಾರತದ ಅಭಿವೃದ್ಧಿಯಲ್ಲಿ ಹೊಸ ಭರವಸೆ ಮೂಡಿಸಿರುವ ದೂರದೃಷ್ಟಿತ್ವದ ಬಜೆಟ್ ಎಂದು ಮಂಗಳೂರು ಶಾಸಕರಾದ ಡಿ.ವೇದವ್ಯಾಸ ಕಾಮತ್ ರವರು ಪ್ರತಿಕ್ರಿಯಿಸಿದರು. ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು, ನಾಗರಿಕರ ಆಶಯಗಳನ್ನು ಈಡೇರಿಸಲು ಮತ್ತು ಸಂಪನ್ಮೂಲಗಳ ಸಾರ್ವತ್ರಿಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು ‘ಮೂರು ಕರ್ತವ್ಯ’ ಎಂಬ ವ್ಯವಸ್ಥಿತ ಚೌಕಟ್ಟನ್ನು ಪರಿಚಯ ಮಾಡಿದೆ. ಈ ಮೂರು ಕರ್ತವ್ಯಗಳು ರೈತರು, ಯುವಕರು, ಮಹಿಳೆಯರು, ಹಿಂದುಳಿದ ವರ್ಗದವರು ಮತ್ತು ಪ್ರತಿ ಪ್ರದೇಶಕ್ಕೆ ಸುಸ್ಥಿರ ಸುಧಾರಣೆಯ ಮೂಲಕ ಪ್ರಯೋಜನ ನೀಡುತ್ತದೆ. ಇದು ಎಲ್ಲರನ್ನೂ ಒಳಗೊಳ್ಳುವಿಕೆ ಮತ್ತು ಸ್ಥಿತಿಸ್ಥಾಪಕತ್ವವನ್ನು ಬಲಪಡಿಸುವ ಗುರಿ ಹೊಂದಿದೆ ಎಂದು ಹೇಳಿದರು. ರೈತರು ಮತ್ತು ಕೃಷಿಕರಿಗೆ ಉಪಯುಕ್ತ ಸಲಹೆ ಮತ್ತು ಸಹಕಾರ ನೀಡುವ ಸಲುವಾಗಿ ಬಜೆಟ್ ನಲ್ಲಿ ಕೃತಕ ಬುದ್ಧಿಮತ್ತೆ (AI) ಪರಿಕರಗಳನ್ನು ಒದಗಿಸುವುದಾಗಿ ಘೋಷಿಸಲಾಗಿದೆ. ಇದು ದೇಶದಲ್ಲಿ ಕೃಷಿ ಚಟುವಟಿಕೆಗಳಲ್ಲಿ ದೊಡ್ಡ ಪರಿವರ್ತನೆ ತರಲಿದೆ. ಕರಾವಳಿ ಭಾಗದ ತೆಂಗು, ಗೋಡಂಬಿ ಬೆಳೆಗೆ ವಿಶೇಷ ಒತ್ತು ನೀಡುವ…
ಮಂಗಳೂರು ನಗರದ ಹೃದಯಭಾಗದಲ್ಲಿರುವ ಗುಜ್ಜರಕೆರೆ ಮತ್ತೊಮ್ಮೆ ಆತಂಕಕ್ಕೆ ಕಾರಣವಾಗಿದೆ. ಇತ್ತೀಚೆಗೆ ನಡೆಸಲಾದ ಪ್ರಯೋಗಾಲಯ ಪರೀಕ್ಷೆಗಳು, ಕೆರೆಯ ನೀರು ಭಾರೀ ಪ್ರಮಾಣದಲ್ಲಿ ಬ್ಯಾಕ್ಟೀರಿಯಾಗಳಿಂದ ಕಲುಷಿತಗೊಂಡಿದ್ದು, ಕುಡಿಯಲು ಸಂಪೂರ್ಣವಾಗಿ ಅಯೋಗ್ಯವಾಗಿದೆ ಎಂದು ಸ್ಪಷ್ಟಪಡಿಸಿವೆ.ಒಂದು ಕಾಲದಲ್ಲಿ “ರೋಗ ನಿವಾರಕ ಪವಿತ್ರ ಕೆರೆ” ಎಂದು ನಂಬಲಾಗುತ್ತಿದ್ದ ಗುಜ್ಜರಕೆರೆ, ಇದೀಗ ರೋಗಕಾರಕ ಬ್ಯಾಕ್ಟೀರಿಯಾಗಳ ಗೂಡಾಗಿ ಪರಿವರ್ತನೆಯಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿ ಕೋಟ್ಯಂತರ ರೂ. ವೆಚ್ಚದಲ್ಲಿ ಕೆರೆಯನ್ನು ಅಭಿವೃದ್ಧಿಪಡಿಸಿ ಹೊರಗಿನಿಂದ ಆಕರ್ಷಕವಾಗಿ ರೂಪುಗೊಳಿಸಿದರೂ, ಒಳಗಡೆ ನೀರಿನ ಗುಣಮಟ್ಟ ತೀವ್ರವಾಗಿ ಹದಗೆಟ್ಟಿದೆ. ಕೆರೆಗೆ ನಿರಂತರವಾಗಿ ಒಳಚರಂಡಿ ನೀರು ಹರಿಯುತ್ತಿರುವುದೇ ಈ ಭೀಕರ ಮಾಲಿನ್ಯದ ಪ್ರಮುಖ ಕಾರಣ ಎಂದು ಹೇಳಲಾಗಿದೆ.ಭಯ ಹುಟ್ಟಿಸುವ ಪ್ರಯೋಗಾಲಯ ವರದಿಕೆರೆಯಿಂದ ಸಂಗ್ರಹಿಸಲಾದ ನೀರಿನ ಮಾದರಿಗಳ ಪರೀಕ್ಷೆಯಲ್ಲಿ,ಒಟ್ಟು ಕೋಲಿಫಾರ್ಮ್: 100 ಮಿಲಿ ನೀರಿಗೆ 1,600ಮಲ (ಫೀಕಲ್) ಕೋಲಿಫಾರ್ಮ್: 100 ಮಿಲಿ ನೀರಿಗೆ 1,600ಎಂಬ ಅತ್ಯಂತ ಅಪಾಯಕಾರಿ ಮಟ್ಟಗಳು ದಾಖಲಾಗಿವೆ. ಪ್ರಯೋಗಾಲಯ ವರದಿ ಸ್ಪಷ್ಟವಾಗಿ – ಈ ನೀರು ಕುಡಿಯಲು ಸಂಪೂರ್ಣ ಅಸುರಕ್ಷಿತ ಎಂದು ಎಚ್ಚರಿಸಿದೆ.ಏಳು ತಿಂಗಳಲ್ಲಿ ಭಾರೀ ಏರಿಕೆಏಳು ತಿಂಗಳ…
ಮಂಗಳೂರು: ವೀಸಾ ಮೋಸ, ಚೆಕ್ ಬೌನ್ಸ್ ಹಾಗೂ ಸಂಘಟಿತ ಅಪರಾಧಗಳಿಗೆ ಸಂಬಂಧಿಸಿದಂತೆ ಮಂಗಳೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಬಾಕಿ ಇರುವ C.C/0000381/2018 ಪ್ರಕರಣದ ಪ್ರಮುಖ ಆರೋಪಿಯನ್ನು ತಕ್ಷಣ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಬೇಕೆಂದು ತುಳುನಾಡು ರಕ್ಷಣಾ ವೇದಿಕೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಅಧಿಕೃತ ಮನವಿ ಸಲ್ಲಿಸಿದೆ. ತುಳುನಾಡು ರಕ್ಷಣಾ ವೇದಿಕೆಯ ಕೇಂದ್ರಿಯ ಮಂಡಳಿ ಉಪಾಧ್ಯಕ್ಷ ಜೆ. ಇಬ್ರಾಹಿಂ ಅವರ ನೇತೃತ್ವದಲ್ಲಿ ಸಲ್ಲಿಸಲಾದ ಈ ಮನವಿಗೆ, ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, ನಗರ ಕಾರ್ಯಾಧ್ಯಕ್ಷ ಕ್ಲಿಟಸ್ ಲೋಬೊ, ನಗರ ಉಪಾಧ್ಯಕ್ಷೆ ಶಾರದಾ ಶೆಟ್ಟಿ, ಮುನೀರ್ ಮುಕ್ಕಚೇರಿ ಸೇರಿದಂತೆ ಹಲವು ಪದಾಧಿಕಾರಿಗಳು ಹಾಗೂ ಸದಸ್ಯರು ನಿಯೋಗವಾಗಿ ಭಾಗವಹಿಸಿದರು. ಈ ಸಂದರ್ಭ ಮಾತನಾಡಿದ ಕೇಂದ್ರಿಯ ಸಂಘಟನಾ ಕಾರ್ಯದರ್ಶಿ ಪ್ರಶಾಂತ್ ಭಟ್ ಕಡಬ, “ಪ್ರಕರಣದ ಪ್ರಮುಖ ಆರೋಪಿ ಶ್ರೀ ಕ್ಲಿಫರ್ಡ್ ಜೋಸೆಫ್ ಪೈಸ ಕಳೆದ ಎಂಟು ವರ್ಷಗಳಿಂದ ನ್ಯಾಯಾಲಯದ ವಿಚಾರಣೆಗೆ ಹಾಜರಾಗದೇ ಪರಾರಿಯಾಗಿರುವುದು ನ್ಯಾಯಾಂಗ ವ್ಯವಸ್ಥೆಗೆ ಗಂಭೀರ ಸವಾಲಾಗಿದೆ. ಇದು ಕೇವಲ ಕಾನೂನು ಉಲ್ಲಂಘನೆಯಷ್ಟೇ ಅಲ್ಲ,…
ಉಡುಪಿ:ಉಡುಪಿ ಜಿಲ್ಲೆ ಬ್ರಹ್ಮಾವರ ವಲಯದ ಅಧೀನಕ್ಕೆ ಒಳಪಡುವ ಅಮ್ಮುಂಜೆ ಸೇಕ್ರೆಡ್ ಹಾರ್ಟ್ ಅನುದಾನಿತ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯನ್ನು ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಚ್ಚದಂತೆ ಕ್ರಮ ಕೈಗೊಳ್ಳುವಂತೆ ಹೋರಾಟ ನಡೆಸುತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಕಾರ್ಯ ಶ್ಲಾಘನೀಯವಾಗಿದ್ದು, ಇದು ಕನ್ನಡ ಭಾಷೆ ಮತ್ತು ಕನ್ನಡ ಶಿಕ್ಷಣವನ್ನು ಉಳಿಸಿ ಬೆಳೆಸುವ ದಿಕ್ಕಿನಲ್ಲಿ ಕೈಗೊಂಡಿರುವ ಮಹತ್ವದ ಹೋರಾಟವಾಗಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ಉಡುಪಿ ಜಿಲ್ಲಾಧ್ಯಕ್ಷ ಸುಜಯ್ ಪೂಜಾರಿ ಅವರು ಹೇಳಿದರು.ಕನ್ನಡ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪುತ್ತಿರುವ ಇಂದಿನ ಪರಿಸ್ಥಿತಿಯಲ್ಲಿ, ಮಕ್ಕಳ ಭವಿಷ್ಯ ಹಾಗೂ ಕನ್ನಡ ಭಾಷೆಯ ಅಸ್ತಿತ್ವಕ್ಕಾಗಿ ಧ್ವನಿ ಎತ್ತಿರುವ ತುಳುನಾಡ ರಕ್ಷಣಾ ವೇದಿಕೆಯ ಹೋರಾಟ ಸಮಾಜಕ್ಕೆ ದಿಕ್ಕು ತೋರಿಸುವಂತಿದೆ. ಶಿಕ್ಷಣವೇ ಭಾಷೆಯ ಜೀವಾಳವಾಗಿದ್ದು, ಪ್ರಾಥಮಿಕ ಹಂತದಲ್ಲೇ ಮಕ್ಕಳಿಗೆ ಮಾತೃಭಾಷೆಯಲ್ಲಿ ಶಿಕ್ಷಣ ದೊರಕಬೇಕೆಂಬ ಉದ್ದೇಶದಿಂದ ಈ ಹೋರಾಟ ನಡೆಸುತ್ತಿರುವುದು ಶ್ಲಾಘನೀಯ ಎಂದು ಅವರು ಅಭಿಪ್ರಾಯಪಟ್ಟರು.ಕನ್ನಡವನ್ನು ಉಳಿಸಿ ಬೆಳೆಸುವ ಈ ಹೋರಾಟದಲ್ಲಿ ಕನ್ನಡ ಹಾಗೂ ತುಳು ಸಂಘಟನೆಗಳು ಒಂದೇ ಮನೋಭಾವದೊಂದಿಗೆ ಕೈಜೋಡಿಸುವುದು…
ಮುಲ್ಕಿ : ತುಳು ಭಾಷೆ ಬೊಕ್ಕ ಸಂಸ್ಕೃತಿನ್ ಒರಿಪರೆ ಬೋಡಾದ್ 14 ವರ್ಷರ್ದ್ ದುಂಬು “ಟೈಮ್ಸ್ ಆಫ್ ಕುಡ್ಲ” ಪತ್ರಿಕೆನ್ ಪುಟ್ಟು ಪಾಡ್ದ್ 2025 ನೇ ಜನವರಿ 30 ತಾರೀಕ್‌ಗ್ ದೇವೆರೆ ಪಾದ ಸೇರಿನ “ತುಳುವ ನೇಸರೆ” ಬಿರ್ದ್ ಪಡೆತಿನ ಸಂಸ್ಥಾಪಕೆ, ತುಳು ಪೊರ್ಂಬಾಟಗಾರೆ ದಿ. ಶಶಿರಾಜ್ ಬಂಡಿಮಾರ್ ಮೆರೆನ ನೆಂಪು ಲೇಸ್ ಐತಾರ ಕಾಂಡೆ ಪುನರೂರು ಕಾಂಪ್ಲೆಕ್ಸ್ ಸ್ವಾಗತ್ ಹೋಟೆಲ್‌ದ ಚಾವಡಿಡ್ ನಡತ್ಂಡ್. ಸುರುಕ್ಕು ಬೈದಿ ಬಿನ್ನೆರ್ ಮಾತೆರ್ಲ ದಿ. ಶಶಿರಾಜ್ ಬಂಡಿಮಾರ್ ಮೆರೆನ ಭಾವಚಿತ್ರೊಗು ಪುರ್ಪ ಪಾಡ್ದ್ ಗೌರವ ಮಲ್ತೆರ್.ಧರ್ಮದರ್ಶಿ ಡಾ. ಹರಿಕೃಷ್ಣ ಪುನರೂರು ಲೇಸ್‌ದ ಅಧ್ಯಕ್ಷತೆ ವಹಿಸ್‌ದಿತ್ತೆರ್. ಈ ಪೊರ್ತುಡು ಪಾತೆರ್ನ ಆರ್, ತುಳು ಬಾಷೆಗಾದ್ ಶಶಿ ಬಂಡಿಮಾರ್ ಪೊರ್ಂಬಾಟ ಮಲ್ದಿನಾರ್. ತುಳುನು ಒರಿಪಾವುನ ನಮ್ಮ ಕರ್ತವ್ಯ. ಭಾಷಾವಾರು ಪ್ರಾಂತ್ಯ ಆನಗ ತುಳುಕ್ಕು ಅನ್ಯಾಯ ಆತ್ಂಡ್. ಅವೆನ್ ಸರಿ ಮಲ್ಪರೆ ನಮ ಮಾತೆರ್ಲ ಒಟ್ಟು ಸೇರೊಡು . ನಮ್ಮ ಅಪ್ಪೆ ಬಾಸೆದ ಪತ್ರಿಕೆನ್ ಒರಿಪಾವುನ ಕೆಲಸ ಮಲ್ಪೊಡು…
ಮುಂಬೈ:ಬಾಲಿವುಡ್‌ನ ಖ್ಯಾತ ನಿರ್ಮಾಪಕ ಹಾಗೂ ನಿರ್ದೇಶಕ ರೋಹಿತ್ ಶೆಟ್ಟಿ ಅವರ ನಿವಾಸದ ಮೇಲೆ ನಡೆದ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿ ಮುಂಬೈ ಅಪರಾಧ ವಿಭಾಗದ ಪೊಲೀಸರು ಐವರು ಯುವಕರನ್ನು ಬಂಧಿಸಿರುವುದಾಗಿ ತಿಳಿಸಿದ್ದಾರೆ. ಮುಂಬೈನ ಜುಹು ಪ್ರದೇಶದಲ್ಲಿರುವ ರೋಹಿತ್ ಶೆಟ್ಟಿ ಅವರ ‘ಶೆಟ್ಟಿ ಟವರ್’ ನಿವಾಸದ ಮೇಲೆ ಶನಿವಾರ ತಡರಾತ್ರಿ ಅಪರಿಚಿತರು ಗುಂಡು ಹಾರಿಸಿದ್ದು, ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ದಾಳಿಯ ಬಳಿಕ ಶಂಕಿತರು ಪುಣೆಗೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಸುಳಿವಿನ ಆಧಾರದಲ್ಲಿ ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪುಣೆಯ ವಾರ್ಜೆ ಪೊಲೀಸ್ ಠಾಣೆ ಸಿಬ್ಬಂದಿ ಭಾನುವಾರ ಮಧ್ಯಾಹ್ನ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಅಮನ್ ಆನಂದ್ ಮರೋಟೆ (27), ಆದಿತ್ಯ ಜ್ಞಾನೇಶ್ವರ ಗಾಯಕೆ (19), ಸಿದ್ಧಾರ್ಥ್ ದೀಪಕ್ ಯೆನ್‌ಪುರೆ (20), ಸಮರ್ಥ ಶಿವಶಂಕರ್ ಪೊಮಾಜಿ (18) ಮತ್ತು ಸ್ವಪ್ನಿಲ್ ಬಂಡು ಸಕತ್ (23) ಎಂದು ಗುರುತಿಸಲಾಗಿದೆ. ಬಂಧಿತರೆಲ್ಲರೂ ಪುಣೆಯ ನಿವಾಸಿಗಳಾಗಿದ್ದಾರೆ. ಪೊಲೀಸರ ಪ್ರಕಾರ, ಆರೋಪಿಗಳಿಗೆ ಯಾವುದೇ ಹಿಂದಿನ ಕ್ರಿಮಿನಲ್ ಹಿನ್ನೆಲೆ…
ಬ್ರಹ್ಮಾವರ:ನಿನ್ನೆ ಸಾಯಂಕಾಲ ಸಾಹೇಬ್ರಕಟ್ಟೆಯಿಂದ ಬ್ರಹ್ಮಾವರದ ಕಡೆಗೆ ಪ್ರಯಾಣಿಸುತ್ತಿದ್ದ ವೇಳೆ, ಬಾರ್ಕೂರು ಬ್ರಿಡ್ಜ್ ಸಮೀಪ ಸಂಜೆ ಸುಮಾರು 4 ಗಂಟೆಯ ವೇಳೆಗೆ ರಸ್ತೆಯ ಬದಿಯಲ್ಲಿ ಬಿದ್ದಿದ್ದ ಒಂದು ಬ್ಯಾಗ್‌ನ್ನು ರೋಶನ್ ಡಿಸೋಜ ಅಮ್ಮುಂಜೆ ಗಮನಿಸಿದರು.ತಕ್ಷಣವೇ ಬ್ಯಾಗ್‌ನ್ನು ತೆರೆದು ಪರಿಶೀಲಿಸಿದಾಗ, ಅದರೊಳಗೆ ಬಟ್ಟೆಗಳು ಹಾಗೂ ಬೆಲೆಬಾಳುವ ಚಿನ್ನಾಭರಣಗಳು ಇರುವುದನ್ನು ಕಂಡುಬಂದಿತು. ಯಾವುದೇ ಸಂಶಯಕ್ಕೆ ಆಸ್ಪದ ಕೊಡದೆ, ಅದೇ ಕ್ಷಣದಲ್ಲಿ ಈ ವಿಷಯವನ್ನು ತಮ್ಮ ವಾಟ್ಸಪ್ ಸ್ಟೇಟಸ್ ಹಾಗೂ ವಿವಿಧ ಗ್ರೂಪ್‌ಗಳ ಮೂಲಕ ಸಾರ್ವಜನಿಕವಾಗಿ ಹಂಚಿಕೊಂಡರು.ದೇವರ ಕೃಪೆಯಿಂದ ಹಾಗೂ ಸಾಮಾಜಿಕ ಜಾಲತಾಣದ ಸಹಕಾರದಿಂದ, ಬ್ಯಾಗ್‌ನ ನೈಜ ವಾರಸುದಾರರು ದಾವಣಗೆರೆಯವರು ಎಂಬುದು ಪತ್ತೆಯಾಗಿದ್ದು, ವಸ್ತುಗಳನ್ನು ಸುರಕ್ಷಿತವಾಗಿ ಅವರಿಗೆ ಹಸ್ತಾಂತರಿಸಲಾಗಿದೆ.ಈ ಬಗ್ಗೆ ಪ್ರತಿಕ್ರಿಯಿಸಿದ ತುಳುನಾಡ ರಕ್ಷಣಾ ವೇದಿಕೆ ಮುಖಂಡ ರೋಶನ್ ಡಿಸೋಜ ಅಮ್ಮುಂಜೆ “ಇದನ್ನು ಸಾಧನೆ ಎಂದು ತೋರಿಸಿಕೊಳ್ಳಲು ನಾನು ಹಂಚಿಕೊಂಡಿಲ್ಲ. ಬೇರೆಯವರ ವಸ್ತು ನಮಗೆ ಬೇಡ ಎಂಬ ಮನಸ್ಥಿತಿಯಿಂದಲೇ ಈ ನಡೆ. ಕಷ್ಟಪಟ್ಟು ದುಡಿದು ಸಂಪಾದಿಸಿದ ವಸ್ತು ಕಳೆದುಕೊಂಡಾಗ ಆಗುವ ನೋವು ಎಷ್ಟು ದೊಡ್ಡದು ಅನ್ನೋದು ಅದನ್ನು ಅನುಭವಿಸಿದವರಿಗೇ ಗೊತ್ತು. ಆ ನೋವಿನ ಶಾಪ…
ತುಳುನಾಡ ಸೂರ್ಯ ನ್ಯೂಸ್, ದೊಡ್ಡಬಳ್ಳಾಪುರ ಪ್ರೀತಿ–ಮದುವೆ ಎಂಬ ಮುಖವಾಡದ ಹಿಂದೆ ಹಣದ ಬೇಟೆ? ಪ್ರೀತಿ, ನಂಬಿಕೆ ಮತ್ತು ಮದುವೆ ಎಂಬ ಪವಿತ್ರ ಸಂಬಂಧಗಳನ್ನು ಅಸ್ತ್ರವಾಗಿ ಮಾಡಿಕೊಂಡು ಪುರುಷರನ್ನು ವಂಚಿಸಿದ ಗಂಭೀರ ಆರೋಪಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಮಹಿಳೆಯೊಬ್ಬರ ವಿರುದ್ಧ ಕೇಳಿಬಂದಿವೆ. ದೊಡ್ಡಬಳ್ಳಾಪುರ ತಾಲೂಕಿನ ಸುಧಾರಾಣಿ ಎಂಬ ಮಹಿಳೆಯ ವಿರುದ್ಧ ಇಬ್ಬರು ಗಂಡಂದಿರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಪ್ರಕರಣ ಇದೀಗ ಜಿಲ್ಲೆ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಪ್ರೀತಿ–ಪ್ರೇಮ; ಮದುವೆ – ಆದರೆ ಉದ್ದೇಶ ಒಂದೇ? ಸುಧಾರಾಣಿ ಮದುವೆ ಎಂಬ ನೆಪದಲ್ಲಿ ಹಣವಿರುವ ಪುರುಷರನ್ನು ಗುರಿಯಾಗಿಸಿಕೊಂಡು ವಂಚನೆ ಮಾಡುತ್ತಿದ್ದಾಳೆ ಎಂಬ ಆರೋಪಗಳು ಗಂಭೀರ ಸ್ವರೂಪ ಪಡೆದಿವೆ. ಪ್ರೀತಿ–ಪ್ರೇಮದ ನಾಟಕವಾಡಿ ಮದುವೆಯಾಗುವುದು, ನಂತರ ವೈಯಕ್ತಿಕ ಸಮಸ್ಯೆಗಳು, ಚಿಕಿತ್ಸೆ, ಕುಟುಂಬದ ತುರ್ತು ಅಗತ್ಯಗಳನ್ನು ಮುಂದಿಟ್ಟು ಲಕ್ಷಾಂತರ ರೂಪಾಯಿ ಹಣ ಪಡೆದು ಸಂಪರ್ಕ ಕಡಿತ ಮಾಡುವುದು – ಇದೇ ಆಕೆಯ ಕಾರ್ಯಪದ್ಧತಿ ಎಂದು ಆರೋಪಿಸಲಾಗಿದೆ. ಮೊದಲ ಗಂಡ ಮತ್ತು ಮಕ್ಕಳನ್ನು ಬಿಟ್ಟು ಹೋದ ಸುಧಾರಾಣಿ?…
ಉಡುಪಿ:ತುಳುನಾಡ ರಕ್ಷಣಾ ವೇದಿಕೆ (ರಿ.) ಉಡುಪಿ ಜಿಲ್ಲಾ ಘಟಕದ ಮಹತ್ವದ ಸಭೆಯು ದಿನಾಂಕ 01-02-2026 ರಂದು ಉಡುಪಿ ಜಿಲ್ಲಾ ಕಚೇರಿಯಲ್ಲಿ ತುಳುನಾಡ ರಕ್ಷಣಾ ವೇದಿಕೆ ಸ್ಥಾಪಕ ಅದ್ಯಕ್ಷ ಯೋಗಿಶ್ ಶೆಟ್ಟಿ ಜಪ್ಪುರವರ ಅದ್ಯಕ್ಷತೆಯಲ್ಲಿ ಯಶಸ್ವಿಯಾಗಿ ನಡೆಯಿತು. ಸಭೆಯಲ್ಲಿ ಸಂಘಟನೆಯ ಉಡುಪಿ ಜಿಲ್ಲೆಯ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ಮಹಿಳಾ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ನೂತನ ಸದಸ್ಯರಾಗಿ ಮಹೇಶ್ ಪೂಜಾರಿ ಕೊಳಲಗಿರಿ, ನಾಗೇಶ್ ಭಂಡಾರಿ ಹಾವಂಜೆ , ಸುಮಿತ್ರ ಮದ್ವನಗರ ಮತ್ತಿತರ ಪ್ರಮುಖರು ಸೇರ್ಪಡೆಗೊಂಡರು. ಸಭೆಯಲ್ಲಿ ತುಳುನಾಡದ ಭಾಷೆ, ಸಂಸ್ಕೃತಿ, ಜಾನಪದ ಪರಂಪರೆ ಹಾಗೂ ಜನಪರ ಸಮಸ್ಯೆಗಳ ಕುರಿತು ಸವಿಸ್ತಾರ ಚರ್ಚೆ ನಡೆಯಿತು. ಸಂಘಟನೆಯ ಬಲವರ್ಧನೆ, ಗ್ರಾಮ–ಗ್ರಾಮಗಳಲ್ಲಿ ಘಟಕಗಳ ರಚನೆ, ಯುವಕರ ಹಾಗೂ ಮಹಿಳೆಯರ ಸಕ್ರಿಯ ಭಾಗವಹಿಸುವಿಕೆ, ಮುಂದಿನ ದಿನಗಳಲ್ಲಿ ಕೈಗೊಳ್ಳಬೇಕಾದ ಸಾಮಾಜಿಕ ಹೋರಾಟಗಳು ಹಾಗೂ ಕಾರ್ಯಕ್ರಮಗಳ ಕುರಿತು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆಯ ಧ್ಯೇಯ–ಉದ್ದೇಶಗಳನ್ನು ಕಾರ್ಯಕರ್ತರಿಗೆ ವಿವರಿಸಲಾಯಿತು. ತುಳುನಾಡದ ಅಸ್ತಿತ್ವ, ಹಕ್ಕುಗಳು ಹಾಗೂ ಸಂಸ್ಕೃತಿಯ…
ತುಳುನಾಡ ಸೂರ್ಯ ಕ್ರೈಂ ನ್ಯೂಸ್ : ಸಮಾಜದಲ್ಲಿ ಶಿಕ್ಷಕ ಎಂಬ ಪದಕ್ಕೆ ಗೌರವ, ನಂಬಿಕೆ ಮತ್ತು ನೈತಿಕತೆ ಎಂಬ ಅರ್ಥಗಳು ಸಹಜವಾಗಿ ಅಂಟಿಕೊಂಡಿರುತ್ತವೆ. ಮಕ್ಕಳ ಭವಿಷ್ಯ ರೂಪಿಸುವವನು, ಮೌಲ್ಯಗಳನ್ನು ಕಲಿಸುವವನು ಎಂಬ ಭಾವನೆ ಜನಮನದಲ್ಲಿ ಗಟ್ಟಿಯಾಗಿರುತ್ತದೆ. ಆದರೆ ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ಆನೆಮಜಲು ಎಂಬ ಪುಟ್ಟ ಹಳ್ಳಿಯಿಂದ ಹೊರಟ ಒಬ್ಬ ಶಿಕ್ಷಕ, ಇದೇ ನಂಬಿಕೆಯನ್ನು ತನ್ನ ಅತಿ ಭೀಕರ ಅಪರಾಧಗಳಿಗೆ ಆಯುಧವನ್ನಾಗಿ ಮಾಡಿಕೊಂಡನು ಎಂಬುದು ನಮ್ಮ ಸಮಾಜದ ಪಾಲಿಗೆ ಅತ್ಯಂತ ಕಟುವಾದ ಸತ್ಯ. ಮೋಹನ್ ಕುಮಾರ್ – ವೃತ್ತಿಯಲ್ಲಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ. ಹೊರಗೆ ನೋಡಲು ಸಾಮಾನ್ಯ ವ್ಯಕ್ತಿ. ಆದರೆ ಆತನ ಒಳಗಿನ ವಿಕೃತ ಮನಸ್ಸು, ಇಡೀ ಕರ್ನಾಟಕವನ್ನೇ ಬೆಚ್ಚಿಬೀಳಿಸುವಂತಹ ಸರಣಿ ಕೊಲೆಗಳ ಮೂಲಕ ಹೊರಹೊಮ್ಮಿತು. ‘ಸೈನೈಡ್ ಮೋಹನ್’ ಎಂಬ ಹೆಸರು ಅಪರಾಧ ಲೋಕದಲ್ಲಿ ಮಾತ್ರವಲ್ಲ, ಮಾನವೀಯತೆಯ ಇತಿಹಾಸದಲ್ಲೇ ಒಂದು ಭಯಾನಕ ಅಧ್ಯಾಯವಾಗಿ ಉಳಿಯಿತು. ನಂಬಿಕೆಯೇ ಆಯುಧ, ಮೋಸವೇ ತಂತ್ರ ಮೋಹನ್ ಬಳಸಿಕೊಂಡ ಪ್ರಮುಖ ಅಸ್ತ್ರವೇ ನಂಬಿಕೆ.…
ತುಳುನಾಡ ಸೂರ್ಯ ಪ್ರತಿಕೆ ಚಂದಾದಾರರಾಗಿ ಪ್ರೋತ್ಸಾಹಿಸಬೇಕಾಗಿ ವಿನಂತಿ.
ತುಳುನಾಡಿನ ಅಚಾರ ವಿಚಾರ ಪರಂಪರೆ ಮತ್ತು ಪ್ರಸ್ತುತ ಹಲವಾರು ವಿಚಾರಗಳನ್ನು ಪ್ರಕಟಿಸುವ ಪತ್ರಿಕೆ ಯಾಗಿದೆ. ತಾವು ಚಂದಾದಾರ ರಾಗಿದಲ್ಲಿ tulunadasurya.com web News ನಲ್ಲಿ ಪ್ರತಿ ದಿನದ ನ್ಯೂಸ್ ಗಳು ನೀವು ವೀಕ್ಷಿಸಬಹುದು . ಮತ್ತು ಪ್ರತಿ ತಿಂಗಳು ನಿಮ್ಮ ವಿಳಾಸಕ್ಕೆ ಗೌರವಯುತ ವಾಗಿ ಅಂಚೆ ಮೂಲಕ ತುಳುನಾಡ ಸೂರ್ಯ ಪ್ರತಿಕೆ ಮನೆ ತಲುಪುತ್ತದೆ.
